ರಾಷ್ಟ್ರೀಯ ನ್ಯೂಸ್

ಇನ್ಮುಂದೆ ಮದ್ಯ ಖರೀದಿಗೆ ಬೇಕು ಆಧಾರ್ ಕಾರ್ಡ್: ಸುಪ್ರೀಂನಿಂದ ಕೇಂದ್ರಕ್ಕೆ ನೋಟಿಸ್

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 12. ಇನ್ನು ಮುಂದೆ ಅಲ್ಕೋಹಾಲ್ ಇರುವ ಯಾವುದೇ ಕಡೆ ಹೋದರು ಜೇಬಲ್ಲಿ ಆಧಾರ್ ಕಾರ್ಡ್ ಇಟ್ಟುಕೊಳ್ಳಬೇಕಾಗಬಹುದು.  ಎಷ್ಟೇ ದುಡ್ಡಿದ್ದರೂ ಆಧಾರ್ ಕಾರ್ಡ್ ಇಲ್ಲ ಎಂದರೆ ಮದ್ಯ ಸಿಗುವುದು ಕಷ್ಟವಾಗಲಿದೆ. ಯಾಕಂದ್ರೆ ಸುಪ್ರೀಂ ಕೋರ್ಟ್ ಮದ್ಯ ಖರೀದಿ, ಕುಡಿಯುವ ವಯಸ್ಸಿನ ಕುರಿತ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇದೀಗ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಮದ್ಯ ಖರೀದಿಗೆ ವಯಸ್ಸು ದೃಢೀಕರಣ ಅತ್ಯಗತ್ಯ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಮದ್ಯ ಸೇವೆಸಿ […]

ಇನ್ಮುಂದೆ ಮದ್ಯ ಖರೀದಿಗೆ ಬೇಕು ಆಧಾರ್ ಕಾರ್ಡ್: ಸುಪ್ರೀಂನಿಂದ ಕೇಂದ್ರಕ್ಕೆ ನೋಟಿಸ್ Read More »

ರಾಷ್ಟ್ರೀಯ ನ್ಯೂಸ್

ದೇಶಕ್ಕೆ ಬರುವ ಬೆದರಿಕೆಗಳ ವಿರುದ್ದ ಸರ್ಕಾರ ಕ್ರಮ-ರಾಜನಾಥ್ ಸಿಂಗ್

(ನ್ಯೂಸ್ ಕಡಬ) newskadaba.com, ನ. 12. ದೇಶಕ್ಕೆ ಬರುವಂತಹ ಸಮಕಾಲೀನ ಬೆದರಿಕೆಗಳನ್ನು ನಿಭಾಯಿಸುವ ಸಲುವಾಗಿ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಇಂದು ದೆಹಲಿ ರಕ್ಷಣಾ ಮಾತುಕತೆ- 2024ರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶೀಯ ರಕ್ಷಣಾ ಸಾಮರ್ಥ್ಯಕ್ಕೆ ಒತ್ತು ನೀಡಿ, ಬಾಹ್ಯ ಬೆದರಿಕೆಗಳ ವಿರುದ್ಧವೂ ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ. ಭಾರತ ಮಾತ್ರವಲ್ಲದೆ, ಅನೇಕ ದೇಶಗಳು ವಿವಿಧ ರೂಪದ ಭದ್ರತಾ ಸವಾಲುಗಳನ್ನು ಎದುರಿಸುತ್ತಿವೆ. ಈ ಹಿಂದೆ ಗಡಿ ಸಂಬಂಧಿತ ಬೆದರಿಕೆಗಳು ಪ್ರಮುಖವಾಗಿದ್ದವು.

ದೇಶಕ್ಕೆ ಬರುವ ಬೆದರಿಕೆಗಳ ವಿರುದ್ದ ಸರ್ಕಾರ ಕ್ರಮ-ರಾಜನಾಥ್ ಸಿಂಗ್ Read More »

ರಾಷ್ಟ್ರೀಯ ನ್ಯೂಸ್

ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡಲು ಭಾರತದ ಏಕತೆ ಮುಖ್ಯವಾಗಿದೆ: ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com ನ. 09.ಅಹಮದಬಾದ್: ಕೆಲವರು ತಮ್ಮ ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಅವುಗಳನ್ನು ಸೋಲಿಸಬೇಕಾಗಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಏಕತೆ ಮತ್ತು ಸಮಗ್ರತೆಯ ಅಗತ್ಯವನ್ನು ಒತ್ತಿ ಹೇಳಿದರು. ನಿಮಿತ್ತ ಗುಜರಾತ್‌ನ ಖೇಡಾ ಜಿಲ್ಲೆಯ ವಡ್ತಾಲ್‌ನಲ್ಲಿ ಶ್ರೀ ಸ್ವಾಮಿನಾರಾಯಣ ದೇವಸ್ಥಾನದ 200ನೇ ವಾರ್ಷಿಕೋತ್ಸವ ಪ್ರಯುಕ್ತ ಭಕ್ತ ಸಮೂಹವನ್ನು ವರ್ಚುವಲ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, 2047 ರ ವೇಳೆಗೆ ಭಾರತವನ್ನು

ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡಲು ಭಾರತದ ಏಕತೆ ಮುಖ್ಯವಾಗಿದೆ: ಪ್ರಧಾನಿ ಮೋದಿ Read More »

ರಾಷ್ಟ್ರೀಯ ನ್ಯೂಸ್

ಇಂದು ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ಸಂಜೀವ್ ಖನ್ನಾ ಪ್ರಮಾಣವಚನ ಸ್ವೀಕಾರ

(ನ್ಯೂಸ್ ಕಡಬ) newskadaba.com ನ. 09.ನವದೆಹಲಿ: ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ಸಂಜೀವ್ ಖನ್ನಾ ರವರು ಇಂದು (ಸೋಮವಾರ)ಬೆಳಿಗ್ಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ದ್ರೌಪದಿ ಮುರ್ಮುರವರು ನ್ಯಾಯಮೂರ್ತಿ ಸಂಜೀವ್ ಖನ್ನಾರವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ನವೆಂಬರ್ 10ರಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಹುದ್ದೆಯಿಂದ ನಿವೃತ್ತರಾಗಿದ್ದರು. ನ್ಯಾಯಮೂರ್ತಿ ಸಂಜೀವ್ ಖನ್ನಾ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಆರು ತಿಂಗಳ ಅವಧಿಗೆ ಸೇವೆ ಸಲ್ಲಿಸಿದ್ದಾರೆ.

ಇಂದು ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ಸಂಜೀವ್ ಖನ್ನಾ ಪ್ರಮಾಣವಚನ ಸ್ವೀಕಾರ Read More »

ರಾಷ್ಟ್ರೀಯ ನ್ಯೂಸ್

ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ- ಸಿಜೆಐ ಚಂದ್ರಚೂಡ್

(ನ್ಯೂಸ್ ಕಡಬ) newskadaba.com ನ. 09. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತರಾದ ಸಿಜೆಐ ಚಂದ್ರಚೂಡ್ ಅವರು, ‘ನನ್ನಿಂದ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆ ಇರಲಿ’ ಎಂದು ಕೇಳಿಕೊಂಡಿದ್ದಾರೆ. ಈ ಕುರಿತು ಶುಕ್ರವಾರದಂದು ಕೋರ್ಟ್ ಹಾಲ್‌ ನಲ್ಲಿ ಮಾತನಾಡಿದ ಅವರು, ನ್ಯಾಯಾಲಯವೇ ನನ್ನನ್ನು ಮುಂದುವರೆಸುತ್ತದೆ. ನಮ್ಮ ಅರಿವಿಗೆ ಬಾರದಂತೆ ಎಷ್ಟೋ ಜನರನ್ನು ಭೇಟಿಯಾಗಿರುತ್ತೇವೆ. ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನನ್ನಿಂದ ತಪ್ಪಾಗಿದ್ದರೆ ಅಥವಾ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ತಿಳಿಸಿದ್ದಾರೆ.

ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ- ಸಿಜೆಐ ಚಂದ್ರಚೂಡ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಶ್ವದ ಯಾವ ಶಕ್ತಿಯೂ ಜಮ್ಮು ಕಾಶ್ಮೀರದ 370ನೇ ವಿಧಿ ವಾಪಾಸ್ ತರಲಾಗದು: ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com , ಸಾಂಗ್ಲಿ, ನ. 09.: ಜಗತ್ತಿನ ಯಾವ ಶಕ್ತಿಯೂ ಸಹ  ಜಮ್ಮು ಮತ್ತು ಕಾಶ್ಮೀರಕ್ಕೆ ಪುನಃ ಸಂವಿಧಾನದ 370ನೇ ವಿಧಿಯಡಿ ವಿಶೇಷ ಸ್ಥಾನಮಾನವನ್ನು ಮರಳಿ ತರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇರಲಿ, ಅವರ ಮುಂದಿನ 4 ತಲೆಮಾರಿಗೂ 370ನೇ ವಿಧಿ ಮರು ಜಾರಿ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಅಬ್ಬರಿಸಿದ್ದಾರೆ. ವಿಶೇಷ ಸ್ಥಾನಮಾನದ ಕುರಿತು ಅಧಿವೇಶನದಲ್ಲಿ ತೀವ್ರ

ವಿಶ್ವದ ಯಾವ ಶಕ್ತಿಯೂ ಜಮ್ಮು ಕಾಶ್ಮೀರದ 370ನೇ ವಿಧಿ ವಾಪಾಸ್ ತರಲಾಗದು: ಪ್ರಧಾನಿ ಮೋದಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಟ್ರಂಪ್‌, ಕಮಲಾ ಹ್ಯಾರಿಸ್‌ ಗೆ ಪತ್ರ ಬರೆದ ರಾಹುಲ್‌ ಗಾಂಧಿ

(ನ್ಯೂಸ್ ಕಡಬ) newskadaba.com ನವದೆಹಲಿ, ನ. 08. ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್‌ ಟ್ರಂಪ್‌ ಮತ್ತು ಚುನಾವಣೆಯಲ್ಲಿ ಪರಾಜಯಗೊಂಡ ಕಮಲಾ ಹ್ಯಾರಿಸ್‌ ಇಬ್ಬರಿಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪತ್ರ ಬರೆದಿದ್ದಾರೆ. ‘ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಿಮಗೆ ಅಭಿನಂದನೆಗಳು. ಭಾರತೀಯರು ಮತ್ತು ಅಮೆರಿಕನ್ನರಿಗೆ ಅವಕಾಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ನಾನು ಭಾವಿಸುತ್ತೇನೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಅಧ್ಯಕ್ಷರಾಗಿ ನಿಮ್ಮ ಎರಡನೇ ಅವಧಿಗೆ ನಾನು ನಿಮಗೆ ಶುಭ ಹಾರೈಸುತ್ತೇನೆ’ ಎಂದು

ಟ್ರಂಪ್‌, ಕಮಲಾ ಹ್ಯಾರಿಸ್‌ ಗೆ ಪತ್ರ ಬರೆದ ರಾಹುಲ್‌ ಗಾಂಧಿ Read More »

ರಾಷ್ಟ್ರೀಯ ನ್ಯೂಸ್

“ಅಂತರ ಕಾಯ್ದಿರಿಸಿ- EMI ಬಾಕಿ ಇದೆ”- ಕಾರಿನ ಹಿಂಬದಿ ಬರಹ ವೈರಲ್

(ನ್ಯೂಸ್ ಕಡಬ) newskadaba.com ನ. 07. ಸ್ವಿಫ್ಟ್ ಕಾರೊಂದರ ಹಿಂಭಾಗದಲ್ಲಿ “ಅಂತರವನ್ನು ಕಾಯ್ದುಕೊಳ್ಳಿ, EMI ಇನ್ನೂ ಬಾಕಿ ಇದೆ” ಎಂದು ಬರೆದಿರುವ ಸಾಲುಗಳು ಸದ್ಯ @HasnaMatBhai ಎಂಬ ಟ್ವಿಟರ್ ಖಾತೆಯಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿರುವ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ವಿವಿಧ ವಾಹನಗಳ ಹಿಂಬದಿಯಲ್ಲಿ ಬರೆದಿರುವ ಸಾಲುಗಳು ಸಾಕಷ್ಟು ವೈರಲ್​ ಆಗುತ್ತಿರುತ್ತವೆ. ಇದೀಗ ಅಂತದ್ದೇ ಮತ್ತೊಂದು ಸಾಲು ನೆಟ್ಟಿಗರ ಗಮನ ಸೆಳೆದಿದೆ. ‘ಅಂತರವನ್ನು ಕಾಯ್ದುಕೊಳ್ಳಿ, EMI ಇನ್ನೂ ಬಾಕಿ ಇದೆ’ ಎಂದು ಸ್ವಿಫ್ಟ್ ಕಾರೊಂದರ ಹಿಂಭಾಗದಲ್ಲಿ

“ಅಂತರ ಕಾಯ್ದಿರಿಸಿ- EMI ಬಾಕಿ ಇದೆ”- ಕಾರಿನ ಹಿಂಬದಿ ಬರಹ ವೈರಲ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪರಿಹಾರ ಯೋಜನೆ ವಿಫಲ – ಜೆಟ್ ಏರ್ವೇಸ್ ಮುಚ್ಚಲು ಸುಪ್ರೀಂ ಕೋರ್ಟ್ ಆದೇಶ

(ನ್ಯೂಸ್ ಕಡಬ) newskadaba.com ನ. 07. ಕಳೆದ ಐದು ವರ್ಷಗಳ ಅವಧಿಯಲ್ಲಿ ಜೆಟ್ ಏರ್‌ವೇಸ್ ನ ಪರಿಹಾರ ಯೋಜನೆಯನ್ನು ಕಾರ್ಯಗತಗೊಳಿಸಲು ವಿಫಲವಾದ ಹಿನ್ನೆಲೆ ಜೆಟ್ ಏರ್ ವೇಸ್ ನ್ನು ಮಿಚ್ಚಲು ಸುಪ್ರೀಂ ಕೋರ್ಟ್ ಗುರುವಾರದಂದು ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್ ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ತನ್ನ ಅಸಾಧಾರಣ ಅಧಿಕಾರವನ್ನು ಬಳಸಿಕೊಂಡಿತ್ತು. ಪರಿಹಾರ ಯೋಜನೆಗೆ ಅನುಗಿಣವಾಗಿ ಸಂಪೂರ್ಣ ಪಾವತಿ ಮಾಡದೇ ಜೆಟ್ ಏರ್ ವೇಸ್ ನ ಮಾಲೀಕತ್ವವನ್ನು ಯಶಸ್ವಿ ಪರಿಹಾರ ಅರ್ಜಿದಾರರಿಗೆ ವರ್ಗಾಯಿಸಲು ಅನುಮತಿ ನೀಡಿದ ಎನ್ಸಿಎಲ್‌ಎಟಿ

ಪರಿಹಾರ ಯೋಜನೆ ವಿಫಲ – ಜೆಟ್ ಏರ್ವೇಸ್ ಮುಚ್ಚಲು ಸುಪ್ರೀಂ ಕೋರ್ಟ್ ಆದೇಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಲ್ಮಾನ್ ಖಾನ್ ನಂತರ ಶಾರೂಕ್ ಖಾನ್ ಗೆ ಜೀವ ಬೆದರಿಕೆ..!

(ನ್ಯೂಸ್ ಕಡಬ) newskadaba.com ನ. 07. ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಬೆದರಿಕೆ ಕರೆ ಬಂದಿರುವ ಬೆನ್ನಲ್ಲೇ ಇದೀಗ ಮತ್ತೊಂದು ಬಾಲಿವುಡ್ ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಅವರಿಗೆ ಕೊಲೆ ಬೆದರಿಕೆ ಬಂದಿದೆ ಎಂದು ಮುಂಬೈನ ಬಾಂದ್ರಾ ಪೊಲೀಸರು ತಿಳಿಸಿದ್ದಾರೆ. ಛತ್ತೀಸ್ ಗಡದ ರಾಯ್ ಪುರದ ಫೈಜಾನ್ ಎಂಬ ವ್ಯಕ್ತಿಯ ಹೆಸರಿನಲ್ಲಿ ನೋಂದಾಯಿಸಲಾದ ಸಂಖ್ಯೆಯಿಂದ ಬೆದರಿಕೆ ಬಂದಿರುವುದಾಗಿ ತಿಳಿದುಬಂದಿದೆ. ಈ ಕುರಿತು ಶಾರುಖ್ ಖಾನ್ ತಂಡವು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಸಲ್ಮಾನ್ ಖಾನ್ ನಂತರ ಶಾರೂಕ್ ಖಾನ್ ಗೆ ಜೀವ ಬೆದರಿಕೆ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top