ಕರ್ನಾಟಕ

ಮಂಗಳೂರು: ಮಸೀದಿಗೆ ಕಲ್ಲೆಸೆದು ಹಾನಿಗೈದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 05. ಇಲ್ಲಿನ ಕಾಟಿಪಳ್ಳ ಬಳಿಯ ಕಾನ ಜನತಾ ಕಾಲನಿಯಲ್ಲಿ ಮಸೀದಿಗೆ ಕಿಡುಗೇಡಿಗಳು ಕಲ್ಲೆಸೆದು ಹಾನಿಗೈದ ಘಟನೆ ನಡೆದಿದೆ.‌ ಜನತಾ ಕಾಲನಿಯ ಸಾದುಲಿ ಜುಮಾ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಂ ಮದ್ರಸಕ್ಕೆ ಶನಿವಾರದಂದು ರಾತ್ರಿ ದುಷ್ಕರ್ಮಿಗಳು ಕಲ್ಲೆಸೆದಿದ್ದು, ಈ ಬಗ್ಗೆ ಮಸೀದಿ ಕಮಿಟಿ ಸದಸ್ಯರು ನೀಡಿದ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಸೀದಿಯಲ್ಲಿ ಶನಿವಾರ ರಾತ್ರಿ 1:30ರ ವರೆಗೆ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು. ಬಳಿಕ ಸುಮಾರು 2:30ರ ವೇಳೆಗೆ ದ್ವಿಚಕ್ರ […]

ಮಂಗಳೂರು: ಮಸೀದಿಗೆ ಕಲ್ಲೆಸೆದು ಹಾನಿಗೈದ ದುಷ್ಕರ್ಮಿಗಳು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮದ್ಯ ಸಾಗಾಟದ ಲಾರಿ ಪಲ್ಟಿ- ರಸ್ತೆ ಮೇಲೆ ಬಿದ್ದಿದ್ದ ಮದ್ಯಕ್ಕಾಗಿ ಮುಗಿಬಿದ್ದ ಸಾರ್ವಜನಿಕರು

(ನ್ಯೂಸ್ ಕಡಬ) newskadaba.com ಕಾರವಾರ, ಎ. 04. ಅಕ್ರಮವಾಗಿ ಗೋವಾದಿಂದ ಹುಬ್ಬಳ್ಳಿಗೆ ಮದ್ಯ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದಲ್ಲಿ ನಡೆದಿದೆ. ಲಾರಿಯ ತುಂಬ ಮದ್ಯವನ್ನ ತುಂಬಿಸಿಡಲಾಗಿದ್ದು ಲಾರಿಯು ಪಲ್ಟಿಯಾದ ವಿಷಯ ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಓಡೋಡಿ ಬಂದು ರಸ್ತೆ ಮೇಲೆ ಬಿದ್ದಿದ್ದ ಮದ್ಯದ ಬಾಟಲಿಯನ್ನ ಎತ್ತಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮದ್ಯ ಸಾಗಾಟದ ಲಾರಿ ಪಲ್ಟಿ- ರಸ್ತೆ ಮೇಲೆ ಬಿದ್ದಿದ್ದ ಮದ್ಯಕ್ಕಾಗಿ ಮುಗಿಬಿದ್ದ ಸಾರ್ವಜನಿಕರು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ವ್ಯಕ್ತಿಗೆ ಚೂರಿಯಿಂದ ಇರಿದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ. 04. ಬೈಕಿನಲ್ಲಿ ಹಿಂಬಾಳಿಸಿಕೊಂಡು ಬಂದ ದುಷ್ಕರ್ಮಿಗಳ ತಂಡವೊಂದು ಯುವಕನೋರ್ವನಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ಬಿ.ಸಿ ರೋಡಿನ ಅಜ್ಜಿಬೆಟ್ಟು ಕ್ರಾಸ್ ಬಳಿ ನಡೆದಿದೆ. ಚೂರಿ ಇರಿತಕ್ಕೊಳಗಾದವರನ್ನು ಬ್ರಹ್ಮರಕೂಟ್ಲು ವಳವೂರು ನಿವಾಸಿ ಮನೋಜ್ ಸಪಲ್ಯ (30) ಎಂದು ಗುರುತಿಸಲಾಗಿದೆ. ಮನೋಜ್ ಅವರು ತುಂಬೆಯಿಂದ ಬಿಸಿರೋಡು ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಹೆಲ್ಮೆಟ್ ಧರಿಸಿ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬರುತ್ತಿದ್ದರು. ಇದನ್ನು ಗಮನಿಸಿದ ಮನೋಜ್ ಬಿಸಿರೋಡಿಗೆ ಆಗಮಿಸುತ್ತಿದ್ದಂತೆಯೇ ಅಜ್ಜಿಬೆಟ್ಟು ಕ್ರಾಸ್‌

ಬಂಟ್ವಾಳ: ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ವ್ಯಕ್ತಿಗೆ ಚೂರಿಯಿಂದ ಇರಿದ ದುಷ್ಕರ್ಮಿಗಳು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ರಿಕ್ಷಾ ಸ್ಕಿಡ್- ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಎ. 04. ಉಪ್ಪಿನಂಗಡಿ- ಕಡಬ ರಸ್ತೆಯ ಆಲಂಕಾರು ಪೇಟೆ ಸಮೀಪ ರಿಕ್ಷಾವೊಂದು ಸ್ಕಿಡ್ ಆಗಿ ರಸ್ತೆ ಪಕ್ಕದಲ್ಲಿದ್ದ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಗಾಯಗೊಂಡ ಘಟನೆ ಆಲಂಕಾರು ಪೇಟೆಯ ನೂಜಿಬೈಲು ಎಂಬಲ್ಲಿ ನಡೆದಿದೆ. ರಿಕ್ಷಾ ರಾಮಕುಂಜದಿಂದ ಆಲಂಕಾರು ಪೇಟೆಗೆ ಬಂದು ಹಿಂದಿರುಗಿ ಹೋಗುವಾಗ ಈ ಅಪಘಾತ ಸಂಭವಿಸಿದ್ದು ಚಾಲಕನಿಗೆ ಗಾಯವಾಗಿದೆ ಎನ್ನಲಾಗಿದೆ.  

ಕಡಬ: ರಿಕ್ಷಾ ಸ್ಕಿಡ್- ಚಾಲಕನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ಕಾರು-ಆ್ಯಕ್ಟಿವಾ ನಡುವೆ ಢಿಕ್ಕಿ ➤ ಕಾರು ಚಾಲಕ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಎ.04. ಕಾರು ಹಾಗೂ ಆ್ಯಕ್ಟಿವಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಎಂಬಲ್ಲಿ ಭಾನುವಾರದಂದು ನಡೆದಿದೆ. ರಾಮಕುಂಜದ ವ್ಯಕ್ತಿಯದ್ದು ಎನ್ನಲಾದ ರೆನಾಲ್ಟ್‌ ಕ್ವಿಡ್ ಕಾರು ಹಾಗೂ ಆ್ಯಕ್ಟಿವಾ ನಡುವೆ ಕುಂತೂರು ಸಮೀಪದ‌ ಕೋಚಕಟ್ಟೆ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಮುಂದುವರಿದು ಕಾರು ಸಮೀಪದಲ್ಲಿದ್ದ ಕಟ್ಟೆಯೊಂದಕ್ಕೆ ಢಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡ ಕಾರು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ

ಕಡಬ: ಕಾರು-ಆ್ಯಕ್ಟಿವಾ ನಡುವೆ ಢಿಕ್ಕಿ ➤ ಕಾರು ಚಾಲಕ ಗಂಭೀರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಳ್ಳಾಲ: ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಪತ್ತೆ

(ನ್ಯೂಸ್ ಕಡಬ) newskadaba.com ಉಳ್ಳಾಲ, ಎ. 04. ಇಲ್ಲಿನ ಕೊಂಡಾಣ ಶ್ರೀ ಬಂಟ ಪಿಲಿಚಾಮುಂಡಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಂ ಪತ್ತೆಯಾಗಿದ್ದು, ಆಡಳಿತ ಸಮಿತಿಯು ಭಾನುವಾರ ಹುಂಡಿಯನ್ನು ಒಡೆಯುವ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಕೆಲ ತಿಂಗಳ ಹಿಂದೆಯಷ್ಟೇ ಉಳ್ಳಾಲ ಭಾಗದಲ್ಲಿನ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಇದೇ ರೀತಿಯ ಪ್ರಕರಣ ನಡೆದಿದ್ದು, ಮೂರು ದಿನಗಳ ಹಿಂದೆಯಷ್ಟೇ ಇಬ್ಬರು ಆರೋಪಿಗಳ ಬಂಧನವಾಗಿತ್ತು. ಇದೇ ಸಂದರ್ಭದಲ್ಲಿ ಕಾರಣಿಕ ಕ್ಷೇತ್ರ‌ ಕೊಂಡಾಣ ದೇವಸ್ಥಾನದಲ್ಲಿಯೂ ಆರೋಪಿಗಳು ದುಷ್ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂದು

ಉಳ್ಳಾಲ: ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಪತ್ತೆ Read More »

ಕರಾವಳಿ, ಕರ್ನಾಟಕ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಿಗೆ ಭೇಟಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ. 04. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೆಲಿಕಾಪ್ಟರ್ ಮೂಲಕ ಅಗಮಿಸಿದ ಇವರು ನೇರ ಧರ್ಮಸ್ಥಳದ ಸನ್ನಿಧಿ ವಸತಿಗೃಹಕ್ಕೆ ಬಂದು ಅಲ್ಲಿಂದ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಎಮ್.ಎಲ್.ಸಿ ಹರೀಶ್ ಕುಮಾರ್, ವಸಂತ ಬಂಗೇರ, ಗಂಗಾಧರ್ ಗೌಡ, ರಂಜನ್ ಗೌಡ, ಶೈಲೇಶ್ ಕುಮಾರ್, ಬೆಳ್ತಂಗಡಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ, ಇಂಟಕ್ ಅಧ್ಯಕ್ಷ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಿಗೆ ಭೇಟಿ Read More »

ಕರಾವಳಿ, ಕರ್ನಾಟಕ

ಬಂಟ್ವಾಳ: ಬೈಕ್ ಸ್ಕಿಡ್ ➤ ಯುವಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ. 04. ಬೈಕ್ ಸ್ಕಿಡ್ ಆದ ಪರಿಣಾಮ ಯುವಕನೋರ್ವ ಗಾಯಗೊಂಡ ಘಟನೆ ಮೂರ್ಜೆ ಎಂಬಲ್ಲಿ ನಡೆದಿದೆ. ಗಾಯಗೊಂಡವನನ್ನು ಗೇರುಕಟ್ಟೆ ನಿವಾಸಿ ಪದ್ಮನಾಭ ಎಂಬವರ ಮಗ ಸಚಿನ್(21) ಎಂದು ಗುರುತಿಸಲಾಗಿದೆ. ಘಟನೆಯಿಂದ ರಸ್ತೆ ಬದಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಎಸ್ಕೆಎಸ್ಸೆಸ್ಸೆಫ್ ಧೂಮಲಿಕೆ ವಿಖಾಯ ತಂಡದ ಚೇರ್ ಮೆನ್ ಫಯಾಝ್ ಎಂಬವರು ಬಂಟ್ವಾಳ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಬಂಟ್ವಾಳ: ಬೈಕ್ ಸ್ಕಿಡ್ ➤ ಯುವಕನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: 12ರ ಬಾಲಕನ ಕೊಲೆ ಪ್ರಕರಣ ➤ ಓರ್ವ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಉಳ್ಳಾಲ, ಎ.04. ಹಾಕಿಬ್ (12) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ಮೊಬೈಲ್ ಗೆ ಕೊನೆಯ ಕರೆಯ ಆಧಾರದಲ್ಲಿ ಸ್ಥಳೀಯವಾಗಿ ವಾಸಿಸುತ್ತಿರುವ ಯುವಕನೋರ್ವನನ್ನು ಪೊಲೀಸರು ತನಿಖೆ ನಡೆಸಲು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.   ಆನ್ ಲೈನ್ ಗೇಮ್ ನಲ್ಲಿ ಸೋತ ವಿಚಾರವಾಗಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದ್ದು, ಬಾಲಕ ರಾತ್ರಿ ಪೋನ್ ಕರೆಯ ಬಳಿಕ ಮನೆಯಿಂದ ಹೊರಗೆ ಹೋಗಿದ್ದನೆಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಬಾಲಕ ಮನೆಯ ಸಮೀಪ ವೇಗವಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸ್ಥಳೀಯ

ಮಂಗಳೂರು: 12ರ ಬಾಲಕನ ಕೊಲೆ ಪ್ರಕರಣ ➤ ಓರ್ವ ಪೊಲೀಸ್ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಪಾರ್ಟ್‌ಮೆಂಟ್ ನಲ್ಲಿ ಬೆಂಕಿ ➤ ತಪ್ಪಿದ ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 04. ಇಲ್ಲಿನ ಸ್ಟಾರ್‌ ರಾಕ್‌ ಅಪಾರ್ಟ್‌ಮೆಂಟ್ ನ ಎರಡನೇ ಮಹಡಿಯ ಫ್ಲ್ಯಾಟ್‌ ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ತಾಂತ್ರಿಕ ದೋಷದಿಂದ ರೆಫ್ರಿಜರೇಟರ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿರುವುದೇ ಬೆಂಕಿಗೆ ಕಾರಣ ಎಂದು ಶಂಕಿಸಲಾಗಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಬೆಂಕಿ ಹೊತ್ತಿಕೊಂಡ ಸಂದರ್ಭ ಫ್ಲ್ಯಾಟ್‌ನಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಅಗ್ನಿ ಕಾಣಿಸಿಕೊಂಡ ಹಿನ್ನೆಲೆ

ಮಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಪಾರ್ಟ್‌ಮೆಂಟ್ ನಲ್ಲಿ ಬೆಂಕಿ ➤ ತಪ್ಪಿದ ಭಾರೀ ಅನಾಹುತ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top