ಕರ್ನಾಟಕ

ಬೆಳ್ತಂಗಡಿ: ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿದ ಹಿನ್ನೆಲೆ ಕಾಲೇಜಿನಿಂದ ಹೊರಹಾಕಿದ ವಿದ್ಯಾಸಂಸ್ಥೆ ➤ ಕಾಲೇಜು ಮುಂಭಾಗ ಒಂಟಿ ಪ್ರತಿಭಟನೆ ಕುಳಿತ ವಿದ್ಯಾರ್ಥಿ

(ನ್ಯೂಸ್ ಕಡಬ) Newskadaba.com ಬೆಳ್ತಂಗಡಿ, ಅ. 27. ವಿದ್ಯಾರ್ಥಿ ಸಂಘಟನೆಯೊಂದರಲ್ಲಿ ಗುರುತಿಸಿದ್ದಾನೆ ಎಂಬ ಕಾರಣಕ್ಕೆ ಕಾಲೇಜಿನಿಂದ ವಿದ್ಯಾರ್ಥಿಯನ್ನು ಹೊರಹಾಕಿದ ಘಟನೆ ಬೆಳ್ತಂಗಡಿಯ ವಾಣಿ ಪಿ.ಯು ಕಾಲೇಜಿನಲ್ಲಿ ನಡೆದಿದೆ. ವಿದ್ಯಾರ್ಥಿ ಶಹದ್ ಮೊಹಮ್ಮದ್ ಎಂಬ ಎಂಬಾತನನ್ನು ಕಾಲೇಜಿನಿಂದ ಡಿಬಾರ್ ಮಾಡಲಾಗಿದೆ. ಕಳೆದ 19 ದಿನಗಳಿಂದ ಸಂಸ್ಥೆಯೊಂದಿಗೆ ಕಾಲೇಜಿಗೆ ಸೇರಿಸುವಂತೆ ವಿನಂತಿ ಮಾಡಿದ್ದರೂ ಇದಕ್ಕೆ ಮಣಿಯದ ಸಂಸ್ಥೆಯು ಕಾಲೇಜಿನಿಂದ ಹೊರಹಾಕಿದೆ. ಇಂದು ನ್ಯಾಯಕ್ಕಾಗಿ ವಿದ್ಯಾರ್ಥಿಯು ಕಾಲೇಜಿನ ಮುಂಭಾಗದಲ್ಲಿ ಕುಳಿತು ಒಂಟಿ ಪ್ರತಿಭಟನೆ ನಡೆಸುತ್ತಿದ್ದು, ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಬೇಕು ಹಾಗೂ ಡಿಬಾರ್ […]

ಬೆಳ್ತಂಗಡಿ: ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿದ ಹಿನ್ನೆಲೆ ಕಾಲೇಜಿನಿಂದ ಹೊರಹಾಕಿದ ವಿದ್ಯಾಸಂಸ್ಥೆ ➤ ಕಾಲೇಜು ಮುಂಭಾಗ ಒಂಟಿ ಪ್ರತಿಭಟನೆ ಕುಳಿತ ವಿದ್ಯಾರ್ಥಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಐಸಿಸ್ ನಲ್ಲಿ ಸಕ್ರಿಯವಾಗಿರುವ ಶಂಕೆ ➤ ಬೆಂಗಳೂರಿನ ದಂತವೈದ್ಯ ಅರೆಸ್ಟ್

(ನ್ಯೂಸ್ ಕಡಬ) Newskadaba.com ಬೆಂಗಳೂರು, ಅ. 27. ಬೆಂಗಳೂರು ಮೂಲದ ದಂತವೈದ್ಯ ಡಾ. ಮೊಹಮ್ಮದ್ ತೌಕೀರ್‌ ಎಂಬಾತನನ್ನು ಶಂಕಿತ ಉಗ್ರನೆಂದು ಹೇಳಿ ರಾಷ್ಟ್ರೀಯ ತನಿಖಾದಳ ದೆಹಲಿಯಲ್ಲಿ ಬಂಧಿಸಿ, ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ನವೆಂಬರ್ 8ರ ವರೆಗೆ ವಶಕ್ಕೆ ಪಡೆದಿದೆ. ಐಸಿಸ್‌ ಗೆ ನೇಮಕಾತಿ ಮತ್ತು ಹಣ ಸಂಗ್ರಹ ಮಾಡಿದ ಆರೋಪದಡಿ ದೆಹಲಿಯಲ್ಲಿ ಬೆಂಗಳೂರಿನ ತಿಲಕನಗರ ಬಳಿಯ ಬಿಸ್ಮಿಲ್ಲಾ ನಗರದ ತೌಕೀರ್‌ನನ್ನು ಎನ್‌ಐಎ ತಂಡ ಬಂಧಿಸಿದೆ. ಈತ ಐಸಿಸ್‌ನಲ್ಲಿ ಸಕ್ರಿಯನಾಗಿದ್ದ ಬಗ್ಗೆ ತನಿಖೆಯಲ್ಲಿ ಪುರಾವೆಗಳು

ಐಸಿಸ್ ನಲ್ಲಿ ಸಕ್ರಿಯವಾಗಿರುವ ಶಂಕೆ ➤ ಬೆಂಗಳೂರಿನ ದಂತವೈದ್ಯ ಅರೆಸ್ಟ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹಾಡುಹಗಲೇ ಮಹಿಳೆಯ ಕತ್ತಿನಲ್ಲಿದ್ದ ಕರಿಮಣಿ ಸರ ಎಗರಿಸಿ ಪರಾರಿ

(ನ್ಯೂಸ್ ಕಡಬ) Newskadaba.com ವಿಟ್ಲ, ಅ. 27. ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಕರಿಮಣಿ ಸರ ಎಗರಿಸಿ ಪರಾರಿಯಾದ ಘಟನೆ ವಿಟ್ಲದಲ್ಲಿ ನಡೆದಿದೆ. ಉಕ್ಕುಡ ಸಮೀಪದ ಗುಂಪಲಡ್ಕ ನಿವಾಸಿ ಕಮಲ(55) ಎಂಬವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕೆಂಪು ಬಣ್ಣದ ಹೋಂಡಾ ಆಕ್ಟಿವಾ ವಾಹನದಲ್ಲಿ ಬಂದ ಅಪರಿಚಿತನೋರ್ವ ಮಹಿಳೆಯ ಕತ್ತಿನಲ್ಲಿದ್ದ 3.5 ಪವನ್ ತೂಕದ ಕರಿಮಣಿಸರ ಎಗರಿಸಿ ಪರಾರಿ ಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹಾಡುಹಗಲೇ ಮಹಿಳೆಯ ಕತ್ತಿನಲ್ಲಿದ್ದ ಕರಿಮಣಿ ಸರ ಎಗರಿಸಿ ಪರಾರಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ರಿಕ್ಷಾ ದಲ್ಲಿ ತೆರಳುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ ಹಿನ್ನೆಲೆ ➤ ಓರ್ವ ಅರೆಸ್ಟ್

(ನ್ಯೂಸ್ ಕಡಬ) Newskadaba.com ಪುತ್ತೂರು, ಅ. 27. ಅಟೋ ರಿಕ್ಷಾದಲ್ಲಿ ತೆರಳುತ್ತಿದ್ದ ಮಹಿಳೆಗೆ ವ್ಯಕ್ತಿಯೋರ್ವರು ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಅನಿಲ್ ಎಂದು ಗುರುತಿಸಲಾಗಿದೆ. ಈತ ರಿಕ್ಷಾವೊಂದರಲ್ಲಿ ಹೋಗುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಈ ಕುರಿತು ಮಹಿಳೆಯು ನೀಡಿದ ದೂರಿನಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ರಿಕ್ಷಾ ದಲ್ಲಿ ತೆರಳುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ ಹಿನ್ನೆಲೆ ➤ ಓರ್ವ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮನೆ ಬಿಟ್ಟು ತೆರಳಿದ್ದ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) Newskadaba.com ಉಪ್ಪಿನಂಗಡಿ, ಅ. 27. ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ರಾಮಣ್ಣ ಪೂಜಾರಿ ಎಂದು ಗುರುತಿಸಲಾಗಿದೆ. ಇವರು ಕೆಲವು ದಿನಗಳ ಹಿಂದೆಮನೆ ಬಿಟ್ಟು ಹೋಗಿದ್ದು, ಇಂದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮನೆ ಬಿಟ್ಟು ತೆರಳಿದ್ದ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೂಳೂರು ನಾಗನ ಕಟ್ಟೆಯಿಂದ ನಾಪತ್ತೆಯಾಗಿದ್ದ ನಾಗನ ಕಲ್ಲುಗಳು ಪತ್ತೆ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 27. ಇಲ್ಲಿನ ಹೊರವಲಯದ ಕೂಳೂರು ನಾಗನಕಟ್ಟೆಯಿಂದ ನಾಪತ್ತೆಯಾಗಿದ್ದ 6 ನಾಗನಕಟ್ಟೆಗಳು ಮಂಗಳವಾರದಂದು ಸಮೀಪದ ಗದ್ದೆಯಲ್ಲಿ ಪತ್ತೆಯಾಗಿದೆ. ನಾಗನಕಟ್ಟೆಯಲ್ಲಿದ್ದ 19 ನಾಗನ ಕಲ್ಲುಗಳ ಪೈಕಿ‌ 6 ಕಲ್ಲುಗಳು ಶನಿವಾರದಂದು ನಾಪತ್ತೆಯಾಗಿದ್ದು, ಒಂದು ಕಲ್ಲನ್ನು ಹುಡಿಗೈಯ್ಯಲಾಗಿತ್ತು. ಈ ಕುರಿತು ತನಿಖೆ ಮುಂದುವರಿಸಿದ ಕಾವೂರು ಪೊಲೀಸರು ಮಂಗಳವಾರದಂದು ಹುಡುಕಾಟ ಆರಂಭಿಸಿದ್ದರು. ಅದರಂತೆ ನಾಗನಕಟ್ಟೆ ಸಮೀಪದ ಬಾವಿಯ ನೀರನ್ನು ಖಾಲಿ ಮಾಡಿ ಹುಡುಕಾಡಲಾಯಿತಾದರೂ ಕಲ್ಲು ಪತ್ತೆಯಾಗಿರಲಿಲ್ಲ. ಬಳಿಕ ಸಮೀಪದ ಗದ್ದೆಯಲ್ಲಿ ಪತ್ತೆಯಾಗಿವೆ.  

ಕೂಳೂರು ನಾಗನ ಕಟ್ಟೆಯಿಂದ ನಾಪತ್ತೆಯಾಗಿದ್ದ ನಾಗನ ಕಲ್ಲುಗಳು ಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಬಿಜೆಪಿ ಮುಖಂಡನ ಮನೆಗೆ ಭಜರಂಗದಳ ಕಾರ್ಯಕರ್ತರಿಂದ ದಾಳಿ

(ನ್ಯೂಸ್ ಕಡಬ) Newskadaba.com ಬಂಟ್ವಾಳ, ಅ. 27. ಬಿಜೆಪಿ ಮುಖಂಡನ ಮೇಲೆ ಬಜರಂಗದಳದ ಕಾರ್ಯಕರ್ತರು ತಲವಾರಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಬಜರಂಗದಳ ಕಾರ್ಯಕರ್ತರಾದ ನಿತಿನ್, ಪವನ್ ಹಾಗೂ ನಿಶಾಂತ್ ಎಂಬವರು ಬಿಜೆಪಿ ಅಮ್ಟಾಡಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೊಳ್ಳೂರು ಅವರ ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಪ್ರಕಾಶ್ ಅವರ ತಾಯಿ ಮತ್ತು ಅಣ್ಣನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು

ಬಂಟ್ವಾಳ: ಬಿಜೆಪಿ ಮುಖಂಡನ ಮನೆಗೆ ಭಜರಂಗದಳ ಕಾರ್ಯಕರ್ತರಿಂದ ದಾಳಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಈ 8 ರಾಶಿಯವರಿಗೆ ದಾಂಪತ್ಯ ಜೀವನ ಸುಖವಾಗಿರುತ್ತದೆ ನಿಮ್ಮ ರಾಶಿ ಇದೆ ಎಂದು ತಿಳಿದುಕೊಳ್ಳಿ

  ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್ ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ Ph:9380973370 ಕನ್ಯಾ ರಾಶಿ: ಈ ದಿನ ನಿಮ್ಮ ಸಂಗಡಿಗರ ಸಹವಾಸದಿಂದ ಹೆಚ್ಚಿನ ಅಂತರ ಇರುವುದು ಒಳ್ಳೆಯದು. ಈ ದಿನ ದಾಂಪತ್ಯ ಜೀವನದ ಮೇಲೆ ನಿಮಗೆ ಸಾಕಷ್ಟು ಬೇಸರ ಉಂಟು ಆಗುವುದು.

ಈ 8 ರಾಶಿಯವರಿಗೆ ದಾಂಪತ್ಯ ಜೀವನ ಸುಖವಾಗಿರುತ್ತದೆ ನಿಮ್ಮ ರಾಶಿ ಇದೆ ಎಂದು ತಿಳಿದುಕೊಳ್ಳಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರ್ನಾಟಕ, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್, ಭವಿಷ್ಯ

ಬೆಳ್ತಂಗಡಿ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಹಿನ್ನೆಲೆ ➤ ಆರೋಪಿ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ) Newskadaba.com ಬೆಳ್ತಂಗಡಿ, ಅ. 26. ಶಾಲಾ ವಿದ್ಯಾರ್ಥಿನಿಯೋರ್ವಳಿಗೆ ದೂರವಾಣಿ ಕರೆಯ ಮೂಲಕ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ದಿಲೀಪ್ ಮದ್ದಡ್ಕ ಎಂದು ಗುರುತಿಸಲಾಗಿದೆ. ಈತ ಒಂಭತ್ತನೇ ತರಗತಿಯ ಬಾಲಕಿಯನ್ನು ಪರಿಚಯ ಮಾಡಿ, ಆನ್ಲೈನ್ ತರಗತಿಗೆಂದು ಬಾಲಕಿಯ ಜೊತೆಗಿದ್ದ ಮೊಬೈಲ್ ನಂಬರ್ ಪಡೆದು, ಕಳೆದ ಕೆಲ ತಿಂಗಳುಗಳಿಂದ ಆಕೆಗೆ ಕಿರುಕುಳ ನೀಡುತ್ತಿದ್ದ. ಅಲ್ಲದೇ ವಾಟ್ಸಾಪ್ ಮೂಲಕ ಅಶ್ಲೀಲ ಚಿತ್ರಗಳು ಹಾಗೂ ಕೆಟ್ಟ ಮೆಸೇಜ್ ಗಳನ್ನು

ಬೆಳ್ತಂಗಡಿ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಹಿನ್ನೆಲೆ ➤ ಆರೋಪಿ ವಿರುದ್ದ ದೂರು ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಾಣಿಯೂರು: ಲಾರಿಯಲ್ಲಿ ಸಾಗಿಸುತ್ತಿದ್ದ ಭತ್ತ ಕಟಾವು ಯಂತ್ರ ವಿದ್ಯುತ್ ತಂತಿಗೆ ಸ್ಪರ್ಶ ➤ ತಪ್ಪಿದ ಭಾರೀ ದುರಂತ

(ನ್ಯೂಸ್ ಕಡಬ) Newskadaba.com ಕಾಣಿಯೂರು, ಅ. 26. ಪುತ್ತೂರಿನಿಂದ ಕಾಣಿಯೂರು ಕಡೆಗೆ ತೆರಳುತ್ತಿದ್ದ ಲಾರಿಯೊಂದರಲ್ಲಿ ಭತ್ತ ಕಟಾವು ಯಂತ್ರವನ್ನು ಹೊತ್ತುಕೊಂಡು ಹೋಗುತ್ತಿದ್ದ ಸಂದರ್ಭ ವಿದ್ಯುತ್ ತಂತಿಗೆ ಸ್ಪರ್ಶಿಸಿದ ಘಟನೆ ಬೆಳಂದೂರು ಗ್ರಾಮದ ಕೆಲೆಂಬಿರಿ ಎಂಬಲ್ಲಿ ನಡೆದಿದೆ. ಪರಿಣಾಮ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ಘಟನೆಯಿಂದಾಗಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣಡಗೊಂಡಿತ್ತು. ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಹಾಗೂ ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಭೇಟಿ ನೀಡಿದ್ದಾರೆ.

ಕಾಣಿಯೂರು: ಲಾರಿಯಲ್ಲಿ ಸಾಗಿಸುತ್ತಿದ್ದ ಭತ್ತ ಕಟಾವು ಯಂತ್ರ ವಿದ್ಯುತ್ ತಂತಿಗೆ ಸ್ಪರ್ಶ ➤ ತಪ್ಪಿದ ಭಾರೀ ದುರಂತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top