ಕರ್ನಾಟಕ

ಉಪ್ಪಿನಂಗಡಿ: ಫಾಸ್ಟ್ ಫುಡ್ ಮಾಲಕನಿಗೆ ದುಷ್ಕರ್ಮಿಗಳಿಂದ ಹಲ್ಲೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ. 18. ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳ ತಂಡವೊಂದು ಫಾಸ್ಟ್ ಫುಡ್ ಅಂಗಡಿಯೊಂದರ ಮಾಲೀಕನಿಗೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ಉಪ್ಪಿನಂಗಡಿಯಲ್ಲಿ ಬುಧವಾರದಂದು ರಾತ್ರಿ ನಡೆದಿದೆ. ಹಲ್ಲೆಗೊಳಗಾದವರನ್ನು ಆದರ್ಶ ನಗರದ ಫಾಸ್ಟ್ ಫುಡ್ ಅಂಗಡಿ ಮಾಲಕ ಬಾತೀಶ್ ಎಂದು ಗುರುತಿಸಲಾಗಿದೆ. ಇವರು ಉಪ್ಪಿನಂಗಡಿಯಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದು, ಬುಧವಾರ ರಾತ್ರಿ ಇನೋವಾ ಹಾಗೂ ರಿಡ್ಜ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಸಣ್ಣ ಪುಟ್ಟ ಕಾರಣಕ್ಕೆ ಬಾತೀಶ್ ಅವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. […]

ಉಪ್ಪಿನಂಗಡಿ: ಫಾಸ್ಟ್ ಫುಡ್ ಮಾಲಕನಿಗೆ ದುಷ್ಕರ್ಮಿಗಳಿಂದ ಹಲ್ಲೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ದ್ವಿತೀಯ ಪಿಯು ಅರ್ಧ ವಾರ್ಷಿಕ ಪರೀಕ್ಷೆ ಮುಂದೂಡುವ ಸಾಧ್ಯತೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 18. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಇದೇ ತಿಂಗಳ 29ರಂದು ನಡೆಸಲು ಉದ್ದೇಶಿಸಿದ್ದ ರಾಜ್ಯಮಟ್ಟದ ಮಧ್ಯ ವಾರ್ಷಿಕ ಪರೀಕ್ಷೆಯನ್ನು ಮುಂದೂಡುವ ಸಾಧ್ಯತೆಯಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಪರೀಕ್ಷೆಯನ್ನು ಯಾವುದೇ ಪೂರ್ವಭಾವಿ ಸಿದ್ದತೆಗಳನ್ನು ಕೈಗೊಳ್ಳದೇ ಆತುರದಲ್ಲಿ ಅವೈಜ್ಞಾನಿಕವಾಗಿ ನಡೆಸಲಾಗುತ್ತಿದೆ ಎಂದು ವಿಧಾನ ಪರಿಷತ್ ನ ಬಿಜೆಪಿ ಸದಸ್ಯರು ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಹಿನ್ನೆಲೆ ಪರೀಕ್ಷೆ ಮುಂದೂಡುವ ಬಗ್ಗೆ ಚರ್ಚೆಗಳಾಗಿದ್ದು, ಮುಂದೂಡುವ ಸಾಧ್ಯತೆಗಳಿವೆ.

ದ್ವಿತೀಯ ಪಿಯು ಅರ್ಧ ವಾರ್ಷಿಕ ಪರೀಕ್ಷೆ ಮುಂದೂಡುವ ಸಾಧ್ಯತೆ..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಇನ್ನೂ ಪತ್ತೆಯಾಗದ ಆರೋಪಿ ರಾಜೇಶ್ ಭಟ್ ➤ ವಕೀಲರ ಮನೆಯಲ್ಲಿ ಶೋಧ ಕಾರ್ಯ..!

(ನ್ಯೂಸ್ ಕಡಬ) Newskadaba.com ಮಂಗಳೂರು, ನ. 18. ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿ ರಾಜೇಶ್ ಭಟ್ ಅವರ ಮನೆಯಲ್ಲಿ ಪ್ರಕರಣದ ತನಿಖಾಧಿಕಾರಿ ಎಸಿಪಿ ರಂಜಿತ್ ಬಂಡಾರು ಅವರ ನೇತೃತ್ವದಲ್ಲಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಪಂಚರ ಸಮಕ್ಷಮದಲ್ಲಿ ಈ ಶೋಧ ಕಾರ್ಯ ನಡೆದಿದ್ದು, ಪರಾರಿಯಾಗಿರುವ ಆರೋಪಿ ರಾಜೇಶ್ ಭಟ್‌ಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆಹಾಕಿದ್ದಾರೆ. ಮಂಗಳೂರಿನ ಖ್ಯಾತ ವಕೀಲರಾಗಿದ್ದ ರಾಜೇಶ್ ಭಟ್ ಅವರ ಕಚೇರಿಗೆ ಇಂಟರ್ನ್‌ಶಿಪ್‌ಗೆ ಬಂದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ

ಮಂಗಳೂರು: ಇನ್ನೂ ಪತ್ತೆಯಾಗದ ಆರೋಪಿ ರಾಜೇಶ್ ಭಟ್ ➤ ವಕೀಲರ ಮನೆಯಲ್ಲಿ ಶೋಧ ಕಾರ್ಯ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರವಿ ಪೂಜಾರಿ ಹೆಸರಿನಲ್ಲಿ ಬ್ಲ್ಯಾಕ್ ಮೇಲ್..! ➤ ಪ್ರಕರಣವನ್ನು ವಿಲೇವಾರಿ ಮಾಡಿದ ಬಂಟ್ವಾಳ ನ್ಯಾಯಾಲಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 18. ವಿಟ್ಲದ ಕೃಷಿಕರೋರ್ವರಿಗೆ ರವಿ ಪೂಜಾರಿ ಹೆಸರಿನಲ್ಲಿ 25 ಲಕ್ಷ ರೂ. ಬೇಡಿಕೆಯಿಟ್ಟು, ಕೊಡದಿದ್ದಲ್ಲಿ ಜೀವಬೆದರಿಕೆ ಒಡ್ಡಿರುವ ಪ್ರಕರಣವನ್ನು ಬಂಟ್ವಾಳ ಜಿಎಂಎಫ್ ಸಿ ನ್ಯಾಯಾಲಯವು ವಜಾಗೊಳಿಸಿದೆ. ವಿಟ್ಲ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದ ವೆಂಕಟರಮಣ ಭಟ್ ಎಂಬವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಆದರೆ ದೂರುದಾರರು ಪ್ರಕರಣವನ್ನು ಮುಂದುವರಿಸದೇ ಇರಲು ನಿರ್ಧರಿಸಿದ ಕಾರಣ ಪ್ರಕರಣವನ್ನು ಖುಲಾಸೆಗೊಳಿಸಲಾಗಿದೆ.\

ರವಿ ಪೂಜಾರಿ ಹೆಸರಿನಲ್ಲಿ ಬ್ಲ್ಯಾಕ್ ಮೇಲ್..! ➤ ಪ್ರಕರಣವನ್ನು ವಿಲೇವಾರಿ ಮಾಡಿದ ಬಂಟ್ವಾಳ ನ್ಯಾಯಾಲಯ Read More »

ಕರಾವಳಿ, ಕರ್ನಾಟಕ

ಕೊಡ್ಲಿಪೇಟೆ: ಮಾನಸಿಕ ಅಸ್ವಸ್ಥ ಮಹಿಳೆಯನ್ನು ರಕ್ಷಣೆ ಮಾಡಿ ಆಟೋರಾಜ ಫೌಂಡೇಶನ್ ವತಿಯಿಂದ ಆಸ್ಪತ್ರೆಗೆ ಸೇರಿಸಿದ ಶಿವರಾಮೇಗೌಡರ ಕರವೇ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ಕೊಡಗು, ನ. 18. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಗ್ರಾಮ ಪಂಚಾಯತ್ ಗೆ ಸೇರಿದ ಕೊಡ್ಲಿಪೇಟೆ ನಗರದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ತುಂಬಾ ವರ್ಷದಿಂದ ಯಾರೂ ಇಲ್ಲದೆ ಅನಾಥರಾಗಿ ತಿರುಗಾಡುತ್ತಾ ಅಸಭ್ಯವಾಗಿ ವರ್ತಿಸುತ್ತಾ ಇರುತ್ತಿದ್ದು, ಇದನ್ನು ಗಮನಿಸಿದ ಶನಿವಾರಸಂತೆ ಠಾಣೆಯ ಸಿಬ್ಬಂದಿಯಾದ ಸಿದ್ದಯ್ಯ ರವರು ಶಿವರಾಮೇಗೌಡರ ಕರವೇ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ರವರಿಗೆ ಮಾಹಿತಿ ತಿಳಿಸಿದ ಮೇರೆಗೆ ಕರವೇ ಕಾರ್ಯಕರ್ತರು ಶನಿವಾರಸಂತೆ ಪೊಲೀಸ್ ಠಾಣೆಯಿಂದ ಪೋಲಿಸ್ ಲೆಟರ್ ಆಟೋರಾಜ ಫೌಂಡೇಶನ್ ಗೆ

ಕೊಡ್ಲಿಪೇಟೆ: ಮಾನಸಿಕ ಅಸ್ವಸ್ಥ ಮಹಿಳೆಯನ್ನು ರಕ್ಷಣೆ ಮಾಡಿ ಆಟೋರಾಜ ಫೌಂಡೇಶನ್ ವತಿಯಿಂದ ಆಸ್ಪತ್ರೆಗೆ ಸೇರಿಸಿದ ಶಿವರಾಮೇಗೌಡರ ಕರವೇ ಕಾರ್ಯಕರ್ತರು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇನ್ಮುಂದೆ ಮರಳು ನೀಡಲು ನೇರವಾಗಿ ಗುತ್ತಿಗೆದಾರರಿಗೆ ಅವಕಾಶ ➤ ಕಡಬ ವ್ಯಾಪ್ತಿಯ ಗುತ್ತಿದಾರರು ಯಾರು ಗೊತ್ತೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ನ. 17. ಜಿಲ್ಲೆಯ Non-CRZ ಪ್ರದೇಶದಲ್ಲಿ 17 ಮರಳು ಬ್ಲಾಕ್‍ಗಳಿಗೆ ಗುತ್ತಿಗೆ ಮಂಜೂರಾಗಿದ್ದು, ಈ ಮರಳು ಬ್ಲಾಕ್‍ಗಳ ಸ್ಟಾಕ್‌ ಯಾರ್ಡ್ ನಿಂದ ಮರಳನ್ನು ಜಿಲ್ಲೆಯಲ್ಲಿನ ಸರಕಾರಿ ಹಾಗೂ ಸಾರ್ವಜನಿಕ ಕಾಮಗಾರಿಗಳಿಗೆ ಪೂರೈಸಿಕೊಳ್ಳಬಹುದಾಗಿದೆ. ಮರಳು ಬ್ಲಾಕ್ ಗುತ್ತಿಗೆ ಪ್ರದೇಶಗಳ ವಿವರ ಹಾಗೂ ಗುತ್ತಿಗೆದಾರರ ದೂರವಾಣಿ ವಿವರಗಳು ಕೆಳಗಿನಂತಿವೆ. 1. ಚಂದ್ರಹಾಸ್ 9964277142 ಬಂಟ್ವಾಳ ಬಡಗಬೆಳ್ಳೂರು 45/1 ಫಲ್ಗುಣಿ ನದಿ 1000 ರೂ. 2. ಚರಣ್‍ಕುಮಾರ್ 9343564043 ಬಂಟ್ವಾಳ ಕಡೇಶಿವಾಲಯ 1 ನೇತ್ರಾವತಿ 1200

ಇನ್ಮುಂದೆ ಮರಳು ನೀಡಲು ನೇರವಾಗಿ ಗುತ್ತಿಗೆದಾರರಿಗೆ ಅವಕಾಶ ➤ ಕಡಬ ವ್ಯಾಪ್ತಿಯ ಗುತ್ತಿದಾರರು ಯಾರು ಗೊತ್ತೇ..? Read More »

ಕರಾವಳಿ, ಕರ್ನಾಟಕ

ಆಲಂಕಾರು: ವಾಟರ್ ಬೆಲ್, ಅಕ್ಷಯ ಬುಟ್ಟಿ ಯೋಜನೆ ಮತ್ತು ಪೂರ್ವ ಪ್ರಾಥಮಿಕ ಶಾಲಾ ತರಗತಿಗಳ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ನ. 18. ಶೈಕ್ಷಣಿಕ ಗುಣಮಟ್ಟ, ಕಲಿಕಾ ವಾತಾವರಣ ಸ್ವಚ್ಚವಾಗಿದ್ದರೆ ಜನ ಶಿಕ್ಷಣ ಸಂಸ್ಥೆಯನ್ನು ಮೆಚ್ಚಿಕೊಂಡು ಮಕ್ಕಳನ್ನು ದಾಖಲಿಸುತ್ತಾರೆ ಎನ್ನುವುದಕ್ಕೆ ಆಲಂಕಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದಾಹರಣೆಯಾಗಿದೆ. ಇಲ್ಲಿ ಪೋಷಕರ ಆಶಯವನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. . ಪೋಷಕರ, ಸಹೋದ್ಯೋಗಿಗಳ, ಶಿಕ್ಷಣ ಪ್ರೇಮಿಗಳ, ಮೇಲಾಧಿಕಾರಿಗಳ ನೆರವಿನಿಂದ ಶಾಲೆ ಈ ಮಟ್ಟಕ್ಕೆ ಬೆಳೆದಿದೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಹೇಳಿದರು. ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ

ಆಲಂಕಾರು: ವಾಟರ್ ಬೆಲ್, ಅಕ್ಷಯ ಬುಟ್ಟಿ ಯೋಜನೆ ಮತ್ತು ಪೂರ್ವ ಪ್ರಾಥಮಿಕ ಶಾಲಾ ತರಗತಿಗಳ ಉದ್ಘಾಟನೆ Read More »

ಕರಾವಳಿ, ಕರ್ನಾಟಕ

ನೆಲ್ಯಾಡಿ: ನಿಯಂತ್ರಣ ತಪ್ಪಿ ರಸ್ತೆಗುರುಳಿದ ಲಾರಿ ➤ ಚಾಲಕ ಪಾರು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ. 18. ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆಗುರುಳಿದ ಘಟನೆ ಗುರುವಾರದಂದು ನೆಲ್ಯಾಡಿ ಸಮೀಪ ನಡೆದಿದೆ. ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.

ನೆಲ್ಯಾಡಿ: ನಿಯಂತ್ರಣ ತಪ್ಪಿ ರಸ್ತೆಗುರುಳಿದ ಲಾರಿ ➤ ಚಾಲಕ ಪಾರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಮುದ್ರದ ಅಲೆಗಳ ಹೊಡೆತಕ್ಕೆ ಬೋಟ್ ಮುಳುಗಡೆ ➤ ಏಳು ಮೀನುಗಾರರ ರಕ್ಷಣೆ

(ನ್ಯೂಸ್ ಕಡಬ) newskadaba.com ಕಾರವಾರ, ನ. 18. ಮೀನುಗಾರಿಕೆಗೆಂದು ತೆರಳಿದ್ದ ಮಲ್ಪೆಯ ಎರಡು ಬೋಟುಗಳು ಹವಾಮಾನ ವೈಪರೀತ್ಯದಿಂದಾಗಿ ಗೋವಾದ ಪಣಜಿ ಬಳಿಯ ಅರಬ್ಬಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗಡೆಯಾದ ಘಟನೆ ನಡೆದಿದೆ. ಮಲ್ಪೆಯಿಂದ ಗೋವಾಕ್ಕೆ ಮೀನುಗಾರಿಕೆಗೆ ತೆರಳಿದ್ದ ಮೂರು ಬೋಟ್‌ಗಳು ಅಲೆಗಳ ಹೊಡೆತಕ್ಕೆ ಸಿಲುಕಿದ್ದು, ಈ ವೇಳೆ ಇಂಜಿನ್ ಸಹ ಕೈ ಕೊಟ್ಟಿದೆ ಎನ್ನಲಾಗಿದೆ. ಮಾತಾ ಜಟಗೇಶ್ವರ ಮತ್ತು ಪಲ್ಲಕ್ ಎಂಬ ಹೆಸರಿನ ಬೋಟ್ ಮುಳುಗಡೆಯಾಗಿದ್ದು, ಇದರಲ್ಲಿದ್ದ ಏಳು ಮಂದಿಯನ್ನು, ಸ್ಥಳೀಯ ಮೀನುಗಾರರು ಹಾಗೂ ಗೋವಾದ ಕೋಸ್ಟ್

ಸಮುದ್ರದ ಅಲೆಗಳ ಹೊಡೆತಕ್ಕೆ ಬೋಟ್ ಮುಳುಗಡೆ ➤ ಏಳು ಮೀನುಗಾರರ ರಕ್ಷಣೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ವಿಫ್ಟ್ ಕಾರು ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಕಡಬ, ನ.17. ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ವಿಫ್ಟ್ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಘಟನೆ ಇಲ್ಲಿಗೆ ಸಮೀಪದ ಕೋಡಿಂಬಾಳ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಕಡಬದಿಂದ ಎಡಮಂಗಲ ಮಾರ್ಗವಾಗಿ ಪುತ್ತೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸ್ವಿಫ್ಟ್ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ

ಕಡಬ: ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ವಿಫ್ಟ್ ಕಾರು ನಡುವೆ ಢಿಕ್ಕಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top