ಕರ್ನಾಟಕ

ಪುತ್ತೂರು: ಹಾಡುಹಗಲೇ ಮನೆಯಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 27. ಮನೆಯೊಂದರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾದ ಘಟನೆ ಫೆ. 26 ರ ಹಾಡುಹಗಲೇ ಪುತ್ತೂರಿನ ದರ್ಬೆಯಲ್ಲಿ ನಡೆದಿದೆ. ಕ್ಯಾಂಪ್ಕೊ ಉದ್ಯೋಗಿ ಬಾನುಕಿರಣ್ ಎಂಬವರ ಮನೆಯಲ್ಲಿ ಸುಮಾರು 3.5ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಬಾನುಕಿರಣ್ ಅವರ ಪತ್ನಿ ಬೆಳಂದೂರು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದು, ಮನೆಯ ಇಬ್ಬರೂ ಉದ್ಯೋಗಸ್ಥರಾಗಿರುವ ಹಿನ್ನಲೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಈ ಕೃತ್ಯವೆಸಗಲಾಗಿದೆ. ಇಬ್ಬರೂ ಬೆಳಗ್ಗೆ 8.30 ರ ಸುಮಾರಿಗೆ ಮನೆಯಿಂದ ಉದ್ಯೋಗಕ್ಕೆ ತೆರಳಿದ್ದು, ಆ […]

ಪುತ್ತೂರು: ಹಾಡುಹಗಲೇ ಮನೆಯಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ತೊಕ್ಕೊಟ್ಟು: ಅಕ್ರಮ ಗೋಮಾಂಸ ಸಾಗಾಟ ➤ ತಡೆಹಿಡಿದ ಬಜರಂಗದಳ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ತೊಕ್ಕೊಟ್ಟು, ಫೆ. 27. ಅಕ್ರಮ ಬೀಫ್ ಸ್ಟಾಲ್ ಗೆ ಬರುತ್ತಿದ್ದ ಅಕ್ರಮ ಗೋಮಾಂಸ ಸಾಗಾಟವನ್ನು ಬಜರಂಗದಳ ಕಾರ್ಯಕರ್ತರು ತಡೆದ ಘಟನೆ ತೊಕ್ಕೊಟ್ಟುವಿನಲ್ಲಿ ನಡೆದಿದೆ. ಅಕ್ರಮ ಬೀಫ್ ಸ್ಟಾಲ್ ಗಳನ್ನು ಮುಚ್ಚಿಸುವಂತೆ ಉಳ್ಳಾಲ ಪುರಸಭೆಗೆ ಹಾಗೂ ಪೊಲೀಸ್ ಇಲಾಖೆಗೆ ಬಜರಂಗದಳವು ಕೆಲದಿನಗಳ ಹಿಂದೆ ಮನವಿ ಮಾಡಿದ್ದರೂ ಇಲಾಖೆಯಿಂದ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆ ಬಜರಂಗದಳ ನೇರ ಕಾರ್ಯಾಚರಣೆ ನಡೆಸಿ ಅಕ್ರಮ ಗೋಮಾಂಸವನ್ನು ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕರ್ನಾಟಕದಲ್ಲಿ ಗೋಹತ್ಯಾ ಕಾಯ್ದೆ ಜಾರಿಯಲ್ಲಿದ್ದರೂ ಅಕ್ರಮ ಗೋಮಾಂಸ

ತೊಕ್ಕೊಟ್ಟು: ಅಕ್ರಮ ಗೋಮಾಂಸ ಸಾಗಾಟ ➤ ತಡೆಹಿಡಿದ ಬಜರಂಗದಳ ಕಾರ್ಯಕರ್ತರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರಿನ ಯುವ ವಕೀಲೆ ವಿದ್ಯಾ ಎ.ಎಸ್ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 27. ‌ಕರ್ನಾಟಕ ಉಚ್ಚ ನ್ಯಾಯಾಲಯದ 2020ನೇ ಸಿವಿಲ್ ಜಡ್ಜ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಫೆ. 25ರಂದು ಹೊರಡಿಸಿದ ಅಧಿಸೂಚನೆಯಂತೆ ಪುತ್ತೂರಿನ ನ್ಯಾಯವಾದಿ ವಿದ್ಯಾ ಎ.ಎಸ್. ಅವರು ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯದ ಅಧೀನದಲ್ಲಿ ಸಿವಿಲ್ ನ್ಯಾಯಾಧೀಶರ ನೇಮಕಾತಿ ಕಮಿಟಿಯವರು ಕಳೆದ ನವೆಂಬರ್ ತಿಂಗಳಲ್ಲಿ ಸಿವಿಲ್ ಜಡ್ಜ್ ಹುದ್ದೆಗೆ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು . ಅದರಲ್ಲಿ ತೇರ್ಗಡೆ ಹೊಂದಿದವರಿಗೆ ಇದೇ ತಿಂಗಳು ಸಂದರ್ಶನವನ್ನೂ ಅಯೋಜಿಸಿತ್ತು. ಈ ಎರಡರಲ್ಲೂ

ಪುತ್ತೂರಿನ ಯುವ ವಕೀಲೆ ವಿದ್ಯಾ ಎ.ಎಸ್ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆ Read More »

ಕರಾವಳಿ, ಕರ್ನಾಟಕ

ಮಂಗಳೂರು: ನಾಳೆ (ಫೆ. 28) ದ.ಕ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಜಿಲ್ಲಾ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 27. ಬಿಜೆಪಿ ದಕ್ಷಿಣ ಕನ್ನಡ ಸಾಮಾಜಿಕ ಜಾಲತಾಣ ಪ್ರಕೋಷ್ಠ ಜಿಲ್ಲಾ ಮಟ್ಟದ ಕಾರ್ಯಾಗಾರವು ಫೆ.28ರಂದು ಮಂಗಳೂರು ಶಾರದಾ ವಿದ್ಯಾಲಯದಲ್ಲಿ ಬೆಳಿಗ್ಗೆ 9 ರಿಂದ ನಡೆಯಲಿದೆ. ಕಾರ್ಯಾಗಾರವನ್ನು ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ ಎಂ ಉದ್ಘಾಟಿಸಲಿದ್ದು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ,ರಾಮದಾಸ್ ಬಂಟ್ವಾಳ್,ಸುಧೀರ್ ಶೆಟ್ಟಿ ಕಣ್ಣೂರು ಉಪಸ್ಥಿತರಿರುವರು. ಕಾರ್ಯಾಗಾರದಲ್ಲಿ  ಸಂಘಟನೆ ಮತ್ತು ಸಾಮಾಜಿಕ ಜಾಲತಾಣ ವಿಷಯದ ಕುರಿತಾಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಮಾತನಾಡುವರು. ಸಾಮಾಜಿಕ ಜಾಲತಾಣ ಪ್ರಕೋಷ್ಟದ

ಮಂಗಳೂರು: ನಾಳೆ (ಫೆ. 28) ದ.ಕ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಜಿಲ್ಲಾ ಕಾರ್ಯಾಗಾರ Read More »

ಕರಾವಳಿ, ಕರ್ನಾಟಕ

ಪಂಜ: ಶ್ರೀ ಆದಿ ಬೈದರುಗಳ ನೇಮೋತ್ಸವ

(ನ್ಯೂಸ್ ಕಡಬ) newskadaba.com ಪಂಜ, ಫೆ. 27. ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಗರಡಿಯಲ್ಲಿ ಫೆ.26ರಂದು ರಾತ್ರಿ ಶ್ರೀ ಆದಿ ಬೈದರುಗಳ ನೇಮೋತ್ಸವವು ನಡೆಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿ ಬೈಲುಗುತ್ತು, ಮಾಜಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಗೌಡ ಕುದ್ವ, ನಾರಾಯಣ ಗೌಡ ಕೋರ್ಜೆ, ದಿನೇಶ್ ಗರಡಿ, ಶಂಕರ್ ಕುಮಾರ್, ಲಕ್ಷ್ಮಣ ಗೌಡ ಆಕ್ರಿಕಟ್ಟೆ, ರಾಮಚಂದ್ರ ಭಟ್, ಶ್ರೀಮತಿ ಸೌಮ್ಯ ಪಿ

ಪಂಜ: ಶ್ರೀ ಆದಿ ಬೈದರುಗಳ ನೇಮೋತ್ಸವ Read More »

ಕರಾವಳಿ, ಕರ್ನಾಟಕ

ನೆಲ್ಯಾಡಿ: ಗ್ಯಾಸ್ ಟ್ಯಾಂಕರ್ – ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ ➤ ಬೆಳ್ಳಂಬೆಳಗ್ಗೆ ನಡೆಯಿತು ಅಪಘಾತ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.27. ಅನಿಲ ಸಾಗಾಟದ ಟ್ಯಾಂಕರ್ ಹಾಗೂ ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಡೀಸೆಲ್ ಟ್ಯಾಂಕರ್ ಚಾಲಕ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಹೊಸಮಜಲು ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಮಂಗಳೂರಿನಿಂದ ಗ್ಯಾಸ್ ತುಂಬಿಕೊಂಡು ಬೆಂಗಳೂರಿನತ್ತ ತೆರಳುತ್ತಿದ್ದ ಟ್ಯಾಂಕರ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಡೀಸೆಲ್‌ನ ಟ್ಯಾಂಕರ್ ನಡುವೆ ಹೊಸಮಜಲು ಸಮೀಪ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡಿರುವ ಡೀಸೆಲ್‌ ಟ್ಯಾಂಕರ್ ಚಾಲಕನನ್ನು

ನೆಲ್ಯಾಡಿ: ಗ್ಯಾಸ್ ಟ್ಯಾಂಕರ್ – ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ ➤ ಬೆಳ್ಳಂಬೆಳಗ್ಗೆ ನಡೆಯಿತು ಅಪಘಾತ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸಮ್ಯಕ್ತ್ ಜೈನ್ ರವರಿಗೆ ಜೈನ ಕಾಶಿ ಮೂಡಬಿದಿರೆಯಲ್ಲಿ “ಜೈನ ಯುವ ಸಾಹಿತಿ” ಸನ್ಮಾನ ➤ ಸ್ವಸ್ತಿಶ್ರೀ ಭಾರತಭೂಷಣ ಭಟ್ಟಾರಕ ಚಾರುಕೀರ್ತಿ ಸ್ವಾಮಿಗಳ ಪಾವನ ಸಾನಿಧ್ಯ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಫೆ. 26. ಧವಲತ್ರಯಗಳ ನೆಲೆವೀಡು ಮೂಡಬಿದಿರೆಯ ಬಡಗ ಬಸದಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ರಥೋತ್ಸವವು ಸ್ವಸ್ತಿಶ್ರೀ ‘ಭಾರತಭೂಷಣ’ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಫೆ.25 ರಂದು ನೆರವೇರಿದ್ದು, ಯುವ ಸಾಹಿತಿಯಾಗಿ ಹೊರಹೊಮ್ಮಿದ ಸಮ್ಯಕ್ತ್ ಜೈನ್ ರವರ ಸಾಧನೆಗಳನ್ನು ಪರಿಗಣಿಸಿ “ಜೈನ ಯುವ ಸಾಹಿತಿ” ಎಂದು ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ಧರ್ಮಸ್ಥಳದ ಶ್ರೀ.ಡಿ.ಸುರೇಂದ್ರ ಕುಮಾರ್, ಅಳದಂಗಡಿಯ ತಿಮ್ಮಣ್ಮ ಅರಸರಾದ ಡಾ.ಪದ್ಮಪ್ರಸಾದ್ ಅಜಿಲ, ಮಾಜಿ ಸಚಿವ ಅಭಯಚಂದ್ರ ಜೈನ್,

ಸಮ್ಯಕ್ತ್ ಜೈನ್ ರವರಿಗೆ ಜೈನ ಕಾಶಿ ಮೂಡಬಿದಿರೆಯಲ್ಲಿ “ಜೈನ ಯುವ ಸಾಹಿತಿ” ಸನ್ಮಾನ ➤ ಸ್ವಸ್ತಿಶ್ರೀ ಭಾರತಭೂಷಣ ಭಟ್ಟಾರಕ ಚಾರುಕೀರ್ತಿ ಸ್ವಾಮಿಗಳ ಪಾವನ ಸಾನಿಧ್ಯ Read More »

ಕರಾವಳಿ, ಕರ್ನಾಟಕ

ಸಿವಿಲ್ ನ್ಯಾಯಾಧೀಶೆಯಾಗಿ ಧರ್ಮಸ್ಥಳದ ಚೇತನಾ ಆಯ್ಕೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ. 26.‌ಕರ್ನಾಟಕ ಉಚ್ಚ ನ್ಯಾಯಾಲಯದ ‌2020ನೇ ಸಿವಿಲ್ ಜಡ್ಜ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2021 ಫೆ. 25ರಂದು ಹೊರಡಿಸಿದ ಅಧಿಸೂಚನೆಯಂತೆ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಧರ್ಮಸ್ಥಳದ ಚೇತನಾ‌ ಎಂಬವರು ಆಯ್ಕೆಯಾಗಿದ್ದಾರೆ. ಧರ್ಮಸ್ಥಳದ ನಾರ್ಯ ಎಂಬ ಪುಟ್ಟ ಕುಟುಂಬದಲ್ಲಿ ಜನಿಸಿದ ಇವರು ರಾಮಣ್ಣ ಪೂಜಾರಿ ಹಾಗೂ ಸೀತಾ ದಂಪತಿಯ ಎರಡನೇ ಪುತ್ರಿ.‌ 1ರಿಂದ 6ನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣವನ್ನು ಉಪ್ಪಿನಂಗಡಿ ಸಮೀಪದ ಪೆರ್ನೆ ಕನ್ನಡ ಮಾಧ್ಯಮ ಶಾಲೆ, ಕನ್ಯಾಡಿ ಸರಕಾರಿ ಶಾಲೆಯಲ್ಲಿ ಏಳನೇ

ಸಿವಿಲ್ ನ್ಯಾಯಾಧೀಶೆಯಾಗಿ ಧರ್ಮಸ್ಥಳದ ಚೇತನಾ ಆಯ್ಕೆ Read More »

ಕರಾವಳಿ, ಕರ್ನಾಟಕ

ಕಡಬ: ಮೂರನೇ ವರ್ಷದ ಜನೌಷಧಿ ದಿನಾಚರಣೆ ಹಿನ್ನೆಲೆ ➤ ತಾಲೂಕಿನ ವಿವಿಧೆಡೆ ಉಚಿತ ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣಾ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ, ಫೆ. 26. ಮೂರನೇ ವರ್ಷದ ಜನ ಔಷಧಿ ದಿನಾಚರಣೆಯ ಪ್ರಯುಕ್ತ ದಕ್ಷಿಣ ಕನ್ನಡ ಜನೌಷಧಿ ಕೇಂದ್ರದ ಒಕ್ಕೂಟದ ವತಿಯಿಂದ ಕಡಬ ತಾಲೂಕಿನ ವಿವಿಧೆಡೆ ನಾಲ್ಕು ದಿನಗಳ ಕಾಲ ಉಚಿತ ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.   ಮಾ. 01ರಂದು ಕಡಬದ ಜನೌಷಧಿ ಕೇಂದ್ರ, ಮಾ. 02. ಕಡಬ ಕೃಷಿ ಪತ್ತಿನ ಸಹಕಾರಿ ಸಂಘದ ಮರ್ಧಾಳ ಶಾಖೆ, ಮಾ. 03ರಂದು ಕಡಬ ಕೃ.ಪ.ಸ. ಸಂಘದ ನೂಜಿಬಾಳ್ತಿಲ ಶಾಖೆ, ಮಾ. 04ರಂದು

ಕಡಬ: ಮೂರನೇ ವರ್ಷದ ಜನೌಷಧಿ ದಿನಾಚರಣೆ ಹಿನ್ನೆಲೆ ➤ ತಾಲೂಕಿನ ವಿವಿಧೆಡೆ ಉಚಿತ ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣಾ ಶಿಬಿರ Read More »

ಕರಾವಳಿ, ಕರ್ನಾಟಕ

ಆರ್ ಬಿ ಐ ನಿಂದ ಹಣ ತುಂಬಿಸಿಕೊಂಡು ಹೋಗುತ್ತಿದ್ದ ಕಂಟೇನರ್ ಪಲ್ಟಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 26. ಆರ್‌ಬಿಐ ನಿಂದ ಹಣ ತುಂಬಿಸಿಕೊಂಡು ಹೋಗುತ್ತಿದ್ದ ಕಂಟೇನರ್ ಲಾರಿಯೊಂದು ಪಲ್ಟಿಯಾಗಿರುವ ಘಟನೆ ರಾಮನಗರದ ಬಿಡದಿ ಬಳಿಯ ಕಲ್ಲುಗೋಪಹಳ್ಳಿ ಬಳಿ ನಡೆದಿದೆ. ಮೈಸೂರು ಆರ್.ಬಿ.ಐ ನಿಂದ ಬೆಂಗಳೂರಿಗೆ ಹಣ ತುಂಬಿಸಿಕೊಂಡು ಹೋಗುತ್ತಿದ್ದ ಕಂಟೇನರ್ ಲಾರಿಯು ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲುಗೋಪಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬೆಂಗಳೂರು ಮೈಸೂರು ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಾರಣ ರಸ್ತೆಯಲ್ಲಿ ಅಲ್ಲಲ್ಲಿ ತಿರುವುಗಳನ್ನು ಮಾಡಿದ್ದು, ಈ ಕಾರಣದಿಂದಾಗಿ ಕಂಟೇನರ್‌

ಆರ್ ಬಿ ಐ ನಿಂದ ಹಣ ತುಂಬಿಸಿಕೊಂಡು ಹೋಗುತ್ತಿದ್ದ ಕಂಟೇನರ್ ಪಲ್ಟಿ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top