ರಾಷ್ಟ್ರೀಯ ನ್ಯೂಸ್

ಜನಸಂಖ್ಯೆ ನಿಯಂತ್ರಣಕ್ಕಾಗಿ 2ಕ್ಕಿಂತ ಹೆಚ್ಚು ಮಕ್ಕಳಿದ್ದರೆ ► ಸಿಗೋದಿಲ್ಲ ಈ ಎಲ್ಲಾ ಸೌಲಭ್ಯ

(ನ್ಯೂಸ್ ಕಡಬ) newskadaba.com.ನವದೆಹಲಿ,ಜ.24. ದೇಶದಲ್ಲಿ 2ಕ್ಕಿಂತಲೂ ಹೆಚ್ಚು ಮಕ್ಕಳಿರುವವರಿಗೆ ಮತದಾನದ ಹಕ್ಕು ನೀಡಬಾರದು ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ.  ಅಲ್ಲದೇ ಚುನಾವಣೆ ನಿಲ್ಲುವ ಅವಕಾಶವನ್ನೂ ಕೂಡ ನೀಡಬಾರದು ಎಂದು ಹೇಳಿದ್ದಾರೆ. ಅಲಿಘರ್ ನಲ್ಲಿ ನಡೆದ ಪತಂಜಲಿ ಪರಿಧಾನ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. 2ಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಂಡವರಿಗೆ ಮತದಾನದ ಹಕ್ಕು, ಸರ್ಕಾರಿ ಉದ್ಯೋಗ,  ಸರ್ಕಾರಿ ಆಸ್ಪತ್ರೆ ಸೌಲಭ್ಯ,  ಸರ್ಕಾರಿ ಶಾಲೆ ಬಳಕೆಗೂ ಕೂಡ ಅವಕಾಶ ನೀಡಬಾರದು. ಇದರಿಂದ ಜನಸಂಖ್ಯೆ ನಿಯಂತ್ರಣ ಸಾಧ್ಯ ಎಂದು […]

ಜನಸಂಖ್ಯೆ ನಿಯಂತ್ರಣಕ್ಕಾಗಿ 2ಕ್ಕಿಂತ ಹೆಚ್ಚು ಮಕ್ಕಳಿದ್ದರೆ ► ಸಿಗೋದಿಲ್ಲ ಈ ಎಲ್ಲಾ ಸೌಲಭ್ಯ Read More »

ರಾಷ್ಟ್ರೀಯ ನ್ಯೂಸ್

ಲಿಂಗೈಕ್ಯರಾದ ಕಾಯಕ ಯೋಗಿ ಶ್ರೀ ಶಿವಕುಮಾರ್ ಸ್ವಾಮೀಜಿ ► ನಾಳೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.21. ನಡೆದಾಡುವ ದೇವರೆಂದೇ ಖ್ಯಾತಿಯ ಕಾಯಕ ಯೋಗಿ, ಶತಾಯುಷಿ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ (111) ಸೋಮವಾರದಂದು ನಿಧನರಾಗಿದ್ದು, ಶ್ರೀಗಳ ಗೌರವಾರ್ಥ ಮಂಗಳವಾರದಂದು ರಾಜ್ಯಾದ್ಯಂತ ಸರಕಾರಿ ರಜೆ ಘೋಷಿಸಲಾಗಿದೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಸ್ವಾಮೀಜಿಯವರಿಗೆ ಇತ್ತೀಚೆಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು‌. ಭಾನುವಾರ ರಾತ್ರಿಯಿಂದ ಅವರ ಆರೋಗ್ಯದಲ್ಲಿ ಭಾರೀ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯಿಂದ ಮಠದಲ್ಲೇ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಯಿತಾದರೂ ಸ್ವಾಮೀಜಿ ಕೊನೆಯುಸಿರೆಳೆದಿದ್ದಾರೆ.

ಲಿಂಗೈಕ್ಯರಾದ ಕಾಯಕ ಯೋಗಿ ಶ್ರೀ ಶಿವಕುಮಾರ್ ಸ್ವಾಮೀಜಿ ► ನಾಳೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ರಾಷ್ಟ್ರೀಯ ನ್ಯೂಸ್

ಜನವರಿ 26 ರಂದು ಕಡಬದಲ್ಲಿ ಎಸ್ಕೆಎಸ್ಸೆಸ್ಸೆಫ್ ಮಾನವ ಸರಪಳಿ ► ಇತಿಹಾಸದಲ್ಲೇ ಪ್ರಥಮ ಬಾರಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಕಡಬದಲ್ಲಿ ಆಯೋಜನೆ

(ನ್ಯೂಸ್ ಕಡಬ) newskadaba.com ಕಡಬ, ಜ.16. ರಾಷ್ಟ್ರ ರಕ್ಷಣೆ ಹಾಗೂ ಸೌಹಾರ್ದತೆಯ ಸಂಕಲ್ಪದೊಂದಿಗೆ ದೇಶಾದ್ಯಂತ ಕಾರ್ಯಾಚರಿಸುತ್ತಿರುವ ಎಸ್ಕೆಎಸ್ಸೆಫ್ ವತಿಯಿಂದ ಜಿಲ್ಲಾ ಮಟ್ಟದ ಮಾನವ ಸರಪಳಿ ಹಾಗೂ ಬೃಹತ್ ಸಮಾವೇಶವು ಜನವರಿ 26 ರಂದು ಕಡಬದ ಕಳಾರ ಶಂಸುಲ್ ಉಲಮಾ ನಗರದಲ್ಲಿ ನಡೆಯಲಿದೆ ಎಂದು ಎಸ್ಕೆಎಸ್ಸೆಫ್ ಜಿಲ್ಲಾಧ್ಯಕ್ಷ ಕಾಸೀಂ ದಾರಿಮಿ ಹೇಳಿದರು. ಅವರು ಬುಧವಾರದಂದು ಕಡಬದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜನವರಿ 26ರಂದು ದೇಶಾದ್ಯಂತ 200 ಜಿಲ್ಲೆಗಳಲ್ಲಿ ಮಾನವ ಸರಪಳಿ ಕಾರ್ಯಕ್ರಮ ಹಾಗೂ ಸೌಹಾರ್ದ ಸಮಾವೇಶ

ಜನವರಿ 26 ರಂದು ಕಡಬದಲ್ಲಿ ಎಸ್ಕೆಎಸ್ಸೆಸ್ಸೆಫ್ ಮಾನವ ಸರಪಳಿ ► ಇತಿಹಾಸದಲ್ಲೇ ಪ್ರಥಮ ಬಾರಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಕಡಬದಲ್ಲಿ ಆಯೋಜನೆ Read More »

ರಾಷ್ಟ್ರೀಯ ನ್ಯೂಸ್

ಶಬರಿಮಲೆ ಪ್ರವೇಶಿಸಿ ಮನೆಗೆ ಬಂದ ಕನಕದುರ್ಗಾಗೆ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು► ತೀವ್ರ ಅಸ್ವಸ್ಥ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com.ತಿರುವನಂತಪುರ,ಜ.15.ಅಯ್ಯಪ್ಪ ಭಕ್ತರ ವಿರೋಧದ ನಡುವೆಯೂ ಶಬರಿಮಲೆ ಅಯ್ಯಪ್ಪನ ಸನ್ನಿಧಿಯನ್ನು ಪ್ರವೇಶ ಮಾಡಿದ್ದ ಕನಕದುರ್ಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೆ ಕಾರಣ ಸಂಬಂಧಿಕರೇ ಅವರ ಮೇಲೆ ಮಾಡಿದ ಹಲ್ಲೆ ಎಂದು ತಿಳಿದುಬಂದಿದೆ.ಜ.2ರಂದು ಶಬರಿಮಲೆಗೆ ಪ್ರವೇಶಿಸಿ ಕನಕದುರ್ಗ ದೇಶಾದ್ಯಂತ ಸುದ್ದಿಯಾಗಿದ್ದರು. ನನ್ನ ಹೆಂಡತಿ ನಾಪತ್ತೆಯಾಗಿದ್ದಾಳೆ ಅವರ ಪತಿ ಪೊಲೀಸರಿಗೆ ದೂರು ನೀಡಿದ್ದರು. ಹಲವು ಬೆಳವಣಿಗೆಯ ಹಿನ್ನಲೆಯಲ್ಲಿ ಕನಕದುರ್ಗಾ ಅವರ ಕುಟುಂಬ ‘ನಿನಗೂ ನಮಗೂ ಸಂಬಂಧವಿಲ್ಲ’ ಎಂದು ಆಕೆಯೊಂದಿಗಿನ ಸಂಬಂಧವನ್ನೇ ನಿರಾಕರಿಸಿತ್ತು. ಇನ್ನೊಂದು ಮೂಲದ ಪ್ರಕಾರ ಕನಕದುರ್ಗ ಮೇಲೆ ಆಕೆಯ

ಶಬರಿಮಲೆ ಪ್ರವೇಶಿಸಿ ಮನೆಗೆ ಬಂದ ಕನಕದುರ್ಗಾಗೆ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು► ತೀವ್ರ ಅಸ್ವಸ್ಥ ಆಸ್ಪತ್ರೆಗೆ ದಾಖಲು Read More »

ರಾಷ್ಟ್ರೀಯ ನ್ಯೂಸ್

ನಿಮ್ಮಲ್ಲಿ ಸ್ವಂತ ವಾಹನಗಳಿವೆಯೇ ನೀವು ವಾಹನ ಸವಾರರೇ?► ಏಪ್ರಿಲ್ ತಿಂಗಳಿನಿಂದ ಎಲ್ಲಾ ವಾಹನಗಳಿಗೆ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ

(ನ್ಯೂಸ್ ಕಡಬ) newskadaba.com ನವದೆಹಲಿ,ಜ.15.2019ರ ಏಪ್ರಿಲ್ ತಿಂಗಳಿನಿಂದ ರಸ್ತೆಗಿಳಿಯುವ ಎಲ್ಲಾ ವಾಹನಗಳಿಗೆ ಕಡ್ಡಾಯವಾಗಿ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ ಆಳವಡಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.ಕೇಂದ್ರ ಸರ್ಕಾರ ಬುಧವಾರ ಕೇಂದ್ರೀಯ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದು, ನೂತನ ಅಧಿಸೂಚನೆಯನ್ನು ಹೊರಡಿಸಿದೆ. ಹೀಗಾಗಿ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್‍ಗಳನ್ನು  ಅಳವಡಿಸಬೇಕು. ಅಲ್ಲದೇ ವಾಹನದ ಶುಲ್ಕದಲ್ಲಿಯೇ ಇದನ್ನು ತಯಾರಿಕಾ ಸಂಸ್ಥೆಗಳು ಭರಿಸಬೇಕೆಂದು ಸೂಚಿಸಿದೆ.   ಹೈ-ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್(ಹೆಚ್‍ಎಸ್‍ಆರ್‌ಪಿ)ಗಳನ್ನು ಭದ್ರತೆಯ ದೃಷ್ಟಿಯಿಂದ 2005ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಬಳಿಕ 2012ರಿಂದ

ನಿಮ್ಮಲ್ಲಿ ಸ್ವಂತ ವಾಹನಗಳಿವೆಯೇ ನೀವು ವಾಹನ ಸವಾರರೇ?► ಏಪ್ರಿಲ್ ತಿಂಗಳಿನಿಂದ ಎಲ್ಲಾ ವಾಹನಗಳಿಗೆ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ Read More »

ರಾಷ್ಟ್ರೀಯ ನ್ಯೂಸ್

ಗ್ರಾಹಕರಿಗೆ ತಮಗೆ ಬೇಕಾದ ಚಾನೆಲ್‌ಗಳನ್ನು ಆಯ್ಕೆ ಮಾಡಲು ಅವಕಾಶ ► ಟ್ರಾಯ್‌ನಿಂದ ಮತ್ತೊಂದು ಹೊಸ ನೀತಿ

(ನ್ಯೂಸ್ ಕಡಬ) newskadaba.com ನವದೆಹಲಿ,ಜ.15.ಗ್ರಾಹಕರಿಗೆ ತಾವು ಬೇಕಾದ ಚಾನೆಲ್‌ಗಳನ್ನು ಮಾತ್ರ ಆಯ್ಕೆ ಮಾಡಲು ಅವಕಾಶ ನೀಡುವ ಹೊಸ ಕೇಬಲ್‌ ಮತ್ತು ಡಿಟಿಎಚ್‌ ನೀತಿಯ ಬಗ್ಗೆ ಟ್ರಾಯ್‌ ಮತ್ತೆ ಕೆಲವು ಸ್ಪಷ್ಟೀಕರಣಗಳನ್ನು ನೀಡಿದೆ. ಅದರಂತೆ 150 ರು.ಗೆ 100 ಉಚಿತ/ಪೇ ಚಾನೆಲ್‌ಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದೆ. ತಮಗೆ ಬೇಕಾದ ಚಾನೆಲ್‌ಗಳನ್ನು ಗ್ರಾಹಕರು ಜ.31ರೊಳಗೆ ಆಯ್ಕೆ ಮಾಡಿಕೊಂಡರೆ, ಫೆ.1ರಿಂದ ಹೊಸ ನೀತಿ ಅನ್ವಯ ಯಾವುದೇ ತೊಂದರೆ ಇಲ್ಲ, ಟೀವಿ ವಿಕ್ಷಿಸಬಹುದು ಎಂದು ಹೇಳಿದೆ.  ಗ್ರಾಹಕರು ಡಿಡಿಯ 26 ಚಾನೆಲ್‌  ಉಳಿದ 76

ಗ್ರಾಹಕರಿಗೆ ತಮಗೆ ಬೇಕಾದ ಚಾನೆಲ್‌ಗಳನ್ನು ಆಯ್ಕೆ ಮಾಡಲು ಅವಕಾಶ ► ಟ್ರಾಯ್‌ನಿಂದ ಮತ್ತೊಂದು ಹೊಸ ನೀತಿ Read More »

ರಾಷ್ಟ್ರೀಯ ನ್ಯೂಸ್

ವಾಹನ ಚಾಲಕರಿಗೆ ಕಾದಿದೆ ಬಿಗ್ ಶಾಕ್ ►ವಾಹನಗಳ ಬಣ್ಣ, ಸ್ವರೂಪ ಬದಲಾವಣೆ ಶಿಕ್ಷಾರ್ಹ ಅಪರಾಧ: ‘ಸುಪ್ರೀಂ’ ಆದೇಶ

(ನ್ಯೂಸ್ ಕಡಬ) newskadaba.com.ನವದೆಹಲಿ,ಜ.11. ವಾಹನಗಳನ್ನು ಮನಬಂದಂತೆ ಬದಲಾವಣೆ ಮಾಡುವ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ವಾಹನ ತಯಾರಿಕಾ ಸಂಸ್ಥೆ ನೋಂದಣಿಯಲ್ಲಿ ನಮೂದಿಸಿದ ಮೂಲ ಸೌಲಭ್ಯಗಳಲ್ಲಿನ ಯಾವುದೇ ಅಂಶವೂ ಬದಲಾವಣೆ ಆಗಬಾರದು ಎಂದು ಆದೇಶಿಸಿದೆ.ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ವಿನೀತ್ ಶರಣ್ ಅವರನ್ನೊಳಗೊಂಡ ದ್ವಿಸದಸ್ಯಪೀಠ ಪ್ರಕರಣದ ವಿಚಾರಣೆ ನಡೆಸಿದ್ದು, ಕೇರಳ ಹೈಕೋರ್ಟ್ ನೀಡಿದ ತೀರ್ಪನ್ನು ರದ್ದುಪಡಿಸಿ ಮೋಟಾರು ವಾಹನ ಕಾಯ್ದೆ ಸೆಕ್ಷನ್ 52(1) ಅಡಿ ವಾಹನ ತಯಾರಿಕಾ ಸಂಸ್ಥೆ ನೋಂದಣಿಯಲ್ಲಿ ನಮೂದಿಸಿದ ಮೂಲ ಸೌಲಭ್ಯಗಳು

ವಾಹನ ಚಾಲಕರಿಗೆ ಕಾದಿದೆ ಬಿಗ್ ಶಾಕ್ ►ವಾಹನಗಳ ಬಣ್ಣ, ಸ್ವರೂಪ ಬದಲಾವಣೆ ಶಿಕ್ಷಾರ್ಹ ಅಪರಾಧ: ‘ಸುಪ್ರೀಂ’ ಆದೇಶ Read More »

ರಾಷ್ಟ್ರೀಯ ನ್ಯೂಸ್

ಕೆಲಸದ ಒತ್ತಡದಿಂದಾಗಿ ಶಾಪಿಂಗ್ ಮಾಡಲು ಸಮಯ ಸಾಕಾಗುತ್ತಿಲ್ಲವೆ? ► ಇನ್ಮುಂದೆ ಕೆಲವು ರೈಲುಗಳಲ್ಲಿ ಇರಲಿವೆ ಶಾಪಿಂಗ್‌ ಮಾಲ್‌ಗಳು

(ನ್ಯೂಸ್ ಕಡಬ) newskadaba.com.ನವದೆಹಲಿ,ಜ.10. ಭಾರತೀಯ ರೈಲ್ವೆ ಸೇವೆಯನ್ನು ಉನ್ನತ ದರ್ಜೆಗೆ ಏರಿಸಲು ಶ್ರಮಿಸುತ್ತಿರುವ ಕೇಂದ್ರ ಸರ್ಕಾರ,  ಭಾರತದ ರೈಲ್ವೆ ಹೊಸ ಟಚ್‌ ಕೊಡಲು ಮುಂದಾಗಿದೆ. ಭಾರತದ ಕೆಲವು ರೈಲುಗಳಲ್ಲಿ ಪ್ರಯಾಣಿಕರು, ತಮ್ಮ ಪ್ರಯಾಣದ ಅವಧಿಯಲ್ಲೇ, ತಮಗೆ ಬೇಕಿರುವ ಸೌಂದರ್ಯ ವರ್ಧಕ ಉತ್ಪನ್ನಗಳು, ಫಿಟ್‌ನೆಸ್‌ ಹಾಗೂ ಅಡುಗೆ ಮನೆಗೆ ಅಗತ್ಯವಿರುವ ಪರಿಕರಗಳನ್ನು ಖರೀದಿಸಬಹುದಾಗಿದೆ. ಈ ಮೂಲಕ ಭಾರತದ ಕೆಲವು ರೈಲುಗಳು ಶಾಪಿಂಗ್‌ ಮಾಲ್‌ಗಳ ರೂಪ ಪಡೆಯಲಿವೆ.   16 ಮೇಲ್‌ ಮತ್ತು ಎಕ್ಸ್‌ಪ್ರೆಸ್‌ ರೈಲುಗಳಲ್ಲಿ 5 ವರ್ಷಗಳ ಕಾಲ ಸೌಂದರ್ಯವರ್ಧಕ,

ಕೆಲಸದ ಒತ್ತಡದಿಂದಾಗಿ ಶಾಪಿಂಗ್ ಮಾಡಲು ಸಮಯ ಸಾಕಾಗುತ್ತಿಲ್ಲವೆ? ► ಇನ್ಮುಂದೆ ಕೆಲವು ರೈಲುಗಳಲ್ಲಿ ಇರಲಿವೆ ಶಾಪಿಂಗ್‌ ಮಾಲ್‌ಗಳು Read More »

ರಾಷ್ಟ್ರೀಯ ನ್ಯೂಸ್

ಜ.08: ಭಾರತ ಬಂದ್ ಹಿನ್ನೆಲೆ ► ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಶಾಲಾ – ಕಾಲೇಜುಗಳಿಗೆ ರಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.08. ಕಾರ್ಮಿಕ ಸಂಘಟನೆಗಳು ಭಾರತ ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬಂದ್ ಇರುವುದರಿಂದ ವಾಹನ ಸಂಚಾರದಲ್ಲಿ ವ್ಯತ್ಯಯವುಂಟಾಗುವ ಸಂಭವವಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಎಲ್ಲಾ ಶಾಲಾ ಹಾಗೂ ಕಾಲೇಜುಗಳಿಗೆ ದ.ಕ‌. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೂ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ರಜೆ ಘೋಷಿಸಿದ್ದಾರೆ.

ಜ.08: ಭಾರತ ಬಂದ್ ಹಿನ್ನೆಲೆ ► ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಶಾಲಾ – ಕಾಲೇಜುಗಳಿಗೆ ರಜೆ Read More »

ರಾಷ್ಟ್ರೀಯ ನ್ಯೂಸ್

ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಆಫರ್

(ನ್ಯೂಸ್ ಕಡಬ)newskadaba.com.ನವದೆಹಲಿ, ಜ.7. ಲೋಕಸಭಾ ಚುನಾವಣೆಗೂ ಮುನ್ನ ಮೇಲ್ವರ್ಗದವರಿಗೆ  ಭರ್ಜರಿ ಆಫರ್ ನೀಡಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10 ರಷ್ಟು ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಸೋಮವಾರ ನಡೆದ ಕೇಂದ್ರ ಕ್ಯಾಬಿನೆಟ್ ನಲ್ಲಿ ಮೀಸಲಾತಿ  ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರಲು  ಒಪ್ಪಿಗೆ ನೀಡಿದ್ದು, ತಿದ್ದುಪಡಿಯಾದಲ್ಲಿ ಸರ್ಕಾರಿ ಶಿಕ್ಷಣ, ಉದ್ಯೋಗದಲ್ಲಿ ಹಾಲಿ ಶೇ.50 ರಷ್ಟು ಇರುವ ಮೀಸಲಾತಿ ಪ್ರಮಾಣ ಶೇ.60ಕ್ಕೆ ಏರಿಕೆಯಾಗಲಿದೆ.ಈ ಮೀಸಲಾತಿಗಾಗಿ ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಸಿದ್ಧಗೊಂಡಿರುವ ಮಸೂದೆ ಮಂಗಳವಾರ ಲೋಕಸಭೆಯಲ್ಲಿ

ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಆಫರ್ Read More »

ರಾಷ್ಟ್ರೀಯ ನ್ಯೂಸ್
Scroll to Top