ಇಂದಿನಿಂದ ಮಂಗಳೂರು – ಬೆಂಗಳೂರು ವಿಸ್ತಾಡೋಮ್ ರೈಲು ಸಂಚಾರ ಆರಂಭ ➤ ಶಿರಾಡಿಯ ಪ್ರಕೃತಿ ರಮಣೀಯ ದೃಶ್ಯ ಇನ್ನಷ್ಟು ಹತ್ತಿರ
(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.11. ಮುಂಬೈ – ಪುಣೆ ನಡುವೆ ವಿಸ್ತಾಡೋಮ್ ರೈಲು ಸಂಚಾರದ ನಂತರ ಇದೀಗ ಕರ್ನಾಟಕದಲ್ಲಿ ಅತ್ಯಾಧುನಿಕ ವಿಸ್ತಾಡೋಮ್ ರೈಲ್ವೇಗೆ ಇಂದು ಚಾಲನೆ ದೊರೆಯಲಿದೆ. ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಸಂಚರಿಸುವ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ವಿಸ್ಟಾಡೋಮ್ ಕೋಚ್‌ನಲ್ಲಿ ಕುಳಿತು ಪಶ್ಚಿಮಘಟ್ಟದ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳುವ ಕಾಲ ಕೊನೆಗೂ ಕೂಡಿ ಬಂದಿದೆ. ಮಂಗಳೂರು ಜಂಕ್ಷನ್ ನಿಂದ ಇಂದು ಆರಂಭಗೊಳ್ಳಲಿರುವ ನೂತನ ವಿಸ್ತಾಡೋಮ್ ಕೋಚ್ ಹೊಂದಿರುವ ರೈಲಿಗೆ ಬೆಳಿಗ್ಗೆ 9 ಗಂಟೆಗೆ ಸಂಸದ ನಳಿನ್ ಕುಮಾರ್ ಕಟೀಲ್ […]









