ಕರ್ನಾಟಕ

ದುಬೈಯಿಂದ ಮಂಗಳೂರಿಗೆ ಅಕ್ರಮ ಚಿನ್ನ ಸಾಗಾಟ ➤ ಆರೋಪಿ ಅಂದರ್

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 30. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಪತ್ತೆ ಹಚ್ಚಿರುವ ಅಧಿಕಾರಿಗಳು, 32,55,330 ರೂ. ವೌಲ್ಯದ 663 ಗ್ರಾಂ ಚಿನ್ನ ವಶಪಡಿಸಿಕೊಂಡ ಘಟನೆ ನಡೆದಿದೆ. ದುಬೈಯಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕನೋರ್ವ ಚಿನ್ನವನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿರುವುದು ಕಂಡುಬಂದಿದ್ದು, ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ ವಶಕ್ಕೆ ಪಡೆದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ದುಬೈಯಿಂದ ಮಂಗಳೂರಿಗೆ ಅಕ್ರಮ ಚಿನ್ನ ಸಾಗಾಟ ➤ ಆರೋಪಿ ಅಂದರ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಅಭಿಮಾನಿಗಳ ಒತ್ತಾಯದ ಹಿನ್ನೆಲೆ ➤ ‘ಅಪ್ಪು’ ಅಂತ್ಯಕ್ರಿಯೆ ನಾಳೆಗೆ ಮುಂದೂಡಿಕೆ

(ನ್ಯೂಸ್ ಕಡಬ) Newskadaba.com ಬೆಂಗಳೂರು, ಅ. 30. ಸ್ಯಾಂಡಲ್​ವುಡ್​ ಪವರ್‌ ಸ್ಟಾರ್ ಪುನೀತ್​ ರಾಜ್​ಕುಮಾರ್​ ರವರು ಶುಕ್ರವಾರದಂದು ವಿಧಿವಶರಾಗಿದ್ದು, ಅವರ ಅಂತ್ಯಕ್ರಿಯೆ ನಾಳೆ (ಭಾನುವಾರ) ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಹೇಳಿದ್ದಾರೆ. ಯುವರತ್ನ ಪುನೀತ್ ರಾಜ್ ಕುಮಾರ್ ಅವರ ಲಕ್ಷಾಂತರ ಅಭಿಮಾನಿಗಳು ಆಗಮಿಸುತ್ತಿರುವ ಹಿನ್ನೆಲೆ ನಾಳೆಯವರೆಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಅಪ್ಪು ಅವರ ಹಿರಿಯ ಪುತ್ರಿ ಧೃತಿ ನ್ಯೂಯಾರ್ಕ್​​ನಿಂದ ದೆಹಲಿಗೆ ಆಗಮಿಸಿದ್ದು, ಅವರು ಸಂಜೆ 4:15ರ ಸುಮಾರಿಗೆ ದೇವನಹಳ್ಳಿ ಅಂತರರಾಷ್ಟ್ರೀಯ

ಅಭಿಮಾನಿಗಳ ಒತ್ತಾಯದ ಹಿನ್ನೆಲೆ ➤ ‘ಅಪ್ಪು’ ಅಂತ್ಯಕ್ರಿಯೆ ನಾಳೆಗೆ ಮುಂದೂಡಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಟ್ಲ: ಪದವಿ ಕಾಲೇಜು ವಿದ್ಯಾರ್ಥಿನಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) Newskadaba.com ಪೆರ್ಲ, ಅ. 30. ಕಾಲೇಜು ವಿದ್ಯಾರ್ಥಿನಿಯೋರ್ವಳ ಮೃತದೇಹವು ನೇಣುಬಿಗಿದ ಸ್ಥಿತಿಯಲ್ಲಿ ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಪತ್ತೆಯಾಗಿದೆ. ಮೃತ ಯುವತಿಯನ್ನು ಪೆರ್ಲ ಸಮೀಪದ ಬಜಕೂಡ್ಲು ನಿವಾಸಿ ಮಹಾಲಿಂಗ ನಾಯ್ಕರವರ ಪುತ್ರಿ ಶ್ರಾವ್ಯ (20) ಎಂದು ಗುರುತಿಸಲಾಗಿದೆ. ವಿಟ್ಲದ ಪದವಿ ಕಾಲೇಜಿನ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ, ಅ. 29ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮಧ್ಯಾಹ್ನದ ವೇಳೆ ತಂದೆ-ತಾಯಿ ತೋಟದ

ವಿಟ್ಲ: ಪದವಿ ಕಾಲೇಜು ವಿದ್ಯಾರ್ಥಿನಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಆಕ್ಟಿವಾ ಮತ್ತು ಟಿಪ್ಪರ್ ನಡುವೆ ಢಿಕ್ಕಿ ➤ ಚಾಕೋಲೇಟ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಮೃತ್ಯು

(ನ್ಯೂಸ್ ಕಡಬ) Newskadaba.com ಪುತ್ತೂರು, ಅ. 30. ಆಕ್ಟಿವಾ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ಪಡೀಲ್ ನಲ್ಲಿ ನಡೆದಿದೆ. ಮೃತರನ್ನು ಚಾಕೋಲೇಟ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ವಿದ್ಯಾ ಕಣ್ವತೀರ್ಥ(46) ಎಂದು ಗುರುತಿಸಲಾಗಿದೆ. ಇವರು ತೆರಳುತ್ತಿದ್ದ ಆಕ್ಟಿವಾ ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ವಿದ್ಯಾರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಪುತ್ತೂರು: ಆಕ್ಟಿವಾ ಮತ್ತು ಟಿಪ್ಪರ್ ನಡುವೆ ಢಿಕ್ಕಿ ➤ ಚಾಕೋಲೇಟ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಪಾದಚಾರಿಗೆ ಜೀಪು ಢಿಕ್ಕಿ ➤ ನೆಲ್ಯಾಡಿಯ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) Newskadaba.com ಪುತ್ತೂರು, ಅ. 30. ಜೀಪು ಢಿಕ್ಕಿ ಹೊಡೆದು ನೆಲ್ಯಾಡಿಯ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಂಗಳೂರಿನ ಬೈಕಂಪಾಡಿಯಲ್ಲಿ ನಡೆದಿದೆ. ಮೃತರನ್ನು ಗೋಳಿತೊಟ್ಟು ಶಾಂತಿನಗರ ನಿವಾಸಿ ರವೀಂದ್ರ ಆಚಾರಿ (40) ಎಂದು ಗುರುತಿಸಲಾಗಿದೆ. ಇವರು ಮಂಗಳೂರಿನಲ್ಲಿ ಲಾರಿಯೊಂದರಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದು, ಶುಕ್ರವಾರದಂದು ರಾತ್ರಿ ವೇಳೆ ಬೈಕಂಪಾಡಿ ಸಮೀಪ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಜೀಪು ಡಿಕ್ಕಿ ಹೊಡೆದು, ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳೂರು: ಪಾದಚಾರಿಗೆ ಜೀಪು ಢಿಕ್ಕಿ ➤ ನೆಲ್ಯಾಡಿಯ ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿ ಖಂಡನೀಯ ➤ ಬೆಳ್ತಂಗಡಿಯಲ್ಲಿ ಪಿಎಫ್ಐ ಪ್ರತಿಭಟನೆ

(ನ್ಯೂಸ್ ಕಡಬ) Newskadaba.com ಬೆಳ್ತಂಗಡಿ, ಅ. 30. ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ಮತ್ತು ಸಂಘಪರಿವಾರದ ಗೂಂಡಾಗಳಿಂದ ನಡೆಯುವ ದಾಳಿಯನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಜಿರೆ ಮತ್ತು ನಾವೂರು ಡಿವಿಝನ್ ವತಿಯಿಂದ ಮಿನಿ ವಿಧಾನಸಭಾ ಬಳಿ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ಕಾರ್ಯದರ್ಶಿ ತ್ವಾಹೀರ್ ಇಂಜಿನಿಯರ್ ದಿಕ್ಸೂಚಿ ಭಾಷಣವನ್ನು ಮಾಡಿದರು. ಈ ಸಮಯದಲ್ಲಿ ತ್ರಿಪುರ ಸರ್ಕಾರ ಮತ್ತು ಸಂಘಪರಿವಾರದ ವಿರುದ್ದ ಗಟ್ಟಿ ಧ್ವನಿಯಲ್ಲಿ ಘೋಷಣೆ ಕೂಗಲಾಯಿತು.

ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿ ಖಂಡನೀಯ ➤ ಬೆಳ್ತಂಗಡಿಯಲ್ಲಿ ಪಿಎಫ್ಐ ಪ್ರತಿಭಟನೆ Read More »

ಕರಾವಳಿ, ಕರ್ನಾಟಕ

ಅರಂತೋಡು: ಮಾತೃ ಕೃಪಾ ಇಂಡಸ್ಟ್ರೀಸ್ ಶುಭಾರಂಭ

(ನ್ಯೂಸ್ ಕಡಬ) Newskadaba.com ಅರಂತೋಡು, ಅ. 30. ಇಲ್ಲಿನ ಕೆ.ಇ.ಬಿ.ಕಚೇರಿ ಮುಂಭಾಗದಲ್ಲಿ ಶಿವಪ್ರಕಾಶ್ ಮಾಲಕತ್ವದ ಮಾತೃ ಕೃಪಾ ಇಂಡಸ್ಟ್ರೀಸ್ ಶುಭಾರಂಭಗೊಂಡಿತು. ಸಮಾರಂಭದಲ್ಲಿ ಸುಳ್ಯ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಉದ್ಘಾಟಿಸಿದರು. ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ಮಾಲಕರ ಮನೆಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇಲ್ಲಿ ಗೇಟ್, ಗ್ರೀಲ್ಸ್, ಮಾಡಿನ ಕೆಲಸ ಕ್ಲಪ್ತ ಸಮಯದಲ್ಲಿ ಮಾಡಿ ಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.  

ಅರಂತೋಡು: ಮಾತೃ ಕೃಪಾ ಇಂಡಸ್ಟ್ರೀಸ್ ಶುಭಾರಂಭ Read More »

ಕರಾವಳಿ, ಕರ್ನಾಟಕ

ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಕಾರ್ಯಕರ್ತರಿಂದ ಹಲ್ಲೆ ಖಂಡನೀಯ ➤ ಪಾಪ್ಯುಲರ್ ಫ್ರಂಟ್

(ನ್ಯೂಸ್ ಕಡಬ) Newskadaba.com ಮೂಡಬಿದ್ರೆ, ಅ. 30. ಪ್ರತಿಷ್ಠಿತ ಯೇನೆಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಾಂಪ್ರದಾಯಿಕ ವಸ್ತ್ರದಾರಣೆ ಕುರಿತ ಕಾರ್ಯಕ್ರಮದ ಅಂಗವಾಗಿ ಟೋಪಿ ಧರಿಸುವ ವಿಷಯದಲ್ಲಿ ತರ್ಕ ಮುಂದಿಟ್ಟು , ಎಬಿವಿಪಿಗೆ ಸೇರಿದ ಸುಮಾರು 40 ರಷ್ಟಿದ್ದ ವಿದ್ಯಾರ್ಥಿಗಳು ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿದ ಘಟನೆಯನ್ನು ಪಾಪ್ಯುಲರ್ ಫ್ರಂಟ್ ಮಂಗಳೂರು ಗ್ರಾಮಾಂತರ ಅಧ್ಯಕ್ಷ ನವಾಝ್ ಕಾವೂರು ಖಂಡಿಸಿದ್ದಾರೆ. ಮಂಗಳೂರಿನಲ್ಲಿ ಸಂಘಪರಿವಾರದ ದುಷ್ಕರ್ಮಿಗಳು ವಿದ್ಯಾರ್ಥಿಗಳ ಮೇಲೆ ಅನೈತಿಕ ಪೋಲಿಸ್ ಗಿರಿ ನಡೆಸಿದ ದುಷ್ಕ್ರತ್ಯ ಮಾಸುವ ಮುನ್ನವೇ

ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಕಾರ್ಯಕರ್ತರಿಂದ ಹಲ್ಲೆ ಖಂಡನೀಯ ➤ ಪಾಪ್ಯುಲರ್ ಫ್ರಂಟ್ Read More »

ಕರಾವಳಿ, ಕರ್ನಾಟಕ

ನಿಮ್ಮ ರಾಶಿಗೆ ಅನುಗುಣವಾಗಿ ವ್ಯಾಪಾರ ಅಥವ ಉದ್ಯೋಗ ಶುರು ಮಾಡಿ ಲಾಭ ಪಡೆಯಿರಿ

  ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್ ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ Ph:9380973370 ವ್ಯಕ್ತಿಯ ರಾಶಿಗಳನ್ನು ನೋಡಿಕೊಂಡು ಅಥವಾ ರಾಶಿಯನ್ನು ನೋಡಿಕೊಂಡು ವ್ಯಕ್ತಿಯು ಯಾವ ರೀತಿಯಾದ ಸ್ವಭಾವವನ್ನು ವ್ಯಕ್ತಿತ್ವವನ್ನು ಹೊಂದಿರುತ್ತಾನೆ ಅವನು ಭವಿಷ್ಯದಲ್ಲಿ ಯಾವ ರೀತಿಯ ಕೆಲಸಗಳನ್ನು ಮಾಡುತ್ತಾರೆ ಹಾಗೂ ವಿಶೇಷವಾಗಿ ಯಾವ

ನಿಮ್ಮ ರಾಶಿಗೆ ಅನುಗುಣವಾಗಿ ವ್ಯಾಪಾರ ಅಥವ ಉದ್ಯೋಗ ಶುರು ಮಾಡಿ ಲಾಭ ಪಡೆಯಿರಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರ್ನಾಟಕ, ಭವಿಷ್ಯ

ಮಡಂತ್ಯಾರು: ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿಯನ್ನು ಖಂಡಿಸಿ PFI ವತಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) Newskadaba.com ಮಡಂತ್ಯಾರು, ಅ. 29. ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ಮತ್ತು ಸಂಘಪರಿವಾರದ ಗೂಂಡಗಳಿಂದ ನಡೆಯುವ ದಾಳಿಯನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಡಂತ್ಯಾರ್ ಡಿವಿಝನ್ ವತಿಯಿಂದ ಮಡಂತ್ಯಾರ್ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಇದರ ಕಾರ್ಯಕರ್ತರಾದ ನವಾಝ್ ಶರೀಫ್ ಕಟ್ಟೆ ದಿಕ್ಸೂಚಿ ಭಾಷಣವನ್ನು ಮಾಡಿದರು. ಈ ಸಮಯದಲ್ಲಿ ತ್ರಿಪುರ ಸರ್ಕಾರ ಮತ್ತು ಸಂಘಪರಿವಾರದ ವಿರುದ್ದ ಗಟ್ಟಿ ಧ್ವನಿಯಲ್ಲಿ ಘೋಷಣೆ ಕೂಗಲಾಯಿತು.

ಮಡಂತ್ಯಾರು: ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿಯನ್ನು ಖಂಡಿಸಿ PFI ವತಿಯಿಂದ ಪ್ರತಿಭಟನೆ Read More »

ಕರಾವಳಿ, ಕರ್ನಾಟಕ
Scroll to Top