ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕ್ರೀಡಾ ನ್ಯೂಸ್ – Page 31 – News Kadaba

ಕ್ರೀಡಾ ನ್ಯೂಸ್

ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಕಾರು ಅಪಘಾತ

(ನ್ಯೂಸ್ ಕಡಬ) newskadaba.com ಮೀರತ್‌, ಜು. 05. ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ರವರ ಕಾರು ಅಪಘಾತಕ್ಕೀಡಾಗಿದ್ದು, ಪ್ರಾಣಾಪಾಯದಿಂದ ಪಾರಾದ ಘಟನೆ ವರದಿಯಾಗಿದೆ. ಪ್ರವೀಣ್ ಕುಮಾರ್ ಹಾಗೂ ಅವರೊಂದಿಗಿದ್ದ ಪುತ್ರ ಅಪಾಯದಿಂದ ಪಾರಾಗಿದ್ದಾರೆ. ಇವರು ಉತ್ತರ ಪ್ರದೇಶದ ಮೀರತ್‌ ನಲ್ಲಿರುವ ತಮ್ಮ ಮನೆಗೆ ಮರಳುವ ವೇಳೆ ವೇಗವಾಗಿ ಬಂದ ಟ್ರಕ್‌ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಟ್ರಕ್ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರವೀಣ್ ಕುಮಾರ್ ರವರು ಭಾರತದ […]

ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಕಾರು ಅಪಘಾತ Read More »

ಕ್ರೀಡಾ ನ್ಯೂಸ್, ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸ್ಯಾಫ್ ಪುಟ್ಬಾಲ್ ಪಂದ್ಯಾಟ ➤ 9ನೇ ಬಾರಿಗೆ ಚಾಂಪಿಯನ್ ಆದ ಭಾರತ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 04. ಫೈನಲ್‌ ಪಂದ್ಯದಲ್ಲಿ ಕುವೈತ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಅಂತರದಿಂದ ಮಣಿಸಿದ ಭಾರತ ಸ್ಯಾಫ್ ಕಪ್ ಪುಟ್‌ಬಾಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಂಗಳವಾರದಂದು ನಡೆದ ಪೈನಲ್‌ ಪಂದ್ಯಾಟದಲ್ಲಿ ನಿಗದಿತ ಸಮಯದ ಅಂತ್ಯಕ್ಕೆ ಎರಡೂ ತಂಡಗಳು ತಲಾ 1 ಗೋಲು ಗಳಿಸಿದ್ದವು. ಹೆಚ್ಚುವರಿ ಸಮಯದಲ್ಲೂ ಉಭಯ ತಂಡಗಳು ಸಮಬಲ ಕಾಯ್ದ ಕಾರಣ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್ ನಲ್ಲೂ ಎರಡೂ ತಂಡಗಳು ತೀವ್ರ ಪೈಪೋಟಿ ನಡೆಸಿ, ಒಂದು

ಸ್ಯಾಫ್ ಪುಟ್ಬಾಲ್ ಪಂದ್ಯಾಟ ➤ 9ನೇ ಬಾರಿಗೆ ಚಾಂಪಿಯನ್ ಆದ ಭಾರತ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಖ್ಯಾತ ಬಾಡಿಬಿಲ್ಡರ್ ಜೋ ಲಿಂಡ್ನರ್ ನಿಧನ

(ನ್ಯೂಸ್ ಕಡಬ) newskadaba.com ಬ್ಯಾಂಕಾಕ್‌, ಜೂ. 30. ಖ್ಯಾತ ಬಾಡಿಬಿಲ್ಡರ್ ಜೋ ಲಿಂಡ್ನರ್‌ ಅವರು ನಿಧನರಾಗಿದ್ದಾರೆ. ರಕ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದ ಜೋ ಲಿಂಡ್ನರ್‌ ಅವರು ಶನಿವಾರದಂದು ನಿಧನರಾಗಿದ್ದಾರೆ ಎಂದು ಅವರ ಗೆಳತಿ ನಿಚಾ ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 2 ದಿನಗಳ ಹಿಂದೆ ಆರೋಗ್ಯಕರ ದೇಹದಾರ್ಢ್ಯ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದ ಜೋ ಲಿಂಡ್ನರ್‌ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫಿಟ್ನೆಸ್‌ ಕುರಿತಂತೆ ಹಲವು ವಿಡಿಯೋಗಳನ್ನು ಹಂಚಿಕೊಂಡಿದ್ದರು.

ಖ್ಯಾತ ಬಾಡಿಬಿಲ್ಡರ್ ಜೋ ಲಿಂಡ್ನರ್ ನಿಧನ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್

ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಕ್ರಿಕೆಟಿಗ ಕೆ.ಎಲ್.ರಾಹುಲ್

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ. 26. ಕರಾವಳಿಯ ತೀರ್ಥ ಕ್ಷೇತ್ರಗಳಿಗೆ ಯಾತ್ರೆ ಕೈಗೊಂಡಿರುವ ಕ್ರಿಕೆಟಿಗ ಕೆ.ಎಲ್. ರಾಹುಲ್ ರವರು ಧರ್ಮಸ್ಥಳ ಕ್ಷೇತ್ರದಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವರ ದರ್ಶನ ಪಡೆದು ಸೇವೆ ನೆರವೇರಿಸಿ ಬಳಿಕ ಪ್ರಸಾದ ಸ್ವೀಕರಿಸಿದರು. ದೇವಳದ ಅರ್ಚಕರು ರಾಹುಲ್ ಅವರಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿದರು. ಬಳಿಕ ಹೊಸಳಿಗಮ್ಮನ ದರುಶನ ಪಡೆದ ಅವರು ಪ್ರಸಾದ ಸ್ವೀಕರಿಸಿ, ನಂತರ ದೇವಳದಲ್ಲಿ ಪ್ರಸಾದ ಬೋಜನ ಸ್ವೀಕರಿಸಿದರು. ಬಳಿಕ ಆಡಳಿತ

ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಕ್ರಿಕೆಟಿಗ ಕೆ.ಎಲ್.ರಾಹುಲ್ Read More »

ಕರಾವಳಿ, ಕ್ರೀಡಾ ನ್ಯೂಸ್

ಭಾರತದ ಮಾಜಿ ಹಾಕಿ ಆಟಗಾರ ಮೃತ್ಯು

(ನ್ಯೂಸ್ ಕಡಬ) newskadaba.com ವಾರಣಾಸಿ, ಜೂ. 24. ಭಾರತದ ಮಾಜಿ ಜೂನಿಯರ್ ಹಾಕಿ ಆಟಗಾರ ರಾಜೀವ್ ಕುಮಾರ್ ಮಿಶ್ರಾ (46) ಅವರು ವಾರಣಾಸಿಯ ಸರ್ಸೌಲಿ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ, ರಾಜೀವ್ ಕೆಲವು ದಿನಗಳ ಹಿಂದೆ ಮೃತಪಟ್ಟಿರಬೇಕು ಮತ್ತು ಅವರ ಮನೆಯಿಂದ ದುರ್ವಾಸನೆ ಬರುತ್ತಿದ್ದ ಕಾರಣ ಅವರ ನೆರೆಹೊರೆಯವರು ಪೊಲೀಸರಿಗೆ ನೀಡಿದ ಮಾಹಿತಿಯಂತೆ ಪರಿಶೀಲಿಸಿದಾಗ ವಿಷಯ ಬೆಳಕಿಗೆ ಬಂದಿದೆ. 1997 ರಲ್ಲಿ ನಡೆದ ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ಬೆಳ್ಳಿ ಪದಕವನ್ನು ಗಳಿಸುವಲ್ಲಿ

ಭಾರತದ ಮಾಜಿ ಹಾಕಿ ಆಟಗಾರ ಮೃತ್ಯು Read More »

ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಶ್ವಕಪ್ 2023 ➤ ಅಫ್ಘಾನ್ ವಿರುದ್ದ ಆಡಲು ನಿರಾಕರಿಸಿದ ಪಾಕಿಸ್ತಾನ

(ನ್ಯೂಸ್ ಕಡಬ) newskadaba.com ಪಾಕಿಸ್ತಾನ, ಜೂ. 22. ಈ ಮೊದಲು 2023ರ ವಿಶ್ವಕಪ್ ಪಂದ್ಯವನ್ನು ಪ್ರಧಾನಿ ಮೋದಿ ಮೈದಾನದಲ್ಲಿ ಆಡುವುದಿಲ್ಲ, ವೇಳಾಪಟ್ಟಿಯಲ್ಲಿ 2 ಸ್ಥಳಗಳನ್ನು ಬದಲಾಯಿಸಬೇಕು ಎಂದಿದ್ದ ಪಾಕಿಸ್ತಾನ ಇದೀಗ ಅಫ್ಘಾನಿಸ್ತಾನದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲು ನಿರಾಕರಿಸಿದ್ದಲ್ಲದೇ ಈ ಬಗ್ಗೆ ತನ್ನ ಲಿಖಿತ ಬೇಡಿಕೆಯನ್ನು ಐಸಿಸಿಗೆ ಕಳುಹಿಸಿದೆ ಎಂದು ವರದಿಯಾಗಿದೆ. ಇನ್ನು ಏಷ್ಯನ್ ಅಲ್ಲದ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಯೋಜಿಸಲು ಮನವಿ ಮಾಡಿದ್ದು, ಇದಕ್ಕೆ ಕಾರಣವನ್ನೂ ನೀಡಿರುವ ಪಾಕ್, ವಿಶ್ವಕಪ್​ಗೂ ಮುನ್ನ ಏಷ್ಯಾಕಪ್​ ನಲ್ಲಿ

ವಿಶ್ವಕಪ್ 2023 ➤ ಅಫ್ಘಾನ್ ವಿರುದ್ದ ಆಡಲು ನಿರಾಕರಿಸಿದ ಪಾಕಿಸ್ತಾನ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್

ಏಷ್ಯನ್ ಎಮರ್ಜಿಂಗ್ ಕ್ರಿಕೆಟ್ ಟೂರ್ನಿ ➤ ಫೈನಲ್ ಪ್ರವೇಶಿಸಿದ ಭಾರತದ ಮಹಿಳಾ ತಂಡ

(ನ್ಯೂಸ್ ಕಡಬ) newskadaba.com ಹಾಂಕಾಂಗ್‌, ಜೂ. 20. ಹಾಂಕಾಂಗ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಎಮರ್ಜಿಂಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡವು ಫೈನಲ್‌ ಪ್ರವೇಶಿಸಿದೆ. ಭಾರತವು ಸೆಮಿಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಬೇಕಾಗಿತ್ತು. ಆದರೆ, ಮಳೆಯ ಕಾರಣದಿಂದ ಈ ಪಂದ್ಯ ರದ್ದಾಗಿದೆ. ಎ ಬಣದಲ್ಲಿ ಸ್ಥಾನ ಪಡೆದಿದ್ದ ಭಾರತ ಅಲ್ಲಿ ಗ್ರೂಪ್‌ ನಲ್ಲಿ ಅಗ್ರಸ್ಥಾನ ಪಡೆದಿತ್ತು. ಶ್ರೀಲಂಕಾ ಬಿ ಬಣದಲ್ಲಿ 2ನೇ ಸ್ಥಾನಿಯಾಗಿತ್ತು. ಗ್ರೂಪ್‌ ಹಂತದ ಅಗ್ರಸ್ಥಾನವನ್ನು ಭಾರತ ಪಡೆದಿದ್ದರಿಂದ ಭಾರತ ಫೈನಲ್‌ಗೆ ಪ್ರವೇಶ ಪಡೆದಿದೆ.

ಏಷ್ಯನ್ ಎಮರ್ಜಿಂಗ್ ಕ್ರಿಕೆಟ್ ಟೂರ್ನಿ ➤ ಫೈನಲ್ ಪ್ರವೇಶಿಸಿದ ಭಾರತದ ಮಹಿಳಾ ತಂಡ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಚಿನ್ ತೆಂಡೂಲ್ಕರ್‌ ಪುತ್ರ ಅರ್ಜುನ್ ತೆಂಡೂಲ್ಕರ್‌ ಐಪಿಎಲ್‌ಗೆ ಪದಾರ್ಪಣೆ

(ನ್ಯೂಸ್ ಕಡಬ) newskadaba.com. ಮುಂಬೈ, ಏ.17. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕೊನೆಗೂ ಐಪಿಎಲ್ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ್ದಾರೆ. ಸಚಿನ್ ಅಭಿಮಾನಿಗಳು ಬಹು ದಿನಗಳಿಂದ ಕಾಯುತ್ತಿದ್ದ ಗಳಿಗೆ ಬಂದಿದ್ದು, ಬ್ಯಾಟಿಂಗ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 22ನೇ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ಎದುರು ಕಣಕ್ಕಿಳಿದ ಎಡಗೈ ವೇಗದ ಬೌಲರ್‌ 24 ವರ್ಷದ

ಸಚಿನ್ ತೆಂಡೂಲ್ಕರ್‌ ಪುತ್ರ ಅರ್ಜುನ್ ತೆಂಡೂಲ್ಕರ್‌ ಐಪಿಎಲ್‌ಗೆ ಪದಾರ್ಪಣೆ Read More »

ಕ್ರೀಡಾ ನ್ಯೂಸ್

ಐಪಿಎಲ್‌ ನಲ್ಲಿ ಹೊಸ ನಿಯಮ: ➤ ಟಾಸ್‌ ಬಳಿಕ ಅಂತಿಮ ಇಲೆವೆನ್‌ ಆಯ್ಕೆ

(ನ್ಯೂಸ್ ಕಡಬ) News kadaba.com ನವದೆಹಲಿ,ಮಾ.24 ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಟೂರ್ನಿಯಲ್ಲಿ ಈ ಬಾರಿ ಹೊಸ ನಿಯಮ ಜಾರಿಗೊಳಿಸಲಾಗಿದೆ. ಪಂದ್ಯದ ಟಾಸ್‌ ಆದ ಬಳಿಕ ಅಂತಿಮ ಇಲೆವೆನ್‌ ಆಯ್ಕೆ ಮಾಡುವ ಅವಕಾಶವನ್ನು ತಂಡಗಳಿಗೆ ನೀಡಲಾಗಿದೆ. ‘ಪ್ರತಿ ತಂಡದ ನಾಯಕರು ಆಡುವ 11 ಮಂದಿ ಆಟಗಾರರು ಮತ್ತು ಐವರು ಸಬ್‌ಸ್ಟಿಟ್ಯೂಟ್‌ ಫೀಲ್ಡರ್‌ಗಳ ಹೆಸರನ್ನು ಟಾಸ್‌ ಬಳಿಕ ಮ್ಯಾಚ್‌ ರೆಫರಿಗೆ ನೀಡಬಹುದು’ ಎಂದು ಹೊಸ ನಿಯಮ ಹೇಳಿದೆ. ಟಾಸ್‌ ಬಳಿಕ ಅಂತಿಮ ಹನ್ನೊಂದರ ಬಳಗದಲ್ಲಿ ಏನಾದರೂ ಬದಲಾವಣೆ

ಐಪಿಎಲ್‌ ನಲ್ಲಿ ಹೊಸ ನಿಯಮ: ➤ ಟಾಸ್‌ ಬಳಿಕ ಅಂತಿಮ ಇಲೆವೆನ್‌ ಆಯ್ಕೆ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

➤ ಐಟಿಎಫ್ ಮಹಿಳಾ ಓಪನ್ ನಲ್ಲಿ ಭಾರತದ ವೈದೇಹಿ ಚೌಧರಿಗೆ ಗೆಲುವು

(ನ್ಯೂಸ್ ಕಡಬ) newskadaba.com. ಬೆಂಗಳೂರು.  ಭಾರತದ ಟೆನಿಸ್ ಆಟಗಾರ್ತಿ ವೈದೇಹಿ ಚೌಧರಿ ಅವರು ಕೆಎಸ್‌ಎಲ್‌ಟಿಎ ಸ್ಟೇಡಿಯಂನಲ್ಲಿ ಭಾನುವಾರ ಜಪಾನ್‌ನ ಜುನ್ರಿ ನಮಗತಾ ಅವರನ್ನು 6-2, 6-0 ಸೆಟ್‌ಗಳಿಂದ ಸೋಲಿಸಿ ಐಟಿಎಫ್ ಮಹಿಳಾ ಓಪನ್‌ನ ಸಿಂಗಲ್ಸ್ ಅರ್ಹತಾ ಸುತ್ತಿನ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಒಂಬತ್ತನೇ ಶ್ರೇಯಾಂಕದ ವೈದೇಹಿ ಮೊದಲ ಸೆಟ್‌ನಲ್ಲಿ ಗೆಲ್ಲಲು ಡಬಲ್ ಬ್ರೇಕ್ ತೆಗೆದುಕೊಂಡಿದ್ದರಿಂದ ಗೆಲುವಿಗಾಗಿ ತನ್ನನ್ನು ತಾನೇ ಹಿಗ್ಗಿಸಬೇಕಾಗಿಲ್ಲ ಮತ್ತು ಎರಡನೇ ಸೆಟ್‌ನಲ್ಲಿ ಪಂದ್ಯವನ್ನು ಆರಾಮವಾಗಿ ಸುತ್ತುವಂತೆ ಮಾಡಿದರು. ವೈದೇಹಿ ಅವರು ಸೋಮವಾರದ ಅಂತಿಮ ಅರ್ಹತಾ

➤ ಐಟಿಎಫ್ ಮಹಿಳಾ ಓಪನ್ ನಲ್ಲಿ ಭಾರತದ ವೈದೇಹಿ ಚೌಧರಿಗೆ ಗೆಲುವು Read More »

ಕ್ರೀಡಾ ನ್ಯೂಸ್
Scroll to Top