ಕರ್ನಾಟಕ

ಕೋವಿಡ್-19: ರಾಜ್ಯದಲ್ಲಿ ಇಳಿಯದ ಸಾವಿನ ಪ್ರಕರಣ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.08: ರಾಜ್ಯದಲ್ಲಿ ಹೊಸ ಸೋಂಕು ಪ್ರಕರಣಗಳು ಇಳಿಕೆಯಾದರೂ, ಸಾವಿನ ಪ್ರಮಾಣ ಮಾತ್ರ ಇಳಿಕೆಯಾಗುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೊಪ್ಪಳ ಮೂಲದ 2 ವರ್ಷದ ಮಗು ಸೇರಿ 340 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದ್ದು, ಸೋಮವಾರ 11,958 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 27,07,481ಕ್ಕೆ ತಲುಪಿದೆ. ರಾಜ್ಯದಲ್ಲಿ 0-9 ವರ್ಷದ 81,520 ಮಕ್ಕಳಿಕೆ ಸೋಂಕು ತಗುಲಿದ್ದು, 10-19 ವರ್ಷದ 2,03,526 ಮಕ್ಕಳಿಗೆ ಸೋಂಕು ತಗುಲಿರುವುದು […]

ಕೋವಿಡ್-19: ರಾಜ್ಯದಲ್ಲಿ ಇಳಿಯದ ಸಾವಿನ ಪ್ರಕರಣ Read More »

ಕರ್ನಾಟಕ

ರಾಷ್ಟ್ರವನ್ನೇ ತಲ್ಲಣಗೊಳಿಸಿದ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ➤ ಪತ್ನಿ ಸೇರಿ ಮೂವರಿಗೆ ಜೀವಿತಾವಧಿ ಜೈಲು ಶಿಕ್ಷೆ

(ನ್ಯೂಸ್ ಕಡಬ) newskadaba,ಉಡುಪಿ, ಜೂ.08:ಉಡುಪಿಯ ಇಂದ್ರಾಳಿಯ ಎನ್‌ಆರ್‌ಐ ಉದ್ಯಮಿ ಭಾಸ್ಕರ್ ಶೆಟ್ಟಿ (52) ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೃತರ ಪತ್ನಿ ಮತ್ತು ಮಗ ಸೇರಿದಂತೆ ಮೂವರನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮಂಗಳವಾರ (ಜೂನ್ 8) ಅಪರಾಧಿಗಳೆಂದು ತೀರ್ಪು ನೀಡಿದೆ.ಅಲ್ಲದೆ ಮೂವರಿಗೂ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ.   ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ ಮತ್ತು ನಂದಳಿಕೆ ಮೂಲದ ಜ್ಯೋತಿಷಿ ನಿರಂಜನ್ ಭಟ್ ಅಪರಾಧಿ ಎಂದು ನ್ಯಾಯಾಲಯ ಪರಿಗಣಿಸಿಜೀವಾವಧಿ ಶಿಕ್ಷೆ ವಿಧಿಸಿದೆ. ವಿಶೇಷ

ರಾಷ್ಟ್ರವನ್ನೇ ತಲ್ಲಣಗೊಳಿಸಿದ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ➤ ಪತ್ನಿ ಸೇರಿ ಮೂವರಿಗೆ ಜೀವಿತಾವಧಿ ಜೈಲು ಶಿಕ್ಷೆ Read More »

ಕರ್ನಾಟಕ

ಬಿಜೆಪಿಯ ಹಿರಿಯ ಮುಖಂಡ, ಶಾಸಕ ಸಿ.ಎಂ. ಉದಾಸಿ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.08. ಹಿರಿಯ ಬಿಜೆಪಿ ಮುಖಂಡ, ಹಾನಗಲ್ ಕ್ಷೇತ್ರದ ಜನಪ್ರಿಯ ಶಾಸಕ ಸಿ‌‌‌.ಎಂ. ಉದಾಸಿ(77) ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾದರು. ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಅಪರಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ‌. ಹಾನಗಲ್‌ ವಿಧಾನಸಭಾ ಕ್ಷೇತ್ರದಿಂದ 1983ರಿಂದ ನಿರಂತರವಾಗಿ 9 ಬಾರಿ ಸ್ಪರ್ಧಿಸಿದ ಉದಾಸಿಯವರು 6 ಬಾರಿ ಶಾಸಕರಾಗಿದ್ದರು. ಜನತಾದಳ, ಜೆಡಿಯು, ಕೆಜಿಪಿ ಪಕ್ಷದಿಂದ ಸ್ಪರ್ಧಿಸಿದ್ದ ಇವರು ಕಳೆದ ಒಂದೂವರೆ ದಶಕಗಳಿಂದ

ಬಿಜೆಪಿಯ ಹಿರಿಯ ಮುಖಂಡ, ಶಾಸಕ ಸಿ.ಎಂ. ಉದಾಸಿ ವಿಧಿವಶ Read More »

ಕರ್ನಾಟಕ

ನೀವು ಸರಕಾರಿ ಜಾಗದಲ್ಲಿ ಮನೆ ಕಟ್ಟಿದ್ದೀರಾ..? ➤ ಹಾಗಾದರೆ ಈ ಸುದ್ದಿಯನ್ನು ತಪ್ಪದೇ ಓದಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.08. ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ಸರಕಾರವು ಗುಡ್ ನ್ಯೂಸ್ ನೀಡಿದ್ದು, ಸರಕಾರಿ ಭೂಮಿಯ ಸಕ್ರಮಕ್ಕೆ ಅರ್ಜಿ ಸಲ್ಲಿಕೆಯ ಅವಧಿಯನ್ನು 31 ಮಾರ್ಚ್ 2022 ರವರೆಗೆ ವಿಸ್ತರಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. 2015 ರ ಜನವರಿ 01 ರ ಮೊದಲು ಮನೆ ನಿರ್ಮಿಸದವರಿಗೆ ಈ ಯೋಜನೆಯು ಅನ್ವಯವಾಗಲಿದ್ದು, ಅನಧಿಕೃತವಾಗಿ ನಿರ್ಮಿಸಿಕೊಂಡ ಮನೆಗಳ ಸಕ್ರಮಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. 94 ಸಿ ಹಾಗೂ 94 ಸಿಸಿ ಅನ್ವಯ ಈ ಹಿಂದೆ

ನೀವು ಸರಕಾರಿ ಜಾಗದಲ್ಲಿ ಮನೆ ಕಟ್ಟಿದ್ದೀರಾ..? ➤ ಹಾಗಾದರೆ ಈ ಸುದ್ದಿಯನ್ನು ತಪ್ಪದೇ ಓದಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತವರನ್ನು ಬಿಟ್ಟು ತೆರಳುವ ಹಾಗಾಗಿದೆ, ಥ್ಯಾಂಕ್ಯೂ ಮೈಸೂರು ➤ ಸುದ್ದಿಗಾರರ ಮುಂದೆ ಭಾವುಕರಾದ ರೋಹಿಣಿ ಸಿಂಧೂರಿ

(ನ್ಯೂಸ್ ಕಡಬ) newskadaba.com ಮೈಸೂರು, ಜೂ.07. ಮೈಸೂರಿನ ಜನತೆ ಸಾಕಷ್ಟು ಪ್ರೀತಿ ತೋರಿಸಿ ನನ್ನನ್ನು ಮನೆ ಮಗಳಂತೆ ನೋಡಿಕೊಂಡಿದ್ದಾರೆ. ಇಲ್ಲಿ ನನಗೆ ತವರೂರಿನ ಭಾವನೆ ಮೂಡಿದೆ. ಇಂದು ತವರನ್ನು ಬಿಟ್ಟು ತೆರಳುವ ಹಾಗಾಗಿದೆ. ಥ್ಯಾಂಕ್ಯೂ ಮೈಸೂರು. ಎಂದು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೈಸೂರಿನಲ್ಲಿ ಸೋಮವಾರದಂದು ಭಾವುಕರಾದರು. ರಾಜಕೀಯ ಕೆಸರೆರಚಾಟಕ್ಕೆ ಕಳೆದ ಕೆಲವು ಸಮಯಗಳಿಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರಣರಾಗಿದ್ದರು. ಎಲ್ಲಾ ಪಕ್ಷಗಳ ಮುಖಂಡರು ಜಿಲ್ಲಾಧಿಕಾರಿಯ ಖಡಕ್‌ ರೂಲ್ಸ್ ಗೆ ಕಸಿವಿಸಿಗೊಂಡು ರೋಹಿಣಿ ಸಿಂಧೂರಿಯವರ ವಿರುದ್ಧ ಧ್ವನಿಯೆತ್ತಿದ್ದರು.

ತವರನ್ನು ಬಿಟ್ಟು ತೆರಳುವ ಹಾಗಾಗಿದೆ, ಥ್ಯಾಂಕ್ಯೂ ಮೈಸೂರು ➤ ಸುದ್ದಿಗಾರರ ಮುಂದೆ ಭಾವುಕರಾದ ರೋಹಿಣಿ ಸಿಂಧೂರಿ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಪತ್ನಿಯ ಶೀಲ ಶಂಕಿಸಿದ ಪತಿ ➤ ಬೇಸತ್ತ ಪತ್ನಿಯ ಅಣ್ಣ ಮಾಡಿದ್ದೇನು ಗೊತ್ತೇ..?

(ನ್ಯೂಸ್ ಕಡಬ) newskadaba.com ಮಂಡ್ಯ, ಜೂ.07. ತನ್ನ ಸಹೋದರಿಯ ಶೀಲವನ್ನು ಶಂಕಿಸಿದ ಭಾವನನ್ನು ಕತ್ತು ಹಿಸುಕಿ ಕೊಲೆಗೈದಿದ್ದಲ್ಲದೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ‌ ಎಂದು ಬಿಂಬಿಸಲು ಹೋಗಿ ತಾವೇ ಪೊಲೀಸರ ಅತಿಥಿಯಾದ ಘಟನೆ ಮಂಡ್ಯದಿಂದ ವರದಿಯಾಗಿದೆ. ಬಂಧಿತ ಆರೋಪಿಯನ್ನು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಚೀಣ್ಯ ನಿವಾಸಿ ಮಂಜುನಾಥ್ ಹಾಗೂ ಆತನ ಸ್ನೇಹಿತ ಗಂಗಾಧರ್ ಎಂದು ಗುರುತಿಸಲಾಗಿದೆ. ಮಂಜುನಾಥ್ ನ ತಂಗಿಯನ್ನು ಕಳೆದ 16 ವರ್ಷಗಳ ಹಿಂದೆ ತುಮಕೂರಿನ ಪುಟ್ಟರಾಜು(40) ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ಇವರಿಬ್ಬರ

ಪತ್ನಿಯ ಶೀಲ ಶಂಕಿಸಿದ ಪತಿ ➤ ಬೇಸತ್ತ ಪತ್ನಿಯ ಅಣ್ಣ ಮಾಡಿದ್ದೇನು ಗೊತ್ತೇ..? Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಾಜ್ಯಾದ್ಯಂತ ನಾಳೆಯಿಂದ ಲಾಕ್‍ಡೌನ್ ಸಡಿಲ..? ➤ ರಸ್ತೆಗಿಳಿಯಲಿವೆ ಕೆಎಸ್ಸಾರ್ಟಿಸಿ ಬಸ್‌ಗಳು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.07. ರಾಜ್ಯದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಹೇರಲಾಗಿರುವ ಲಾಕ್‍ಡೌನ್ ನಾಳೆಯಿಂದ ಹಂತಹಂತವಾಗಿ ಅನ್ ಲಾಕ್ ಆಗಲಿದೆ. ನಾಳೆಯಿಂದ ಒಂದೊಂದೇ ಸರಕಾರಿ ಸೇವೆಗಳು ಆರಂಭಗೊಳ್ಳುತ್ತಿದ್ದು, ನಾಳೆಯಿಂದ ಆಯ್ದ ಕೆಎಸ್ಸಾರ್ಟಿಸಿ ಬಸ್ ಗಳು ರಸ್ತೆಗಿಳಿಯಲಿವೆ. ರಾಜ್ಯದಲ್ಲಿರುವ ಎಲ್ಲಾ ರಿಜಿಸ್ಟ್ರಾರ್​ ಮತ್ತು ಸಬ್​ ರಿಜಿಸ್ಟ್ರಾರ್ ಕಚೇರಿಗಳು ನಾಳೆಯಿಂದಲೇ ತೆರೆಯಲಿವೆ. ಮೊದಲನೇಯ ಹಂತದಲ್ಲಿ ಶೇ.50ರಷ್ಟು ಆಟೋ, ಟ್ಯಾಕ್ಸಿಗಳು ರಸ್ತೆಗಿಳಿಯಲಿವೆ. ಎಲ್ಲಾ ಧಾರ್ಮಿಕ ಸ್ಥಳಗಳು ತೆರೆಯಲಿದ್ದು, ಮಂದಿರ, ಮಸೀದಿ, ಚರ್ಚ್ ತೆರೆಯುವುದಕ್ಕೆ ಕೇಂದ್ರವು ಅನುಮತಿ ನೀಡಿದೆ.      

ರಾಜ್ಯಾದ್ಯಂತ ನಾಳೆಯಿಂದ ಲಾಕ್‍ಡೌನ್ ಸಡಿಲ..? ➤ ರಸ್ತೆಗಿಳಿಯಲಿವೆ ಕೆಎಸ್ಸಾರ್ಟಿಸಿ ಬಸ್‌ಗಳು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಲೇಖಕ, ಮಾಜಿ ಸಚಿವ ಪ್ರೊ. ಮಮ್ತಾಝ್ ಅಲಿ‌ ಖಾನ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.07. ಮಾಜಿ ಸಚಿವ, ಲೇಖಕ, ಪ್ರೊ. ಮಮ್ತಾಝ್ ಅಲಿ ಖಾನ್(94) ಅವರು ಸೋಮವಾರದಂದು ನಿಧನರಾಗಿದ್ದಾರೆ. 2008ರಲ್ಲಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಪಸಂಖ್ಯಾತ ಕಲ್ಯಾಣ, ಹಜ್, ವಕ್ಫ್ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಇವರು ಇಂದು ಬೆಂಗಳೂರಿನ ಗಂಗಾನಗರ ನಿವಾಸದಲ್ಲಿ ತಮ್ಮ ವಯೋಸಹಜ ಖಾಯಿಲೆಯಿಂದ ಮುಂಜಾನೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.      

ಲೇಖಕ, ಮಾಜಿ ಸಚಿವ ಪ್ರೊ. ಮಮ್ತಾಝ್ ಅಲಿ‌ ಖಾನ್ ಇನ್ನಿಲ್ಲ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Nalin Kumar kateel

ಸಿಎಂ ಯಡಿಯೂರಪ್ಪರ ರಾಜೀನಾಮೆ ವಿಚಾರ ➤ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾದರೂ ಏನು..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.07. ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನವನ್ನು ಮೂಡಿಸಿರುವ ಮುಖ್ಯಮಂತ್ರಿ ಬಿ‌.ಎಸ್. ಯಡಿಯೂರಪ್ಪರ ‘ನನಗೆ ಸಿಎಂ ಸ್ಥಾನ ನೀಡಿರುವುದು ಸಂಘಟನೆ. ಹೈಕಮಾಂಡ್ ಗೆ ನನ್ನ ಬಗ್ಗೆ ಎಲ್ಲಿಯವರೆಗೆ ವಿಶ್ವಾಸವಿರುತ್ತದೆಯೋ ಅಲ್ಲಿಯವರೆಗೆ ಸಿಎಂ ಸ್ಥಾನದಲ್ಲಿರುತ್ತೇನೆ. ಹೈಕಮಾಂಡ್ ಸೂಚಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎನ್ನುವ ಹೇಳಿಕೆಯ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ. ಈ ಬಗ್ಗೆ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು, ಯಡಿಯೂರಪ್ಪ ಅವರು ನಮ್ಮ ಆದರ್ಶ ನಾಯಕ. ರಾಷ್ಟ್ರ ನಾಯಕರು ಮತ್ತು

ಸಿಎಂ ಯಡಿಯೂರಪ್ಪರ ರಾಜೀನಾಮೆ ವಿಚಾರ ➤ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾದರೂ ಏನು..? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೈಸೂರಿಗೆ ನೂತನ ಜಿಲ್ಲಾಧಿಕಾರಿಯಾಗಿ ಡಾ. ಬಗಾದಿ ಗೌತಮ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba, ಮೈಸೂರು ಜೂ.06: ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯ ಆಗಮನವಾಗಿದೆ. ಡಾ. ಬಗಾದಿ ಗೌತಮ್ ಅವರು ಇಂದು ಇಲ್ಲಿನ ಡಿಸಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ ಅವರಿಂದ ಅಧಿಕಾರ ಸ್ವೀಕರಿಸಿದರು.   ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಸರ್ವೀಸ್‌ನಲ್ಲಿ ಯಾವ ವಿವಾದಕ್ಕೂ ಆಸ್ಪದ ನೀಡಿಲ್ಲ. ನನ್ನ ಹೆಸರು ನೀವು ಕೇಳಿದ್ದಿರೋ ಇಲ್ಲವೋ ಗೊತ್ತಿಲ್ಲ. ನಾನು ತುಂಬಾ ಲೋ ಪ್ರೊಫೈಲ್ ಅಧಿಕಾರಿ. ಸಾಂಪ್ರದಾಯಿಕ ನಗರಿ ಮೈಸೂರಿನಲ್ಲಿ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಇರಬಹುದು. ನಾನು ಪಾರದರ್ಶಕವಾಗಿ ಜನರಿಗೆ

ಮೈಸೂರಿಗೆ ನೂತನ ಜಿಲ್ಲಾಧಿಕಾರಿಯಾಗಿ ಡಾ. ಬಗಾದಿ ಗೌತಮ್ ಅಧಿಕಾರ ಸ್ವೀಕಾರ Read More »

ಕರ್ನಾಟಕ
Scroll to Top