ಕರ್ನಾಟಕ

ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ “ಪದ್ಮಶ್ರೀ ” ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ನವದೆಹಲಿ, ನ. 08. ಭಾರತ ಸರ್ಕಾರವು ನೀಡುವ ನಾಲ್ಕನೇ ಅತೀ ದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮ ಶ್ರೀ’ ಪ್ರಶಸ್ತಿಯನ್ನು ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸೋಮವಾರದಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಪ್ರದಾನ ಮಾಡಿದರು. ಇದೇ ಸಂದರ್ಭ ಹಲವು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ದ.ಕನ್ನಡ್ ಸಾಂಪ್ರದಾಯಿಕ ವಸ್ತ್ರವಾದ ಬಿಳಿ ಪಂಚೆ ಹಾಗೂ ಬಿಳಿ ಅಂಗಿ ಧರಿಸಿದ್ದ ಹಾಜಬ್ಬ ಅವರು ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಿದರು. […]

ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ “ಪದ್ಮಶ್ರೀ ” ಪ್ರಶಸ್ತಿ ಪ್ರದಾನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಊಟ ಖಾಲಿ ಆಗಿದೆ ಎಂದ ಹೋಟೆಲ್ ಮಾಲೀಕನಿಗೆ ಚಾಕುವಿನಿಂದ ಚೂರಿ ಇರಿತ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 08. ಊಟ ಖಾಲಿ ಆಗಿದೆ ಎಂದು ಹೇಳಿದ್ದಿಕ್ಕೆ ಹೋಟೆಲ್ ಮಾಲೀಕನಿಗೆ ವ್ಯಕ್ರಿಯೋರ್ವ ಚಾಕುವಿನಿಂದ ಇರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಆರೋಪಿಯನ್ನು ರೌಡಿಶೀಟರ್ ಯಲ್ಲಪ್ಪ ಎಂದು ಗುರುತಿಸಲಾಗಿದೆ. ಹೋಟೆಲ್ ಮಾಲೀಕ ಚಂದ್ರಶೇಖರ್‌ ಚಾಕು ಇರಿತಕ್ಕೆ ಒಳಗಾಗಿದ್ದು, ಗಾಯಾಳು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರೌಡಿಶೀಟರ್ ಯಲ್ಲಪ್ಪ ರಾತ್ರಿ 10 ಗಂಟೆಯ ನಂತರ ಮದ್ಯದ ಬಾಟಲಿ ಹಿಡಿದು ಸಿಗರೇಟು ಸೇದುತ್ತಾ ಹೋಟೆಲ್ ಗೆ ಬಂದಿದ್ದು, ಈ

ಊಟ ಖಾಲಿ ಆಗಿದೆ ಎಂದ ಹೋಟೆಲ್ ಮಾಲೀಕನಿಗೆ ಚಾಕುವಿನಿಂದ ಚೂರಿ ಇರಿತ..! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ಆಕಸ್ಮಿಕವಾಗಿ ತೆಂಗಿನಮರ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 08. ಮರ ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮೈಮೇಲೆ ತೆಂಗಿನ ಮರ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಪೆರ್ಲಾಪು ನಿವಾಸಿ ಸುರೇಶ್(38) ಎಂದು ಗುರುತಿಸಲಾಗಿದೆ. ಸುರೇಶ್ ನೆರೆಮನೆಯ ಭುಜಂಗ ಶೆಟ್ಟಿ ಅವರ ಮನೆಯ ತೋಟದಲ್ಲಿದ್ದ ತೆಂಗಿನ ಮರವನ್ನು ಕಡಿಯಲು ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಒಂದು ತೆಂಗಿನ ಮರ ಕಡಿದು ನೆಲಕ್ಕೆ ಬಿದ್ದಾಗ, ಅದರ ಪಕ್ಕದಲ್ಲೇ ಇದ್ದ ಸತ್ತು ಒಣಗಿದ ತೆಂಗಿನ ಮರವು

ಬಂಟ್ವಾಳ: ಆಕಸ್ಮಿಕವಾಗಿ ತೆಂಗಿನಮರ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನೆಲ್ಯಾಡಿ: ಕಣ್ಣೀರಾದ ಕುಡಿಯುವ ನೀರು..! ➤ ಮನವಿಗೆ ಕ್ಯಾರೇ ಅನ್ನದ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಕಡಬ, ನ. 08. ತಾಲೂಕಿನ ನೆಲ್ಯಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇರ್ನಡ್ಕ ಎಂಬಲ್ಲಿ ಪಂಚಾಯತ್ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿ ಮೂರು ವರ್ಷಗಳೇ ಸಂಧಿವೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಸ್ಥಳೀಯರು ಗ್ರಾಮ ಪಂಚಾಯತ್, ಪುತ್ತೂರು ಉಪ ಆಯುಕ್ತರು, ಪುತ್ತೂರು ಇ.ಓ ಸೇರಿದಂತೆ ಸಾಮಾನ್ಯವಾಗಿ ಎಲ್ಲಾ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಆದರೂ ಕುಡಿಯುವ ನೀರಿನ ಸಮಸ್ಯೆಗೆ ಮಾತ್ರ ಇನ್ನೂ ಮುಕ್ತಿ ಸಿಕ್ಕಿಲ್ಲ. ಅಂದ ಹಾಗೆ ಇಲ್ಲಿ ಕೊಳವೆ ಬಾವಿಯಲ್ಲಿ ನೀರಿಲ್ಲ ಅಥವಾ

ನೆಲ್ಯಾಡಿ: ಕಣ್ಣೀರಾದ ಕುಡಿಯುವ ನೀರು..! ➤ ಮನವಿಗೆ ಕ್ಯಾರೇ ಅನ್ನದ ಅಧಿಕಾರಿಗಳು Read More »

ಕರಾವಳಿ, ಕರ್ನಾಟಕ

ಮಂಗಳೂರು: ನಿದ್ದೆ ಮಾತ್ರೆ ಬೆರೆಸಿದ ಜ್ಯೂಸ್ ಕುಡಿಸಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ➤ ಆರೋಪಿ ರೌಡಿಶೀಟರ್ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ನ. 08. ಅಪ್ರಾಪ್ತ ಬಾಲಕಿಯ ಮೇಲೆ ರೌಡಿಶೀಟರ್‌ ಓರ್ವ ಅತ್ಯಾಚಾರ ನಡೆಸಿದ ಆರೋಪಿಯನ್ನು ಬಂಧಿಸಿದ ಘಟನೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಕೈಕಂಬದ ಹೊಟೇಲ್ ಒಂದರಲ್ಲಿ ಬಾಣಸಿಗನಾಗಿ ಕಾರ್ಯ ನಿರ್ವಹಿಸುತ್ತಿದ್ದ ರೌಡಿಶೀಟರ್ ನವೀನ್ ಸಿಕ್ವೇರ ಎಂದು ಗುರುತಿಸಲಾಗಿದೆ. ಈತನಿಗೆ ಬಾಲಕಿಯ ಸಹೋದರನ ಪರಿಚಯವಿದ್ದು, ಇದನ್ನೇ ನೆಪವಾಗಿಸಿ ಆಕೆಯ ನಂಬರ್ ಪಡೆದಿದ್ದ ರೌಡಿಶೀಟರ್ ಆಕೆ ಒಬ್ಬಳೇ ಮನೆಯಲ್ಲಿ ಇರುವ ವೇಳೆ ಮನೆಗೆ ಬಂದು ಬಾಲಕಿಗೆ ಜ್ಯೂಸ್ ನಲ್ಲಿ ನಿದ್ದೆ

ಮಂಗಳೂರು: ನಿದ್ದೆ ಮಾತ್ರೆ ಬೆರೆಸಿದ ಜ್ಯೂಸ್ ಕುಡಿಸಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ➤ ಆರೋಪಿ ರೌಡಿಶೀಟರ್ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮೇಯಲು ಕಟ್ಟಿದ್ದ ದನ ಕಳವುಗೈದು ಮಾರಾಟಕ್ಕೆ ಯತ್ನ ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ನ. 08. ಮನೆ ಸಮೀಪದ ತೋಟವೊಂದರಲ್ಲಿ ಮೇಯಲು ಕಟ್ಟಿ ಹಾಕಿದ್ದ ದನವನ್ನು ಕದ್ದೊಯ್ದು ಮಾರಾಟಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಶಿರ್ತಾಡಿ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ವಾಲ್ಪಾಡಿ ಗ್ರಾಮದ ಪವನ್ ಕುಮಾರ್, ಪುರಸಭೆ ವ್ಯಾಪ್ತಿಯ ಮಾರೂರಿನ ಸತೀಶ್ ಹಾಗೂ ಜಯಾನಂದ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಗಿರೀಶ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.  ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಣೇಶ ಎಂಬವರು ಮನೆ ಸಮೀಪದ ತೋಟದಲ್ಲಿ ಮೇಯಲು

ಮೇಯಲು ಕಟ್ಟಿದ್ದ ದನ ಕಳವುಗೈದು ಮಾರಾಟಕ್ಕೆ ಯತ್ನ ➤ ಮೂವರ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಿಲ್ಲಾಧಿಕಾರಿಗೆ ಪತ್ರ ಮೂಲಕ ಧನ್ಯವಾದ ತಿಳಿಸಿದಿ ಅಶ್ವಿನಿ ಪುನೀತ್ ರಾಜ್ ಕುಮಾರ್..!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 08. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದ ಬಳಿಕ ಮೊದಲ ಬಾರಿಗೆ ಅವರ ಪತ್ನಿ ಅಶ್ವಿನಿ ಪತ್ರದ ಮೂಲಕ ಡಿಸಿ ಗೆ ಧನ್ಯವಾದ ತಿಳಿಸಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರಿಗೆ ಬರೆದ ಪತ್ರದಲ್ಲಿ, ಪುನೀತ್ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರದ ವೇಳೆ ನೀಡಿದ ಸಹಕಾರಕ್ಕೆ ಧನ್ಯವಾದ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನಮ್ಮ ನೋವನ್ನು ಅಡಗಿಸಿಟ್ಟು ಅವರನ್ನು ಸಕಲ ಗೌರವಗಳೊಂದಿಗೆ ಕಳುಹಿಸಿಕೊಡಬೇಕಿತ್ತು. ಅಂತಿಮ ದರ್ಶನಕ್ಕೆ

ಜಿಲ್ಲಾಧಿಕಾರಿಗೆ ಪತ್ರ ಮೂಲಕ ಧನ್ಯವಾದ ತಿಳಿಸಿದಿ ಅಶ್ವಿನಿ ಪುನೀತ್ ರಾಜ್ ಕುಮಾರ್..! Read More »

ಕರ್ನಾಟಕ

ಸುಳ್ಯ: ಖ್ಯಾತ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ ರವರಿಗೆ ಶ್ರದ್ಧಾಂಜಲಿ ಸಭೆ

(ನ್ಯೂಸ್ ಕಡಬ) newskadaba.com ಸುಳ್ಯ, ನ. 08. ಇತ್ತೀಚೆಗೆ ನಮ್ಮನ್ನಗಲಿದ ಕರ್ನಾಟಕದ ಖ್ಯಾತ ಚಲನಚಿತ್ರ ನಟ ಹಾಗೂ ಸಮಾಜ ಸೇವಕರಾದ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ಗೂನಡ್ಕದ ಯುವಕರು ಏರ್ಪಡಿಸಿದ್ದ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕರವರ ಕಚೇರಿಯಲ್ಲಿ ಜರುಗಿತು. ಫ್ರೆಂಡ್ಸ್ ಯೂತ್ ಕ್ಲಬ್ ಗೂನಡ್ಕ ಇದರ ಮಾಜಿ ಅಧ್ಯಕ್ಷರಾದ ಜಿ.ಜಿ.ನವೀನ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶೌವಾದ್ ಗೂನಡ್ಕರವರು ಸಂತಾಪ ಸೂಚಕ ನುಡಿಗಳನ್ನಾಡಿ, ಪುನೀತ್ ರಾಜ್ ಕುಮಾರ್

ಸುಳ್ಯ: ಖ್ಯಾತ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ ರವರಿಗೆ ಶ್ರದ್ಧಾಂಜಲಿ ಸಭೆ Read More »

ಕರಾವಳಿ, ಕರ್ನಾಟಕ

ಅರಂತೋಡು: ಅಗಲಿದ ಸಮಸ್ತ ನೇತಾರರಿಗೆ ವಿಶೇಷ ಪ್ರಾರ್ಥನೆ

(ನ್ಯೂಸ್ ಕಡಬ) newskadaba.com ಅರಂತೋಡು, ನ. 08. ನುಸ್ರತ್ತುಲ್ ಇಸ್ಲಾಂ ಮದರಸ ಅರಂತೋಡು ಇದರ ವತಿಯಿಂದ ಸಮಸ್ತ ಕೇರಳ ಮತ ವಿಧ್ಯಾಭ್ಯಾಸ ಬೋರ್ಡ್ ವರ್ಷಂಪ್ರತಿ ನಡೆಸಿಕೊಂಡು ಬರುವ ಪ್ರಾರ್ಥನಾ ದಿನವನ್ನು ನವಂಬರ್ 7 ರಂದು ಅರಂತೋಡು ಮದರಸ ಸಭಾಂಗಣದಲ್ಲಿ ನಡೆಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದ್ದರು. ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾ ನೆರವೇರಿಸಿ ಮಾತನಾಡಿ, ಸಮಸ್ತ ಇತರ ಸ್ಥಾಪನೆಗಳಿಗೆ ರಾಜ್ಯದಲ್ಲಿ ದೇಶದಲ್ಲಿ ಹಾಗೂ ವಿದೇಶದಲ್ಲಿ ಸ್ಥಾಪಿಸಿ ಸಮುದಾಯದ

ಅರಂತೋಡು: ಅಗಲಿದ ಸಮಸ್ತ ನೇತಾರರಿಗೆ ವಿಶೇಷ ಪ್ರಾರ್ಥನೆ Read More »

ಕರಾವಳಿ, ಕರ್ನಾಟಕ

ಕ್ಯಾಂಪಸ್ ಫ್ರಂಟ್ ಡೇ ಅಂಗವಾಗಿ ಬೆಳ್ತಂಗಡಿ ತಾಲೂಕಿನಾದ್ಯಂತ ಧ್ವಜಾರೋಹಣ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ. 08. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ 12ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಭಾಗವಾಗಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಸಮಿತಿ ವತಿಯಿಂದ ತಾಲೂಕಿನ ವಿವಿಧ ಕಡೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸಂದೇಶ ಮಾತುಗಳನ್ನಾಡಿದ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾಧ್ಯಕ್ಷರಾದ ಯಾಸೀನ್ ಬಂಗೇರಕಟ್ಟೆ “ಕ್ಯಾಂಪಸ್ ಫ್ರಂಟ್ ಸ್ಥಾಪನೆಗೊಂಡು ಇಂದಿಗೆ 12 ವರ್ಷಗಳು ಪೂರ್ಣಗೊಳ್ಳುತ್ತಿದ್ದು, ಈ ಶುಭ ಸಂದರ್ಭವು ನಮ್ಮ ಸಂಘಟನೆಯ ಪ್ರಭಾವ ಮತ್ತು ಬೆಳವಣಿಗೆಯ ಕುರಿತು ಅರಿತಾಗ ತುಂಬಾ ಸಂತೋಷವಾಗುತ್ತದೆ ಮತ್ತು

ಕ್ಯಾಂಪಸ್ ಫ್ರಂಟ್ ಡೇ ಅಂಗವಾಗಿ ಬೆಳ್ತಂಗಡಿ ತಾಲೂಕಿನಾದ್ಯಂತ ಧ್ವಜಾರೋಹಣ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ
Scroll to Top