ರಾಷ್ಟ್ರೀಯ ನ್ಯೂಸ್

ಛತ್ತೀಸ್‌‍ಗಢ : ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ನಕ್ಸಲ್‌ ಬಲಿ

(ನ್ಯೂಸ್‌ ಕಡಬ) newskadaba.com,ಫೆ.05 : ಛತ್ತೀಸ್‌‍ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲೀಯನೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಜಿಲ್ಲೆಯ ದಕ್ಷಿಣ ಭಾಗದ ಕಾಡಿನಲ್ಲಿ ಇಂದು ಬೆಳಿಗ್ಗೆ 7.30 ಕ್ಕೆ ಭದ್ರತಾ ಪಡೆಗಳ ಜಂಟಿ ತಂಡವು ನಕ್ಸಲೀಯ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಗುಂಡಿನ ಚಕಮಕಿ ನಡೆಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಇನ್ನೂ ಮಧ್ಯಂತರ ಗುಂಡಿನ ಚಕಮಕಿ ನಡೆಯುತ್ತಿದೆ. ಇಲ್ಲಿಯವರೆಗೆ, ಎಕೆ -47 ರೈಫಲ್‌ ಜೊತೆಗೆ ಒಬ್ಬ ನಕ್ಸಲೀಯನ ಮೃತದೇಹವನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು […]

ಛತ್ತೀಸ್‌‍ಗಢ : ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ನಕ್ಸಲ್‌ ಬಲಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗಾಂಧಿ ಪ್ರತಿಮೆ ಕಳವು ಪ್ರಕರಣ ಭಾರತೀಯ ರಾಯಭಾರ ಕಚೇರಿಯಿಂದ ತೀವ್ರ ಆಕ್ರೋಶ!

(ನ್ಯೂಸ್‌ ಕಡಬ) newskadaba.com,ಫೆ.05 ನವದೆಹಲಿ : ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆಯನ್ನು ಕತ್ತರಿಸಿ ಕದಿಯಲಾದ ಘಟನೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಆಸ್ಟ್ರೇಲಿಯಾ ಸರ್ಕಾರವನ್ನು ಒತ್ತಾಯಿಸಿದೆ​… ಮೆಲ್ಬೋರ್ನ್‌ನ ರೌವಿಲ್ಲೆ ಪ್ರದೇಶದಲ್ಲಿರುವ ಆಸ್ಟ್ರೇಲಿಯನ್ ಇಂಡಿಯನ್ ಕಮ್ಯುನಿಟಿ ಸೆಂಟರ್‌ನಲ್ಲಿ ಸ್ಥಾಪಿಸಲಾಗಿದ್ದ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆಯನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ಈ ಘಟನೆ ಭಾರತ-ಆಸ್ಟ್ರೇಲಿಯಾ ಸಂಬಂಧಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. ಘಟನೆಗೆ ಸಂಬಂಧಿಸಿ ಭಾರತವು ಆಸ್ಟ್ರೇಲಿಯಾದ ಅಧಿಕಾರಿಗಳೊಂದಿಗೆ ಔಪಚಾರಿಕವಾಗಿ ಮಾತುಕತೆ ನಡೆಸಿದ್ದು,

ಗಾಂಧಿ ಪ್ರತಿಮೆ ಕಳವು ಪ್ರಕರಣ ಭಾರತೀಯ ರಾಯಭಾರ ಕಚೇರಿಯಿಂದ ತೀವ್ರ ಆಕ್ರೋಶ! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರತ-ಪಾಕ್ ಕ್ರಿಕೆಟ್ ಕದನಕ್ಕೆ ಬ್ರೇಕ್ ಭಾರತದ ವಿರುದ್ಧ ಆಡಲು ಶೆಹಬಾಝ್ ಷರೀಫ್ ನಕಾರ

(ನ್ಯೂಸ್‌ ಕಡಬ) newskadaba.com,ಫೆ.05 : ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಕ್ರಿಕೆಟ್ ಪಂದ್ಯವು ರಾಜತಾಂತ್ರಿಕ ಸಂಘರ್ಷದಿಂದಾಗಿ ರದ್ದಾಗುವ ಭೀತಿ ಎದುರಾಗಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್ ಅವರು ಬಾಂಗ್ಲಾದೇಶದ ಪರವಾಗಿ ಬ್ಯಾಟ್ ಬೀಸಿದ್ದು, ಭಾರತದ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡ ಭಾಗವಹಿಸುವುದಿಲ್ಲ ಎಂಬ ಕಠಿಣ ನಿಲುವು ತಳೆದಿದ್ದಾರೆ. ​ಬಾಂಗ್ಲಾದೇಶದ ಮೇಲಿನ ಅಂತರಾಷ್ಟ್ರೀಯ ಕ್ರಿಕೆಟ್ ನಿರ್ಬಂಧಗಳನ್ನು ವಿರೋಧಿಸಿ ಪಾಕಿಸ್ತಾನ ಈ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಐಸಿಸಿ (ICC) ಮತ್ತು ಬಿಸಿಸಿಐ (BCCI) ಗೆ ಆರ್ಥಿಕವಾಗಿ ಭಾರಿ ಹೊಡೆತ

ಭಾರತ-ಪಾಕ್ ಕ್ರಿಕೆಟ್ ಕದನಕ್ಕೆ ಬ್ರೇಕ್ ಭಾರತದ ವಿರುದ್ಧ ಆಡಲು ಶೆಹಬಾಝ್ ಷರೀಫ್ ನಕಾರ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರ್ನಾಟಕ, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಬುಧಾಬಿ ಬಿಗ್ ಟಿಕೆಟ್ ಲಾಟರಿಯಲ್ಲಿ ಉಡುಪಿಯ ಶಂತನುಗೆ 49 ಕೋಟಿ ರೂ. ಜಾಕ್‌ಪಾಟ್!

(ನ್ಯೂಸ್‌ ಕಡಬ) newskadaba.com,ಫೆ.05 : ಉಡುಪಿ ಜಿಲ್ಲೆಯ ಉದ್ಯಾವರ ಮೂಲದ ಶಂತನು ಶೆಟ್ಟಿಗಾರ್ ಅವರು ಫೆಬ್ರವರಿ 3, 2026 ರಂದು ನಡೆದ ಅಬುಧಾಬಿ ಬಿಗ್ ಟಿಕೆಟ್ ಲಾಟರಿಯಲ್ಲಿ 20 ಮಿಲಿಯನ್ ದಿರ್ಹಮ್ (ಸುಮಾರು 45 ರಿಂದ 49 ಕೋಟಿ ರೂಪಾಯಿ) ಮೊತ್ತದ ಬೃಹತ್ ಜಾಕ್‌ಪಾಟ್ ಗೆದ್ದಿದ್ದಾರೆ. 20 ಮಿಲಿಯನ್ ದಿರ್ಹಮ್‌ಗಳು (ಭಾರತೀಯ ರೂಪಾಯಿ ಮೌಲ್ಯದಲ್ಲಿ ಅಂದಾಜು ₹49 ಕೋಟಿ).ಶಂತನು ಅವರು ಜನವರಿ 20 ರಂದು ಖರೀದಿಸಿದ್ದ 305810 ಸಂಖ್ಯೆಯ ಟಿಕೆಟ್‌ಗೆ ಈ ಬೃಹತ್ ಬಹುಮಾನ ಲಭಿಸಿದೆ. ಇದು

ಅಬುಧಾಬಿ ಬಿಗ್ ಟಿಕೆಟ್ ಲಾಟರಿಯಲ್ಲಿ ಉಡುಪಿಯ ಶಂತನುಗೆ 49 ಕೋಟಿ ರೂ. ಜಾಕ್‌ಪಾಟ್! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಕ್ರೇನ್‌ನಲ್ಲಿ ಬಸ್‌ ಮೇಲೆ ರಷ್ಯಾ ಡ್ರೋನ್ ದಾಳಿ -15 ಮಂದಿ ಸಾವು

(ನ್ಯೂಸ್‌ ಕಡಬ) newskadaba.com,ಫೆ,02 ಕೈವ್ :  ರಷ್ಯಾ ಉಕ್ರೇನ್ ಮೇಲೆ ನಡೆಸಿದ ಮತ್ತೊಂದು ಭೀಕರ ಡ್ರೋನ್ ದಾಳಿಯಲ್ಲಿ ಕನಿಷ್ಠ 15 ಮಂದಿ ಪ್ರಾಣ ಕಳೆದುಕೊಂಡಿರುವ ದುರ್ಘಟನೆ ನಡೆದಿದೆ. ಗಣಿಕಾರ್ಮಿಕರನ್ನು ಸಾಗಿಸುತ್ತಿದ್ದ ಖಾಸಗಿ ಕಂಪನಿಯ ಬಸ್‌ನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಉಕ್ರೇನ್‌ನ ರಾಜ್ಯ ತುರ್ತು ಸೇವೆ ತಿಳಿಸಿದೆ. ಡ್ರೋನ್ ಡಿಕ್ಕಿಯಾದ ತಕ್ಷಣ ಬಸ್ ಬೆಂಕಿಗೆ ಆಹುತಿಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆರಂಭದಲ್ಲಿ ಸಾವಿನ ಸಂಖ್ಯೆ 12 ಎಂದು

ಉಕ್ರೇನ್‌ನಲ್ಲಿ ಬಸ್‌ ಮೇಲೆ ರಷ್ಯಾ ಡ್ರೋನ್ ದಾಳಿ -15 ಮಂದಿ ಸಾವು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ – ತುರ್ತು ಭೂಸ್ಪರ್ಶ

(ನ್ಯೂಸ್‌ ಕಡಬ) newskadaba.com  ಜ.30 ಅಹಮದಾಬಾದ್: ಕುವೈತ್‌ನಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಹಾಗೂ ಹೈಜಾಕ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ, ವಿಮಾನವನ್ನು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತುವಾಗಿ ಭೂಸ್ಪರ್ಶ ಮಾಡಿಸಲಾಯಿತು. ಬೆಳಿಗ್ಗೆ ಸುಮಾರು 6.40ರ ವೇಳೆಗೆ ವಿಮಾನ ಸುರಕ್ಷಿತವಾಗಿ ಇಳಿದಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಮಾನದಲ್ಲಿ ಸುಮಾರು 180 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ವಿಮಾನ ಇಳಿದ ತಕ್ಷಣ ಎಲ್ಲರನ್ನು ಸುರಕ್ಷಿತವಾಗಿ ಕೆಳಗಿಳಿಸಿ ಸ್ಥಳಾಂತರಿಸಲಾಯಿತು. ಬಳಿಕ ಪ್ರಯಾಣಿಕರು ಮತ್ತು ಅವರ ಸಾಮಾನುಗಳಿಗೆ ವಿವರವಾದ ಭದ್ರತಾ

ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ – ತುರ್ತು ಭೂಸ್ಪರ್ಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅಂತ್ಯಕ್ರಿಯೆ

(ನ್ಯೂಸ್‌ ಕಡಬ) newskadaba.com,ಜ.29   ಮುಂಬೈ: ವಿಮಾನ ಅಪಘಾತದಲ್ಲಿ ನಿಧನರಾದ ಮಹಾರಾಷ್ಟ್ರ ಡಿಸಿಎಂ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಬಾರಾಮತಿಯಲ್ಲಿ ನೆರವೇರಿತು. ಅಜಿತ್ ಪವಾರ್ ಅವರ ಪಾರ್ಥಿವ ಶರೀರಕ್ಕೆ ಮಕ್ಕಳಾದ ಪಾರ್ಥ ಹಾಗೂ ಜಯ್ ಅಗ್ನಿಸ್ಪರ್ಶ ಮಾಡಿದರು. ಅಂತ್ಯಕ್ರಿಯೆಯಲ್ಲಿ ಅಜಿತ್ ಪವಾರ್ ಪತ್ನಿ ಸುನೇತ್ರಾ, ಕೇಂದ್ರ ಗೃಹ ಸಚಿವ ಅಮಿತ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಅಂತ್ಯಕ್ರಿಯೆಗೂ ಮುನ್ನ ಸಾವಿರಾರು ಜನ ಅಜಿತ್ ಪವಾರ್

ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅಂತ್ಯಕ್ರಿಯೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಯುಜಿಸಿಯ ಹೊಸ ನಿಯಮಾವಳಿಗೆ ಸುಪ್ರೀಂ ಕೋರ್ಟ್‌ ತಡೆ

(ನ್ಯೂಸ್‌ ಕಡಬ) newskadaba.com,ಜ.29  ದೆಹಲಿ: ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಕಾಲೇಜು ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಯುವುದಕ್ಕಾಗಿ ವಿಶ್ವ ವಿದ್ಯಾಲಯ ಧನಸಹಾಯ ಆಯೋಗ ಹೊರಡಿಸಿರುವ ನಿಯಮಾವಳಿಯನ್ನು ಸುಪ್ರೀಂ ಕೋರ್ಟ್‌ ತಡೆ ಹಿಡಿದಿದೆ .. ನಿಯಮಾವಳಿ ವಿರುದ್ಧ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಂದ ವ್ಯಾಪಕ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಈ ಕ್ರಮ ಕೈಗೊಂಡಿದೆ. ಹೊಸ ನಿಯಮಾವಳಿಯನ್ನು ತೀವ್ರವಾಗಿ ಟೀಕಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು, ಇದು ಸಂಪೂರ್ಣ ಅಸ್ಪಷ್ಟತೆಯಿಂದ ಕೂಡಿದೆ ಎಂದು ಹೇಳಿದೆ. ವಿಶ್ವವಿದ್ಯಾಲಯಗಳ ವ್ಯಾಪ್ತಿಯ

ಯುಜಿಸಿಯ ಹೊಸ ನಿಯಮಾವಳಿಗೆ ಸುಪ್ರೀಂ ಕೋರ್ಟ್‌ ತಡೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ

(ನ್ಯೂಸ್‌ ಕಡಬ) newskadaba.com,ಜ.29   ನವದೆಹಲಿ: ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯ ನಾಗಲೋಟ ಮುಂದುವರೆದಿದ್ದು ಬುಧವಾರ ಚೆನ್ನೈ ಮತ್ತು ಹೈದರಾಬಾದ್‌ ಮಾರುಕಟ್ಟೆಯಲ್ಲಿ 1 ಕೇಜಿ ಬೆಳ್ಳಿ ಬೆಲೆಯು 4 ಲಕ್ಷ ರು.ಗೆ ತಲುಪಿದೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಬೆಳ್ಳಿ ದರ ಒಂದೇ ದಿನ 10,000 ರು. ಏರಿಕೆಯಾಗಿ 3.80 ಲಕ್ಷ ರು.ಗೆ ತಲುಪಿದೆ. ದೆಹಲಿಯಲ್ಲಿ ಕೂಡಾ 15,000 ರು. ಜಿಗಿದು 3.85 ಲಕ್ಷ ರು.ಗೆ ನೆಗೆದಿದೆ. ಇದು ಬೆಳ್ಳಿಯ ಸಾರ್ವಕಾಲಿಕ ಗರಿಷ್ಠ ದರವಾಗಿದೆ. ಕಳೆದ ಮೇ ತಿಂಗಳ ಅಂತ್ಯದ ವೇಳೆಗೆ

ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಖಾಸಗಿ ವಿಮಾನ ಎರಡನೇ ಬಾರಿ ರನ್‌ವೇನಲ್ಲಿ ಲ್ಯಾಂಡ್‌ ಮಾಡುವ ವೇಳೆ ಪತನ

  (ನ್ಯೂಸ್‌ ಕಡಬ) newskadaba.com,ಜ.28  ಮುಂಬೈ:  ಅಜಿತ್‌ ಪವಾರ್‌ ಪ್ರಯಾಣಿಸುತ್ತಿದ್ದ  ವಿಮಾನ ಲ್ಯಾಂಡ್‌ ಆಗಲು ಪ್ರಯತ್ನಿಸುತ್ತಿದ್ದ ವೇಳೆ ಪತನಗೊಂಡಿದೆ.ಫ್ಲೈಟ್‌ರಾಡರ್‌ನ ದತ್ತಾಂಶದ ಪ್ರಕಾರ ಬಾಂಬಾರ್ಡಿಯರ್ ಲಿಯರ್‌ಜೆಟ್ 45 (ವಿಟಿ-ಎಸ್‌ಎಸ್‌ಕೆ) ಮುಂಬೈ ವಿಮಾನ ನಿಲ್ದಾಣದಿಂದ ಬೆಳಗ್ಗೆ 8:10ಕ್ಕೆ ಟೇಕಾಫ್‌ ಆಗಿತ್ತು .ಅರಬ್ಬಿ ಸಮದ್ರದ ಮೇಲೆ ಹಾರಿ 8:30ಕ್ಕೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಮಾಡಲು ಪೈಲಟ್‌ ಪ್ರಯತ್ನಿಸಿದ್ದಾರೆ.ಮೊದಲ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ 2ನೇ ಬಾರಿ ವಿಮಾನ ಲ್ಯಾಂಡಿಂಗ್‌ ಮಾಡಲು ಮುಂದಾಗಿದ್ದಾರೆ. ಬೆಳಗ್ಗೆ 8:42 ರ ಸುಮಾರಿಗೆ ಎರಡನೇ ಬಾರಿಗೆ ಇಳಿಸಲು

ಖಾಸಗಿ ವಿಮಾನ ಎರಡನೇ ಬಾರಿ ರನ್‌ವೇನಲ್ಲಿ ಲ್ಯಾಂಡ್‌ ಮಾಡುವ ವೇಳೆ ಪತನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top