ರಾಷ್ಟ್ರೀಯ ನ್ಯೂಸ್

ಉದನೆ: ರಸ್ತೆಗೆ‌ ನುಗ್ಗಿದ ನೆರೆ ನೀರು ➤ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.08. ಶಿರಾಡಿ ಗ್ರಾಮದ ಉದನೆ ಸಮೀಪ ಅಲ್ಲಲ್ಲಿ ಕೆಂಪುಹೊಳೆಯ ನೆರೆ ನೀರು ರಸ್ತೆಗೆ ಬಂದಿದ್ದು, ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಸಂಚಾರಕ್ಕೆ ತಡೆಯುಂಟಾಗಿದೆ. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವಾಗಿ ಪೆರಿಯಶಾಂತಿ, ಇಚಿಲಂಪಾಡಿ, ಮರ್ದಾಳ, ಕೈಕಂಬ, ಗುಂಡ್ಯ ರಸ್ತೆಯ ಮೂಲಕ ಅಥವಾ ಉಪ್ಪಿನಂಗಡಿ, ಕಡಬ, ಕೈಕಂಬ, ಗುಂಡ್ಯ ಮೂಲಕ ತೆರಳುವಂತೆ ಸೂಚಿಸಲಾಗಿದೆ.

ಉದನೆ: ರಸ್ತೆಗೆ‌ ನುಗ್ಗಿದ ನೆರೆ ನೀರು ➤ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ Read More »

ರಾಷ್ಟ್ರೀಯ ನ್ಯೂಸ್

ಬಲ್ಗೇರಿಯದ ಸೋಫಿಯಾ: ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ➤ಭಾರತದ ಕುಸ್ತಿ ಪಟು ಸೋನಂ ಮಲಿಕ್ ಗೆ ಚಿನ್ನ

(ನ್ಯೂಸ್ ಕಡಬ) newskadaba.com ನವದೆಹಲಿ, ಆಗಸ್ಟ್.3.ಹರ್ಯಾಣದ ಸೋನೆಪಟ್‌ನ ಪುಟ್ಟ ಗ್ರಾಮ ಮದಿನಾದಿಂದ ಬಂದಿರುವ ಭಾರತದ ಸೋನಂ ಮಲಿಕ್‌ ಅವರು ಬಲ್ಗೇರಿಯದ ಸೋಫಿಯಾದಲ್ಲಿ ಸಾಗುತ್ತಿರುವ ವಿಶ್ವ ಕೆಡೆಟ್‌ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದರು. ಪ್ರಚಂಡ ನಿರ್ವಹಣೆ ನೀಡಿ ಸತತ ಎರಡನೇ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.65 ಕೆ.ಜಿ. ವಿಭಾಗ ದಲ್ಲಿ ಚೀನದ ಬಿನ್‌ಬಿನ್‌ ಕ್ಸಿಯಾಂಗ್‌ ಅವರನ್ನು 7-1 ಅಂತರದಿಂದ ಸುಲಭವಾಗಿ ಮಣಿಸಿ ಚಿನ್ನ ಗೆದ್ದರು. ಸೋನಂ ಕಳೆದ ವರ್ಷವೂ ಈ ಕೂಟದಲ್ಲಿ ಚಿನ್ನ ಜಯಿಸಿದ್ದರು.  

ಬಲ್ಗೇರಿಯದ ಸೋಫಿಯಾ: ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ➤ಭಾರತದ ಕುಸ್ತಿ ಪಟು ಸೋನಂ ಮಲಿಕ್ ಗೆ ಚಿನ್ನ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ನೆಲ್ಯಾಡಿ: ಟ್ಯಾಂಕರ್ ಪಲ್ಟಿ – ಗ್ಯಾಸ್ ಸೋರಿಕೆ ➤ ಉಪ್ಪಿನಂಗಡಿ – ನೆಲ್ಯಾಡಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ.02. ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರೊಂದು ಪಲ್ಟಿಯಾದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ನೆಲ್ಯಾಡಿ ಸಮೀಪದ ಲಾವತ್ತಡ್ಕ ರೆಖ್ಯ ಎಂಬಲ್ಲಿ ಶುಕ್ರವಾರದಂದು ಸಂಭವಿಸಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ಗ್ಯಾಸ್ ತುಂಬಿಸಿಕೊಂಡು ತೆರಳುತ್ತಿದ್ದ ಟ್ಯಾಂಕರ್ ರೆಖ್ಯ ಸಮೀಪದ ತಿರುವಿನಲ್ಲಿ ರಸ್ತೆಗಡ್ಡವಾಗಿ ಮಗುಚಿ ಬಿದ್ದಿದೆ. ಪರಿಣಾಮ ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆಯಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದಾರೆ. ವಾಹನ ಸಂಚಾರಕ್ಕೆ ನಿರ್ಬಂಧ

ನೆಲ್ಯಾಡಿ: ಟ್ಯಾಂಕರ್ ಪಲ್ಟಿ – ಗ್ಯಾಸ್ ಸೋರಿಕೆ ➤ ಉಪ್ಪಿನಂಗಡಿ – ನೆಲ್ಯಾಡಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ Read More »

ರಾಷ್ಟ್ರೀಯ ನ್ಯೂಸ್

ಮುಂಬೈ: ರೆಡ್ ಅಲರ್ಟ್ ಘೋಷಣೆ ➤ಮಹಾರಾಷ್ಟ್ರ ದ ಜನರನ್ನು ಆತಂಕಕ್ಕೆ ನೂಕಿರುವ ವರ್ಷಧಾರೆ

(ನ್ಯೂಸ್ ಕಡಬ) newskadaba.com ಮುಂಬೈ, ಜುಲೈ.29.ಮಹಾರಾಷ್ಟ್ರದಲ್ಲಿ ವರ್ಷಧಾರೆ ಮುಂದುವರಿದಿದ್ದು ಸೋಮವಾರವೂ ಮುಂಬೈನ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರವಿವಾರ ಹಾಗೂ ಸೋಮವಾರಕ್ಕೆ ಮುಂಬೈನ ಬಹುತೇಕ ಪ್ರದೇಶಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಸೋಮವಾರ ಗುಡುಗು ಸಹಿತ ಧಾರಾಕಾರ ಮಳೆಯಾಗುವುದಾಗಿ ಹವಾಮಾನ ಇಲಾಖೆ  ಮುನ್ಸೂಚನೆ ನೀಡಿರುವ ಕಾರಣ, ಎಲ್ಲರೂ ಅಲರ್ಟ್‌ ಆಗಿರುವಂತೆ ಬೃಹನ್ಮುಂಬೈ ಮಹಾನಗರ ಪಾಲಿಕೆ ಸೂಚಿಸಿದೆ. ರವಿವಾರದ ಮಳೆಯಿಂದ ಮುರ್ಬಾದ್‌ ನಿಂದ ಕಲ್ಯಾಣ್‌ಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಯು ಭಾಗಶಃ ಕೊಚ್ಚಿ ಹೋಗಿದೆ. ಜನರನ್ನು ಆತಂಕಕ್ಕೆ

ಮುಂಬೈ: ರೆಡ್ ಅಲರ್ಟ್ ಘೋಷಣೆ ➤ಮಹಾರಾಷ್ಟ್ರ ದ ಜನರನ್ನು ಆತಂಕಕ್ಕೆ ನೂಕಿರುವ ವರ್ಷಧಾರೆ Read More »

ರಾಷ್ಟ್ರೀಯ ನ್ಯೂಸ್

ಅಪರಿಚಿತ ಗುಂಪೊದರಿಂದ ನಿವೃತ್ತ ಸೇನಾಧಿಕಾರಿಯ ಹತ್ಯೆ

(ನ್ಯೂಸ್ ಕಡಬ) newskadaba.com ಅಮೇಠಿ, ಜುಲೈ.29.ನಿವೃತ್ತ ಸೇನಾಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಅಮೇಠಿಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಅಪರಿಚಿತ ವ್ಯಕ್ತಿಗಳ ಗುಂಪೊಂದು ರಾತ್ರಿ ವೇಳೆ ಏಕಾಏಕಿ ಮನೆಯೊಳಗೆ ನುಗ್ಗಿ  ದೊಣ್ಣೆಗಳಿಂದ ಅಮಾನತ್‌ ಉಲ್ಲಾ ಅವರ ಮೇಲೆ ಹಲ್ಲೆ ಮಾಡಿದೆ. ತಮ್ಮ ಮನೆ ಮುಂಭಾಗದಲ್ಲಿರುವ ಅಂಗಡಿಯಲ್ಲಿನ ಸಾಮಾನುಗಳನ್ನು ಕಳವು ಮಾಡಲು ಯತ್ನಿಸುತ್ತಿರುವಾಗ ಪತಿ ಅಮಾನುಲ್ಲಾ ತಡೆದಿದ್ದರು. ನಾನು ಪೊಲೀಸರಿಗೆ ಮಾಹಿತಿ ನೀಡುತ್ತೇನೆ

ಅಪರಿಚಿತ ಗುಂಪೊದರಿಂದ ನಿವೃತ್ತ ಸೇನಾಧಿಕಾರಿಯ ಹತ್ಯೆ Read More »

ರಾಷ್ಟ್ರೀಯ ನ್ಯೂಸ್

ಶ್ರೀಲಂಕಾ ಪ್ರಧಾನಿ ರಣಿಲ್ ವಿಕ್ರಮ ಸಿಂಘೆ ಕೇರಳ ಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಬದಿಯಡ್ಕ, ಜುಲೈ.27.ಇಂದು ಕೇರಳಕ್ಕೆ ಭೇಟಿ ನೀಡಿದ ಶ್ರೀಲಂಕಾ ಪ್ರಧಾನಿ ರಣಿಲ್‌ ವಿಕ್ರಮ ಸಿಂಘೆ ಶುಕ್ರವಾರ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು.ಇಂದು ಕುಂಬಳೆ ನೀರ್ಚಾಲು ಬಳಿಯ ಬೇಳ ಕುಮಾರ ಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಖಾಸಗಿ ಕಾರ್ಯಕ್ರಮವಾದ ಕಾರಣ ಪತ್ರಕರ್ತರಿಗೆ    ಪ್ರವೇಶನಿಷೇಧಿಸಲಾಗಿತ್ತು.ಕಾಸರಗೋಡು ಬೇಕಲದ ಲಲಿತ್‌ ರೆಸಾರ್ಟ್‌ ಹೆಲಿಪ್ಯಾಡ್‌ ನಿಂದ ಮಂಗಳೂರಿಗೆ ಹೊರಟ ರಣಿಲ್‌ ವಿಕ್ರಮ್‌ ಸಿಂಘೆ ಅವರನ್ನು ಕಾಸರಗೋಡು ಜಿಲ್ಲಾಧಿಕಾರಿ ಸಜಿತ್‌ ಬಾಬು ಬೀಳ್ಕೊಟ್ಟರು.

ಶ್ರೀಲಂಕಾ ಪ್ರಧಾನಿ ರಣಿಲ್ ವಿಕ್ರಮ ಸಿಂಘೆ ಕೇರಳ ಕ್ಕೆ ಭೇಟಿ Read More »

ರಾಷ್ಟ್ರೀಯ ನ್ಯೂಸ್

ಕರಾವಳಿಯಲ್ಲಿ ಭಾರೀ ಮಳೆಯ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ➤ ಜಿಲ್ಲೆಯಾದ್ಯಂತ ರೆಡ್ ಅಲೆರ್ಟ್ ಘೋಷಣೆ ➤ ಮುನ್ನೆಚ್ಚರಿಕಾ ಕ್ರಮವಾಗಿ ಶನಿವಾರದಂದು ಶಾಲಾ ಕಾಲೇಜುಗಳಿಗೆ ರಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.19. ಕರ್ನಾಟಕದ ಕರಾವಳಿ ಭಾಗದಲ್ಲಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ಹೊರಡಿಸಿದ್ದು, ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಶನಿವಾರದಿಂದ ಸೋಮವಾರದವರೆಗೆ ಭಾರೀ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶನಿವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ಕರಾವಳಿಯಲ್ಲಿ ಭಾರೀ ಮಳೆಯ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ➤ ಜಿಲ್ಲೆಯಾದ್ಯಂತ ರೆಡ್ ಅಲೆರ್ಟ್ ಘೋಷಣೆ ➤ ಮುನ್ನೆಚ್ಚರಿಕಾ ಕ್ರಮವಾಗಿ ಶನಿವಾರದಂದು ಶಾಲಾ ಕಾಲೇಜುಗಳಿಗೆ ರಜೆ Read More »

ರಾಷ್ಟ್ರೀಯ ನ್ಯೂಸ್

ಅಮರನಾಥ ಯಾತ್ರಿಕರನ್ನು ಹಿಮಪರ್ವತದದಿಂದ ಉರುಳಿದ ಕಲ್ಲುಗಳಿಂದ ಕಾಪಾಡಿದ ಐಟಿಬಿಪಿ ಯೋಧರು

(ನ್ಯೂಸ್ ಕಡಬ) newskadaba.com ಜಮ್ಮು, ಜುಲೈ.6 ಅಮರನಾಥ ಒಂದು ಪವಿತ್ರ ಕ್ಷೇತ್ರವೂ ಹೌದು ಹಾಗೇ ಪ್ರವಾಸಿ ತಾಣವು ಹೌದು.ಅಮರನಾಥ ಯಾತ್ರೆ ಕೈಗೊಂಡಿರುವ ಯಾತ್ರಿಕರು ಸಾಗುತ್ತಿರುವ ಮಾರ್ಗದಲ್ಲಿ ಹಿಮಪರ್ವತಗಳ ಸಾಲಿನಿಂದ ಕಲ್ಲುಗಳ ಸುರಿಮಳೆಯೇ ಆಯಿತು. ಅಲ್ಲಿ ರಕ್ಷಾ ಫಲಕಗಳನ್ನು ಹಿಡಿದು ಸಾಲಾಗಿ ನಿಂತ ಇಂಡೋ-ಟಿಬೆಟಿಯನ್​ ಬಾರ್ಡರ್​ ಪೊಲೀಸ್​ನ (ಐಟಿಬಿಪಿ) ಯೋಧರು ಕಲ್ಲುಗಳು ಯಾತ್ರಿಕರಿಗೆ ಬಡಿಯದಂತೆ ತಡೆದರು.ಅಮರನಾಥ ಗುಹೆಯತ್ತ ತೆರಳುವ ಬಾಲ್ಟಾಲ್​ ಮಾರ್ಗದಲ್ಲಿ ಹಿಮಪರ್ವತಗಳಿಂದ ಕಲ್ಲುಗಳು ಉರುಳಲಾರಂಭಿಸಿಸಿದ್ದವು. ಕೆಲವೊಮ್ಮೆ ಒಂದರ ಹಿಂದೆ ಒಂದರಂತೆ ನಿರಂತರವಾಗಿ ಉರುಳುವುದರಿಂದ, ಅವುಗಳಿಂದ ರಕ್ಷಣೆ ಪಡೆಯಲು ಕಷ್ಟವಾಗುತ್ತದೆ.

ಅಮರನಾಥ ಯಾತ್ರಿಕರನ್ನು ಹಿಮಪರ್ವತದದಿಂದ ಉರುಳಿದ ಕಲ್ಲುಗಳಿಂದ ಕಾಪಾಡಿದ ಐಟಿಬಿಪಿ ಯೋಧರು Read More »

ರಾಷ್ಟ್ರೀಯ ನ್ಯೂಸ್

ಪುತ್ತೂರು: ಖಾಸಗಿ ಕಾಲೇಜು ವಿದ್ಯಾರ್ಥಿನಿಯ ಗ್ಯಾಂಗ್ ರೇಪ್ ಪ್ರಕರಣ ➤ ವಾಟ್ಸ್ಅಪ್ ನಲ್ಲಿ ವೀಡಿಯೋ ವೈರಲ್ ಹೇಗಾಯ್ತು ಗೊತ್ತೇ..?

(ನ್ಯೂಸ್ ಕಡಬ) newskadaba.com ಪುತ್ತೂರು, ಜು.04. ಪುತ್ತೂರಿನ ಕಾಲೇಜೊಂದರ ವಿಧ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವುದು ಹೇಗೆಂದು ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ. ಪುತ್ತೂರಿನ ಪ್ರತಿಷ್ಠಿತ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಯಾದ ಬಂಟ್ವಾಳ ನಿವಾಸಿ ಪ್ರಖ್ಯಾತ್ ಎಂಬಾತನು ತನ್ನ ಸ್ನೇಹಿತರೊಂದಿಗೆ ಸೇರಿ ನಡೆಸಿರುವ ಸಾಮೂಹಿಕ ಅತ್ಯಾಚಾರದ ವಿಡಿಯೋವನ್ನು ತನ್ನ ವಾಟ್ಸ್ಅಪ್ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದು ಈ ವಿಡಿಯೋವನ್ನು ಅದೇ ಕಾಲೇಜಿನ ಮೋಹಿತ್‌ ಎಂಬಾತನು ತನ್ನ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡಿದ್ದನು. ಕಾಲೇಜಿನ

ಪುತ್ತೂರು: ಖಾಸಗಿ ಕಾಲೇಜು ವಿದ್ಯಾರ್ಥಿನಿಯ ಗ್ಯಾಂಗ್ ರೇಪ್ ಪ್ರಕರಣ ➤ ವಾಟ್ಸ್ಅಪ್ ನಲ್ಲಿ ವೀಡಿಯೋ ವೈರಲ್ ಹೇಗಾಯ್ತು ಗೊತ್ತೇ..? Read More »

ರಾಷ್ಟ್ರೀಯ ನ್ಯೂಸ್

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ➤ ವಾಟ್ಸ್ಅಪ್ ನಲ್ಲಿ ಶೇರ್ ಮಾಡಿದ ಕಡಬ ನಿವಾಸಿ ಸೇರಿದಂತೆ ಎಂಟು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಜು.04. ಪುತ್ತೂರಿನ ಕಾಲೇಜೊಂದರ ವಿಧ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಎಂಟು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಕಡಬ ಪೇಟೆ ನಿವಾಸಿ ಶ್ರೇಯಾನ್ಸ್ ಎಸ್. (20), ಪುತ್ತೂರು ಕಸ್ಬಾ ಗ್ರಾಮದ ಮುರಳೀಧರ (29), ಕಬಕ ಗ್ರಾಮದ ನೆಹರು ನಗರ ನಿವಾಸಿ ಚಂದ್ರಶೇಖರ ಮಯ್ಯ (47), ಅರ್ಯಾಪು ಗ್ರಾಮದ ಪೂವಪ್ಪ ಕೆ. (26), ಪವನ್ ಕುಮಾರ್ ಡಿ. (19), ಪುತ್ತೂರು

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ➤ ವಾಟ್ಸ್ಅಪ್ ನಲ್ಲಿ ಶೇರ್ ಮಾಡಿದ ಕಡಬ ನಿವಾಸಿ ಸೇರಿದಂತೆ ಎಂಟು ಮಂದಿಯ ಬಂಧನ Read More »

ರಾಷ್ಟ್ರೀಯ ನ್ಯೂಸ್
Scroll to Top