ರಾಷ್ಟ್ರೀಯ ನ್ಯೂಸ್

IPL 2020: ಮುಂಬೈ ಇಂಡಿಯನ್ಸ್ ಮುಡಿಗೇರಿದ IPL ಟ್ರೋಫಿ

(ನ್ಯೂಸ್ ಕಡಬ) newskadaba.com ದೆಹಲಿ ನ. 11 :ಐಪಿಎಲ್ ಇತಿಹಾಸದಲ್ಲಿ 5ನೇ ಬಾರಿಗೆ ಟ್ರೋಫಿ ಗೆಲ್ಲುವ ಮೂಲಕ ಮುಂಬೈ ಇಂಡಿಯನ್ಸ್ ಈವರೆಗೆ ಯಾರೂ ಮಾಡಿರದ ಸಾಧನೆ ಮಾಡಿತು. ಜೊತೆಗೆ ಸತತ ಎರಡನೇ ಬಾರಿ ಕಪ್ ಗೆದ್ದ ಎರಡನೇ ತಂಡವಾಗಿದೆ.ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ದಾಖಲೆಯ ಐದನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ರಚಿಸಿತು. ಈ ಮೂಲಕ ಐಪಿಎಲ್ ನಡೆಸಿಯೇ ತೀರುತ್ತೇವೆ ಎಂದು ಟೊಂಕಕಟ್ಟಿ ನಿಂತ ಬಿಸಿಸಿಐ ಕೊನೆಗೂ ಇದರಲ್ಲಿ ಯಶಸ್ವಿಯಾಗಿದೆ.ಐಪಿಎಲ್ 2020ರ ಪ್ಲೇ ಆಫ್​ಗೆ […]

IPL 2020: ಮುಂಬೈ ಇಂಡಿಯನ್ಸ್ ಮುಡಿಗೇರಿದ IPL ಟ್ರೋಫಿ Read More »

ರಾಷ್ಟ್ರೀಯ ನ್ಯೂಸ್

ಕಳೆದ 24 ಗಂಟೆ ಅವಧಿಯಲ್ಲಿ 44,281 ಕೊರೊನಾ ಪ್ರಕರಣಗಳು ಪತ್ತೆ

(ನ್ಯೂಸ್ ಕಡಬ) newskadaba.com ನವದೆಹಲಿ ನ. 11: ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಸಕ್ರಿಯ ಪ್ರಕರಣಗಳಲ್ಲಿ ಭಾರಿ ಇಳಿಕೆ ಕಂಡು ಬಂದಿದ್ದು, ಐದು ಲಕ್ಷಕ್ಕಿಂತಲೂ ಕಡಿಮೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ 44,281 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 512 ಮಂದಿ ಸಾವನ್ನಪ್ಪಿದ್ದಾರೆ.   ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 86,36,012ಕ್ಕೆ ಏರಿಕೆಯಾಗಿದೆ. ಈವರೆಗೆ 1,27,571 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. 50,326 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯತನಕ 80,13,784 ಮಂದಿ ಗುಣಮುಖರಾಗಿದ್ದಾರೆ. ಸದ್ಯ 4,94,657 ಸಕ್ರಿಯ ಪ್ರಕರಣಗಳಿವೆ.    

ಕಳೆದ 24 ಗಂಟೆ ಅವಧಿಯಲ್ಲಿ 44,281 ಕೊರೊನಾ ಪ್ರಕರಣಗಳು ಪತ್ತೆ Read More »

ರಾಷ್ಟ್ರೀಯ ನ್ಯೂಸ್

ಶ್ರೀನಗರ: ಶೋಫಿಯಾನ್‍ನಲ್ಲಿ ಎನ್ ಕೌಂಟರ್ ➤ ಇಬ್ಬರು ಉಗ್ರರ ಹತ್ಯೆ

(ನ್ಯೂಸ್ ಕಡಬ) newskadaba.com ಶ್ರೀನಗರ, ನ.10: ದಕ್ಷಿಣ ಕಾಶ್ಮೀರದ ಸೋಪಿಯಾನ್‌ ಜಿಲ್ಲೆಯ ಕುಟ್ಪೊರಾ ಪ್ರದೇಶದಲ್ಲಿ ಇಂದು ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಯು ಉಗ್ರರಿಬ್ಬರನ್ನು  ಹೊಡೆದುರುಳಿಸಿದ್ದಾರೆ. ಜಮ್ಮು-ಕಾಶ್ಮೀರದ ಪೊಲೀಸರು ನಿಖರ ಮಾಹಿತಿ ಮೇರೆಗೆ ಸೇನೆಯ 34-ರಾಷ್ಟ್ರೀಯ ರೈಫಲ್ಸ್‌ ಮತ್ತು ಇಂದು ಕುಟ್ಪೊರಾ ಪ್ರದೇಶದಲ್ಲಿ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.  ಈ ವೇಳೆ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ಮೊದಲು ಗುಂಡು ಹಾರಿಸಿದರು. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದು, ಇವರು ಯಾವ ಸಂಘಟನೆಗೆ ಸೇರಿದವರು ಎಂಬುದರ ಬಗ್ಗೆ ಮಾಹಿತಿ ಲಭ್ಯವಿಲ್ಲ.

ಶ್ರೀನಗರ: ಶೋಫಿಯಾನ್‍ನಲ್ಲಿ ಎನ್ ಕೌಂಟರ್ ➤ ಇಬ್ಬರು ಉಗ್ರರ ಹತ್ಯೆ Read More »

ರಾಷ್ಟ್ರೀಯ ನ್ಯೂಸ್

ಡ್ರಗ್ಸ್ ದಂಧೆ ಬಗ್ಗೆ ವರದಿ ಮಾಡಿದ್ದಕ್ಕೆ ಪತ್ರಕರ್ತನ ಹತ್ಯೆ ➤ ಐದು ಮಂದಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ತಮಿಳುನಾಡು, ನ.10: ಟಿವಿ ಪತ್ರಕರ್ತನನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದಿದೆ. ಕೊಲೆಯಾದ ಪತ್ರಕರ್ತನನ್ನು ಇಸ್ರೇವೆಲ್ ಮೋಸೆಸ್(27) ಎಂದು ಗುರುತಿಸಲಾಗಿದೆ.     ಈತ ಡ್ರಗ್ಸ್ ದಂಧೆಯ ವರದಿ ಮಾಡುತ್ತಾರೆ ಎಂಬ ಭೀತಿಯಿಂದ ಕಳೆದ ದಿನ ಸಂಜೆ ಮೋಸಸ್ ರನ್ನು ಕರೆ ಮಾಡಿ ಕರೆಸಿಕೊಂಡ ಬಳಿಕ ದುಷ್ಕರ್ಮಿಗಳು ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಕೊಲೆ ಮಾಡಿ ಆತನನ್ನು ರಸ್ತೆಯಲ್ಲಿ ಎಸೆದು ಹೋಗಿದ್ದು, ಬಳಿಕ ಮನೆಯವರಿಗೆ ತಿಳಿದು ಈ ಸಂಬಂಧ

ಡ್ರಗ್ಸ್ ದಂಧೆ ಬಗ್ಗೆ ವರದಿ ಮಾಡಿದ್ದಕ್ಕೆ ಪತ್ರಕರ್ತನ ಹತ್ಯೆ ➤ ಐದು ಮಂದಿ ಪೊಲೀಸರ ವಶಕ್ಕೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣ ➤ ಶಾಸಕ ಕಮರುದ್ದೀನ್ ಬಂಧನ

(ನ್ಯೂಸ್ ಕಡಬ) newskadaba.com ಕೇರಳ, ನ. 07.  ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್ ಕಂಪನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರದ ಮುಸ್ಲಿಂ ಲೀಗ್ ಶಾಸಕರಾದ ಎಂ.ಸಿ ಕಮರುದ್ದೀನ್ ಅವರನ್ನು ಬಂಧಿಸಲಾಗಿದೆ. ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್ ಕಂಪನಿ ಹೆಸರಿನಲ್ಲಿ 700 ಜನರು ಸುಮಾರು 130 ಕೋಟಿ ರೂ. ಗಳನ್ನುಈ ಸಂಸ್ಥೆಯಲ್ಲಿ ಠೇವಣಿ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ 109 ಪ್ರಕರಣಗಳು ದಾಖಲಾಗಿದ್ದು, 15 ಕೋಟಿ ರೂ.ಗಳ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಪಿ ವಿವೇಕ್ ಕುಮಾರ್ ನೇತೃತ್ವದ

ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣ ➤ ಶಾಸಕ ಕಮರುದ್ದೀನ್ ಬಂಧನ Read More »

ರಾಷ್ಟ್ರೀಯ ನ್ಯೂಸ್

ಹಲವು ನಿರ್ಬಂಧಗಳೊಂದಿಗೆ ಹಜ್ ಯಾತ್ರೆಗೆ ಡೇಟ್ ಫಿಕ್ಸ್ ➤ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

(ನ್ಯೂಸ್ ಕಡಬ) newskadaba.com ನವದೆಹಲಿ, ನ. 07. 2021ನೇ ಸಾಲಿನ ಹಜ್‌ ಯಾತ್ರೆಯು ಜೂ.26 ರಿಂದ ಆರಂಭವಾಗಲಿದೆ ಎಂದು ಭಾರತೀಯ ಹಜ್‌ ಸಮಿತಿಯು ತಿಳಿಸಿದೆ. ಕೊರೋನಾ ಪರಿಸ್ಥಿತಿಯಿಂದಾಗಿ ಈ ಬಾರಿ ನಿರ್ಬಂಧಗಳನ್ನು ವಿಧಿಸಲಾಗಿದ್ದು, 18-65 ವರ್ಷದವರಿಗೆ ಮಾತ್ರ ಈ ಬಾರಿಯ ಹಜ್  ಯಾತ್ರೆಗೆ ಅವಕಾಶ ಇರಲಿದೆ. ಇದಕ್ಕಾಗಿ ಅರ್ಜಿ ಸಲ್ಲಿಕೆಯು ಇಂದಿನಿಂದ  ಆರಂಭಗೊಂಡು, ಡಿ.10ರಂದು ಅರ್ಜಿ ಸಲ್ಲಿಕೆಗೆ ಕಡೇ ದಿನವಾಗಿದೆ. ಇದರಲ್ಲಿ 500 ಸೀಟುಗಳನ್ನು ಮಾತ್ರ ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದು ತಿಳಿಸಿದೆ. ಪುರುಷ ಜೊತೆಗಾರರು ಇಲ್ಲದ ಮಹಿಳೆಯರು,

ಹಲವು ನಿರ್ಬಂಧಗಳೊಂದಿಗೆ ಹಜ್ ಯಾತ್ರೆಗೆ ಡೇಟ್ ಫಿಕ್ಸ್ ➤ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಯು.ಪಿ: ಸಿಎಎ ಪ್ರತಿಭಟನಾಕಾರರ ಮಾಹಿತಿ ನೀಡಿದವರಿಗೆ ನಗದು ಬಹುಮಾನ

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ನ. 07. ಸಿಎಎ ಹಾಗೂ ಎನ್.ಆರ್.ಸಿ ನೋಂದಣಿಯ ವಿರುದ್ಧ ನಡೆದ ಉಗ್ರ ಪ್ರತಿಭಟನೆಯ ನಂತರ ತಲೆಮರೆಸಿಕೊಂಡಿರುವ 14 ಪ್ರತಿಭಟನಾಕಾರರ ಕುರಿತು ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಯು.ಪಿ ಸರ್ಕಾರ ಘೋಷಣೆ ಮಾಡಿದೆ. ಕಳೆದ ಡಿಸೆಂಬರ್‌ನಲ್ಲಿ ಲಖನೌ ನಲ್ಲಿ ನಡೆದ ಸಿಎಎ ಹಾಗೂ ಎನ್.ಆರ್.ಸಿ ವಿರುದ್ಧ ನಡೆದ ಪ್ರತಿಭಟನೆಯು ಹಿಂಸಾತ್ಮಕ ರೂಪವನ್ನು ತಾಳಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತರು ಹಾಗೂ ನಿವೃತ್ತ ಐಪಿಎಸ್‌ ಅಧಿಕಾರಿಗಳ ಸಹಿತ  40

ಯು.ಪಿ: ಸಿಎಎ ಪ್ರತಿಭಟನಾಕಾರರ ಮಾಹಿತಿ ನೀಡಿದವರಿಗೆ ನಗದು ಬಹುಮಾನ Read More »

ರಾಷ್ಟ್ರೀಯ ನ್ಯೂಸ್

ಕೇರಳ: ಪರಿಶಿಷ್ಟ ಪಂಗಡ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸುತ್ತಿರುವ ದೇವಸ್ವಂ ಬೋರ್ಡ್

(ನ್ಯೂಸ್ ಕಡಬ) newskadaba.com ಕೇರಳ ನ. 07:  ಮೊದಲನೆ ಬಾರಿಗೆ ಕೇರಳದ ತಿರುವಾಂಕೂರು ದೇವಸ್ವಂ ಬೋರ್ಡ್(TDB)ನ ಅಡಿಯಲ್ಲಿ ನಿರ್ವಹಣೆಯಾಗುತ್ತಿರುವ ದೇವಾಲಯವೊಂದಕ್ಕೆ ಪರಿಶಿಷ್ಟ ಪಂಗಡದ ವ್ಯಕ್ತಿ ಅರ್ಚಕರಾಗಿ ನೇಮಕವಾಗಲಿದ್ದಾರೆ.   TDB ಯೂ ಸ್ವಾಯತ್ತ ಸಂಸ್ಥೆಯಾಗಿದ್ದು, ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇರಿದಂತೆ ಕೇರಳದ ದಕ್ಷಿಣದಲ್ಲಿ 1,200 ದೇವಾಲಯಗಳನ್ನು ನಿರ್ವಹಿಸುತ್ತಿದೆ. ಈ ದೇವಾಲಯಗಳಲ್ಲಿ 18 ಪರಿಶಿಷ್ಟ ಜಾತಿ ಹಾಗೂ 1 ಪರಿಶಿಷ್ಟ ಪಂಗಡದ ಅರ್ಚಕರು ಸೇರಿ ಒಟ್ಟು 19 ಜನರನ್ನು ನೇಮಿಸಲು ತಿರುವಾಂಕೂರು ದೇವಸ್ವಂ ಬೋರ್ಡ್ ನಿರ್ಧರಿಸಿದೆ.”TDB ಅಡಿಯಲ್ಲಿ ಬರುವ

ಕೇರಳ: ಪರಿಶಿಷ್ಟ ಪಂಗಡ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸುತ್ತಿರುವ ದೇವಸ್ವಂ ಬೋರ್ಡ್ Read More »

ರಾಷ್ಟ್ರೀಯ ನ್ಯೂಸ್

ಪುಲ್ವಾಮಾದಲ್ಲಿ ಎನ್​ಕೌಂಟರ್ ➤ ಓರ್ವ ಉಗ್ರನ ಹತ್ಯೆ

(ನ್ಯೂಸ್ ಕಡಬ) newskadaba.com ಪುಲ್ವಾಮ, ನ. 06: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆ ಪಾಂಪೋರ್ ನಲ್ಲಿ ಉಗ್ರ ನಿಗ್ರಹಕ ಕಾರ್ಯಚರಣೆ ಮುಂದುವರೆದಿದ್ದು, ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿ, ಇಂದು ಓರ್ವ ಉಗ್ರನನ್ನು ಹತ್ಯೆ ಗೈದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.       ಪಾಂಪೋರ್’ನ ಲಾಲ್ಪೊರಾ ಗ್ರಾಮದಲ್ಲಿ ಉಗ್ರರು ಅಡಗಿ ಕುಳಿತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಳೆದ ರಾತ್ರಿಯಿಂದಲೂ ಕಾರ್ಯಾಚರಣೆ ನಡೆಸುತ್ತಿದ್ದರು. ಶೋಧ ಕಾರ್ಯ ಮುಂದುವರಿಯುತ್ತಿದ್ದ ಸಂದರ್ಭದಲ್ಲಿ ಉಗ್ರರು ಭದ್ರತಾ ಪಡೆ ಯೋಧರ ಮೇಲೆ

ಪುಲ್ವಾಮಾದಲ್ಲಿ ಎನ್​ಕೌಂಟರ್ ➤ ಓರ್ವ ಉಗ್ರನ ಹತ್ಯೆ Read More »

ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಗುಂಡು ಹಾರಾಟ ಹಾಗೂ ಕೊಲೆ ಯತ್ನ ಹಿನ್ನೆಲೆ ➤ ಆರೋಪಿಗಳನ್ನು ಹಿಡಿಯಲೆತ್ನಿಸಿದ ಪೊಲೀಸ್ ಜೀಪಿಗೆ ಢಿಕ್ಕಿ ಹೊಡೆದು ಪರಾರಿಯಾದ ಕಿರಾತಕರು

(ನ್ಯೂಸ್ ಕಡಬ) newskadaba.com ಕಾಸರಗೋಡು, ನ. 04. ಆರೋಪಿಗಳನ್ನು ಹಿಡಿಯಲೆತ್ನಿಸಿದ ಪೊಲೀಸ್‌ ಜೀಪಿಗೆ ಕಾರು ಢಿಕ್ಕಿ ಹೊಡೆಸಿ ಪರಾರಿಯಾದ ಘಟನೆ ಮಂಜೇಶ್ವರ ಸಮೀಪದ ಕೊಡ್ಲಮೊಗರು ಎಂಬಲ್ಲಿ ನಡೆದಿದೆ. ಇತ್ತೀಚೆಗೆ ಬಂದ್ಯೋಡು ಎಂಬಲ್ಲಿ ನಡೆದ ಗುಂಡು ಹಾರಾಟ ಹಾಗೂ ಕೊಲೆಗೆ ಯತ್ನಿಸಿದ್ದ ಆರೋಪಿಗಳಾದ ಮೊಯಿದಿನ್ ಶಬೀರ್ ಹಾಗೂ ತಂಡವು ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಕಾಸರಗೋಡು ಡಿವೈಎಸ್‌ಪಿ ನೇತೃತ್ವದ ಪೊಲೀಸರು ಕಾರನ್ನು ತಡೆದರೂ, ಆರೋಪಿಗಳು ಪೊಲೀಸರ ಜೀಪಿಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರ

ಕಾಸರಗೋಡು: ಗುಂಡು ಹಾರಾಟ ಹಾಗೂ ಕೊಲೆ ಯತ್ನ ಹಿನ್ನೆಲೆ ➤ ಆರೋಪಿಗಳನ್ನು ಹಿಡಿಯಲೆತ್ನಿಸಿದ ಪೊಲೀಸ್ ಜೀಪಿಗೆ ಢಿಕ್ಕಿ ಹೊಡೆದು ಪರಾರಿಯಾದ ಕಿರಾತಕರು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top