ಮಕ್ಕಳಿಗೆ ಸಿಹಿತಿಂಡಿ ಹಂಚಿ ಕೆಲಕಾಲ ಮಕ್ಕಳ ಕಳ್ಳರಾದ ಯುವ ಕಾಂಗ್ರೆಸ್ ಸದಸ್ಯರು ➤ ದೇರಳಕಟ್ಟೆಯಲ್ಲಿ ನಡೆಯಿತು ಸ್ವಾರಸ್ಯಕರ ಘಟನೆ
(ನ್ಯೂಸ್ ಕಡಬ) newskadaba.com ಮಂಗಳೂರು, ಜ.09. ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಯುವಕರ ಗುಂಪೊಂದು ಸ್ಥಳೀಯ ಮಕ್ಕಳಿಗೆ ಸಿಹಿತಿಂಡಿ ಹಂಚಿದ್ದರಿಂದ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯ ಪ್ರಚಾರಕ್ಕೆಂದು ಮಹಮ್ಮದ್ ನಲಪಾಡ್ ಬೆಂಬಲಿಗರ ತಂಡವೊಂದು ಎರಡು ಕಾರುಗಳಲ್ಲಿ ಮಂಗಳೂರಿಗೆ ಆಗಮಿಸಿತ್ತು. ಕಾರನಲ್ಲಿದ್ದವರು ದೇರಳಕಟ್ಟೆಯ ಬೇಕರಿಯೊಂದರಲ್ಲಿ ಚಹಾ ಕುಡಿದು ಅಲ್ಲೇ ಹೊರಗಡೆ ಇದ್ದ ಮಕ್ಕಳಿಗೆ ಸಿಹಿತಿಂಡಿ ಹಂಚಿದ್ದಾರೆ ಎನ್ನಲಾಗಿದೆ. ಈ ವೇಳೆ ಅಲ್ಲಿದ್ದ ಮಗುವೊಂದು ಭಯದಿಂದ ಕಿರುಚಿದ್ದು, ತಕ್ಷಣವೇ […]






