ಕಾಣೆಯಾಗಿದ್ದ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆ…!

(ನ್ಯೂಸ್ ಕಡಬ) newskadaba.com ಮಂಡ್ಯ.7: ಜಿಲ್ಲೆಯ ಮುಳವಳ್ಳಿ ತಾಲೂಕಿನ ಕಿರಗಾವಲು ಗ್ರಾಮದ ನಿವಾಸಿಯೊಬ್ಬರು ಕಳೆದ ಮೂರು ದಿನಗಳ ಹಿಂದೆ ಕಾಣೆಯಾಗಿದ್ದವರು. ಕಾಣೆಯಾಗಿದ್ದ ವ್ಯಕ್ತಿ ಮಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ತಮ್ಮದೆ ಕಾರಿನೊಳಗೆ ಶವವಾಗಿ ಪತ್ತೆಯಾಗಿಯಾಗಿದ್ದಾರೆ

 

 

ಮೃತ ವ್ಯಕ್ತಿಯನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳಿಂದ ಅನಾರೋಗ್ಯದ ಸಮಸ್ಯೆ ಎದುರಾಗಿ ಶಿವಕುಮಾರ್ ಕಾರಿನಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಈತ ಕಾಣೆಯಾಗಿದ್ದಾನೆಂದು ಆತನ ಕುಟುಂಬಸ್ಥರು ಕಿರುಗಾವಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೂರು ದಿನಗಳಿಂದ ಒಂದೇ ಜಾಗದಲ್ಲಿ ನಿಂತಿದ್ದ ಕಾರನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ವೇಳೆ ಘಟನೆ ಬೆಳಕಿಗೆ ಬಂದಿದೆ.

 

Scroll to Top