ರಾಷ್ಟ್ರೀಯ ನ್ಯೂಸ್

ತಮಿಳುನಾಡು: ಜಲ್ಲಿಕಟ್ಟು ಕ್ರೀಡೆಯ ವೇಳೆ ಅವಘಢ; ಓರ್ವ ಮೃತ್ಯು

ಚೆನ್ನೈ, ಜ.20: ಜಲ್ಲಿಕಟ್ಟು ಕ್ರೀಡೆಯ ವೇಳೆ ಅವಘಢ ಸಂಭವಿಸಿ ಓರ್ವ ಸಾವನ್ನಪ್ಪಿದ ಘಟನೆ ತಮಿಳುನಾಡು ಮಧುರೈನ ಅವನಿಪುರದಲ್ಲಿ ನಡೆದಿದೆ. ಘಟನೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅದರಲ್ಲಿ 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ ಒಂದು ಹೋರಿಯೂ ಮೃತಪಟ್ಟಿದೆ ಎನ್ನಲಾಗಿದೆ. ಅವನಿಪುರಂನ ಸೈಂಟ್ ಅಂಥೋನಿ ಚರ್ಚ್ ಫೆಸ್ಟಿವಲ್ ಸಹಯೋಗದೊಂದಿಗೆ ಈ ಜಲ್ಲಿಕಟ್ಟು ಕ್ರೀಡೆ ಆಯೋಜಿಸಲಾಗಿತ್ತು. ಸಚಿವ ಜೆ. ಭಾಸ್ಕರನ್ ಮತ್ತು ಜಿಲ್ಲಾಧಿಕಾರಿ ಜಯಕಾಂತನ್ ಪಾಲ್ಗೊಂಡಿದ್ದರು. ಒಟ್ಟು 600ಕ್ಕೂ ಹೆಚ್ಚು ಹೋರಿಗಳು ಕೂಟದಲ್ಲಿ […]

ತಮಿಳುನಾಡು: ಜಲ್ಲಿಕಟ್ಟು ಕ್ರೀಡೆಯ ವೇಳೆ ಅವಘಢ; ಓರ್ವ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಇಂದು ಪರೀಕ್ಷಾ ಪೆ ಚರ್ಚಾ

(ನ್ಯೂಸ್ ಕಡಬ) newskadaba.com, ಹೊಸದಿಲ್ಲಿ, ಜ.20    ಹೊಸದಿಲ್ಲಿಯಲ್ಲಿ ಇಂದು ವಿದ್ಯಾರ್ಥಿಗಳಿಗಾಗಿ ಪ್ರತಿ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ನಡೆಸುವ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವು ನಡೆಯಲಿದೆ. ಪರೀಕ್ಷಾ ಸಮಯ ಹತ್ತಿರ ಬರುತ್ತಿರುವ ಕಾರಣ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸಲು ಪ್ರಧಾನಿ ಮೋದಿಯವರು ಈ ಕಾರ್ಯಕ್ರಮವನ್ನು ನಡೆಸುತ್ತಿದ್ಧಾರೆ. ಇಂದಿನ ಪರಿಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ದೇಶದ ವಿವಿಧ ಶಾಲೆಗಳ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಹೊಸದಿಲ್ಲಿಯ ಟಲ್ಕಟೊರಾ ಸ್ಟೇಡಿಯಂನಲ್ಲಿ ಇಂದು 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ನರೇಂದ್ರ

ಇಂದು ಪರೀಕ್ಷಾ ಪೆ ಚರ್ಚಾ Read More »

ರಾಷ್ಟ್ರೀಯ ನ್ಯೂಸ್

ಎನ್‌ಆರ್‌ಸಿಯಿಂದ ಹಿಂದೂಗಳಿಗೂ ಗಂಡಾಂತರ: ಬಿಜೆಪಿ ಬೆಂಬಲಿಗರ ಆತಂಕ

ಹೊಸದಿಲ್ಲಿ, ಜ.20: ವಿವಾದಾತ್ಮಕ ಪೌರತ್ವ ಕಾಯ್ದೆ ಹಾಗೂ ಎನ್‌ಆರ್‌ಸಿಯಿಂದ ತೊಂದರೆಗೆ ಒಳಗಾಗುವವರು ಕೇವಲ ಮುಸ್ಲಿಮರು ಮಾತ್ರವಲ್ಲ, ಬಹುತೇಕ ಹಿಂದೂಗಳಿಗೂ ಇದು ಸಮಸ್ಯೆ ತಂದೊಡ್ಡಲಿದೆ ಎಂದು ಈಗ ಬಿಜೆಪಿ ಪಕ್ಷ ಮತ್ತು ಕೇಂದ್ರ ಸರಕಾರದ ನಿಷ್ಟಾವಂತ ಬೆಂಬಲಿಗರಿಗೂ ಮನವರಿಕೆ ಆಗುತ್ತಿದೆ ಎನ್‌ಡಿಟಿವಿ ತನ್ನ ವರದಿಯಲ್ಲಿ ತಿಳಿಸಿದೆ. ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿಯಿಂದ ಹೊಸ ಸಮಸ್ಯೆ ಉದ್ಭವಿಸಲಿದೆ ಎಂದು ಈ ನಿಷ್ಟಾವಂತ ಬೆಂಬಲಿಗರೂ ಈಗ ಬಹಿರಂಗವಾಗಿ ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಬಲಿಷ್ಟರಿಗೆ ಮಾತ್ರ ಅನುಕೂಲವಾಗಲಿದೆ. ಪ್ರಭಾವೀ ವ್ಯಕ್ತಿಗಳು ಅಥವಾ ಅಧಿಕಾರದಲ್ಲಿರುವವರ

ಎನ್‌ಆರ್‌ಸಿಯಿಂದ ಹಿಂದೂಗಳಿಗೂ ಗಂಡಾಂತರ: ಬಿಜೆಪಿ ಬೆಂಬಲಿಗರ ಆತಂಕ Read More »

ರಾಷ್ಟ್ರೀಯ ನ್ಯೂಸ್

ಎ.1ರಿಂದ ದೇಶದಾದ್ಯಂತ ಎನ್‌ಪಿಆರ್ ಪ್ರಕ್ರಿಯೆ ಆರಂಭ

ಹೊಸದಿಲ್ಲಿ, ಜ.17: ಎಪ್ರಿಲ್ 1 ರಿಂದ ದೇಶದಾದ್ಯಂತ ಎನ್‌ಪಿಆರ್ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದು, ಪ್ರಕ್ರಿಯೆ ಸಂದರ್ಭದಲ್ಲಿ ಗಣತಿದಾರರಿಗೆ ಜನರು ತಪ್ಪು ಅಥವಾ ಸುಳ್ಳು ಮಾಹಿತಿ ನೀಡುವುದು, ಮಾಹಿತಿ ನೀಡಲು ನಿರಾಕರಿಸುವುದನ್ನು ಮಾಡಿದರೆ ರೂ.1000ಕ ದಂಡ ತೆರಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಈ ಕುರಿತು ಗೃಹ ಸಚಿವಾಲಯ ಮಾಹಿತಿ ನೀಡಿದ್ದು, ನಾಗರೀಕತ್ವ ನಿಯಮ-17ರ ಪ್ರಕಾರ ತಪ್ಪು ಮಾಹಿತಿ ನೀಡಿದವರಿಗೆ ರೂ.1 ಸಾವಿರ ದಂಡ ಹಾಕಲು ಅವಕಾಶವಿದೆ ಎಂದು ಹೇಳಿದೆ. ಆದರೆ, 2011 ಹಾಗೂ 2015ರಲ್ಲಿ ನಡೆದ ಎನ್’ಪಿಆರ್ ಪ್ರಕ್ರಿಯೆ

ಎ.1ರಿಂದ ದೇಶದಾದ್ಯಂತ ಎನ್‌ಪಿಆರ್ ಪ್ರಕ್ರಿಯೆ ಆರಂಭ Read More »

ರಾಷ್ಟ್ರೀಯ ನ್ಯೂಸ್

ಹಳಿ ತಪ್ಪಿದ ಲೋಕಮಾನ್ಯ ತಿಲಕ್ ಎಕ್ಸ್ ಪ್ರೆಸ್: 20 ಕ್ಕೂ ಅಧಿಕ ಮಂದಿಗೆ ಗಾಯ

ಕಟಕ್, ಜ.16: ಮುಂಬೈ- ಬಬುನೇಶ್ವರ್ ನಡುವಿನ ಲೋಕಮಾನ್ಯ ತಿಲಕ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ ಗೂಡ್ಸ್ ರೈಲಿಗೆ  ಢಿಕ್ಕಿ ಹೊಡೆದ ಪರಿಣಾಮ 20 ಹೆಚ್ಚು ಜನರು ಗಾಯಗೊಂಡ ಘಟನೆ ಇಂದು ಮುಂಜಾನೆ ಕಟಕ್ ಸಮೀಪ ನಡೆದಿದೆ. ಒಡಿಶಾ ರಾಜ್ಯದ ಕಟಕ್ ಸಮೀಪದ ಸಾಲಗಾವ್ ಮತ್ತು ನೀರ್ಗುಂಡಿ  ಮಧ್ಯಭಾಗದಲ್ಲಿ ಈ ಘಟನೆ ನಡೆದಿದ್ದು, ಸುಮಾರು ಎಂಟು ಬೋಗಿಗಳು ಹಳಿ ತಪ್ಪಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅದರಲ್ಲಿ ಆರು ಜನರು ಗಂಭೀರವಾಗಿದ್ದಾರೆಂದು

ಹಳಿ ತಪ್ಪಿದ ಲೋಕಮಾನ್ಯ ತಿಲಕ್ ಎಕ್ಸ್ ಪ್ರೆಸ್: 20 ಕ್ಕೂ ಅಧಿಕ ಮಂದಿಗೆ ಗಾಯ Read More »

ರಾಷ್ಟ್ರೀಯ ನ್ಯೂಸ್

ಕಾಶ್ಮೀರದಲ್ಲಿ ಇಂಟರ್ನೆಟ್ ಭಾಗಶಃ ಪುನರಾರಂಭ

ಶ್ರೀನಗರ, ಜ.15: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370 ವಿಧಿ ರದ್ದು ಬಳಿಕ ರದ್ದುಗೊಳಿಸಲಾಗಿದ್ದ ಮೊಬೈಲ್ ಇಂಟರ್ನೆಟ್ ಸೇವೆ, ಬ್ರಾಡ್ ಬ್ಯಾಂಡ್ ಸೇವೆಗಳನ್ನು ಹಲವೆಡೆ ಭಾಗಶಃ ಪುನರಾರಂಭಿಸಲಾಗಿದೆ. ಹೋಟೆಲ್, ಟ್ರಾವೆಲ್ ಸಂಸ್ಥೆಗಳು ಆಸ್ಪತ್ರೆಗಳಿಗೆ ಅನ್ವಯಿಸಿ ಜಮ್ಮುವಿನ ಹಲವು ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಪುನರಾರಂಭಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಗೃಹ ಸಚಿವಾಲಯ ಆದೇಶ ಹೊರಡಿಸಿದ್ದು, ಕಾಶ್ಮೀರ ವಿಭಾಗದಲ್ಲಿ 400 ಇಂಟರ್ನೆಟ್ ಕಿಯೋಸ್ಕ್ ಗಳನ್ನು ಸ್ಥಾಪಿಸಲಾಗುವುದು. ಅಗತ್ಯ ವಸ್ತುಗಳ ಒದಗಿಸುವ ಸಂಸ್ಥೆಗಳು, ಆಸ್ಪತ್ರೆ, ಬ್ಯಾಂಕ್ ಮತ್ತು

ಕಾಶ್ಮೀರದಲ್ಲಿ ಇಂಟರ್ನೆಟ್ ಭಾಗಶಃ ಪುನರಾರಂಭ Read More »

ರಾಷ್ಟ್ರೀಯ ನ್ಯೂಸ್

ಕಾಶ್ಮೀರ: ಕಳೆದ ಐದು ದಿನಗಳಿಂದ ಹಿಮದಲ್ಲಿ ಸಿಲುಕಿ ಯೋಧ  ನಾಪತ್ತೆ

ಹೊಸದಿಲ್ಲಿ, ಜ.14: ಜಮ್ಮು ಕಾಶ್ಮೀರದ ಗುಲ್ ಮಾರ್ಗ್ ಸೆಕ್ಟರ್ ನ ಗಡಿನಿಯಂತ್ರಣ ರೇಖೆಯ ಬಳಿ ದೈನಂದಿನ ಗಸ್ತು ತಿರುಗುತ್ತಿದ್ದ ವೇಳೆ ಹಿಮದಲ್ಲಿ ಸಿಲುಕಿದ ಗರ್ವಾಲ್ ರೈಫಲ್ಸ್ ರೆಜಿಮೆಂಟ್ ಗೆ ಸೇರಿದ ಯೋಧನೊಬ್ಬ ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದರೆ. ಹವಾಲ್ದಾರ್ ರಾಜೇಂದ್ರ ಸಿಂಗ್ ನೇಗಿ  ಜಮ್ಮು ಕಾಶ್ಮೀರದ ಗುಲ್ ಮಾರ್ಗ್ ಸೆಕ್ಟರ್ ನ ಗಡಿನಿಯಂತ್ರಣ ರೇಖೆಯ ಬಳಿ  ಹಿಮದಲ್ಲಿ ಸಿಲುಕಿದ್ದಾರೆ. ಕಾಣೆಯಾದ ಸೈನಿಕನನ್ನು ಪತ್ತೆಹಚ್ಚಲು ಭಾರತೀಯ ಸೇನೆ  ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. 2002 ರಿಂದ ಭಾರತೀಯ ಸೇನೆಯ 11ನೇ

ಕಾಶ್ಮೀರ: ಕಳೆದ ಐದು ದಿನಗಳಿಂದ ಹಿಮದಲ್ಲಿ ಸಿಲುಕಿ ಯೋಧ  ನಾಪತ್ತೆ Read More »

ರಾಷ್ಟ್ರೀಯ ನ್ಯೂಸ್

ಪೌರತ್ವ ಕಾಯ್ದೆ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಿದ ಕೇರಳ

ಸಿಎಎ ವಿರುದ್ಧ ಕೋಟ್೯ ಮೆಟ್ಟಿಲೇರಿದ ಮೊದಲ ರಾಜ್ಯ ಹೊಸದಿಲ್ಲಿ, ಜ.14: ಪಿಣರಾಯಿ ವಿಜಯನ್‌ ನೇತೃತ್ವದ ಕೇರಳ ಸರಕಾರವು ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ  ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಮೂಲಕ ಸಿಎಎ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಮೊದಲ ರಾಜ್ಯ ಎನಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ ನೀಡಲಾಗಿರುವ ಮೂಲಭೂತ ಹಕ್ಕುಗಳಲ್ಲಿ ಒಂದಾದ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ಎಂದು ಅರ್ಜಿಯಲ್ಲಿ ತಿಳಿಸಿದೆ. ಅಲ್ಲದೆ ಶಾಸಕಾಂಗ ಸಭೆದಯಲ್ಲಿ ಪೌರತ್ವ ಕಾಯಿದೆ ವಿರುದ್ಧ

ಪೌರತ್ವ ಕಾಯ್ದೆ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಿದ ಕೇರಳ Read More »

ರಾಷ್ಟ್ರೀಯ ನ್ಯೂಸ್

ರಸ್ತೆ ಅಪಘಾತಕ್ಕೆ ಮಹಿಳೆ ಬಲಿ, ಏಳು ಮಂದಿಗೆ ಗಾಯ

ಆಂಧ್ರಪ್ರದೇಶ, ಜ.14: ಆಟೊ ರಿಕ್ಷಾ ಮತ್ತು ಟಾಟಾ ಮ್ಯಾಜಿಕ್ ಮಧ್ಯೆ ಢಿಕ್ಕಿ ಸಂಭವಿಸಿ ಮಹಿಳೆ ಮೃತಪಟ್ಟು, ಏಳು ಮಂದಿ ಗಾಯಗೊಂಡ ಘಟನೆ ಶ್ರೀಕಾಕುಲಮ್ ಜಿಲ್ಲೆಯ ಮಡ್ಡಿ ರಾಮುಡು ಪೇಟಾ ಗ್ರಾಮದಲ್ಲಿ ನಡೆದಿದೆ. ಅಪಘಾತಕ್ಕೆ ಬಲಿಯಾದ ಮಹಿಳೆಯನ್ನು ಜಡ್ಡು ಕೃಷ್ಣವೇಣಿ(46) ಎಂದು  ಗುರುತಿಸಲಾಗಿದೆ. ಈಕೆ ತನ್ನ ತವರು ಮನೆಯಾದ ಪಾಲಕೊಂಡಾ ಮಂಡಲ್ ಬಳಿಯಿರುವ ಎನ್ ಕೆ ರಾಜಾಪುರನ್ ಗ್ರಾಮಕ್ಕೆ ತೆರಳುತ್ತಿದ್ದಳು ಎಂದು ತಿಳಿದುಬಂದಿದೆ. ಟಾಟಾ ಮ್ಯಾಜಿಕ್ ವಾಹನದಲ್ಲಿ ವಿಜಯವಾಡದಿಂದ ತನ್ನ ತವರು ಗ್ರಾಮಕ್ಕೆ ಕೃಷ್ಣವೇಣಿ ಪ್ರಯಾಣ ಬೆಳೆಸಿದ್ದರು. ಎಂ

ರಸ್ತೆ ಅಪಘಾತಕ್ಕೆ ಮಹಿಳೆ ಬಲಿ, ಏಳು ಮಂದಿಗೆ ಗಾಯ Read More »

ರಾಷ್ಟ್ರೀಯ ನ್ಯೂಸ್

ಮುಂಬೈ: ರಾಸಾಯನಿಕ ಉತ್ಪಾದನ ಘಟಕದಲ್ಲಿ ಸ್ಫೋಟ;  6 ಮಂದಿ ಸಾವು

ಮುಂಬೈ, ಜ.12: ಮುಂಬೈನಿಂದ 100 ಕಿ.ಮೀ ದೂರದಲ್ಲಿರುವ ಪಾಲ್ಗಾರ್ ಜಿಲ್ಲೆಯ ತಾರಾಪುರದ ನೈಟ್ರೇಟ್ ರಾಸಾಯನಿಕ ಉತ್ಪಾದನಾ ಘಟಕದಲ್ಲಿ ಸ್ಫೋಟ ಸಂಭವಿಸಿ 6 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತಾರಾ ಘಟಕದಲ್ಲಿದ್ದ ರಿಯಾಕ್ಟರ್ ಸ್ಫೋಟಗೊಂಡಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟಕದಲ್ಲಿ ಇನ್ನು ಹಲವು ಸಿಲುಕಿಕೊಂಡಿದ್ದು ಅವರ ರಕ್ಷಣೆಗಾಗಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಮುಂಬೈ: ರಾಸಾಯನಿಕ ಉತ್ಪಾದನ ಘಟಕದಲ್ಲಿ ಸ್ಫೋಟ;  6 ಮಂದಿ ಸಾವು Read More »

ರಾಷ್ಟ್ರೀಯ ನ್ಯೂಸ್
Scroll to Top