ರಾಷ್ಟ್ರೀಯ ನ್ಯೂಸ್

ಕೇರಳದಲ್ಲಿ ವ್ಯಾಪಿಸಿದ ಪಕ್ಷಿ ಜ್ವರ ➤ 6000 ಕ್ಕೂ ಹೆಚ್ಚಿನ ಪಕ್ಷಿಗಳು ನಾಶ

(ನ್ಯೂಸ್ ಕಡಬ) newskadaba.com  ಕೊಟ್ಟಾಯಂ, ಡಿ.26. ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಪಕ್ಷಿ ಜ್ವರ ಹರಡಿರುವುದು ಧೃಢಪಟ್ಟಿದ್ದು, ಈ ಜಿಲ್ಲೆಯ ಮೂರು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 6,017 ಪಕ್ಷಿಗಳನ್ನು ನಾಶ ಪಡಿಸಲಾಗಿದೆ. ಈ ಪೈಕಿ ಬಾತುಕೋಳಿಗಳೇ ಹೆಚ್ಚಿವೆ ಎಂದು ವರದಿ ತಿಳಿಸಿದೆ. ಈ ನಾಶವು ವೆಚೂರ್, ನೀಂದೂರು ಮತ್ತು ಅರ್ಪೂಕರ ಪಂಚಾಯತಿ ವ್ಯಾಪ್ತಿಗಳಿಂದ ವರದಿಯಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ. ವೆಚೂರು ಪಂಚಾಯಿತಿ ವ್ಯಾಪ್ತಿಯಲ್ಲಿ 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನೀಂದೂರ್ ಪಂಚಾಯಿತಿ ವ್ಯಾಪ್ತಿಯಲ್ಲಿ 2,753 ಬಾತುಕೋಳಿಗಳು […]

ಕೇರಳದಲ್ಲಿ ವ್ಯಾಪಿಸಿದ ಪಕ್ಷಿ ಜ್ವರ ➤ 6000 ಕ್ಕೂ ಹೆಚ್ಚಿನ ಪಕ್ಷಿಗಳು ನಾಶ Read More »

ರಾಷ್ಟ್ರೀಯ ನ್ಯೂಸ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಗ್ಯದಲ್ಲಿ ಏರುಪೇರು ➤ ಆಸ್ಪತ್ರೆಗೆ ದಾಖಲು..!

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 26. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ  ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ನಿರ್ಮಲಾ ಸೀತಾರಾಮನ್ ಆರೋಗ್ಯ ಸ್ಥಿತಿಯ ಬಗ್ಗೆ ಇನ್ನೂ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಗ್ಯದಲ್ಲಿ ಏರುಪೇರು ➤ ಆಸ್ಪತ್ರೆಗೆ ದಾಖಲು..! Read More »

ರಾಷ್ಟ್ರೀಯ ನ್ಯೂಸ್

ಆಹಾರ ಸೇವಿಸಿ 40 ಮಂದಿ ಅಸ್ವಸ್ಥ…!     

(ನ್ಯೂಸ್ ಕಡಬ) newskadaba.com ಕೊರ್ಬಾ, ಡಿ. 26. ಮರಣದ ನಂತರದ ಆಚರಣೆಗಾಗಿ ತಯಾರಿಸಲಾದ ಉಳಿದ ಆಹಾರವನ್ನು ಸೇವಿಸಿದ ನಂತರ ನಲವತ್ತು ಜನರು ಅಸ್ವಸ್ಥರಾದ ಘಟನೆ ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಂಭವಿಸಿದೆ. ಸಂತ್ರಸ್ತರು, ರಾಮಾನುಜನಗರ ಅಭಿವೃದ್ಧಿ ಬ್ಲಾಕ್‌ನ ವಿಶುನ್‌ಪುರ ಗ್ರಾಮದಲ್ಲಿ ಆಹಾರವನ್ನು ಸೇವಿಸಿದ್ದಾರೆ ಎಂದು ಸೂರಜ್‌ಪುರ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ಡಾ.ಆರ್.ಎಸ್.ಸಿಂಗ್ ತಿಳಿಸಿದ್ದಾರೆ ಎನ್ನಲಾಗಿದೆ. ನಂತರ ಅವರೆಲ್ಲರನ್ನೂ ಸೂರಜ್‌ಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಅವರು ‘ದಸ್ಗಾತ್ರ’ (ವ್ಯಕ್ತಿಯ ಮರಣದ

ಆಹಾರ ಸೇವಿಸಿ 40 ಮಂದಿ ಅಸ್ವಸ್ಥ…!      Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರೈಲು ಢಿಕ್ಕಿ- 90 ಕುರಿಗಳು ಹಾಗೂ 8 ರಣಹದ್ದುಗಳು ಸಾವು         

(ನ್ಯೂಸ್ ಕಡಬ) newskadaba.com ಲಕ್ನೋ, ಡಿ. 26. ರೈಲು ಢಿಕ್ಕಿ ಹೊಡೆದ ಪರಿಣಾಮ 90 ಕುರಿಗಳು ಮತ್ತು 8 ರಣಹದ್ದುಗಳು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಬಲರಾಮಪುರದ ಪಂಚ ಪರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಸರಯು ಸೇತುವೆ ಬಳಿ ಸಂಭವಿಸಿದೆ. ನಾಯಿಗಳು ಕುರಿಗಳ ಹಿಂಡನ್ನು ಅಟ್ಟಾಡಿಸಿಕೊಂಡು ಬಂದಿದ್ದರಿಂದ ಗಾಬರಿಗೊಂಡ ಕುರಿಗಳು ರೈಲ್ವೆ ಹಳಿ ಮೇಲೆ ಬಂದಿವೆ. ಈ ಸಂದರ್ಭ ಆ ಮಾರ್ಗದಲ್ಲಿ ಬಂದ ರೈಲೊಂದು ಢಿಕ್ಕಿ ಹೊಡೆದು ಕುರಿಗಳು ಸಾವಿಗೀಡಾಗಿವೆ. ಇದಾದ ಸ್ವಲ್ಪ ಸಮಯದ ಬಳಿಕ ಸತ್ತ ಕುರಿಗಳ

ರೈಲು ಢಿಕ್ಕಿ- 90 ಕುರಿಗಳು ಹಾಗೂ 8 ರಣಹದ್ದುಗಳು ಸಾವು          Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಿರ್ಮಲಾ ಸೀತಾರಾಮನ್ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 26. ಕೇಂದ್ರ ಹಣಕಾಸು ಹಾಗೂ ಕಾರ್ಪೊರೇಟ್‌ ಸಚಿವೆ ನಿರ್ಮಲಾ ಸೀತಾರಾಮನ್‌ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ಟ್ವೀಟ್‌ ಮೂಲಕ ಮಾಹಿತಿ ನೀಡಿದೆ.   63 ವರ್ಷ ವಯಸ್ಸಿನ ಕೇಂದ್ರ ಸಚಿವೆಯನ್ನು ಸೋಮವಾರ ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಆಸ್ಪತ್ರೆಗೆ ಕರೆದೊಯ್ದಿದ್ದು, ಸಚಿವೆಯನ್ನು ಖಾಸಗಿ ವಾರ್ಡ್‌ನಲ್ಲಿ ಸಾಮಾನ್ಯ ತಪಾಸಣೆಗಾಗಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ನಿರ್ಮಲಾ ಸೀತಾರಾಮನ್ ಆಸ್ಪತ್ರೆಗೆ ದಾಖಲು Read More »

ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಒಳ ಉಡುಪಿನಲ್ಲಿಟ್ಟು ಚಿನ್ನ ಸಾಗಾಟ ➤ ಯುವತಿ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ. 26. ಒಳ ಉಡುಪಿನಲ್ಲಿ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ ಆರೋಪಿ ಸಹಿತ ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಕಲ್ಲಿಕೋಟೆ ಕರಿಪ್ಪೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಬಂಧಿತ ಯುವತಿಯನ್ನು ಕಾಸರಗೋಡಿನ ಶಹಲಾ (19) ಎಂದು ಗುರುತಿಸಲಾಗಿದೆ. ಈಕೆ ಭಾನುವಾರದಂದು ರಾತ್ರಿ ದುಬೈಯಿಂದ ಬಂದು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಈಕೆಯನ್ನು, ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ವಶಕ್ಕೆ ಪಡೆದು ಹಲವು ಸಮಯ ಯುವತಿಯನ್ನು ವಿಚಾರಣೆಗೊಳಪಡಿಸಿದರೂ ಸ್ಪಷ್ಟ ಉತ್ತರ

ಕಾಸರಗೋಡು: ಒಳ ಉಡುಪಿನಲ್ಲಿಟ್ಟು ಚಿನ್ನ ಸಾಗಾಟ ➤ ಯುವತಿ ಅರೆಸ್ಟ್..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದಟ್ಟ ಮಂಜು, ಶೀತಗಾಳಿ ➤ ರಸ್ತೆ ಹಾಗೂ ರೈಲು ಸಂಚಾರದಲ್ಲಿ ವ್ಯತ್ಯಯ    

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 26. ದೆಹಲಿಯ ಕೆಲವು ಭಾಗಗಳಲ್ಲಿ ನಸುಕಿನ ಜಾವದಿಂದಲೇ ತಣ್ಣನೆಯ ಗಾಳಿ ಬೀಸುತ್ತಿದ್ದು, ಹಲವು ಪ್ರದೇಶಗಳಲ್ಲಿ ದಟ್ಟವಾದ ಮಂಜು ಕವಿದಿರುವುದರಿಂದ ರಸ್ತೆ ಮತ್ತು ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ. ಹತ್ತು ರೈಲುಗಳು 1:45 ರಿಂದ 3:30 ಗಂಟೆಗಳವರೆಗೆ ತಡವಾಗಿ ಓಡುತ್ತಿವೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ. ದೆಹಲಿಯ ಪ್ರಾಥಮಿಕ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್ ವೀಕ್ಷಣಾಲಯವು ಕನಿಷ್ಠ 5 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದೆ. ಗರಿಷ್ಠ ತಾಪಮಾನವು ಸುಮಾರು 19 ಡಿಗ್ರಿ

ದಟ್ಟ ಮಂಜು, ಶೀತಗಾಳಿ ➤ ರಸ್ತೆ ಹಾಗೂ ರೈಲು ಸಂಚಾರದಲ್ಲಿ ವ್ಯತ್ಯಯ     Read More »

ರಾಷ್ಟ್ರೀಯ ನ್ಯೂಸ್

ಮದುವೆಯಾಗಲು ನಿರಾಕರಿಸಿದ ಯುವತಿಗೆ ಥಳಿತ ➤ ಯುವಕ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಡಿ. 26. ಯುವತಿ ಮದುವೆಗೆ ನಿರಾಕರಿಸಿದಳೆಂದು ಯುವಕನೋರ್ವ ಹುಡುಗಿಯ ಕಪಾಳಕ್ಕೆ ಹೊಡೆದು ಕೂದಲನ್ನು ಹಿಡಿದೆಳೆದು ನೆಲಕ್ಕೆ ನೂಕಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು 24 ವರ್ಷದ ಪಂಕಜ್​ ತ್ರಿಪಾಠಿ ದು ಗುರುತಿಸಲಾಗಿದೆ. ತನ್ನನ್ನು ಮದುವೆಯಾಗಲು ಯುವತಿ ನಿರಾಕರಿಸಿದ್ದಕ್ಕೆ ಆತ ಹೀಗೆ ಕ್ರೂರವಾಗಿ ಹಲ್ಲೆ ನಡೆಸಿದ್ಧಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆತ ಪರಾರಿಯಾಗಿದ್ದು, ಮಿರ್ಜಾಪುರದಲ್ಲಿ ಆತನನ್ನು ಪೊಲೀಸರು ಬಂಧಿಸಿದಲ್ಲದೇ ಅವನ ಮನೆಯನ್ನು ನೆಲಸಮಗೊಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಡ್ರೈವರ್​

ಮದುವೆಯಾಗಲು ನಿರಾಕರಿಸಿದ ಯುವತಿಗೆ ಥಳಿತ ➤ ಯುವಕ ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದೇಶದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಮಾಣ ಹೆಚ್ಚಳ..!                                    

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 26. ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಶೇಕಡಾ ಐದಕ್ಕಿಂತ ಹೆಚ್ಚಾಗಿದ್ದು,  ಕಳೆದೆರಡು ವರ್ಷಗಳಲ್ಲಿ ಈ ಮಾರಣಾಂತಿಕ ಕಾಯಿಲೆಯ ಒಟ್ಟಾರೆ ಪ್ರಕರಣಗಳು 34,000 ಕ್ಕಿಂತ ಹೆಚ್ಚಾಗಿವೆ ಎಂದು ಸರ್ಕಾರಿ ಅಂಕಿಅಂಶಗಳು ತಿಳಿಸಿವೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ. ದಕ್ಷಿಣದ ರಾಜ್ಯಗಳಲ್ಲಿ, ತಮಿಳುನಾಡಿನಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚು ಕಂಡುಬಂದಿವೆ, ನಂತರ ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳಿವೆ. ಶ್ವಾಸಕೋಶದ

ದೇಶದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಮಾಣ ಹೆಚ್ಚಳ..!                                     Read More »

ರಾಷ್ಟ್ರೀಯ ನ್ಯೂಸ್

ನೀರು ತುಂಬಿದ್ದ ಬಕೆಟ್ ಗೆ ಬಿದ್ದು 11 ತಿಂಗಳ ಕಂದಮ್ಮ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ. 25. ಹನ್ನೊಂದು ಹಸುಗೂಸೊಂದು ಬಕೆಟ್ ನ ನೀರಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಕಾಞಂಗಾಡ್ ಅಂಬಲತ್ತರ ಎಂಬಲ್ಲಿ ನಡೆದಿದೆ. ಮೃತ ಮಗುವನ್ನು ಅಬ್ದುಲ್ ಜಬ್ಬಾರ್ ಹಾಗೂ ರಝಿಯಾ ದಂಪತಿ ಪುತ್ರ ಮಹಮ್ಮದ್ ರಿಝ್ವಾನ್ ಎಂದು ಗುರುತಿಸಲಾಗಿದೆ. ತಾಯಿ ಮಗುವಿಗೆ ಆಹಾರ ತಯಾರಿಸಲೆಂದು ಅಡುಗೆ ಕೋಣೆಗೆ ಹೋದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ನೀರು ತುಂಬಿದ್ದ ಬಕೆಟ್ ಗೆ ಬಿದ್ದು 11 ತಿಂಗಳ ಕಂದಮ್ಮ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top