ರಾಷ್ಟ್ರೀಯ ನ್ಯೂಸ್

ಸರ್ಕಾರಿ ಬಸ್ ಮೇಲೆ ಜಲ್ಲಿ ತುಂಬಿದ್ದ ಟಿಪ್ಪರ್ ಬಿದ್ದು: 20 ಮಂದಿ ಸಾವು

(ನ್ಯೂಸ್‌ ಕಡಬ) newskadaba.com,  ನ.03 ಹೈದರಾಬಾದ್:  ಬಸ್ ಮೇಲೆ ಜಲ್ಲಿ ತುಂಬಿದ್ದ ಟಿಪ್ಪರ್ ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಟ ೨೦ ಮಂದಿ ಪ್ರಯಾಣಿಕರು ಸಾವನ್ನಪ್ಪಿ ಹಲವರು ಗಂಭೀರ ಗಾಯಗೊಂಡಿರುವ ದಾರುಣ ಘಟನೆ ಹೈದರಾಬಾದ್-ಬಿಜಾಪುರ ರಾಷ್ಟ್ರೀಯ ಹೆದ್ದಾರಿಯ ರಂಗಾರೆಡ್ಡಿ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ತಾಲೂಕಿನ ಮಿರಾಜಗುಡಾ ಬಳಿ ಆರ್‌ಟಿಸಿ ಬಸ್ ಮೇಲೆ ಟಿಪ್ಪರ್‌ನಲ್ಲಿದ್ದ ಜಲ್ಲಿಕಲ್ಲು ಬಿದ್ದ ಪರಿಣಾಮ ೨೦ ಮಂದಿ ಪ್ರಯಾಣಿಕರು ಮೃತಪಟ್ಟಿದ್ದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಯಾಣಿಕರು ಜಲ್ಲಿಕಲ್ಲಿನ ಅಡಿ […]

ಸರ್ಕಾರಿ ಬಸ್ ಮೇಲೆ ಜಲ್ಲಿ ತುಂಬಿದ್ದ ಟಿಪ್ಪರ್ ಬಿದ್ದು: 20 ಮಂದಿ ಸಾವು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ʼಜಗತ್ತನ್ನು 150 ಬಾರಿ ಸ್ಫೋಟಿಸುವಷ್ಟು ಪರಮಾಣು ಶಸ್ತ್ರಾಸ್ತ್ರ ಇದೆ; ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

(ನ್ಯೂಸ್‌ ಕಡಬ) newskadaba.com,  ನ.03 ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು 1992 ರಲ್ಲಿ ಸ್ಥಗಿತಗೊಳಿಸಿದ್ದ ಪರಮಾಣು ಶಸ್ತ್ರಾಸ್ತ್ರ ಪುನರ್ ಆರಂಭಿಸುವುದಾಗಿ ಘೋಷಣೆ ಮಾಡಿದ ಕೆಲವೇ ದಿನಗಳ ಬಳಿಕ ಜಗತ್ತನ್ನು 150 ಬಾರಿ ಸ್ಫೋಟಿಸಲು ನಮ್ಮಲ್ಲಿ ಸಾಕಷ್ಟು ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ. ಎಂದು ಆರೋಪಿಸುತ್ತಿರುವ ಮಧ್ಯೆ ಈ ಹೇಳಿಕೆಗಳು ಬಂದಿವೆ. ಬೀಜಿಂಗ್ ಅಮೆರಿಕದ ಬೌದ್ಧಿಕ ಆಸ್ತಿ ಮತ್ತು ಅಮೆರಿಕನ್ನರ ವೈಯಕ್ತಿಕ ಡೇಟಾವನ್ನು ಕದ್ದ ಆರೋಪವನ್ನೂ ಹೊಂದಿದೆ. ಚೀನಾ ಬಗ್ಗೆ ಮಾತನಾಡಿದ ಅವರು ಇದು ತುಂಬಾ ಸ್ಪರ್ಧಾತ್ಮಕ

ʼಜಗತ್ತನ್ನು 150 ಬಾರಿ ಸ್ಫೋಟಿಸುವಷ್ಟು ಪರಮಾಣು ಶಸ್ತ್ರಾಸ್ತ್ರ ಇದೆ; ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮೆಕ್ಸಿಕೋ ಸೂಪರ್ ಮಾರ್ಕೆಟ್‌ನಲ್ಲಿ ಭೀಕರ ಬೆಂಕಿ ಅವಘಡ – 23 ಜನ ಸಾವು

(ನ್ಯೂಸ್‌ ಕಡಬ) newskadaba.com,  ನ.03 ಮೆಕ್ಸಿಕೋ: ಮೆಕ್ಸಿಕೋದ ಸೊನಾರಾ ರಾಜ್ಯದಲ್ಲಿರುವ ಒಂದು ಸೂಪರ್ ಮಾರ್ಕೆಟ್‌ನಲ್ಲಿ ಗುರುವಾರ ರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 23 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ ಸಂಭವಿಸಿದ ಸಮಯದಲ್ಲಿ ಮಾರ್ಕೆಟ್ ಒಳಗೆ ಗ್ರಾಹಕರು ಹಾಗೂ ಸಿಬ್ಬಂದಿ ಇದ್ದರೆಂದು ವರದಿಯಾಗಿದೆ. ಬೆಂಕಿ ಅಷ್ಟರ ಮಟ್ಟಿಗೆ ಉಗ್ರವಾಗಿ ಹೊತ್ತಿಕೊಂಡಿತ್ತು ಎಂಬುದಾಗಿ ಪ್ರತ್ಯಕ್ಷ ಸಾಕ್ಷಿಗಳು ತಿಳಿಸಿದ್ದಾರೆ. ಮಾರ್ಕೆಟ್ ಹೊರಗೆ ನಿಲ್ಲಿಸಿದ್ದ ಹಲವು ಕಾರುಗಳಿಗೂ ಬೆಂಕಿ ತಗುಲಿ ಅವು ಸಂಪೂರ್ಣ

ಮೆಕ್ಸಿಕೋ ಸೂಪರ್ ಮಾರ್ಕೆಟ್‌ನಲ್ಲಿ ಭೀಕರ ಬೆಂಕಿ ಅವಘಡ – 23 ಜನ ಸಾವು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇನ್ಮುಂದೆ ಕೇರಳ ಕಡುಬಡತನ ಮುಕ್ತ ರಾಜ್ಯ

(ನ್ಯೂಸ್‌ ಕಡಬ) newskadaba.com,  ನ..01: ಕೇರಳ ರಾಜ್ಯವನ್ನು ಕಡು ಬಡತನ ಮುಕ್ತ ರಾಜ್ಯವೆಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಇದು ಕೇರಳ ಸರ್ಕಾರ ಅನುಷ್ಠಾನಗೊಳಿಸಿರುವ ತೀವ್ರ ಬಡತನ ನಿರ್ಮೂಲನಾ ಯೋಜನೆಯ ಫಲಶ್ರುತಿ ಎಂದೇ ಪರಿಗಣಿಸಲಾಗುತ್ತದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳ ರಾಜ್ಯದ ಸಂಸ್ಥಾಪನಾ ದಿನವಾದ ನವೆಂಬರ್ 1ರಂದು ತಿರುವನಂತಪುರದ ಸೆಂಟ್ರಲ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳವನ್ನು ಅತ್ಯಂತ ಹೆಚ್ಚಿನ ಬಡತನದಿಂದ ಸಂಪೂರ್ಣವಾಗಿ ಮುಕ್ತಗೊಳಿಸಿದ ಭಾರತದ ಮೊದಲ ರಾಜ್ಯವೆಂದು ಔಪಚಾರಿಕವಾಗಿ ಘೋಷಿಸಿದರು. ಈ ಮೂಲಕ ಕೇರಳ ರಾಜ್ಯ ರಾಷ್ಟ್ರ ಮತ್ತು

ಇನ್ಮುಂದೆ ಕೇರಳ ಕಡುಬಡತನ ಮುಕ್ತ ರಾಜ್ಯ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಯೋತ್ಪಾದನೆಗೆ ಹಣಕಾಸು ನೆರವು: ರಾಜಸ್ಥಾನದಲ್ಲಿ 3 ಮೌಲ್ವಿಗಳು ಸೇರಿ ಐವರು ಶಂಕಿತ ಭಯೋತ್ಪಾದಕರ ಬಂಧನ

(ನ್ಯೂಸ್‌ ಕಡಬ) newskadaba.com,  ನ..01: ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇರೆಗೆ 3 ಮೌಲ್ವಿಗಳು ಸೇರಿದಂತೆ ಐವರು ಶಂಕಿತ ಭಯೋತ್ಪಾದಕರನ್ನು ರಾಜಸ್ಥಾನ ಎಟಿಎಸ್ ಬಂಧಿಸಿದೆ. ಅಯೂಬ್, ಮಸೂದ್ ಮತ್ತು ಉಸ್ಮಾನ್ ಬಂಧಿತ ಮೌಲ್ವಿಗಳು. ಇನ್ನೂ ಕರೌಲ್‌ನ ಜುನೈದ್ ಎಂಬಾತನನ್ನು ಬಂಧಿಸಲಾಗಿದ್ದು, ಇನ್ನೋರ್ವನ ಗುರುತು ಪತ್ತೆಯಾಗಿಲ್ಲ. ಬಂಧಿತರಲ್ಲಿ ಒಬ್ಬನಾದ ಜೋಧ್‌ಪುರದ ಚೋಖಾದ ಅರೇಬಿಯಾ ಮದರಸಾದ ಧರ್ಮಗುರು ಆಯೂಬ್‌ನಿಂದ ಕೆಲವು ದಾಖಲೆಗಳನ್ನು ಎಟಿಎಸ್ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಆತ 13 ವರ್ಷಗಳಿಂದ ಮದರಸಾದಲ್ಲಿ ಕೆಲಸ ಮಾಡುತ್ತಿದ್ದ. ಇನ್ನೂ ಮದರಸಾದ

ಭಯೋತ್ಪಾದನೆಗೆ ಹಣಕಾಸು ನೆರವು: ರಾಜಸ್ಥಾನದಲ್ಲಿ 3 ಮೌಲ್ವಿಗಳು ಸೇರಿ ಐವರು ಶಂಕಿತ ಭಯೋತ್ಪಾದಕರ ಬಂಧನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರತದಲ್ಲಿ ನೇಮಕಾತಿ ಆರಂಭಿಸಿದ ಸ್ಪೇಸ್‌‍ ಎಕ್ಸ್

(ನ್ಯೂಸ್‌ ಕಡಬ) newskadaba.com,  ನ.01 ಮುಂಬೈ: ಎಲಾನ್‌ ಮಸ್ಕ್‌ ಒಡೆತನದ ಸ್ಪೇಸ್‌‍ X ಸಂಸ್ಥೆ ಭಾರತದಲ್ಲಿ ತನ್ನ ಮೊದಲ ಸುತ್ತಿನ ನೇಮಕಾತಿಯನ್ನು ಪ್ರಾರಂಭಿಸಿದೆ.ಭಾರತದಲ್ಲಿ ತನ್ನ ಬಹುನಿರೀಕ್ಷಿತ ಉಪ ಗ್ರಹ ಬ್ರಾಡ್‌ಬ್ಯಾಂಡ್‌‍ ಬಿಡುಗಡೆಯತ್ತ ಮಹತ್ವದ ಹೆಜ್ಜೆಯಾಗಿ, ಸ್ಪೇಸ್‌‍X ಒಡೆತನದ ಸ್ಟಾರ್‌ಲಿಂಕ್‌ ದೇಶದಲ್ಲಿ ತನ್ನ ಮೊದಲ ಸುತ್ತಿನ ನೇಮಕಾತಿಯನ್ನು ಪ್ರಾರಂಭಿಸಿದೆ.ತನ್ನ ನೇಮಕಾತಿ ಅಭಿಯಾನದ ಭಾಗವಾಗಿ, ಎಲೋನ್‌ ಮಸ್ಕ್‌ ನಡೆಸುವ ಕಂಪನಿಯು ತನ್ನ ಲಿಂಕ್ಡ್ ಇನ್‌ ಮತ್ತು ಸ್ಪೇಸ್‌‍ಎಕ್‌್ಸ ವೃತ್ತಿಜೀವನದ ಪೋರ್ಟಲ್‌ನಲ್ಲಿ ಹಲವಾರು ಹುದ್ದೆಗಳನ್ನು ಪೋಸ್ಟ್‌ ಮಾಡಿದೆ. ಕಂಪನಿಯು ಅರ್ಜಿಗಳನ್ನು ಆಹ್ವಾನಿಸುತ್ತಿರುವ

ಭಾರತದಲ್ಲಿ ನೇಮಕಾತಿ ಆರಂಭಿಸಿದ ಸ್ಪೇಸ್‌‍ ಎಕ್ಸ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,  ನ.01 ರಾಜ್ಯದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮಾತ್ರ ಮಳೆಯಾಗುತ್ತಿದೆ. ಇಂದು ಸಹ ಈ ಭಾಗಗಳಲ್ಲಿ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಸಂಜೆ ಹಾಗೂ ಮುಂಜಾನೆಯ ವೇಳೆ ಚಳಿಯ ವಾತಾವರಣ ಇರಲಿದೆ ಎಂದು ಇಲಾಖೆ ವರದಿ ಮಾಡಿದೆ.. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯಲ್ಲಿ ಇಳಿಕೆ

(ನ್ಯೂಸ್‌ ಕಡಬ) newskadaba.com,  ನ.01 ನವದೆಹಲಿ: ನವೆಂಬರ್‌ ತಿಂಗಳ ಮೊದಲ ದಿನವೇ ದೇಶದ ಜನತೆಗೆ ಗುಡ್‌ನ್ಯೂಸ್‌ ಸಿಕ್ಕಿದ್ದು, ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ತೈಲ ಮಾರುಕಟ್ಟೆ ಕಂಪನಿಗಳ ಅಧಿಸೂಚನೆಯ ಪ್ರಕಾರ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ನವೆಂಬರ್ 1 ರಿಂದ ರೂ. 4.5 ರಿಂದ ರೂ. 6.5 ವರೆಗೆ ಇಳಿಸಲಾಗಿದೆ. ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಈ ತಿಂಗಳು ಯಾವುದೇ ಬದಲಾವಣೆ ಆಗಿಲ್ಲ. ಈ

ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯಲ್ಲಿ ಇಳಿಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ ಹೀಗಿದೆ!

(ನ್ಯೂಸ್‌ ಕಡಬ) newskadaba.com,  ಅ. 31 ಮೊಂಥಾ ಚಂಡಮಾರುತದ ಪರಿಣಾಮ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗಿದೆ. ಇಂದು ಸಹ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್

ಇಂದಿನ ರಾಜ್ಯದ ಹವಾಮಾನ ವರದಿ ಹೀಗಿದೆ! Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

5 ಮಕ್ಕಳ ನಂತರ ನಾಲ್ವರು ರಕ್ತದಾನಿಗಳಿಗೆ HIV ಪಾಸಿಟಿವ್‌!

(ನ್ಯೂಸ್‌ ಕಡಬ) newskadaba.com,  ಅ. 31 ರಾಂಚಿ: ಜಾರ್ಖಂಡ್‌ನ ಚೈಬಾಸಾ ಪಟ್ಟಣದಲ್ಲಿ ವೈದ್ಯರ ಎಡವಟ್ಟಿನಿಂದ ಘೋರ ದುರಂತವೊಂದು ನಡೆದಿತ್ತು. ಥಲಸೇಮಿಯಾ ಪೀಡಿತ ಮಕ್ಕಳಿಗೆ ಸ್ಥಳೀಯ ರಕ್ತ ನಿಧಿಯಿಂದ ರಕ್ತ ಪಡೆದು ವರ್ಗಾವಣೆ ನಂತರ ಎಚ್‌ಐವಿ ಸೋಂಕು ತಗುಲಿದೆ. ಏಳು ವರ್ಷದ ಮಗುವಿಗೆ ಸೋಂಕಿತ ರಕ್ತ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿತ್ತು. ಇದೀಗ ಮಕ್ಕಳ ಬಳಿಕ ನಾಲ್ವರು ರಕ್ತದಾನಿಗಳಿಗೆ ಹೆಚ್‌ಐವಿ ಸೋಂಕು ತಲುಲಿದೆ ಎಂದು ತಿಳಿದು ಬಂದಿದೆ.. ಒಟ್ಟು ಮಾದರಿಗಳಲ್ಲಿ

5 ಮಕ್ಕಳ ನಂತರ ನಾಲ್ವರು ರಕ್ತದಾನಿಗಳಿಗೆ HIV ಪಾಸಿಟಿವ್‌! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top