ರಾಷ್ಟ್ರೀಯ ನ್ಯೂಸ್

ಮುಖ್ಯಮಂತ್ರಿಗಳ‌ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ವಯನಾಡಿಗೆ

(ನ್ಯೂಸ್ ಕಡಬ)newskadaba.com ದೆಹಲಿ, ಜು.31. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ಅವರು ಪ್ರವಾಹ ಪೀಡಿತ ವಯನಾಡಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳು, ಸಂತ್ರಸ್ಥರ ರಕ್ಷಣೆ ಸೇರಿದಂತೆ ಅಗತ್ಯ ಎಲ್ಲಾ ರೀತಿಯ ನೆರವುಗಳಿಗೆ ಕೇರಳ ಸರ್ಕಾರದ ಜೊತೆ ಕೈ ಜೋಡಿಸಿ ಜನರ ಜೀವ, ಆರೋಗ್ಯ ರಕ್ಷಣೆಗೆ ನೆರವಾಗುವಂತೆ ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ. ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ತುರ್ತು ಮತ್ತು ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಲು […]

ಮುಖ್ಯಮಂತ್ರಿಗಳ‌ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ವಯನಾಡಿಗೆ Read More »

ರಾಷ್ಟ್ರೀಯ ನ್ಯೂಸ್

ಲೋಕಸೇವಾ ಆಯೋಗದ ನೂತನ ಅಧ್ಯಕ್ಷೆಯಾಗಿ ಪ್ರೀತಿ ಸೂದನ್ ಆಯ್ಕೆ…! ಆಗಸ್ಟ್ 1ರಂದು ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ)newskadaba.com ನವದೆಹಲಿ, ಜು.31. ಕೇಂದ್ರ ಲೋಕಸೇವಾ ಆಯೋಗದ ನೂತನ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಪ್ರೀತಿ ಸೂದನ್ ಆಯ್ಕೆಯಾಗಿದ್ದು, ಆಗಸ್ಟ್ 1 ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. 1983ರ ಬ್ಯಾಚ್‌ನ ಐಎಎಸ್ ಅಧಿಕಾರಿ ಪ್ರೀತಿ ಸೂದನ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಟ್ರೈನಿ ಐಎಎಸ್ ಪೂಜಾ ಖೇಡ್ಕರ್ ವಿವಾದದ ಸಂದರ್ಭದಲ್ಲಿ ಯುಪಿಎಸ್‌ಸಿ ಮಾಜಿ ಅಧ್ಯಕ್ಷ ಮನೋಜ್ ಸೋನಿ ರಾಜೀನಾಮೆ ನೀಡಿದ ನಂತರ ಈ ಹುದ್ದೆ ಖಾಲಿಯಾಗಿತ್ತು. ಪ್ರೀತಿ ಸೂದನ್ ಕೇಂದ್ರದ ಮಾಜಿ ಆರೋಗ್ಯ ಕಾರ್ಯದರ್ಶಿಯಾಗಿದ್ದರು. ಮಹಿಳಾ

ಲೋಕಸೇವಾ ಆಯೋಗದ ನೂತನ ಅಧ್ಯಕ್ಷೆಯಾಗಿ ಪ್ರೀತಿ ಸೂದನ್ ಆಯ್ಕೆ…! ಆಗಸ್ಟ್ 1ರಂದು ಅಧಿಕಾರ ಸ್ವೀಕಾರ Read More »

ರಾಷ್ಟ್ರೀಯ ನ್ಯೂಸ್

ಹಳಿತಪ್ಪಿದ ಹೌರಾ-ಸಿಎಸ್‌ಎಂಟಿ ಎಕ್ಸ್‌ ಪ್ರೆಸ್‌     ಇಬ್ಬರು ಮೃತ್ಯು, 20 ಮಂದಿಗೆ ಗಾಯ    

(ನ್ಯೂಸ್ ಕಡಬ)newskadaba.com  ನವದೆಹಲಿ, ಜು.30. ಇಂದು ಮುಂಜಾನೆ ಜಾರ್ಖಂಡ್‌ ನ ಚಕ್ರಧರಪುರ ಜಿಲ್ಲೆಯ ರಾಜ್‌ಖರ್ಸಾವನ್ ಮತ್ತು ಬಡಬಾಂಬೋ ನಡುವೆ 12810 ಹೌರಾ-ಸಿಎಸ್‌ಎಂಟಿ ಎಕ್ಸ್‌ ಪ್ರೆಸ್‌ ನ 18 ಬೋಗಿಗಳು ಹಳಿತಪ್ಪಿ ಇಬ್ಬರು ಮೃತಪಟ್ಟು 20 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆಗ್ನೇಯ ರೈಲ್ವೆಯ (SER) ಚಕ್ರಧರಪುರ ವಿಭಾಗದ ಅಡಿಯಲ್ಲಿ ಜಮ್ಶೆಡ್‌ಪುರದಿಂದ 80 ಕಿಮೀ ದೂರದಲ್ಲಿರುವ ಬಾರಾಬಾಂಬೂ ಬಳಿ ಇಂದು ನಸುಕಿನ ಜಾವ 3.45ಕ್ಕೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.  

ಹಳಿತಪ್ಪಿದ ಹೌರಾ-ಸಿಎಸ್‌ಎಂಟಿ ಎಕ್ಸ್‌ ಪ್ರೆಸ್‌     ಇಬ್ಬರು ಮೃತ್ಯು, 20 ಮಂದಿಗೆ ಗಾಯ     Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೋಚಿಂಗ್ ಸೆಂಟರ್‌ ನಲ್ಲಿ ನಡೆದ ಅವಘಡ ಪ್ರಕರಣ ಮಾಲೀಕ, ನಿರ್ವಾಹಕನಿಗೆ 14 ದಿನ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ)newskadaba.com ನವದೆಹಲಿ, ಜು.29. ಕೋಚಿಂಗ್ ಸೆಂಟರ್ ನಲ್ಲಿ ಐಎಎಸ್ ಆಕಾಂಕ್ಷಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಚಿಂಗ್ ಸೆಂಟರ್‌ನ ಮಾಲೀಕ ಹಾಗೂ ನಿರ್ವಾಹಕರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕೋಚಿಂಗ್ ಸೆಂಟರ್ ಮಾಲೀಕ ಅಭಿಷೇಕ್ ಗುಪ್ತಾ ಮತ್ತು ನಿರ್ವಾಹಕ ದೇಶಪಾಲ್ ಸಿಂಗ್ ಅವರನ್ನು ದೆಹಲಿಯ ಮ್ಯಾಜಿಸ್ಟ್ರಿಯಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಇವರಿಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯವು ಆದೇಶ ಹೊರಡಿಸಿದೆ.

ಕೋಚಿಂಗ್ ಸೆಂಟರ್‌ ನಲ್ಲಿ ನಡೆದ ಅವಘಡ ಪ್ರಕರಣ ಮಾಲೀಕ, ನಿರ್ವಾಹಕನಿಗೆ 14 ದಿನ ನ್ಯಾಯಾಂಗ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಿಫಾ ಸೋಂಕಿಗೆ ತುತ್ತಾಗಿ ಕಳೆದ 8 ತಿಂಗಳಿನಿಂದ ಕೋಮಾವಸ್ಥೆಯಲ್ಲಿ 24ರ ಹರೆಯದ ಕಡಬದ ಯುವಕ

(ನ್ಯೂಸ್ ಕಡಬ) newskadaba.com ಕಡಬ, ಜು.28. ನಿಫಾ ವೈರಸ್ ಬಾಧಿಸಿದ್ದ ರೋಗಿಗೆ ಆರೈಕೆ ನೀಡಿದ್ದ ಕಡಬದ ನರ್ಸ್ ಓರ್ವರು ನಿಫಾ ವೈರಸ್ ಗೆ ತುತ್ತಾಗಿ ಕಳೆದ ಎಂಟು ತಿಂಗಳಿನಿಂದ ಕೋಮಾದಲ್ಲಿ ದಿನ ದೂಡುತ್ತಿರುವ ಹೃದಯ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ಧಾಳ ಸಮೀಪದ ತುಂಬ್ಯ ನಿವಾಸಿ ತೋಮಸ್ ಟಿ.ಸಿ. ಎಂಬವರ ಪುತ್ರ ಟಿಟ್ಟೋ ತೋಮಸ್(24) ಇದೀಗ ಜೀವನ್ಮರಣ ಸ್ಥಿತಿಯಲ್ಲಿ ದಿನದೂಡುತ್ತಿರುವ ಯುವಕ. ಬಿಎಸ್ಸಿ ನರ್ಸಿಂಗ್ ಪದವೀಧರನಾಗಿರುವ ಟಿಟ್ಟೋ ತೋಮಸ್ ಕೇರಳದ

ನಿಫಾ ಸೋಂಕಿಗೆ ತುತ್ತಾಗಿ ಕಳೆದ 8 ತಿಂಗಳಿನಿಂದ ಕೋಮಾವಸ್ಥೆಯಲ್ಲಿ 24ರ ಹರೆಯದ ಕಡಬದ ಯುವಕ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಲೇಜು ಆವರಣದಲ್ಲಿ ಹೊಡೆದಾಟ 7 ವಿದ್ಯಾರ್ಥಿಗಳು ಅಮಾನತು

(ನ್ಯೂಸ್ ಕಡಬ)newskadaba.com ಕಾಸರಗೋಡು, ಜು 26. ಹೊಡೆದಾಟಕ್ಕೆ ಸಂಬಂಧಪಟ್ಟಂತೆ ಶಾಲೆಯು ಏಳು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡಿದ್ದು, ಅಮಾನತಗೊಳಿಸಲಾಗಿದೆ. ಹಯರ್ ಸೆಕಂಡರಿ ಶಾಲೆಯ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ವಿದ್ಯಾನಗರ ಬಿ.ಸಿ ರೋಡ್ ಜಂಕ್ಷನ್ ನಲ್ಲಿ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿದ್ದರು. ಘಟನೆ ಬಗ್ಗೆ ಗಂಭೀರವಾಗಿ ತೆಗೆದುಕೊಂಡ ಶಾಲಾ ಆಡಳಿತ ಮಂಡಳಿ ಏಳು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಡೆದಾಟ ನಡೆಸಿದ ಬಗ್ಗೆ ವಿದ್ಯಾನಗರ ಠಾಣಾ ಪೊಲೀಸರು ಶಾಲಾ ಆಡಳಿತ ಮಂಡಳಿಯಿಂದ ಸ್ಪಷ್ಟನೆ ಕೇಳಿದ್ದರು. ವಿದ್ಯಾರ್ಥಿಗಳ

ಕಾಲೇಜು ಆವರಣದಲ್ಲಿ ಹೊಡೆದಾಟ 7 ವಿದ್ಯಾರ್ಥಿಗಳು ಅಮಾನತು Read More »

ರಾಷ್ಟ್ರೀಯ ನ್ಯೂಸ್

ಕಾರ್ಗಿಲ್ ವಿಜಯ ದಿನ ಲಡಾಕ್ ನ ದ್ರಾಸ್ ನಲ್ಲಿ ಯೋಧರ ಸ್ಮಾರಕಕ್ಕೆ ಪ್ರಧಾನಿ ಮೋದಿ ನಮನ

(ನ್ಯೂಸ್ ಕಡಬ)newskadaba.com ಲಡಾಖ್, ಜು.26. ಕಾರ್ಗಿಲ್ ವಿಜಯ್ ದಿವಸದ 25 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕಾರ್ಗಿಲ್‌ ನಲ್ಲಿದ್ದಾರೆ. ಕಾರ್ಗಿಲ್ ಯುದ್ಧದ 25 ನೇ ವಾರ್ಷಿಕೋತ್ಸವದಂದು ಲಡಾಖ್‌ ಗೆ ಭೇಟಿ ನೀಡಿದ ಪ್ರಧಾನಿ ಮೋದಿಯವರು, ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿ ವೀರಮರಣವನ್ನು ಕಂಡ ಯೋಧರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು ಎನ್ನಲಾಗಿದೆ. ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದರು. ಪ್ರಧಾನಿ ಭೇಟಿಗೆ

ಕಾರ್ಗಿಲ್ ವಿಜಯ ದಿನ ಲಡಾಕ್ ನ ದ್ರಾಸ್ ನಲ್ಲಿ ಯೋಧರ ಸ್ಮಾರಕಕ್ಕೆ ಪ್ರಧಾನಿ ಮೋದಿ ನಮನ Read More »

ರಾಷ್ಟ್ರೀಯ ನ್ಯೂಸ್

ಪ್ರವಾಹ ತಗ್ಗಿಸಲು ಆಲಮಟ್ಟಿ ಜಲಾಶಯದಿಂದ ನೀರು ಬಿಡಿ ಕರ್ನಾಟಕಕ್ಕೆ ಮಹಾರಾಷ್ಟ್ರ ಸರ್ಕಾರ ಮನವಿ

(ನ್ಯೂಸ್ ಕಡಬ)newskadaba.com ಮುಂಬೈ, ಜು.25. ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಭಾರಿ ಮಳೆಯ ಪರಿಣಾಮ ಸಾಂಗ್ಲಿ, ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿಯನ್ನು ತಡೆಯುವುದಕ್ಕೆ ಆಲಮಟ್ಟಿ ಜಲಾಯಶಯದಿಂದ ನೀರು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿದೆ. ಈ ಬಗ್ಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮಾಹಿತಿ ನೀಡಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ (ಆಲಮಟ್ಟಿ ಡ್ಯಾಮ್) ಕೃಷ್ಣಾ ನದಿಗೆ ಕಟ್ಟಲಾಗಿರುವ ಜಲಾಶಯವಾಗಿದ್ದು, ಜಲವಿದ್ಯುತ್ ಯೋಜನೆಯದ್ದಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಅಜಿತ್ ಪವಾರ್, ‘ಆಲಮಟ್ಟಿ ಅಣೆಕಟ್ಟಿನಿಂದ ನೀರು ಹರಿಸುವುದನ್ನು

ಪ್ರವಾಹ ತಗ್ಗಿಸಲು ಆಲಮಟ್ಟಿ ಜಲಾಶಯದಿಂದ ನೀರು ಬಿಡಿ ಕರ್ನಾಟಕಕ್ಕೆ ಮಹಾರಾಷ್ಟ್ರ ಸರ್ಕಾರ ಮನವಿ Read More »

ರಾಷ್ಟ್ರೀಯ ನ್ಯೂಸ್

ಹರಿಯಾಣದಲ್ಲಿ ಎರಡು ಬಾರಿ ಕಂಪಿಸಿದ ಭೂಮಿ

(ನ್ಯೂಸ್ ಕಡಬ)newskadaba.com ಹರಿಯಾಣ, ಜು.25. ಹರಿಯಾಣದ ಫರೀದಾಬಾದ್ ಜಿಲ್ಲೆಯಲ್ಲಿ ಒಂದರ ಹಿಂದೊಂದರಂತೆ ಭೂಕಂಪನಗಳು ಸಂಭವಿಸಿದೆ. ದೆಹಲಿ-ಎನ್‌ಸಿಆರ್‌ನಾದ್ಯಂತ ಕಂಪನದ ಅನುಭವವಾಗಿದೆ ಎಂದು ವರದಿ ತಿಳಿಸಿದೆ. ಫರಿದಾಬಾದ್ ಜಿಲ್ಲೆಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ರಾಷ್ಟ್ರೀಯ ಭೂಕಂಪನಶಾಸ್ತ್ರದ ಕೇಂದ್ರದ ಮಾಹಿತಿಯ ಪ್ರಕಾರ, ಮೊದಲ ಕಂಪನವು ಬೆಳಗ್ಗೆ 10.54ಕ್ಕೆ ಸಂಭವಿಸಿದೆ, ಇದಾಗಿ 1 ಗಂಟೆಯೊಳಗೆ ಎರಡನೆಯ ಬಾರಿಗೆ 11.43ಕ್ಕೆ ಭೂಮಿ ಕಂಪಿಸಿದೆ. ದೇಶದ ರಾಜಧಾನಿ ದೆಹಲಿ-ಎನ್‌ಸಿಆರ್‌ನ ಹಲವಾರು ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹರಿಯಾಣದಲ್ಲಿ ಎರಡು ಬಾರಿ ಕಂಪಿಸಿದ ಭೂಮಿ Read More »

ರಾಷ್ಟ್ರೀಯ ನ್ಯೂಸ್

ಬಜೆಟ್ ಬಳಿಕ ಚಿನ್ನದ ದರ ಕುಸಿತ

(ನ್ಯೂಸ್ ಕಡಬ)newskadaba.com. ನವದೆಹಲಿ, ಜು.24. ಬಜೆಟ್ ನಲ್ಲಿ ಚಿನ್ನದ ಮೇಲಿನ ಅಮದು ಸುಂಕ ಕಡಿಮೆಯಾಗಿರುವ ಪರಿಣಾಮ ಇಂದು ಚಿನ್ನದ ದರ ಕುಸಿತ ಕಂಡಿದ್ದು, 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ 10 ಗ್ರಾಮ್ ಗೆ 4,332.0 ರೂಪಾಯಿಗಳಷ್ಟು ಕಡಿಮೆಯಾಗಿದ್ದು ಪ್ರತಿ ಗ್ರಾಮ್ ಬೆಲೆ 7071.6 ರೂಗಳಷ್ಟಾಗಿದೆ. 22 ಕ್ಯಾರಟ್ ಹಳದಿ ಲೋಹದ ದರ ಪ್ರತಿ ಗ್ರಾಮ್ ಗೆ 6,477.5 ರೂಪಾಯಿಗಳಷ್ಟಿದ್ದು, 10 ಗ್ರಾಮ್ ಚಿನ್ನದ ದರದಲ್ಲಿ 3,970.0 ರೂಗಳಷ್ಟು ಕುಸಿತ ದಾಖಲಾಗಿದೆ. 24 ಕ್ಯಾರಾಟ್ ಚಿನ್ನದ ದರ

ಬಜೆಟ್ ಬಳಿಕ ಚಿನ್ನದ ದರ ಕುಸಿತ Read More »

ರಾಷ್ಟ್ರೀಯ ನ್ಯೂಸ್
Scroll to Top