ಆರೋಗ್ಯ ಮಾಹಿತಿ

ಇಂದು(ಮೇ.1) – ವಿಶ್ವ ಅಸ್ತಮಾ ದಿನ

(ನ್ಯೂಸ್ ಕಡಬ) newskadaba.com, ಮೇ.1. ಪ್ರತಿ ವರ್ಷ ಮೇ ತಿಂಗಳ ಮೊದಲನೇ ಮಂಗಳವಾರದಂದು ವಿಶ್ವ ಅಸ್ತಮಾ ದಿನ ಎಂದು ಆಚರಿಸಲಾಗುತ್ತಿದೆ. ವಿಶ್ವದಾದ್ಯಂತ ಅಸ್ತಮಾ ರೋಗದ ಬಗೆಗಿನ ಅಪನಂಬಿಕೆಗಳನ್ನು ಹೋಗಲಾಡಿಸಿ, ರೋಗದ ಬಗ್ಗೆ ಜಾಗೃತಿ ಮೂಡಿಸಿ, ರೋಗಿಗಳಿಗೆ ಆತ್ಮಸ್ತೈರ್ಯವನ್ನು ನೀಡುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ. ಅಸ್ತಮಾ ರೋಗವು ಶ್ವಾಸಕೋಶಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ರೋಗವಾಗಿದ್ದು, ಮುಖ್ಯವಾಗಿ ರೋಗಿಯ ಉಸಿರಾಟದ ಪ್ರಕ್ರಿಯೆ ಮೇಲೆ ತೊಂದರೆಯನ್ನು ಉಂಟುಮಾಡುತ್ತದೆ. ರೋಗದ ತೀವ್ರತೆ ಮತ್ತು ಕೆರಳುವಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಬಿನ್ನವಾಗಿದ್ದು, ಅಸ್ತಮಾ ರೋಗವನ್ನು ಸಂಪೂರ್ಣವಾಗಿ […]

ಇಂದು(ಮೇ.1) – ವಿಶ್ವ ಅಸ್ತಮಾ ದಿನ Read More »

ಆರೋಗ್ಯ ಮಾಹಿತಿ

ಇಂದು( ಎಪ್ರಿಲ್ 25) -ವಿಶ್ವ ಮಲೇರಿಯಾ ದಿನ

(ನ್ಯೂಸ್ ಕಡಬ) newskadaba.com  ಎ.25. ಪ್ರತಿ ವರ್ಷ ಎಪ್ರೀಲ್ 25ರಂದು ವಿಶ್ವದಾದ್ಯಂತ “ವಿಶ್ವ ಮಲೇರಿಯಾ” ದಿನ ಎಂದು ಆಚರಿಸಲಾಗುತ್ತಿದೆ. ಮಲೇರಿಯಾ ರೋಗದಿಂದಾಗುವ ಜಾಗತಿಕ ತೊಂದರೆಗಳು ಮತ್ತು ಪರಿಣಾಮಗಳ ಬಗ್ಗೆ ಹೆಚ್ಚಿಸಿ ಅರಿವು ಮೂಡಿಸಿ ರೋಗದ ಬಗ್ಗೆ ಜಾಗ್ರತಿ ಮೂಡಿಸುವ ಸದುದ್ದೇಶದಿಂದ ಈ ಆಚರಣೆಯನ್ನು ಜಾರಿಗೆ ತರಲಾಯಿತು. ವಿಶ್ವದಾದ್ಯಂತ ಸರಿಸುಮಾರು 3.3 ಬಿಲಿಯನ್ ಮಂದಿ ಈ ರೋಗಕ್ಕೆವರ್ಷವೊಂದರಲ್ಲಿ ತುತ್ತಾಗುತ್ತಿದ್ದು, 2012ರಲ್ಲಿ 6.5 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. 2013ರಲ್ಲಿ 5.8 ಲಕ್ಷ ಮಂದಿ ಜೀವ ತೆತ್ತಿದ್ದಾರೆ ಎಂದು ಅಂಕಿ ಅಂಶಗಳಿದ ತಿಳಿದುಬಂದಿದೆ.

ಇಂದು( ಎಪ್ರಿಲ್ 25) -ವಿಶ್ವ ಮಲೇರಿಯಾ ದಿನ Read More »

ಆರೋಗ್ಯ ಮಾಹಿತಿ

ಬೇಸಿಗೆಯಲ್ಲಿ ಬೆವರಿಳಿಸಿ ಬೆಂಡಾಗಿಸುವ ನಿರ್ಜಲೀಕರಣ

(ನ್ಯೂಸ್ ಕಡಬ) newskadaba.com ಎ.18. ನಮ್ಮ ದೇಹದ ತೂಕದ ಸುಮಾರು 60 ಶೇಕಡಾದಷ್ಟು ನೀರಿನಾಂಶ ಇದ್ದು, ದೇಹದ ಹೆಚ್ಚಿ ಎಲ್ಲಾ ಜೈವಿಕ ಕ್ರಿಯೆಗಳಿಗೆ ನೀರು ಅತೀ ಅಗತ್ಯ. ಸುಮಾರು 70 ಕೆ.ಜಿ ತೂಕದ ವ್ಯಕ್ತಿಯಲ್ಲಿ ಸರಿಸುಮಾರು 40 ಲೀಟರ್ಗಳಷ್ಟು ಅಂದರೆ ದೇಹದ ತೂಕದ 60 ಶೇಕಡಾದಷ್ಟು ನೀರು ಇರುತ್ತದೆ. ನಮ್ಮ ದೇಹದಲ್ಲಿನ ನೀರು ಬೇರೆ ಬೇರೆ ಕಾರಣಗಳಿಂದ ಬೇರೆ ಬೇರೆ ರೂಪದಲ್ಲಿ (ಬೆವರು, ಮೂತ್ರ ಇತ್ಯಾದಿಯಾಗಿ) ದೇಹದಿಂದ ಹೊರ ಹಾಕಲ್ಪಟ್ಟ ನೀರಿನ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸುವುದು

ಬೇಸಿಗೆಯಲ್ಲಿ ಬೆವರಿಳಿಸಿ ಬೆಂಡಾಗಿಸುವ ನಿರ್ಜಲೀಕರಣ Read More »

ಆರೋಗ್ಯ ಮಾಹಿತಿ

ಹಿಮೋಫಿಲಿಯಾ (ಕುಸುಮ ರೋಗ)

(ನ್ಯೂಸ್ ಕಡಬ) newskadaba.com ಎ.17. ಹಿಮೋಫಿಲಿಯಾ ಎಂಬ ರೋಗ ರಕ್ತ ಹೆಪ್ಪುಗಟ್ಟುವಿಕೆಯಲ್ಲಿನ ಪ್ರಕ್ರಿಯೆಯಲ್ಲಿ ವ್ಯತ್ಯಯವಿರುವ ರೋಗವಾಗಿದ್ದು, ವಂಶವಾಹಿನಿಗಳಲ್ಲಿ ತಾಯಿಯಿಂದ ಮಗನಿಗೆ ಬಳುವಳಿಯಾಗಿ ಬರುವ ಜನ್ಮಧಾರಭ್ಯ ರೋಗವಾಗಿದೆ. “X” ಎಂಬ ವರ್ಣತಂತುಗಳಲ್ಲಿ ಈ ರೋಗ ಸಾಗಿಸಲ್ಪಡುವುದರಿಂದ ಪುರುಷರಿಗೆ ಮಾತ್ರ ಈ ರೋಗ ಸೀಮಿತವಾಗಿರುತ್ತದೆ. ಮಹಿಳೆಯರಲ್ಲಿ ಎರಡು “X” ವರ್ಣತಂತುಗಳಿದ್ದು ಒಂದು ವರ್ಣತಂತುವಿನಲ್ಲಿನ ವೈಫಲ್ಯವನ್ನು ಇನ್ನೊಂದು ಸಹಜ ವರ್ಣತಂತು ಮುಚ್ಚಿಕೊಂಡು, ರೋಗ ಬರುವ ಸಾಧ್ಯತೆ ಬಹಳ ಕಡಮೆ ಇರುತ್ತದೆ. ಪುರಷರಲ್ಲಿ ಒಂದೇ “X” ಎಂಬ ವರ್ಣತಂತುವಿರುವುದರಿಂದ ಈ ವರ್ಣತಂತುವಿನಲ್ಲಿ ವೈಫಲ್ಯವನ್ನು

ಹಿಮೋಫಿಲಿಯಾ (ಕುಸುಮ ರೋಗ) Read More »

ಆರೋಗ್ಯ ಮಾಹಿತಿ

ಪಾರ್ಕಿನ್ಸನ್ಸ್‌ ಎಂಬ ನಡುಕದ ಖಾಯಿಲೆ ► ಎಪ್ರಿಲ್ 11 ವಿಶ್ವ ಪಾರ್ಕಿನ್ಸನ್ಸ್‌ ದಿನ

(ನ್ಯೂಸ್ ಕಡಬ) newskadaba.com ಎ.11.  ಪಾರ್ಕಿನ್ಸನ್ಸ್‌ ಎಂಬುದು ಒಂದು ಮೆದುಳಿನ ನರಮಂಡಲಗಳಿಗೆ ಸಂಬಂಧಿಸಿದ ಸಂಕೀರ್ಣ ಖಾಯಿಲೆಯಾಗಿದ್ದು, ಸಾಮಾನ್ಯವಾಗಿ ಇಳಿ ವಯಸ್ಸಿನಲ್ಲಿ ಕಂಡು ಬರುತ್ತದೆ. “ಪಾರ್ಕಿನ್ಸನ್ಸ್‌” ಖಾಯಿಲೆ ಇರುವ ರೋಗಿಗಳಲ್ಲಿ ದೇಹದ ಚಲನವಲನೆಗಳಲ್ಲಿ ವ್ಯತ್ಯಾಸವಾಗುವ ದೇಹ ಸ್ಥಿತಿ ಕಂಡುಬರುತ್ತದೆ. ಮೆದುಳಿನ ಅಸಹಜತೆಯ ಈ ಖಾಯಿಲೆಯಲ್ಲಿ ನಡುಕ, ಕಂಪಿಸುವುದು, ನಡೆದಾಡಲು ಕಷ್ಟವಾಗುವುದು, ಚಲನವಲನೆಗೆ ತೊಂದರೆ ಮತ್ತು ಸಂವಹನದ ತೊಂದರೆ ಉಂಟಾಗಬಹುದು. ಪುರುಷರಲ್ಲಿ ಜಾಸ್ತಿ ಕಂಡು ಬರುವ ಈ ರೋಗ, ಹೆಚ್ಚು 60 ವರ್ಷಗಳ ನಂತರ ಕಂಡು ಬರುತ್ತದೆ. ಹಿರಿಯ ನಾಗರೀಕರಲ್ಲಿ

ಪಾರ್ಕಿನ್ಸನ್ಸ್‌ ಎಂಬ ನಡುಕದ ಖಾಯಿಲೆ ► ಎಪ್ರಿಲ್ 11 ವಿಶ್ವ ಪಾರ್ಕಿನ್ಸನ್ಸ್‌ ದಿನ Read More »

ಆರೋಗ್ಯ ಮಾಹಿತಿ

ಎಪ್ರಿಲ್ 7 – ವಿಶ್ವ ಆರೋಗ್ಯ ದಿನ

(ನ್ಯೂಸ್ ಕಡಬ) newskadaba.com ಎ.7. ಜಾಗತಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ ಎಪ್ರಿಲ್ 7ರಂದು “ವಿಶ್ವ ಆರೋಗ್ಯ ದಿನ” ಎಂದು ಆಚರಿಸುತ್ತದೆ. 1950 ಎಪ್ರಿಲ್ 7ರಂದು ಆರಂಭವಾದ ಈ ಆಚರಣೆ, ಪ್ರತಿ ವರ್ಷ ಯಾವುದಾದರೊಂದು ವಿಶೇಷ ದ್ಯೇಯವಾಕ್ಯ ಇಟ್ಟುಕೊಂಡು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಸುಮಾರು 8 ವಿಶೇಷ ದಿನಗಳನ್ನು, ವಿಶೇಷ ಜಾಗತಿಕ ಆರೋಗ್ಯ ಜಾಗೃತಿಗೆ ಆಯ್ಕೆ ಮಾಡಿದ್ದು, ಅವುಗಳಲ್ಲಿ ವಿಶ್ವ ಆರೋಗ್ಯ ದಿನ ಎಪ್ರಿಲ್ 7 ಕೂಡ ಸೇರಿದೆ. ಉಳಿದ

ಎಪ್ರಿಲ್ 7 – ವಿಶ್ವ ಆರೋಗ್ಯ ದಿನ Read More »

ಆರೋಗ್ಯ ಮಾಹಿತಿ

ಮಾರ್ಚ್ 26 – ವಿಶ್ವ ಅಪಸ್ಮಾರ ಜಾಗೃತಿ ದಿನ

(ನ್ಯೂಸ್ ಕಡಬ) newskadaba.com ಮಾ.26.  ಪ್ರತಿ ವರ್ಷ ವಿಶ್ವದಾದ್ಯಂತ ಮಾರ್ಚ್ 26ರಂದು “ಅಂತರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ” ಅಥವಾ ಪರ್ಪಲ್ ಡೇ ಆಚರಿಸುತ್ತಾರೆ ಮತ್ತು ಅಪಸ್ಮಾರ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ಜಗತಿನಾದ್ಯಂತ ಸರಿಸುಮಾರು 65 ಮಿಲಿಯನ್ ಮಂದಿ ಈ ಅಪಸ್ಮಾರ ಖಾಯಿಲೆಯಿಂದ ಬಳಲುತ್ತಿದ್ದು, ಈ ಖಾಯಿಲೆ ಯಾವುದೇ ಜಾತಿ, ಧರ್ಮ, ಭಾಷೆಯ ಜನರಿಗೆ ಸಿಮೀತವಾಗದೆ ಎಲ್ಲರನ್ನು ಕಾಡುತ್ತಿದ್ದು, ಒಂದು ಜಾಗತಿಕ ಆರೋಗ್ಯ ಸಮಸ್ಯೆ ಎಂದರೂ ತಪ್ಪಲ್ಲ. ಪ್ರತಿ ವರ್ಷ ಫೆಬ್ರವರಿ 9ರಂದು “ವಿಶ್ವ

ಮಾರ್ಚ್ 26 – ವಿಶ್ವ ಅಪಸ್ಮಾರ ಜಾಗೃತಿ ದಿನ Read More »

ಆರೋಗ್ಯ ಮಾಹಿತಿ

ವಿಶ್ವ ಕ್ಷಯ ರೋಗ ದಿನ – ಮಾರ್ಚ್ 24

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಮಾ.24. ವಿಶ್ವದಾದ್ಯಂತ ಮಾರ್ಚ್ 24 ರಂದು “ವಿಶ್ವ ಕ್ಷಯ ರೋಗ ದಿನ” ಎಂದು ಆಚರಿಸಲಾಗುತ್ತಿದೆ. ಕ್ಷಯ ರೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಆಚರಣೆಯನ್ನು ವಿಶ್ವ ಸಂಸ್ಥೆ 1982ರಿಂದ ಜಾರಿಗೆ ತಂದಿತು. ಪ್ರತಿ ವರ್ಷ ಯಾವುದಾದರೊಂದು ಧ್ಯೇಯ ಇಟ್ಟುಕೊಂಡು ಈ ಆಚರಣೆ ಮಾಡಲಾಗುತ್ತಿದ್ದು, 2014ರಲ್ಲಿ ಮೂರು ಮಿಲಿಯನ್ ಕ್ಷಯ ರೋಗಿಗಳನ್ನು ತಲುಪುವ ಧ್ಯೇಯವನ್ನು ಹೊಂದಿತ್ತು ಪ್ರತಿ ವರ್ಷ ಸುಮಾರು 9 ಮಿಲಿಯನ್ ಮಂದಿ ವಿಶ್ವದಾದ್ಯಂತ ಈ ರೋಗಕ್ಕೆ ತುತ್ತಾಗುತ್ತಿದ್ದು,

ವಿಶ್ವ ಕ್ಷಯ ರೋಗ ದಿನ – ಮಾರ್ಚ್ 24 Read More »

ಆರೋಗ್ಯ ಮಾಹಿತಿ

ಇಂದು(ಮಾರ್ಚ್ 20) ವಿಶ್ವ ಬಾಯಿ ಆರೋಗ್ಯ ದಿನ ► ಡಾ| ಮುರಲೀ ಮೋಹನ್ ಚೂಂತಾರು ರವರ ವಿಶೇಷ ಲೇಖನ

(ನ್ಯೂಸ್ ಕಡಬ) newskadaba.com ಮಾ.20. ಪ್ರತಿ ವರ್ಷ ಮಾರ್ಚ್ 20ರಂದು “ವಿಶ್ವ ಬಾಯಿಯ ಆರೋಗ್ಯ ದಿನ” ಎಂದು ಆಚರಿಸಲಾಗುತ್ತಿದ್ದು, ಬಾಯಿಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು, ಬಾಯಿಯ ಆರೋಗ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಧನಾತ್ಮಕವಾದ ವಿಚಾರಧಾರೆಗಳನ್ನು ಮೂಡಿಸಲು ಮತ್ತು ಬಾಯಿಯ ಆರೋಗ್ಯದಿಂದ, ದೇಹದ ಆರೋಗ್ಯದ ಮತ್ತು ವ್ಯಕ್ತಿಯ ವ್ಯಕ್ತಿತ್ವದ ಮೇಲಾಗುವ ಪರಿಣಾಮಗಳ ಬಗ್ಗೆ ಹೊಸ ಚಿಂತನೆಗಳನ್ನು ಮೂಡಿಸುವ ಸಮದ್ದೇಶವನ್ನು ಈ ಆಚರಣೆ ಹೊಂದಿದೆ. ಈ ಆಚರಣೆ 2007ರಲ್ಲಿ FDI (ಅಂತರಾಷ್ಟ್ರೀಯ ದಂತ ಸಂಘ) ಆಚರಣೆಗೆ ತಂದಿತು. FDI ಇದರ ಜನಕರಾದ

ಇಂದು(ಮಾರ್ಚ್ 20) ವಿಶ್ವ ಬಾಯಿ ಆರೋಗ್ಯ ದಿನ ► ಡಾ| ಮುರಲೀ ಮೋಹನ್ ಚೂಂತಾರು ರವರ ವಿಶೇಷ ಲೇಖನ Read More »

ಆರೋಗ್ಯ ಮಾಹಿತಿ

ಡೆಕ್ಸಾ ಸ್ಕ್ಯಾನಿಂಗ್ ಎಂದರೇನು? ► ಡಾ|| ಮುರಲೀ ಮೋಹನ್ ಚೂಂತಾರುರವರ ವಿಶೇಷ ಲೇಖನ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಮಾ.19. ನಮ್ಮ ದೇಹದ ಮೂಳೆಗಳು ಬಹಳ ಶಕ್ತಿಶಾಲಿಯಾದ ಅಂಗವಾಗಿದೆ. ದೇಹದ ಚಲನೆಗೆ ಬೇಕಾದ ಭದ್ರತೆಯನ್ನು ನೀಡುವುದು ಈ ಎಲುಬುಗಳೇ ಆಗಿರುತ್ತದೆ. ಈ ಎಲುಬುಗಳು ಸಾಮಾನ್ಯವಾಗಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಕೋಲ್ಯಾಜನ್ ಮುಂತಾದವುಗಳಿಂದ ಮಾಡಲ್ಪಟ್ಟಿದೆ. ಸಣ್ಣ ಮಕ್ಕಳಲ್ಲಿ ಎಲುಬು ಬಹಳ ಮೃದುವಾಗಿರುತ್ತದೆ ಮತ್ತು ಕೊಲ್ಯಾಜನ್ ಅಂಶ ಜಾಸ್ತಿ ಇರುತ್ತದೆ. ಮತ್ತು ಬಹಳ ಬೇಗ ಮುರಿಯುದಿಲ್ಲ. ಎಲುಬು ಬೆಂಡಾಗುತ್ತದೆಯೇ (ಬಾಗುವುದು) ಹೊರತು ತುಂಡಾಗುವ ಸಾಧ್ಯತೆ ಕಡಮೆ ಇರುತ್ತದೆ. ವಯಸ್ಸಾದಂತೆಲ್ಲಾ ಎಲುಬಿನ ಸಾಂದ್ರತೆ ಹೆಚ್ಚುತ್ತಲೇ ಹೋಗುತ್ತದೆ.

ಡೆಕ್ಸಾ ಸ್ಕ್ಯಾನಿಂಗ್ ಎಂದರೇನು? ► ಡಾ|| ಮುರಲೀ ಮೋಹನ್ ಚೂಂತಾರುರವರ ವಿಶೇಷ ಲೇಖನ Read More »

ಆರೋಗ್ಯ ಮಾಹಿತಿ
Scroll to Top