ಕರ್ನಾಟಕ

ಯುವ ಪರಿವರ್ತಕರ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 05. ಬೆಂಗಳೂರಿನ ನಿಮ್ಹಾನ್ಸ್ ನ ಎಪಿಡೀಮಿಯಾಜಿ ವಿಭಾಗದಲ್ಲಿ ಖಾಲಿ ಇರುವ ಯುವ ಪರಿವರ್ತಕರ ಹುದ್ದೆಗೆ ಗೌರವಧನದ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಶೈಕ್ಷಣಿಕ ಅರ್ಹತೆ- ಯಾವುದೇ ಪದವಿ ಹಾಗೂ ಮೇಲ್ಪಟ್ಟು ಪದವೀಧರ ಯುವಜನತೆ ಅವಶ್ಯವಿರುವ ಕೌಶಲ್ಯ, ಸ್ಥಳೀಯ ಭಾಷೆ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು. ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಉತ್ತಮ ಅಂತರ್‌ ವ್ಯಕ್ತಿಯ ಸಂವಹನ ಕೌಶಲ್ಯ ಜೊತೆಗೆ ಸಂವಾದ ಕೌಶಲ್ಯಗಳನ್ನು ಹೊಂದಿರಬೇಕು. ಸಮುದಾಯದಲ್ಲಿ ಯುವಜನರಿಗೆ ತರಬೇತಿಯಂತಹ […]

ಯುವ ಪರಿವರ್ತಕರ ಹುದ್ದೆಗೆ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ನ. 07ರಂದು ನೇತ್ರ ತಪಾಸಣಾ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 05. ನ. 07 ರವಿವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ ಮೇರಿಹಿಲ್, ಮಂಗಳೂರು, ಇಲ್ಲಿ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ, ಮಂಗಳಾ ಅರೆ ವೈದ್ಯಕೀಯ ಕಾಲೇಜು, ಅಪ್ಟೊಮೆಟ್ರಿ ಇವರ ಸಹಯೋಗದೊಂದಿಗೆ, ಲಯನ್ಸ್ ಕ್ಲಬ್ ಮಂಗಳೂರು, ಇವರ ಸಹಭಾಗಿತ್ವದಲ್ಲಿ, ನೇತ್ರ ತಪಾಸಣಾ ಶಿಬಿರವು ಬೆಳಗ್ಗೆ 9:00 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳಾ ಸಮೂಹ ವಿದ್ಯಾಸಂಸ್ಥೆಯ ಚೇರ್ಮನ್,

ನ. 07ರಂದು ನೇತ್ರ ತಪಾಸಣಾ ಶಿಬಿರ Read More »

ಕರಾವಳಿ, ಕರ್ನಾಟಕ

ಪ್ರೀತಿಸಿ ಮದುವೆಯಾಗಿದ್ದ ಯುವತಿ ಶವವಾಗಿ ಪತ್ತೆ..!

(ನ್ಯೂಸ್ ಕಡಬ) newskadaba.com ಕಲಬುರ್ಗಿ, ನ. 05. ಪ್ರಿಯಕರನೊಂದಿಗೆ ಓಡಿಹೋಗಿ ಮದುವೆಯಾಗಿದ್ದ ಯುವತಿಯೋರ್ವಳು ಮೃತದೇಹವು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಘಟನೆ ನಗರದ ರಾಜಾಪುರ ಬಡಾವಣೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ರಮಾಬಾಯಿ ಎಂದು ಗುರುತಿಸಲಾಗಿದೆ. ಈಕೆ ರಾಹುಲ್ ಎಂಬ ಯುವಕನನ್ನು ಪ್ರೀತಿಸಿ, ಮೂರು ತಿಂಗಳ ಹಿಂದೆ ಓಡಿಹೋಗಿ ಮದುವೆಯಾಗಿದ್ದ. ಬಳಿಕ ಗಂಡನ ಮನೆಯಲ್ಲಿ ಜಾತಿ ನಿಂದನೆ ಮಾಡಿ ಅತ್ತೆ, ಮಾವ ಹಾಗೂ ಗಂಡ ನಿತ್ಯ ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ.

ಪ್ರೀತಿಸಿ ಮದುವೆಯಾಗಿದ್ದ ಯುವತಿ ಶವವಾಗಿ ಪತ್ತೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅಡಿಕೆ ಕದಿಯಲು ಮರಗಳನ್ನೇ ಕತ್ತರಿಸಿದ ಕಿಡಿಗೇಡಿಗಳು..!

(ನ್ಯೂಸ್ ಕಡಬ) newskadaba.com ಹಾಸನ, ಜ. 05. ಅಡಿಕೆ ಕಳವಿಗೆ ಬಂದ ದುಷ್ಕರ್ಮಿಗಳು ಅಡಿಕೆ ಮರವನ್ನೇ ಕತ್ತರಿಸಿ ಅಡಿಕೆ ಕದ್ದೊಯ್ದ ಘಟನೆ ಸಕಲೇಶಪುರದಲ್ಲಿ ನಡೆದಿದೆ. ಸಕಲೇಶಪುರ ರೈಲ್ವೇ ಸೇತುವೆಯ ಸಮೀಪ ಸುಬ್ರಹ್ಮಣ್ಯ ಎಂಬವರಿಗೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ ಕಾಫಿ ಹಾಗೂ ಅಡಿಕೆ ತೋಟವಿದ್ದು, ಈ ತೋಟಕ್ಕೆ ನುಗ್ಗಿದ ಕಳ್ಳರು ಬೆಳೆದು ನಿಂತಿದ್ದ 15 ಅಡಿಕೆ ಮರಗಳನ್ನು ಕತ್ತರಿಸಿ, ಅಡಿಕೆ ಕದ್ದೊಯ್ದಿದ್ದಾರೆ. ಘಟನೆಯ ಕುರಿತು ಸಕಲೇಶಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಡಿಕೆ ಕದಿಯಲು ಮರಗಳನ್ನೇ ಕತ್ತರಿಸಿದ ಕಿಡಿಗೇಡಿಗಳು..! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಳ್ಯ: ಕ್ಯಾಶ್ಯೂ ಫ್ಯಾಕ್ಟರಿಯ ಹಳೆ ಕಟ್ಟಡ ಕುಸಿತ ➤ ಗುಜರಿ ವ್ಯಾಪಾರಿ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ನ. 05. ಇಲ್ಲಿನ ಗಾಂಧಿನಗರದಲ್ಲಿರುವ ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿಯ ಹಳೆ ಕಟ್ಟಡದ ಕಬ್ಬಿಣ ಸಮಾಗ್ರಿಗಳನ್ನು ತೆಗೆಯುತ್ತಿದ್ದ ವೇಳೆ ಗೋಡೆ ಮಗುಚಿ ಬಿದ್ದ ಪರಿಣಾಮ ವ್ಯಾಪಾರಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರನ್ನು ಗುಜರಿ ವ್ಯಾಪಾರಿ ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ. ಹಲವಾರು ವರ್ಷಗಳಿಂದ ಸುಳ್ಯದಲ್ಲಿ ಗುಜರಿ ವ್ಯಾಪಾರ ನಡೆಸುತ್ತಿದ್ದ ಇವರು, ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿಯ ಹಳೆಯ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದು, ಇಂದು ಬೆಳಗ್ಗೆ ತಮ್ಮ ಕೆಲಸದಾಳುಗಳ ಜೊತೆ ಗೋಡೆಯ ಮೇಲ್ಭಾಗದಲ್ಲಿದ್ದ ಕಬ್ಬಿಣದ

ಸುಳ್ಯ: ಕ್ಯಾಶ್ಯೂ ಫ್ಯಾಕ್ಟರಿಯ ಹಳೆ ಕಟ್ಟಡ ಕುಸಿತ ➤ ಗುಜರಿ ವ್ಯಾಪಾರಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ ಪುರಸ್ಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 05. ಅಕಾಲಿಕವಾಗಿ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ 2021ನೇ ಸಾಲಿನ ಮರಣೋತ್ತರ ಬಸವಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಾ.ಶಿವಮೂರ್ತಿ ಮುರುಘಾ ಶರಣರು ಪುನೀತ್ ರಾಜ್ ಕುಮಾರ್ ಅವರಿಗೆ ‘ಮರಣೋತ್ತರ ಬಸವಶ್ರೀ ಪ್ರಶಸ್ತಿ’ ನೀಡುವುದಾಗಿ ತಿಳಿಸಿದರು. ಈ ಕುರಿತು ಶಿವರಾಜ್ ಕುಮಾರ್ ಅವರ ಜೊತೆ ಚರ್ಚಿಸಲಾಗಿದೆ ಎಂದ ಅವರು, ಮುರುಘಾ ಮಠದಲ್ಲಿ 2022ರಲ್ಲಿ ನಡೆಯುವ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪುನೀತ್

ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ ಪುರಸ್ಕಾರ Read More »

ಕರ್ನಾಟಕ

ಪಟಾಕಿ ತರಲೆಂದು ತೆರಳಿದ್ದ ಬಾಲಕನ ಹತ್ಯೆಗೈದ ದುಷ್ಕರ್ಮಿಗಳು..! ➤ ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಮೈಸೂರು, ನ. 05. 4 ಲಕ್ಷ ರೂ. ಗೆ ಬೇಡಿಕೆ ಇಟ್ಟು, ಬಾಲಕನೋರ್ವನನ್ನು ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳ ತಂಡವೊಂದು ಹಣ ದೊರಕುವುದಿಲ್ಲವೆಂದು ಖಚಿತವಾದ ಬಳಿಕ ಬಾಲಕನನ್ನು ಹತ್ಯೆ ಮಾಡಿ ಮೃತದೇಹವನ್ನು ಕೆರೆಯೊಂದರ ಬಳಿ ಬಿಸಾಡಿ ಹೋದ ಘಟನೆ ಹುಣಸೂರ ತಾಲೂಕಿನ ಹನಗೋಡಿನಲ್ಲಿ ನಡೆದಿದೆ. ಕೊಲೆಯಾದ ಬಾಲಕನನ್ನು ಹನಗೋಡು ಗ್ರಾಮದ ತರಕಾರಿ ವ್ಯಾಪಾರಿ ನಾಗರಾಜ್ ಎಂಬವರ ಪುತ್ರ ಕಾರ್ತಿಕ್ (9) ಎಂದು ಗುರುತಿಸಲಾಗಿದೆ. ಕಾರ್ತಿಕ್ ಬುಧವಾರದಂದು ಸಂಜೆ 7.30ರ ವೇಳೆಗೆ ಪಟಾಕಿ ತರಲೆಂದು ಮನೆಯಿಂದ

ಪಟಾಕಿ ತರಲೆಂದು ತೆರಳಿದ್ದ ಬಾಲಕನ ಹತ್ಯೆಗೈದ ದುಷ್ಕರ್ಮಿಗಳು..! ➤ ಓರ್ವನ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಗೃಹ ಸಚಿವರ ಹೆಸರಲ್ಲಿ ಡ್ಯಾನ್ಸ್ ಬಾರ್ ಗಳಿಗೆ ಪರವಾನಿಗೆ ಕೊಡಿಸುವುದಾಗಿ ವಂಚನೆ ➤ ಆರೋಪಿ ಸಿಸಿಬಿ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 05. ಗೃಹ ಸಚಿವರ ಹೆಸರಲ್ಲಿ ಡ್ಯಾನ್ಸ್ ಬಾರ್ ಗಳಿಗೆ ಲೈಸೆನ್ಸ್ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಯೋರ್ವನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಭವಾನಿರಾವ್ ಮೋರೆ ಎಂದು ಗುರುತಿಸಲಾಗಿದೆ. ಈತ ಸುರೇಶ್ ಎಂಬವರಿಂದ 25 ಲಕ್ಷ ರೂ. ಪಡೆದು ವಂಚನೆ ಮಾಡಿದ್ದು, ಈ ಕುರಿತಂತೆ ಸುರೇಶ್ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಶಿವಮೊಗ್ಗದಲ್ಲಿ ವಶಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಈತ ಸದ್ಯ ಕೆಪಿಟಿಸಿಎಲ್ ನಿರ್ದೇಶಕನಾಗಿದ್ದ ಎಂದು ತಿಳಿದುಬಂದಿದೆ.

ಗೃಹ ಸಚಿವರ ಹೆಸರಲ್ಲಿ ಡ್ಯಾನ್ಸ್ ಬಾರ್ ಗಳಿಗೆ ಪರವಾನಿಗೆ ಕೊಡಿಸುವುದಾಗಿ ವಂಚನೆ ➤ ಆರೋಪಿ ಸಿಸಿಬಿ ವಶಕ್ಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನ. 08ರಿಂದ ಎಲ್ ಕೆಜಿ ಯುಕೆಜಿ ತರಗತಿ ಆರಂಭಕ್ಕೆ ಸರಕಾರದಿಂದ ಗ್ರೀನ್ ಸಿಗ್ನಲ್..! ➤ ಪೋಷಕರಿಗೆ ಗೈಡ್ ಲೈನ್ಸ್ ಬಿಡುಗಡೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 05. ನವೆಂಬರ್ 8 ರಿಂದ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ತಮ್ಮ ದೈನಂದಿನ ವೇಳಾಪಟ್ಟಿಯಂತೆ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖಾ ಆಯುಕ್ತರು ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳನ್ನು ಭೌತಿಕವಾಗಿ ಪ್ರಾರಂಭಿಸುವ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆರೋಗ್ಯ ಸಚಿವರು, ಇಲಾಖೆಯ ಕೋವಿಡ್ ತಾಂತ್ರಿಕ ಸಹ ಸಮಿತಿ ಸದಸ್ಯರು

ನ. 08ರಿಂದ ಎಲ್ ಕೆಜಿ ಯುಕೆಜಿ ತರಗತಿ ಆರಂಭಕ್ಕೆ ಸರಕಾರದಿಂದ ಗ್ರೀನ್ ಸಿಗ್ನಲ್..! ➤ ಪೋಷಕರಿಗೆ ಗೈಡ್ ಲೈನ್ಸ್ ಬಿಡುಗಡೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಸುರತ್ಕಲ್, ನ. 05. ಗೆಳೆಯರ ಜೊತೆ ವಿಹಾರಕ್ಕೆಂದು ಬಂದು ಕಪ್ಪೆ ಚಿಪ್ಪಿ ಹೆಕ್ಕುತ್ತಿದ್ದ ಸಂದರ್ಭ ಸಮುದ್ರಪಾಲಾದ ಯುವಕನ ಮೃತದೇಹವು ಸುರತ್ಕಲ್ ಠಾಣೆಯ ಚಿತ್ರಾಪುರ ಕಡಲ ತೀರದಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ಸರಿಪಳ್ಳ ನಿವಾಸಿ ತಿಲಕ್ ರಾಜ್ (20) ಎಂದು ಗುರುತಿಸಲಾಗಿದೆ. ವಿಹಾರಕ್ಕೆಂದು ಗೆಳೆಯರ ಜೊತೆ ಬಂದಿದ್ದ ಈತ, ಮಂಗಳೂರು ಹೊರವಲಯದ ತಣ್ಣೀರುಬಾವಿ ಸಮುದ್ರ ತೀರದಲ್ಲಿ ಕಪ್ಪೆ ಚಿಪ್ಪು ಹೆಕ್ಕುತ್ತಿದ್ದ ವೇಳೆ ಸಮುದ್ರ ಪಾಲಾಗಿದ್ದು, ಇದೀಗ ಆತನ ಮೃತದೇಹವು ಪತ್ತೆಯಾಗಿದೆ. ಈ ಕುರಿತು ಸುರತ್ಕಲ್

ಮಂಗಳೂರು: ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top