ಕರ್ನಾಟಕ

ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 21. ಪ್ರಸ್ತುತ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮತ್ತು ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವ ಪೋಷಕರ ಮಕ್ಕಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 15 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ www.sw.kar.nic.in ಅಥವಾ ಉಪನಿರ್ದೇಶಕರ ಕಚೇರಿ […]

ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಮಂಗಳೂರು: ಫೆ. 22 ರಂದು ಜಿಲ್ಲಾ ಅಭಿವೃದ್ದಿ ಮತ್ತು ಉಸ್ತುವಾರಿ ಸಮಿತಿ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 21. ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಅನುಷ್ಠಾನ ಕುರಿತ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯು ಫೆ. 22ರಂದು ಬೆಳಿಗ್ಗೆ 10.30 ಗಂಟೆಗೆ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ನಡೆಯಲಿದೆ.

ಮಂಗಳೂರು: ಫೆ. 22 ರಂದು ಜಿಲ್ಲಾ ಅಭಿವೃದ್ದಿ ಮತ್ತು ಉಸ್ತುವಾರಿ ಸಮಿತಿ ಸಭೆ Read More »

ಕರಾವಳಿ, ಕರ್ನಾಟಕ

ಬೆಂಗಳೂರು: ಗೌರಿ ಲಂಕೇಶ್ ಹಂತಕರ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 21. ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 6 ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಪ‍್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತಿರಸ್ಕರಿಸಿದೆ. ಆರ್‌.ಆರ್‌ ನಗರದ ಐಡಿಯಲ್ ಹೋಮ್ಸ್ ಟೌನ್‌ ಶಿಪ್‌ ನಲ್ಲಿರುವ ಮನೆಯ ಎದುರೇ 2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಕುರಿತು ತನಿಖೆ ನಡೆಸಿದ್ದ ವಿಶೇಷ ತನಿಖಾ ದಳದ ಅಧಿಕಾರಿಗಳು, 16 ಆರೋಪಿಗಳನ್ನು

ಬೆಂಗಳೂರು: ಗೌರಿ ಲಂಕೇಶ್ ಹಂತಕರ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ಟಾಟಾ ಸುಮೋ ಹಾಗೂ ಕ್ವಾಲಿಸ್ ಢಿಕ್ಕಿ ➤ ನಾಲ್ವರು ದುರ್ಮರಣ

(ನ್ಯೂಸ್ ಕಡಬ) newskadaba.com ಹಾಸನ, ಫೆ. 21. ಟಾಟಾ ಸುಮೋ ಹಾಗೂ ಕ್ವಾಲಿಸ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಬೆಂಗಳೂರು- ಮಂಗಳೂರು ಹೆದ್ದಾರಿಯಲ್ಲಿ ನಡೆದಿದೆ. ರಾ.ಹೆದ್ದಾರಿಯ ಶಾಂತಿಗ್ರಾಮದ ಕೆಂಚಟ್ಟಹಳ್ಳಿ ಎಂಬಲ್ಲಿ ಟಾಟಾ ಸುಮೋಗೆ ಹಿಂದಿನಿಂದ ಬಂದ ಕ್ವಾಲಿಸ್ ಢಿಕ್ಕಿ ಹೊಡೆದಿದ್ದು, ಪರಿಣಾಮ ನಾಲ್ವರು ಮೃತಪಟ್ಟು, 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹಾಸನದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ಟಾಟಾ ಸುಮೋ ಹಾಗೂ ಕ್ವಾಲಿಸ್ ಢಿಕ್ಕಿ ➤ ನಾಲ್ವರು ದುರ್ಮರಣ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಶಿಕ್ಷಕರ ಬೆದರಿಕೆಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ ➤ ಶಿಕ್ಷಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಪೋಷಕರ ಒತ್ತಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 21. ಮಾರ್ಕ್ಸ್ ಕಾರ್ಡ್ ಗೆ ಪೋಷಕರ ಸಹಿ ಹಾಕುವ ಬದಲು ವಿದ್ಯಾರ್ಥಿಯೇ ಸಹಿ ಹಾಕಿದ್ದಾನೆ ಎಂಬ ಕಾರಣಕ್ಕೆ ಮುಖ್ಯ ಶಿಕ್ಷಕರು ಬೆದರಿಕೆಯೊಡ್ಡಿದ್ದು, ಇದರಿಂದ ಬೇಸತ್ತ ವಿದ್ಯಾರ್ಥಿಯೋರ್ವ ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಟಿಪಳ್ಳದಲ್ಲಿ ನಡೆದಿದೆ. ಆತ್ಮಹತ್ಯೆಗೈದ ವಿದ್ಯಾರ್ಥಿಯನ್ನು ಸುರತ್ಕಲ್ ಕಾಟಿಪಳ್ಳದ ಎರಡನೇ ಬ್ಲಾಕ್ ನಿವಾಸಿ ಗೋಪಾಲ ಶೆಟ್ಟಿ ಮತ್ತು ಬೇಬಿ ಶೆಟ್ಟಿ ಅವರ ಪುತ್ರ ದರ್ಶನ್ ಎಂದು ಗುರುತಿಸಲಾಗಿದೆ. ಈತ ಕಾಟಿಪಳ್ಳದ ಮೂರನೇ ಬ್ಲಾಕ್ ನಲ್ಲಿರುವ ಖಾಸಗಿ

ಮಂಗಳೂರು: ಶಿಕ್ಷಕರ ಬೆದರಿಕೆಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ ➤ ಶಿಕ್ಷಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಪೋಷಕರ ಒತ್ತಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೇ ಶ್ರೀ ದೇವಾಲಯಕ್ಕೆ ಭೇಟಿ ನೀಡಿದ ಕನ್ನಡ ಚಿತ್ರನಟಿ ಅಮೂಲ್ಯ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ.. 21. ಕನ್ನಡ ಚಿತ್ರನಟಿ ಅಮೂಲ್ಯ ಅವರು ಕುಟುಂಬ ಸದಸ್ಯರ ಜೊತೆ ಭಾನುವಾರದಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವರ ದರ್ಶನದ ಬಳಿಕ ಇವರು ಯೇನೆಕಲ್ಲಿನ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾಪುಕಯಕ್ಕೆ ಭೇಟಿ ನೀಡಿದ್ದು, ಅಲ್ಲದೇ ದೇವರ ಮೀನುಗಳಿಗೆ ಆಹಾರ ನೀಡಿ ಕೆಲ ಸಮಯ ಕಳೆದರು.

ಸುಬ್ರಹ್ಮಣ್ಯ: ಕುಕ್ಕೇ ಶ್ರೀ ದೇವಾಲಯಕ್ಕೆ ಭೇಟಿ ನೀಡಿದ ಕನ್ನಡ ಚಿತ್ರನಟಿ ಅಮೂಲ್ಯ Read More »

ಕರಾವಳಿ, ಕರ್ನಾಟಕ

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳದ ಪ್ರಪಾತಕ್ಕೆ ಉರುಳಿದ ಕಾರು ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ಫೆ. 21. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪ್ರಪಾತಕ್ಕೆ ಉರುಳಿದ ಪರಿಣಾಮ ಮೂವರು ಗಾಯಗೊಂಡ ಘಟನೆ ಮಂಗಳೂರು -ಬೆಂಗಳೂರು ರಾ. ಹೆದ್ದಾರಿಯ ಬುಡೋಳಿ ಎಂಬಲ್ಲಿ ನಡೆದಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಬುಡೋಳಿ ಸಮೀಪದ ಅಪಾಯಕಾರಿ ಹೊಂಡಕ್ಕೆ ಉರುಳಿ ಬಿದ್ದಿದೆ. ತಕ್ಷಣವೇ ಕಾರ್ಯ ಪ್ರವೃತ್ತರದ ಬುಡೋಳಿ ಯೂತ್ ಫೇಡರೇಶನ್ ಸದಸ್ಯರು ಮತ್ತು ಸೈಲೆಂಟ್ ಫ್ರೆಂಡ್ಸ್ ಬುಡೋಳಿ ಸದಸ್ಯರು ಕಾರ್ಯಾಚರಣೆ ನಡೆಸಿ, ಕಾರಿನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಹೊರ

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳದ ಪ್ರಪಾತಕ್ಕೆ ಉರುಳಿದ ಕಾರು ➤ ಮೂವರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಹೆಚ್ಚುತ್ತಿರುವ ಕೊರೋನಾ ಅಟ್ಟಹಾಸ ➤ ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ನಿರ್ಬಂಧಕ್ಕೆ ಚಿಂತನೆ- ಸಚಿವ ಬೊಮ್ಮಾಯಿ

(ನ್ಯೂಸ್ ಕಡಬ) newskadaba.com ಕಾಪು, ಫೆ.21. ದೇಶದಾದ್ಯಂತ ಕೊರೋನದ ಎರಡನೇ ಅಲೆಯು ಹೆಚ್ಚುತ್ತಿರುವ ಹಿನ್ನೆಲೆ ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳಿಗೆ ಕೆಲವೊಂದು ನಿರ್ಬಂಧಗಳನ್ನು ವಿಧಿಸುವ ಕುರಿತು ಚರ್ಚೆಯಾಗುತ್ತಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕಾಪುವಿನಲ್ಲಿ ನೂತನವಾಗಿ ನಿರ್ಮಿಸಲಾದ ಪೊಲೀಸ್ ವಸತಿ ಗೃಹಗಳ ಉದ್ಘಾಟನೆಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ಹಾಗೂ ಮಹಾರಾಷ್ಟ್ರಗಳ ಜೊತೆ ನಮ್ಮ ಜಿಲ್ಲೆಗಳಿಗೆ ವ್ಯಾಪಾರ ಸಂಬಂಧವಿದ್ದು, ಕೇರಳಕ್ಕೆ ಪ್ರತೀದಿನ ಓಡಾಟ ನಡೆಯುತ್ತಿದೆ. ಕೇರಳದಿಂದ ಕರ್ನಾಟಕಕ್ಕೆ ಬರಲು

ಹೆಚ್ಚುತ್ತಿರುವ ಕೊರೋನಾ ಅಟ್ಟಹಾಸ ➤ ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ನಿರ್ಬಂಧಕ್ಕೆ ಚಿಂತನೆ- ಸಚಿವ ಬೊಮ್ಮಾಯಿ Read More »

ಕರಾವಳಿ, ಕರ್ನಾಟಕ

ಜುಲೈ 07 ಹಾಗೂ 08 ರಂದು ಸಿಇಟಿ ಪರೀಕ್ಷೆ ➤ ವೇಳಾಪಟ್ಟಿ ಪ್ರಕಟ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 21. 2021ನೆ ಸಾಲಿನ ವೃತ್ತಿಪರ ಕೋರ್ಸುಗಳ ಸಿಇಟಿ ಪರೀಕ್ಷೆಯು ಜುಲೈ 7 ಮತ್ತು 8ರಂದು ನಡೆಯಲಿದ್ದು, ಇದರ ವೇಳಾಪಟ್ಟಿಯನ್ನು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಪ್ರಕಟಿಸಿದ್ದಾರೆ. ಸಿಇಟಿ ಪರೀಕ್ಷಾ ವೇಳಾಪಟ್ಟಿ ಹೀಗಿದೆ:- ಜುಲೈ 7ರಂದು ಬೆಳಗ್ಗೆ 10.30ರಿಂದ 11.50ರವರೆಗೆ ಜೀವವಿಜ್ಞಾನ, ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತ, ಜು. 08 ರಂದು ಬೆಳಗ್ಗೆ 10.30 ರಿಂದ 11.50ರವರೆಗೆ ಭೌತ ವಿಜ್ಞಾನ, ಮಧ್ಯಾಹ್ನ 2.30 ರಿಂದ 3.50ರವರೆಗೆ ರಸಾಯನ ವಿಜ್ಞಾನ,

ಜುಲೈ 07 ಹಾಗೂ 08 ರಂದು ಸಿಇಟಿ ಪರೀಕ್ಷೆ ➤ ವೇಳಾಪಟ್ಟಿ ಪ್ರಕಟ Read More »

ಕರ್ನಾಟಕ

ಸುಳ್ಯ: ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ➤ ಪ್ರಯಾಣಿಕರು ಪಾರು

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 21. ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಪೈಚಾರು ಆರ್ತಜೆ ಬಳಿ ನಡೆದಿದೆ. ಪೈಚಾರಿನಿಂದ ಸೋಣಂಗೇರಿ ಕಡೆ ಹೋಗುತ್ತಿದ್ದ ಕಾರಿಗೆ, ಬೆಳ್ಳಾರೆಯಿಂದ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಕಾರುಗಳ ಮುಂಭಾಗ ಜಖಂಗೊಂಡಿದ್ದು, ಬೆಳ್ಳಾರೆ ಕಡೆಯಿಂದ ಬರುತ್ತಿದ್ದ ಕಾರಿನಲ್ಲಿದ್ದ ಓರ್ವ ಪ್ರಯಾಣಿಕನ ಕಣ್ಣಿಗೆ ಗಾಯಗಳಾಗಿವೆ.

ಸುಳ್ಯ: ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ➤ ಪ್ರಯಾಣಿಕರು ಪಾರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top