ರಾಷ್ಟ್ರೀಯ ನ್ಯೂಸ್

ನಾಳೆ ಸೂರ್ಯ ಗ್ರಹಣದ ಹಿನ್ನಲೆ ➤ ಕರಾವಳಿಯ ಹಲವು ದೇಗುಲಗಳು ಬಂದ್

(ನ್ಯೂಸ್ ಕಡಬ) newskadaba.com ಕರಾವಳಿ ,ಜೂ.20:  ಜೂ.21ರಂದು ನಭೋ ಮಂಡಲದಲ್ಲಿ ಅಪರೂಪದ ಸೂರ್ಯ ಗ್ರಹಣ ಸಂಭವಿಸಲಿದೆ. ಭಾರತದಲ್ಲಿ ರಾಜಸ್ಥಾನ, ಹರಿಯಾಣ, ಉತ್ತರಾಖಂಡಗಳ ಕೆಲವು ಪ್ರದೇಶಗಳಲ್ಲಿ ಕಂಕಣ ಸೂರ್ಯ ಗ್ರಹಣ ಆದರೆ ಉಳಿದ ಪ್ರದೇಶದಲ್ಲಿ ಪಾರ್ಶ್ವ ಸೂರ್ಯ ಗ್ರಹಣ ಗೋಚರಿಸಲಿದೆ. 21. 6. 2020 ಆದಿತ್ಯವಾರ ಖಂಡ ಗ್ರಾಸ ಸೂರ್ಯಗ್ರಹಣವು ಇರುವುದರಿಂದ ದೇವಸ್ಥಾನಗಳಲ್ಲಿ ಪೂಜಾ ಸಮಯವನ್ನು ಬದಲಾವಣೆ ಗೊಳಿಸಲಾಗಿದೆ. ಬೆಳಿಗ್ಗೆ 10.06 ರಿಂದ ಮಧ್ಯಾಹ್ನ ಗಂಟೆ 1.23 ನಿಮಿಷದ ವರೆಗೆ ಸೂರ್ಯನಿಗೆ ರಾಹು ಗ್ರಹಣ ಸಂಭವಿಸಲಿರುವುದು.   ಪುತ್ತೂರು […]

ನಾಳೆ ಸೂರ್ಯ ಗ್ರಹಣದ ಹಿನ್ನಲೆ ➤ ಕರಾವಳಿಯ ಹಲವು ದೇಗುಲಗಳು ಬಂದ್ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಎರಡು ವಾರ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ➤ ಸಾಮಾನ್ಯರ ಜೇಬಿಗೆ  ಕತ್ತರಿ

(ನ್ಯೂಸ್ ಕಡಬ) newskadaba.com ನವದೆಹಲಿ ,ಜೂ.20:  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆ ಆಗುತ್ತಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಾತ್ರ ಕಡಿಮೆ ಮಾಡುತ್ತಿಲ್ಲ. ಸತತ ಎರಡು ವಾರಗಳ ಕಾಲ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ ಕಂಡಿದೆ. ನಿರಂತರವಾಗಿ ಕಳೆದ 14 ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದು ಶನಿವಾರ ಲೀಟರ್ ಪೆಟ್ರೋಲ್ ಗೆ 51 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಗೆ 61 ಪೈಸೆ

ಎರಡು ವಾರ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ➤ ಸಾಮಾನ್ಯರ ಜೇಬಿಗೆ  ಕತ್ತರಿ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ದ್ವಿತೀಯ ಪಿಯು ಇಂಗ್ಲಿಷ್ ಕೀ ಉತ್ತರ ಪ್ರಕಟ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜೂ.19:  ರಾಜ್ಯದಲ್ಲಿ ಗುರುವಾರ ನಡೆದಿದ್ದ ದ್ವಿತೀಯ ಪಿಯುಸಿ ಆಂಗ್ಲ ಭಾಷಾ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ.   ಕೀ ಉತ್ತರಗಳ ಕುರಿತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು, ಉಪನ್ಯಾಸಕರು ಪದವಿ ಪೂರ್ವ ಶಿಕ್ಷಣ ಇಲಾಖೆಯ ವೆಬ್‌ಸೈಟ್ ಆಕ್ಷೇಪಣೆ ಸಲ್ಲಿಸಬಹುದು ಎಂದು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ವೆಬ್‌ಸೈಟ್  ವಿಳಾಸ- www.puc.kar.nic.in

ದ್ವಿತೀಯ ಪಿಯು ಇಂಗ್ಲಿಷ್ ಕೀ ಉತ್ತರ ಪ್ರಕಟ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ➤ ಕರುನಾಡಿಗೆ ಕರಾಳವಾದ ಜೂನ್ 18

(ನ್ಯೂಸ್ ಕಡಬ) newskadaba.com ಕರಾವಳಿ,ಜೂ.19: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಒಂದೇ ದಿನ 13,586 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, 336 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,80,532 ಏರಿಕೆಯಾಗಿದ್ದು, ಒಟ್ಟು 12,573 ಮಂದಿ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಸದ್ಯ 1,63,248 ಪ್ರಕರಣಗಳು ಸಕ್ರಿಯವಾಗಿದ್ದು, 2,04,711 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕರುನಾಡಿನ

ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ➤ ಕರುನಾಡಿಗೆ ಕರಾಳವಾದ ಜೂನ್ 18 Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಚೀನಾ-ಭಾರತ ಸಂಘರ್ಷ ರಾಮಮಂದಿರ ನಿರ್ಮಾಣ ಯೋಜನೆ ರದ್ದು

(ನ್ಯೂಸ್ ಕಡಬ)newskadaba.com ಅಯೋಧ್ಯೆ, ಜೂನ್ 19, ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದವು ಬಹಳ ಗಂಭೀರವಾಗಿರುವ ಹಿನ್ನೆಲೆ ಅಯೋಧ್ಯೆಯಲ್ಲಿ ಆರಂಭವಾಗಬೇಕಾಗಿದ್ದ ರಾಮಮಂದಿರದ ಪುನರ್ನಿರ್ಮಾಣ ಕಾರ್ಯವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಈ ಕುರಿತು ರಾಮಮಂದಿರದ ಟ್ರಸ್ಟ್ ಮಾಹಿತಿ ನೀಡಿದ್ದು, ದೇಶದ ರಕ್ಷಣೆ ಬಹಳ ಮುಖ್ಯವಾಗಿದೆ. ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆಯ ನಡುವೆ ಘರ್ಷಣೆ ಸಂಭವಿಸಿದ್ದು, ಈ ಘಟನೆಯಲ್ಲಿ 20 ಭಾರತೀಯ ಯೋಧರು ಹತರಾಗಿದ್ದಾರೆ, ಇಂತಹ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣ ಯೋಜನೆ ಆರಂಭಿಸುವುದು ಸೂಕ್ತವಲ್ಲ,

ಚೀನಾ-ಭಾರತ ಸಂಘರ್ಷ ರಾಮಮಂದಿರ ನಿರ್ಮಾಣ ಯೋಜನೆ ರದ್ದು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗ್ರಾಮ ಪಂಚಾಯತ್ ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ➤ ಡಿಸಿಗಳಿಗೆ ಸರಕಾರದ ಸೂಚನೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜೂ.18, ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಗಳು ನಡೆಯದೇ ಇರುವ ಕಾರಣ ಐದು ವರ್ಷದ ಅವಧಿ ಪೂರ್ಣಗೊಂಡ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಐದು ವರ್ಷದ ಅವಧಿಯನ್ನು ಮುಗಿಸಿದ ನಂತರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 8(1)(ಬಿ)ರಡಿ ಕಲಂ 321 ಅನ್ವಯ ಆಡಳಿತಾಧಿಕಾರಿಗಳನ್ನು ನೇಮಿಸಲು ಸರಕಾರವು ತಿಳಿಸಿದ್ದು,

ಗ್ರಾಮ ಪಂಚಾಯತ್ ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ➤ ಡಿಸಿಗಳಿಗೆ ಸರಕಾರದ ಸೂಚನೆ Read More »

ರಾಷ್ಟ್ರೀಯ ನ್ಯೂಸ್

ಸೆ.26ರಿಂದ ನ.8ರ ತನಕ ಐಪಿಎಲ್!?

(ನ್ಯೂಸ್ ಕಡಬ)newskadaba.com ಜೂ.18, ನವದೆಹಲಿ, ಐಪಿಎಲ್‌ ಟಿ20 ಕ್ರಿಕೆಟ್‌ ಪ್ರೇಮಿಗಳಿಗೆ ಸಿಹಿ ಸುದ್ದಿಯ ಮುನ್ಸೂಚನೆ ದೊರೆತಿದೆ. ಬಿಸಿಸಿಐ 13ನೇ ಆವೃತ್ತಿಯ ಐಪಿಎಲ್‌ ಕೂಟದ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇದೇ ಸೆಪ್ಟೆಂಬರ್ 26 ರಿಂದ ನವೆಂಬರ್ 8ರ ತನಕ ಕೂಟವನ್ನು ಸೀಮಿತ ಕ್ರೀಡಾಂಗಣಗಳಲ್ಲಿ ಆಯೋಜಿಸಲಿದೆ ಎಂದು ವರದಿ ತಿಳಿಸಿಿದೆ. ಒಟ್ಟಾರೆ 60 ದಿನಗಳ ಈ ಕೂಟವನ್ನು ಈ ಸಲ 44 ದಿನಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಇದಕ್ಕಾಗಿ ಇದನ್ನು ಕೊರೋನಾ ತೀವ್ರತೆ ಕಡಿಮೆ ಇರುವ ನಗರಗಳ ಕ್ರೀಡಾಂಗಣವನ್ನು ಬಿಸಿಸಿಐ ಆಯ್ಕೆ ಮಾಡುವ

ಸೆ.26ರಿಂದ ನ.8ರ ತನಕ ಐಪಿಎಲ್!? Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರತ –ಚೀನಾ ಗಡಿ ಸಂಘರ್ಷ ➤ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ

(ನ್ಯೂಸ್ ಕಡಬ) newskadaba.com ಜೂ.16:  ಭಾರತ – ಚೀನಾ ಗಡಿ ಸಂಘರ್ಷದಲ್ಲಿ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉಭಯ ರಾಷ್ಟ್ರಗಳ ಸೇನೆಗೆ ಹಾನಿ ಉಂಟಾಗಿದ್ದು ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಮಂಗಳವಾರ ಭಾರತೀಯ ಸೇನೆ ಅಧಿಕೃತವಾಗಿ ತಿಳಿಸಿದೆ. ಜತೆಗೆ , ಭಾರತೀಯ ಸೈನಿಕರು ಚೀನಾದ ಸೈನಿಕರಿಗೆ ಪ್ರತ್ಯುತ್ತರ ನೀಡಿದ್ದು, ಚೀನಾದ 43 ಸೈನಿಕರು ಹತರಾಗಿದ್ದಾರೆ.   ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವೆ ಸೋಮವಾರ ರಾತ್ರಿ ಸಂಘರ್ಷ ಉಂಟಾಗಿದ್ದು ಮೂವರು

ಭಾರತ –ಚೀನಾ ಗಡಿ ಸಂಘರ್ಷ ➤ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಜುಲೈ 1ರಂದು ಭೂಮಿ ಪೂಜೆ ಸಾಧ್ಯತೆ

(ನ್ಯೂಸ್ ಕಡಬ)newskadaba.com ಲಖನೌ, ಜೂ.17, ಬಹು ನಿರೀಕ್ಷಿತ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸಮಯ ಕೂಡಿ ಬಂದಿದ್ದು, ಇದೇ ಜುಲೈ 1ರಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರು ಭೂಮಿ ಪೂಜೆ ನೆರವೇರಿಸುವ ಸಾಧ್ಯತೆ ಇದೆಯೆನ್ನಲಾಗಿದೆ. ಕೊರೋನಾ ಲಾಕ್ ಡೌನ್ ನಿಂದಾಗಿ ಮುಂದೂಡಲಾಗಿದ್ದ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಯ ಕಾರ್ಯಕ್ಕೆ ಅಂತಿಮವಾಗಿ ಮಹೂರ್ತ ಕೂಡಿ ಬಂದಿದ್ದು, ಇದೇ ಬರುವ ಜುಲೈ 1ರಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರು ಭೂಮಿ ಪೂಜೆ ನೆರವೇರಿಸುವ  ಸಾಧ್ಯತೆ ಇದೆ. ಈಗಾಗಲೇ

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಜುಲೈ 1ರಂದು ಭೂಮಿ ಪೂಜೆ ಸಾಧ್ಯತೆ Read More »

ರಾಷ್ಟ್ರೀಯ ನ್ಯೂಸ್

ಪರ್ವತಾರೋಹಿಯ ಪದ್ಮಶ್ರೀ ಪ್ರಶಸ್ತಿ ಕದ್ದೊಯ್ದ ಕಳ್ಳರು ➤ ಠಾಣೆಯಲ್ಲಿ ದೂರು ದಾಖಲು

(ನ್ಯೂಸ್ ಕಡಬ) newskadaba.com ನವದೆಹಲಿ,ಜೂ.16:ಮೌಂಟ್ ಎವರೆಸ್ಟ್ ಏರಿದ್ದ ಪರ್ವತಾರೋಹಿ ಪ್ರೇಮಲತಾ ಅಗರ್ ವಾಲ್ ಅವರ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿಯನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ ಎಂದು ವರದಿಯಾಗಿದೆ ಈ ಬಗ್ಗೆ ಅವರ ಪತಿ ವಿಮಲ್ ಅಗರ್ವಾಲ್ ಮಾಹಿತಿ ನೀಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.   ಕಳ್ಳರು 20 ಸಾವಿರ ರೂ., 15 ಬೆಳ್ಳಿ ನಾಣ್ಯಗಳು , ಎರಡು ಕಂಪ್ಯೂಟರ್ ಗಳು ಮತ್ತು ಹಾರ್ಡ್ ಡಿಸ್ಕ್ ಗಳನ್ನು ಕದ್ದೊಯ್ದಿದ್ದಾರೆ. ಕಳೆದ ರಾತ್ರಿ ನನ್ನ ಮನೆಗೆ ನುಗ್ಗಿದ ಕಳ್ಳರು ನನ್ನ ಪತ್ನಿಯ ಪದ್ಮಶ್ರೀ

ಪರ್ವತಾರೋಹಿಯ ಪದ್ಮಶ್ರೀ ಪ್ರಶಸ್ತಿ ಕದ್ದೊಯ್ದ ಕಳ್ಳರು ➤ ಠಾಣೆಯಲ್ಲಿ ದೂರು ದಾಖಲು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top