ರಾಷ್ಟ್ರೀಯ ನ್ಯೂಸ್

ಬಾಬರಿ ಮಸೀದಿ ಸಂಬಂಧ ಕರಾಳ‌ ದಿನ ಹಾಗೂ ವಿಜಯೋತ್ಸವ ಆಚರಣೆಗೆ ನಿಷೇಧ ► ಇಂದು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.06. ಡಿಸೆಂಬರ್ 6 ರಂದು ಬಾಬರಿ ಮಸೀದಿಯ ಕುರಿತಾದ ಕರಾಳ ದಿನ ಹಾಗೂ ವಿಜಯೋತ್ಸವ ಆಚರಣೆಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ಪೊಲೀಸ್ ಕಾಯಿದೆ ಕಲಂ 35 ರಂತೆ ಡಿಸೆಂಬರ್ 6 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ […]

ಬಾಬರಿ ಮಸೀದಿ ಸಂಬಂಧ ಕರಾಳ‌ ದಿನ ಹಾಗೂ ವಿಜಯೋತ್ಸವ ಆಚರಣೆಗೆ ನಿಷೇಧ ► ಇಂದು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ Read More »

ರಾಷ್ಟ್ರೀಯ ನ್ಯೂಸ್

ಐಕ್ಯತೆ ಬಯಸಿ ಒಂದಾಗುವತ್ತ ಹೆಜ್ಜೆ ಹಾಕಿರುವ ಸುನ್ನೀ ಮುಸ್ಲಿಂ ಸಂಘಟನೆಗಳು ► SKSSF ಮತ್ತು SSF ಸಂಘಟನೆಗಳ ಪ್ರಮುಖರಿಂದ ಮಹತ್ವದ ಸಭೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.04. ಐಕ್ಯತೆ ಬಯಸಿ ಒಂದಾಗುವತ್ತ ಹೆಜ್ಜೆ ಹಾಕಿರುವ ಮುಸ್ಲಿಂ ಸುನ್ನೀ ಸಂಘಟನೆಗಳು ಇಂದು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿತು. ಒಂದೇ ತತ್ವಾದರ್ಶಗಳೊಂದಿಗೆ ಗುರುತಿಸಿಕೊಂಡಿರುವ ಮುಸ್ಲಿಂ ಸುನ್ನಿ ಸಂಘಟನೆಗಳಾದ SSF ಮತ್ತು SKSSF ಮುಖಂಡರ ಮಹತ್ವದ ಸಭೆಯಲ್ಲಿ ಸಮುದಾಯದ ಸಮಸ್ಯೆಗಳ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಗಂಭೀರ ಚರ್ಚೆ ನಡೆದಿದೆಯೆನ್ನಲಾಗಿದ್ದು, ಈ ಸಭೆಯಲ್ಲಿ ಎಪಿ ಮತ್ತು ಇಕೆ ಬಣದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು. ಸಭೆಯ ಬಗ್ಗೆ ಗೌಪ್ಯತೆ ಕಾಪಾಡಿಕೊಂಡ ಉಭಯ ಸಂಘಟನೆಗಳ ನಾಯಕರು

ಐಕ್ಯತೆ ಬಯಸಿ ಒಂದಾಗುವತ್ತ ಹೆಜ್ಜೆ ಹಾಕಿರುವ ಸುನ್ನೀ ಮುಸ್ಲಿಂ ಸಂಘಟನೆಗಳು ► SKSSF ಮತ್ತು SSF ಸಂಘಟನೆಗಳ ಪ್ರಮುಖರಿಂದ ಮಹತ್ವದ ಸಭೆ Read More »

ರಾಷ್ಟ್ರೀಯ ನ್ಯೂಸ್

‘ಓಖೀ’ ಚಂಡಮಾರುತಕ್ಕೆ ತುತ್ತಾದ ಹಲವರು ಸಂಕಷ್ಟದಲ್ಲಿ ► ಮಂಗಳೂರಿನಿಂದ ಹೊರಟಿದ್ದ ಎರಡು ಹಡಗುಗಳು ಮುಳುಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.01. ಮಂಗಳೂರಿನಿಂದ ಲಕ್ಷ ದ್ವೀಪಕ್ಕೆ ಹೊರಟಿದ್ದ ಸರಕು ಸಾಗಾಟದ ಎರಡು ಹಡಗುಗಳ ಪೈಕಿ ಒಂದು ಸಣ್ಣ ಹಡಗು ಅರಬ್ಬಿ ಸಮುದ್ರದಲ್ಲಿ ಸಂಪೂರ್ಣ ಮುಳುಗಡೆಯಾಗಿದ್ದು, ಇನ್ನೊಂದು ಭಾಗಶಃ ಮುಳುಗಡೆಯಾಗಿದ ಘಟನೆ ಶುಕ್ರವಾರದಂದು ನಡೆದಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ಓಖೀ ಚಂಡಮಾರುತದಿಂದಾಗಿ ಇದೀಗ ಕರವತ್ತಿ ದ್ವೀಪದಲ್ಲಿ ಸಂಚರಿಸುತ್ತಿದ್ದ ಸರಕು ಸಾಗಾಟದ ಹಡಗುಗಳು ಮುಳುಗಡೆಯಾಗಿವೆ‌. ಘಟನೆಯಲ್ಲಿ ಎರಡೂ ಹಡಗುಗಳಲ್ಲಿರುವ ಸುಮಾರು 15 ಮಂದಿ ಅಪಾಯದಲ್ಲಿದ್ದು, ಐವರನ್ನು ರಕ್ಷಿಸಲಾಗಿದೆ. ಮುಳುಗಡೆಗೊಂಡಿರುವ ಹಡಗಿನಲ್ಲಿದ್ದ ಸಿಬ್ಬಂದಿಗಳ ಪೈಕಿ

‘ಓಖೀ’ ಚಂಡಮಾರುತಕ್ಕೆ ತುತ್ತಾದ ಹಲವರು ಸಂಕಷ್ಟದಲ್ಲಿ ► ಮಂಗಳೂರಿನಿಂದ ಹೊರಟಿದ್ದ ಎರಡು ಹಡಗುಗಳು ಮುಳುಗಡೆ Read More »

ರಾಷ್ಟ್ರೀಯ ನ್ಯೂಸ್

ತಮಿಳುನಾಡು, ಕೇರಳದಲ್ಲಿ ಚಂಡಮಾರುತದ ಆರ್ಭಟಕ್ಕೆ 8 ಬಲಿ ► ‘ಓಖೀ’ ಚಂಡಮಾರುತ ಕರಾವಳಿಗೂ ಅಪ್ಪಳಿಸುವ ಭೀತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.01. ಕೇರಳ ಹಾಗೂ ತಮಿಳುನಾಡಿನಲ್ಲಿ ರುದ್ರ ನರ್ತನ ತೋರಿದ ‘ಓಖೀ’ ಚಂಡಮಾರುತವು ಇದೀಗ ಕರ್ನಾಟಕದ ಕರಾವಳಿಗೆ‌ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ. ಚಂಡಮಾರುತದ ಪ್ರಭಾವದಿಂದಾಗಿ ಕೇರಳದಲ್ಲಿ ಸುರಿದ ಭಾರೀ ಮಳೆಯು 8 ಮಂದಿಯನ್ನು ಈಗಾಗಲೇ ಬಲಿ ತೆಗೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ‌. ಕೇರಳದ ಬಹು ಭಾಗದಲ್ಲಿ ತನ್ನ ರುದ್ರ ನರ್ತನವನ್ನು ತೋರಿದ ‘ಓಖೀ’ ಚಂಡಮಾರುತವು ಕರ್ನಾಟಕದ ಕರಾವಳಿಯನ್ನೂ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ. ಅರಬ್ಬೀ ಸಮುದ್ರ ಮೂಲಕ ಹಾದು ಹೋಗಲಿರುವ ಓಖೀ ಚಂಡಮಾರುತದ ಪ್ರಭಾವವು ಇಡೀ

ತಮಿಳುನಾಡು, ಕೇರಳದಲ್ಲಿ ಚಂಡಮಾರುತದ ಆರ್ಭಟಕ್ಕೆ 8 ಬಲಿ ► ‘ಓಖೀ’ ಚಂಡಮಾರುತ ಕರಾವಳಿಗೂ ಅಪ್ಪಳಿಸುವ ಭೀತಿ Read More »

ರಾಷ್ಟ್ರೀಯ ನ್ಯೂಸ್

ದಿನಗೂಲಿ ಕೆಲಸ ಮಾಡಿ ತಂದೆಯಿಲ್ಲದ ತಬ್ಬಲಿಗಳನ್ನು ಐಎಎಸ್ ಮಾಡಿಸಿದ ತಾಯಿ ► ಬಡತನದ ಮಧ್ಯೆಯೂ ಐಎಎಸ್ ಪಾಸ್ ಮಾಡಿದ ಮೂವರು ಸಹೋದರಿಯರು

(ನ್ಯೂಸ್ ಕಡಬ) newskadaba.com ಕಡಬ, ನ.27. ತಂದೆ ಇಲ್ಲದೆ ತಬ್ಬಲಿಯಾದ ಮೂವರು ಹೆಣ್ಣು ಮಕ್ಕಳನ್ನು ಬಡತನದ ಬೇಗುದಿಯ ಮಧ್ಯೆಯೂ ಸಮಾಜದ ಮುಖ್ಯವಾಹಿನಿಗೆ ಕರೆತಂದು ಅತ್ಯುನ್ನತ ಪದವಿಯಾದ ಐಎಎಸ್ ಕಲಿಸಿ ಹೆತ್ತ ತಾಯಿಯೋರ್ವಳು ದೇಶಕ್ಕೆ ಮಾದರಿಯಾಗಿದ್ದಾರೆ. ಇದು ದೇಶದಲ್ಲೇ ಬಲು ಅಪರೂಪದ ಘಟನೆ ಎಂದು ತಿಳಿಯಬಹುದಾಗಿದ್ದು, ತನ್ನ ಮೂವರು ಹೆಣ್ಣು ಮಕ್ಕಳನ್ನು ಕೂಲಿ ಕೆಲಸ ಮಾಡುತ್ತಲೇ ಈ ತಾಯಿ ಉನ್ನತ ಅಧಿಕಾರಿಗಳನ್ನಾಗಿ ಮಾಡಿದ್ದಾರೆ. ರಾಜಸ್ಥಾನದಿಂದ ಸಿವಿಲ್ ಸರ್ವಿಸಸ್ ಗೆ ಮೂವರು ಸಹೋದರಿಯರು ಆಯ್ಕೆಯಾಗಿದ್ದಾರೆ. ಅವರೇ ಕಮಲ, ಗೀತ, ಮಮತಾ.

ದಿನಗೂಲಿ ಕೆಲಸ ಮಾಡಿ ತಂದೆಯಿಲ್ಲದ ತಬ್ಬಲಿಗಳನ್ನು ಐಎಎಸ್ ಮಾಡಿಸಿದ ತಾಯಿ ► ಬಡತನದ ಮಧ್ಯೆಯೂ ಐಎಎಸ್ ಪಾಸ್ ಮಾಡಿದ ಮೂವರು ಸಹೋದರಿಯರು Read More »

ರಾಷ್ಟ್ರೀಯ ನ್ಯೂಸ್

ಕೇಂದ್ರ ಸಚಿವರಿಗಾಗಿ ಕಾದು ತಡವಾಗಿ ಹೊರಟ ವಿಮಾನ ► ಸಚಿವರನ್ನು ತರಾಟೆಗೆ ತೆಗೆದುಕೊಂಡ ವೈದ್ಯೆ

(ನ್ಯೂಸ್ ಕಡಬ) newskadaba.com ನವದೆಹಲಿ, ನ.22. ಕೇಂದ್ರ ಸಚಿವ ಸಂಪುಟದಲ್ಲಿ ಪ್ರವಾಸೋದ್ಯಮ ಖಾತೆ ಸಚಿವ ಮತ್ತು ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವರಾಗಿರುವ ಅಲ್ಫೋನ್ಸ್ ಕಣ್ಣಂತಾನಂ ಅವರನ್ನು ವಿಮಾನ ನಿಲ್ದಾಣದಲ್ಲಿ ವೈದ್ಯೆಯೊಬ್ಬರು ತರಾಟೆಗೆ ತೆಗೆದುಕೊಂಡ ಘಟನೆಯ ವೀಡಿಯೋ ಇದೀಗ ವೈರಲ್ ಆಗಿದೆ. ಸಚಿವರು ಬರುತ್ತಾರೆಂಬ ಕಾರಣಕ್ಕಾಗಿ ಇಂಪಾಲ್ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ವಿಮಾನದ ಹಾರಾಟವನ್ನು ಕೆಲ ಕ್ಷಣಗಳ ಕಾಲ ವಿಳಂಬ ಮಾಡಲಾಗಿತ್ತು. ಸಚಿವರಿಗಾಗಿ ವಿಮಾನ ವಿಳಂಬ ಮಾಡಿದ್ದಕ್ಕಾಗಿ ಸಿಡಿಮಿಡಿಗೊಂಡ ವೈದ್ಯೆಯೋರ್ವರು ವಿಮಾನ ನಿಲ್ದಾಣದಲ್ಲೇ ಕಣ್ಣಂತಾನಂ

ಕೇಂದ್ರ ಸಚಿವರಿಗಾಗಿ ಕಾದು ತಡವಾಗಿ ಹೊರಟ ವಿಮಾನ ► ಸಚಿವರನ್ನು ತರಾಟೆಗೆ ತೆಗೆದುಕೊಂಡ ವೈದ್ಯೆ Read More »

ರಾಷ್ಟ್ರೀಯ ನ್ಯೂಸ್

ಕೇಂದ್ರ ಸರಕಾರದ BIS ಗವರ್ನಿಂಗ್ ಬೋರ್ಡ್ ಸದಸ್ಯರಾಗಿ ಯು.ಟಿ.ಖಾದರ್

(ನ್ಯೂಸ್ ಕಡಬ) newskadaba.com ನವದೆಹಲಿ, ನ.21. ರಾಷ್ಟ್ರ ಮಟ್ಟದ ಗುಣಮಟ್ಟ ಮಾಪನ ಸಂಸ್ಥೆಯಾದ ಪ್ರತಿಷ್ಠಿತ BIS (Beauro of Indian Standard) ರಾಷ್ಟ್ರೀಯ ಗವರ್ನಿಂಗ್ ಬೋರ್ಡ್ ಕೌನ್ಸಿಲ್ ಸದಸ್ಯರಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್ ಅವರನ್ನು ಕೇಂದ್ರ ಸರಕಾರ ನೇಮಿಸಿ ಆದೇಶ ಹೊರಡಿಸಿದೆ. ರಾಷ್ಟ್ರಮಟ್ಟದಲ್ಲಿ ಅಧ್ಯಕ್ಷರು ಸೇರಿ ಒಟ್ಟು 6 ಮಂದಿ ಸದಸ್ಯರಿರುವ ಬಿಐಎಸ್ ಸಂಸ್ಥೆಗೆ ದಕ್ಷಿಣ ಭಾರತದಿಂದ ಯು.ಟಿ.ಖಾದರ್ ನೇಮಕರಾಗಿದ್ದಾರೆ. ಕೇಂದ್ರ ಆಹಾರ ಸಚಿವರು ಇದರ ಅಧ್ಯಕ್ಷರಾಗಿದ್ದು, ಉಳಿದಂತೆ ಉತ್ತರ ಭಾರತದ

ಕೇಂದ್ರ ಸರಕಾರದ BIS ಗವರ್ನಿಂಗ್ ಬೋರ್ಡ್ ಸದಸ್ಯರಾಗಿ ಯು.ಟಿ.ಖಾದರ್ Read More »

ರಾಷ್ಟ್ರೀಯ ನ್ಯೂಸ್

ಐನೂರು ವರ್ಷಗಳು ಕಳೆದರೂ ಮಂಗಳೂರು ಮುಳುಗುವುದಿಲ್ಲ ► ಭಾರತದ ವಿಜ್ಞಾನಿಗಳಿಂದ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ‌ನ.20. ಐನೂರು ವರ್ಷಗಳು ಕಳೆದರೂ ಮಂಗಳೂರು ಮುಳುಗುವುದಿಲ್ಲ. ಮಂಗಳೂರು ಸುರಕ್ಷಿತವಾಗಿದ್ದು, ಮಂಗಳೂರಿಗೆ ನೈಸರ್ಗಿಕವಾಗಿ ಯಾವುದೇ ಅಪಾಯವಿರುವುದಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಡಾ. ಸಿ.ಎನ್. ಪ್ರಭು ಹಾಗೂ ಭಾರತೀಯ ಹವಾಮಾನ ಇಲಾಖೆಯ ಮಾಜಿ ನಿರ್ದೇಶಕ, ವಿಜ್ಞಾನಿ ಬಿ.ಪುಟ್ಟಣ್ಣ ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣದೊಂದಿಗೆ ಗುಡುಗು ಸಹಿತ ಮಳೆಯಾದುದರಿಂದ ಮಂಗಳೂರು ಮುಳುಗಡೆಯಾಗುತ್ತದೆ‌ ಎಂಬ ವದಂತಿ ಉಂಟಾದ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದಿನಪತ್ರಿಕೆ ವಿಜಯ ಕರ್ನಾಟಕ

ಐನೂರು ವರ್ಷಗಳು ಕಳೆದರೂ ಮಂಗಳೂರು ಮುಳುಗುವುದಿಲ್ಲ ► ಭಾರತದ ವಿಜ್ಞಾನಿಗಳಿಂದ ಸ್ಪಷ್ಟನೆ Read More »

ರಾಷ್ಟ್ರೀಯ ನ್ಯೂಸ್

ರಿಲಯನ್ಸ್ ಜಿಯೋ ಸೇವಾ ದರವನ್ನು ಏರಿಸಿದ ಹಿನ್ನೆಲೆ ► ಶೀಘ್ರದಲ್ಲೇ ಏರಲಿದೆ ಮೊಬೈಲ್ ಕರೆ ದರಗಳು

(ನ್ಯೂಸ್ ಕಡಬ) newskadaba.com ನವದೆಹಲಿ, ನ.09. ಕಡಿಮೆ ಹಣದಲ್ಲಿ ತಿಂಗಳು ಪೂರ್ತಿ ಇಂಟರ್ನೆಟ್ ಮತ್ತು ಉಚಿತ ಕರೆ ಪಡೆದು ಖುಷಿಯಾಗಿದ್ದ ಮೊಬೈಲ್ ಗ್ರಾಹಕರ ಸಂತೋಷ ಹೆಚ್ಚು ದಿನ ಉಳಿಯುವುದು ಅನುಮಾನವಾಗಿದೆ. ಕಳೆದ ಒಂದು ವರ್ಷದಿಂದ ರೇಸಿಗೆ ಬಿದ್ದಂತೆ ದರ ಇಳಿಸಿದ್ದ ಮೊಬೈಲ್ ನೆಟ್‌ವರ್ಕ್ ಸೇವಾ ಸಂಸ್ಥೆಗಳು, ಇದೀಗ ಬೆಲೆ ಹೆಚ್ಚಿಸುವ ಆಲೋಚನೆಯಲ್ಲಿ ತೊಡಗಿವೆ. ಮೊಬೈಲ್ ನೆಟ್‌ವರ್ಕ್ ಸಂಸ್ಥೆಗಳ ನಡುವೆ ದರ ಸಮರಕ್ಕೆ ನಾಂದಿ ಹಾಡಿದ್ದ ರಿಲಯನ್ಸ್ ಜಿಯೊ ಅಕ್ಟೋಬರ್ ನಲ್ಲಿ ತನ್ನ ಸೇವಾ ದರವನ್ನು 15 ರಿಂದ

ರಿಲಯನ್ಸ್ ಜಿಯೋ ಸೇವಾ ದರವನ್ನು ಏರಿಸಿದ ಹಿನ್ನೆಲೆ ► ಶೀಘ್ರದಲ್ಲೇ ಏರಲಿದೆ ಮೊಬೈಲ್ ಕರೆ ದರಗಳು Read More »

ರಾಷ್ಟ್ರೀಯ ನ್ಯೂಸ್

► ನಾಳೆ(ನ.09) ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳೂರಿಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.08. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ನವೆಂಬರ್ 09 ಗುರುವಾರದಂದು ನಗರಕ್ಕೆ ಆಗಮಿಸಲಿದ್ದಾರೆ. ಬೆಳಿಗ್ಗೆ 8.55 ಗಂಟೆಗೆ ವಿಮಾನದ ಮೂಲಕ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು ವಿವಿಧ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅದೇ ದಿನ ಸಂಜೆ ಗಂಟೆ 6.50 ಕ್ಕೆ ವಿಮಾನದ ಮೂಲಕ ಮುಂಬೈಗೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

► ನಾಳೆ(ನ.09) ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳೂರಿಗೆ Read More »

ರಾಷ್ಟ್ರೀಯ ನ್ಯೂಸ್
Scroll to Top