ಕರ್ನಾಟಕ

ಮಲ್ಪೆ: ? ಹಾವು ಕಚ್ಚಿ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಮಲ್ಪೆ, ಎ. 03. ಹಾವು ಕಚ್ಚಿದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ. ಮೃತರನ್ನು ಸಬಿತಾ(43) ಎಂದು ಗುರುತಿಸಲಾಗಿದೆ. ಇವರು ಶುಕ್ರವಾರದಂದು ತೋಟದಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದ ವೇಳೆ ತೆಂಗಿನಕಟ್ಟೆಯಲ್ಲಿನ ಹುಲ್ಲು ತೆಗೆಯುತ್ತಿದ್ದಾಗ ಇವರ ಕಾಲಿಗೆ ವಿಷಪೂರಿತ ಹಾವೊಂದು ಕಚ್ಚಿದೆ. ತಕ್ಷಣ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಉಡುಪಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ವಾರ್ಡ್ ಗೆ ಸ್ಥಳಾಂತರಿಸಿಲಾಗಿತ್ತು. ಸ್ವಲ್ಪ ಸಮಯದ ಬಳಿಕ ಅವರಿಗೆ ಉಸಿರಾಟದ ಸಮಸ್ಯೆ […]

ಮಲ್ಪೆ: ? ಹಾವು ಕಚ್ಚಿ ಮಹಿಳೆ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೊರೋನಾ ಎರಡನೇ ಅಲೆಗೆ ಬೆಚ್ಚಿಬಿದ್ದ ದಕ್ಷಿಣ ಕನ್ನಡ ➤ ಒಂದೇ ದಿನ 105 ಮಂದಿಗೆ ಕೊರೋನಾ ಪಾಸಿಟಿವ್..‼️

(ನ್ಯೂಸ್ ಕಡಬ) newskadaba.com ಮಂಗಳೂರು, ಎ.03. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಎರಡನೇ ಅಲೆಯ ಆತಂಕ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ‌ ಶುಕ್ರವಾರದಂದು ಕೋವಿಡ್ 19 ಪ್ರಕರಣ 100ರ ಗಡಿ ದಾಟಿದೆ. ಶುಕ್ರವಾರ ಒಂದೇ ದಿನ ಬರೋಬ್ಬರಿ 105 ಮಂದಿಗೆ ಕೊರೋನಾ ಪಾಸಿಟಿವ್ ಆಗಿದ್ದು, ಈ ಮೂಲಕ ಒಟ್ಟು 604 ಆಕ್ವೀವ್ ಕೇಸ್ ದಾಖಲಾಗಿದೆ. ಕೊರೋನಾಗೆ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಇದುವರೆಗೆ ಬಲಿಯಾದವರ ಸಂಖ್ಯೆ 742. ಆರೋಗ್ಯ ಇಲಾಖೆಯ ಮಾಹಿತಿಯಂತೆ ಇದುವರೆಗೆ ಒಟ್ಟು 35,832 ಪಾಸಿಟಿವ್ ಕೇಸ್ ದಾಖಲಾಗಿದೆ.  

ಕೊರೋನಾ ಎರಡನೇ ಅಲೆಗೆ ಬೆಚ್ಚಿಬಿದ್ದ ದಕ್ಷಿಣ ಕನ್ನಡ ➤ ಒಂದೇ ದಿನ 105 ಮಂದಿಗೆ ಕೊರೋನಾ ಪಾಸಿಟಿವ್..‼️ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಕಠಿಣ ಕಟ್ಟೆಚ್ಚರ ➤ ಎಪ್ರಿಲ್ 20 ರ ವರೆಗೆ ಜಿಮ್, ಸ್ವಿಮ್ಮಿಂಗ್ ಪೂಲ್, ಶೈಕ್ಷಣಿಕ ಚಟುವಟಿಕೆ ಬಂದ್

ಬೆಂಗಳೂರು, ಎ.02. ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಇಂದು ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಜಿಮ್ ಹಾಗೂ ಸ್ವಿಮ್ಮಿಂಗ್ ಪೂಲ್ ಗಳನ್ನು ಎಪ್ರಿಲ್ 20ರ ವರೆಗೆ ಬಂದ್ ಮಾಡಿ ಆದೇಶ ಹೊರಡಿಸಿದೆ. ರಾಜ್ಯಾದ್ಯಂತ ವಿದ್ಯಾಗಮ ಸೇರಿ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದ್ದು, 10, 11 ಮತ್ತು 12ನೇ ತರಗತಿ ಯಥಾಸ್ಥಿತಿ ಮುಂದುವರಿಯಲಿದೆ. ರ್‍ಯಾಲಿ, ಧರಣಿ, ಮುಷ್ಕರಗಳನ್ನು ನಿಷೇಧಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ದಕ್ಷಿಣ ಕನ್ನಡ, ಬೀದರ್, ಧಾರವಾಡ, ಮೈಸೂರು, ಕಲಬುರಗಿ ಈ 8

ದಕ್ಷಿಣ ಕನ್ನಡ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಕಠಿಣ ಕಟ್ಟೆಚ್ಚರ ➤ ಎಪ್ರಿಲ್ 20 ರ ವರೆಗೆ ಜಿಮ್, ಸ್ವಿಮ್ಮಿಂಗ್ ಪೂಲ್, ಶೈಕ್ಷಣಿಕ ಚಟುವಟಿಕೆ ಬಂದ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಟ್ಲ: ಅಕ್ರಮ ಗೋ‌ಸಾಗಾಟ ತಡೆದ ಬಜರಂಗದಳ‌ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ವಿಟ್ಲ, ಎ. 02. ಅಕ್ರಮವಾಗಿ ಗೋಸಾಗಾಟವನ್ನು ಬಜರಂಗದಳ ಕಾರ್ಯಕರ್ತರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಕುಂಡಡ್ಕ ಎಂಬಲ್ಲಿ ನಡೆದಿದೆ. ಹಸುವನ್ನು ಠಾಣೆಗೆ ಕರೆದೊಯ್ದ ಕ್ಷಣಾರ್ಧದಲ್ಲೇ ಹಸುವು ಹೆಣ್ಣು ಕರುವೊಂದಕ್ಕೆ ಜನ್ಮ ನೀಡಿದೆ. ಕುಂಡಡ್ಕ ಅಬೀರಿ ಶಾಖೆಯ ವಿಹಿಂಪ ಬಜರಂಗದಳ ಕಾರ್ಯಕರ್ತರ ಸಮಯ ಪ್ರಜ್ಞೆಯಿಂದ ಹಸು ಹಾಗು ಕರುವಿನ ರಕ್ಷಣೆ ಮಾಡಲಾಯಿತು.

ವಿಟ್ಲ: ಅಕ್ರಮ ಗೋ‌ಸಾಗಾಟ ತಡೆದ ಬಜರಂಗದಳ‌ ಕಾರ್ಯಕರ್ತರು Read More »

ಕರಾವಳಿ, ಕರ್ನಾಟಕ

ದ.ಕ ಜಿಲ್ಲಾ ನೂತನ ಎಸ್ಪಿಯಾಗಿ ಎಸ್.ಆರ್. ಭಗವಾನ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 02. ದಕ್ಷಿಣ ಕನ್ನಡ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎಸ್.ಆರ್.ಭಗವಾನ್ ಅವರು ಶುಕ್ರವಾರದಂದು ಅಧಿಕಾರ ಸ್ವೀಕರಿಸಿದರು. ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಇವರನ್ನು ದ.ಕ. ಜಿಲ್ಲಾ ಎಸ್ಪಿಯಾಗಿ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಗುರುವಾರದಂದು ಆದೇಶ ಹೊರಡಿಸಿತ್ತು. ಆದೇಶದಂತೆ ಇಂದು ಜಿಲ್ಲೆಗೆ ಆಗಮಿಸಿದ ಅವರು ನಿರ್ಗಮನ ಎಸ್ಪಿ ಬಿ.ಎಂ.ಲಕ್ಷ್ಮೀ ಪ್ರಸಾದ್ ಅವರಿಂದ ಅಧಿಕಾರ ವಹಿಸಿಕೊಂಡರು.

ದ.ಕ ಜಿಲ್ಲಾ ನೂತನ ಎಸ್ಪಿಯಾಗಿ ಎಸ್.ಆರ್. ಭಗವಾನ್ ಅಧಿಕಾರ ಸ್ವೀಕಾರ Read More »

ಕರಾವಳಿ, ಕರ್ನಾಟಕ

ಸಿಡಿ ಪ್ರಕರಣ ➤ ಆರೋಗ್ಯ ಸಮಸ್ಯೆಯ ನೆಪ ಹೇಳಿ ವಿಚಾರಣೆಗೆ ಗೈರಾದ ರಮೇಶ್ ಜಾರಕಿಹೊಳಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ. 02. ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಯುವತಿಯು ಪ್ರತ್ಯಕ್ಷವಾಗಿ ಹೇಳಿಕೆ ನೀಡಿದ ನಂತರ ಮಾಜಿ ಸಚಿವರಿಗೆ ಬಂಧನದ ಭೀತಿ ಶುರುವಾಗಿದ್ದು, ಈ ಕುರಿತ ವಿಚಾರಣೆಗೆ ಶುಕ್ರವಾರದಂದು ವಿಶೇಷ ತನಿಖಾ ತಂಡದ ಮುಂದೆ ವಿಚಾರಣೆಗೆ ಹಾಜರಾಗಬೇಕಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಆರೋಗ್ಯ ಸಮಸ್ಯೆಯ ನೆಪ ಹೇಳಿ ತಪ್ಪಿಸಿಕೊಂಡಿದ್ದಾರೆ.   ವಕೀಲರ ಮೂಲಕ ಮಾಹಿತಿ ನೀಡಿರುವ ರಮೇಶ್ ಜಾರಕಿಹೊಳಿ, ಆರೋಗ್ಯ ಸಮಸ್ಯೆಯಿದೆ ಎಂದು ಹೇಳಿ ಎರಡು ದಿನಗಳ ಕಾಲಾವಕಾಶ ಕೇಳಿದ್ದು,

ಸಿಡಿ ಪ್ರಕರಣ ➤ ಆರೋಗ್ಯ ಸಮಸ್ಯೆಯ ನೆಪ ಹೇಳಿ ವಿಚಾರಣೆಗೆ ಗೈರಾದ ರಮೇಶ್ ಜಾರಕಿಹೊಳಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಗಳಿಂದಲೇ ಸ್ವಂತ ಅಪ್ಪನ ಮೇಲೆ ಅತ್ಯಾಚಾರ ಆರೋಪ ➤ ಮಗಳು ಹಾಗೂ ಪತ್ನಿಯ ಹೆಸರು ಬರೆದು ಆತ್ಮಹತ್ಯೆಗೆ ಶರಣಾದ ತಂದೆ

(ನ್ಯೂಸ್ ಕಡಬ) newskadaba.com ಮಡಿಕೇರಿ, ಎ. 02. ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮರಗೋಡು ಎಂಬಲ್ಲಿ ನಡೆದಿದೆ.   ಆತ್ಮಹತ್ಯೆಗೈದವರನ್ನು ಪುದಿಯೊಕ್ಕಡ ಭರತ್(55) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಇವರು ತನ್ನ ಸಾವಿಗೆ ಪತ್ನಿ ಹಾಗೂ ಮಗಳೇ ಕಾರಣ ಎಂದು ಡೆತ್‌ ನೋಟ್​ ಬರೆದಿಟ್ಟಿದ್ದಾರೆ. ಭರತ್ ಪುತ್ರಿ ಮೇಘ, ಸ್ವಂತ ಅಪ್ಪನ ಮೇಲೆಯೇ ಅತ್ಯಾಚಾರದ ಆರೋಪ ಹೊರಿಸಿದ್ದಳು. ಆದರೆ ಈ ಕೇಸ್ ಕೋರ್ಟ್​ನಲ್ಲಿ ನಿಲ್ಲಲಿಲ್ಲ. ವಾದ-ಪ್ರತಿವಾದ

ಮಗಳಿಂದಲೇ ಸ್ವಂತ ಅಪ್ಪನ ಮೇಲೆ ಅತ್ಯಾಚಾರ ಆರೋಪ ➤ ಮಗಳು ಹಾಗೂ ಪತ್ನಿಯ ಹೆಸರು ಬರೆದು ಆತ್ಮಹತ್ಯೆಗೆ ಶರಣಾದ ತಂದೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕೇರಳ ವಿಧಾನಸಭಾ ಚುನಾವಣಾ ಹಿನ್ನೆಲೆ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ➤ ದಾಖಲೆಗಳಿಲ್ಲದ 20 ಲಕ್ಷ ರೂ. ವಶ

(ನ್ಯೂಸ್ ಕಡಬ) newskadaba.com ಮಂಜೇಶ್ವರ, ಎ. 02. ಬಸ್ ಪ್ರಯಾಣಿಕನೋರ್ವನಿಂದ ದಾಖಲೆಗಳಿಲ್ಲದ ಸುಮಾರು 20 ಲಕ್ಷ ರೂ. ಮೊತ್ತವನ್ನು ವಿಶೇಷ ತಪಾಸಣಾ ತಂಡ ವಶಪಡಿಸಿಕೊಂಡ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆ ತಲಪಾಡಿ ಗಡಿಯ ಚೆಕ್ ಪೋಸ್ಟ್ ಬಳಿ ವಿಶೇಷ ತನಿಖಾ ತಂಡವು ತಪಾಸಣೆ ನಡೆಸುತ್ತಿದ್ದ ವೇಳೆ ಕಾಸರಗೋಡು –ಮಂಗಳೂರು ನಡುವಿನ ಕೆಎಸ್ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಆಲಂಪಾಡಿಯ ಮುಹಮ್ಮದ್ ಕುಂಞಿ ಎಂಬಾತನಿಂದ ಸೂಕ್ತ ದಾಖಲೆಗಳಿಲ್ಲದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಚುನಾವಣಾ ಹಿನ್ನೆಲೆ

ಕೇರಳ ವಿಧಾನಸಭಾ ಚುನಾವಣಾ ಹಿನ್ನೆಲೆ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ➤ ದಾಖಲೆಗಳಿಲ್ಲದ 20 ಲಕ್ಷ ರೂ. ವಶ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನೆಲ್ಯಾಡಿ: ರಸ್ತೆಗುರುಳಿದ ಕಂಟೇನರ್ ಲಾರಿ ➤ ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಎ.02. ಚಾಲಕನ ನಿಯಂತ್ರಣ ತಪ್ಪಿದ ಕಂಟೇನರ್ ಲಾರಿಯೊಂದು ರಸ್ತೆಯಲ್ಲಿ ಮಗುಚಿ ಬಿದ್ದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಗೋಳಿತೊಟ್ಟು ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕಂಟೇನರ್ ಲಾರಿಯು ಗೋಳಿತೊಟ್ಟು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಘಟನೆಯಲ್ಲಿ ಲಾರಿ ಚಾಲಕನಿಗೆ ಗಾಯಗಳಾಗಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.    

ನೆಲ್ಯಾಡಿ: ರಸ್ತೆಗುರುಳಿದ ಕಂಟೇನರ್ ಲಾರಿ ➤ ಚಾಲಕನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ತಲಪಾಡಿ: ಎಂಡಿಎಂಎ ಡ್ರಗ್ ಪೌಡರ್ ಮಾರಾಟಕ್ಕೆ ಯತ್ನ ➤ ಇಬ್ಬರು ಅರೆಸ್ಟ್

(ನ್ಯೂಸ್ ಕಡಬ) newskadaba.com ತಲಪಾಡಿ, ಎ. 02. ಇಲ್ಲಿನ ಬಾರೊಂದರ ಬಳಿ ನಿಷೇಧಿತ ಎಂಡಿಎಂಎ ಡ್ರಗ್ ಪೌಡರ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಪೋಲಿಸರು ಬಂಧಿಸಿದ್ದಾರೆ. ಬಂಧಿತರನ್ನು ಉಪ್ಪಳ ಪಚ್ಚಿಲಮಾರ್ ನಿವಾಸಿ ಫಜಲ್ ಪಿ.ಎಂ.(27) ಮತ್ತು ಉಪ್ಪಳ ಮಜಲ್ ನಿವಾಸಿ ಮೊಹಮ್ಮದ್ ನೌಫಾಲ್ ಎಂದು ಗುರುತಿಸಲಾಗಿದೆ. ಇವರಿಬ್ಬರು ತಲಪಾಡಿ ತಚ್ಛಣಿ ಬಾರ್ ಬಳಿ ನಿಷೇಧಿತ ಡ್ರಗ್ ಪೌಡರ್ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಇವರಿಂದ ಡ್ರಗ್ ಪೌಡರ್ ಸಹಿತ ಬೈಕ್ ಮತ್ತು ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ತಲಪಾಡಿ: ಎಂಡಿಎಂಎ ಡ್ರಗ್ ಪೌಡರ್ ಮಾರಾಟಕ್ಕೆ ಯತ್ನ ➤ ಇಬ್ಬರು ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top