ಅಂತರ್ರಾಷ್ಟ್ರೀಯ ನ್ಯೂಸ್

ಇಂಡೋನೇಷ್ಯಾ: ಸುನಾಮಿಗಿಂತ ಭೀಕರ ಪ್ರವಾಹ

(ನ್ಯೂಸ್‌ ಕಡಬ) newskadaba.com, ಡಿ.05 : ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ಪರಿಸ್ಥಿತಿ ಹದಗೆಟ್ಟಿದೆ. ನೋಡ ನೋಡುತ್ತಿದ್ದಂತೆ ಸಂಪೂರ್ಣ ರಸ್ತೆಯೊಂದು ಕುಸಿದು ಹೋಗುತ್ತಿರುವ ನಡುಕ ಹುಟ್ಟಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳೆದ ವಾರದ ಧಾರಾಕಾರ ಮಳೆಯಿಂದಾಗಿ ಇಂಡೋನೇಷ್ಯಾ, ಶ್ರೀಲಂಕಾ, ಥೈಲ್ಯಾಂಡ್ ಹಾಗೂ ಮಲೇಷ್ಯಾ ಸೇರಿದಂತೆ ಏಷ್ಯದ ಹಲವು ದೇಶಗಳು ಭಾರೀ ಹಾನಿಗೊಳಗಾಗಿವೆ. ಪ್ರವಾಹ ಮತ್ತು ಭೂಕುಸಿತದಿಂದ ಈ ದೇಶಗಳಲ್ಲಿ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಏಷ್ಯಾದ ಕೆಲವು ಭಾಗಗಳು ಸಂಪೂರ್ಣವಾಗಿ […]

ಇಂಡೋನೇಷ್ಯಾ: ಸುನಾಮಿಗಿಂತ ಭೀಕರ ಪ್ರವಾಹ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಅಮರಿಕಾದ ಯುದ್ಧ ವಿಮಾನ ಕ್ಯಾಲಿಫೋರ್ನಿಯಾದಲ್ಲಿ ಪತನ

(ನ್ಯೂಸ್‌ ಕಡಬ) newskadaba.com, ಡಿ.04 : ದಕ್ಷಿಣ ಕ್ಯಾಲಿಫೋರ್ನಿಯಾದ ಮರುಭೂಮಿ ಪ್ರದೇಶದಲ್ಲಿ ಅಮೆರಿಕದ ವಾಯುಪಡೆಯ ಥಂಡರ್‌ಬರ್ಡ್ F-16C ಫೈಟಿಂಗ್ ಫಾಲ್ಕನ್ ಯುದ್ಧವಿಮಾನ ಭೀಕರ ಅಪಘಾತಕ್ಕೀಡಾಗಿದೆ. ತರಬೇತಿ ಅಭ್ಯಾಸದ ವೇಳೆ ನಿಯಂತ್ರಣ ತಪ್ಪಿದ ವಿಮಾನ ನೆಲಕ್ಕೆ ಬಡಿದಿದ್ದು, ನೆಲಕ್ಕೆ ತಾಕುತ್ತಿದ್ದಂತೇ ಬೆಂಕಿಗೆ ಆಹುತಿಯಾಗಿದೆ. ಸದ್ಯಕ್ಕೆ ವಾಯುಪಡೆಯು ಅಪಘಾತಕ್ಕೆ ಕಾರಣವಾದ ಪರಿಸ್ಥಿತಿಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ವಿಮಾನವು ನಿಧಾನವಾಗಿ ನೆಲಕ್ಕೆ ಇಳಿಯುತ್ತಿರುವಾಗ ಪೈಲಟ್ ಸುರಕ್ಷಿತವಾಗಿ ಹೊರಗೆ ಹಾರಿರುವ ದೃಶ್ಯಗಳು ಸ್ಪಷ್ಟವಾಗಿ

ಅಮರಿಕಾದ ಯುದ್ಧ ವಿಮಾನ ಕ್ಯಾಲಿಫೋರ್ನಿಯಾದಲ್ಲಿ ಪತನ Read More »

ಅಂತರ್ರಾಷ್ಟ್ರೀಯ ನ್ಯೂಸ್

ದಿತ್ವಾ ಚಂಡಮಾರುತದ ಅಬ್ಬರ – ಶ್ರೀಲಂಕಾದಲ್ಲಿ ಸಾವಿನ ಸಂಖ್ಯೆ 334ಕ್ಕೆ ಏರಿಕೆ

(ನ್ಯೂಸ್‌ ಕಡಬ) newskadaba.com, ಡಿ.01: ದಿತ್ವಾ ಚಂಡಮಾರುತದಿಂದ ಉಂಟಾದ ಭೂಕುಸಿತ ಮತ್ತು ಪ್ರವಾಹಕ್ಕೆ ಶ್ರೀಲಂಕಾ ತತ್ತರಿಸಿದ್ದು, ಮೃತಪಟ್ಟವರ ಸಂಖ್ಯೆ 334ಕ್ಕೆ ತಲುಪಿದೆ. ಶ್ರೀಲಂಕಾ ವಿಪತ್ತು ನಿರ್ವಹಣಾ ಕೇಂದ್ರದ ಮಾಹಿತಿ ಪ್ರಕಾರ, ಸುಮಾರು 370 ಮಂದಿ ನಾಪತ್ತೆಯಾಗಿದ್ದು, 2,66,114 ಕುಟುಂಬಗಳ 9,68,304 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತ್ರಸ್ತರ ನೆರವಿಗಾಗಿ 919 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ‘ಆಪರೇಷನ್ ಸಾಗರ ಬಂಧು’ ಅಡಿಯಲ್ಲಿ ಭಾರತವು ರಕ್ಷಣಾ ಮತ್ತು ಮಾನವೀಯ ನೆರವನ್ನು ಮುಂದುವರಿಸುತ್ತಿದ್ದು, 80 ಸದಸ್ಯರ ವಿಶೇಷ ತಂಡ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

ದಿತ್ವಾ ಚಂಡಮಾರುತದ ಅಬ್ಬರ – ಶ್ರೀಲಂಕಾದಲ್ಲಿ ಸಾವಿನ ಸಂಖ್ಯೆ 334ಕ್ಕೆ ಏರಿಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪ್ರವಾಹದಿಂದ ತತ್ತರಿಸಿದ ಶ್ರೀಲಂಕಾಗೆ ಭಾರತ ನೆರವು: ‘ಆಪರೇಷನ್ ಸಾಗರ ಬಂಧು’ ಅಡಿ ಕಾರ್ಯಾಚರಣೆ ಆರಂಭ

(ನ್ಯೂಸ್‌ ಕಡಬ) newskadaba.com,  ನ.29: ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿರುವ ಶ್ರೀಲಂಕಾಕ್ಕೆ ನೆರವು ನೀಡಲು ಭಾರತ ‘ಆಪರೇಷನ್ ಸಾಗರ ಬಂಧು’ ಅಡಿಯಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದೆ. ಇದರ ಭಾಗವಾಗಿ ಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರಗೊಂಡವರಿಗಾಗಿ ತುರ್ತು ಪರಿಹಾರ ಸಾಮಗ್ರಿಗಳನ್ನ ಭಾರತ ಕಳುಹಿಸಿದೆ. ಶ್ರೀಲಂಕಾದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸಿ, ರಸ್ತೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹ ಮತ್ತು ಭೂಕುಸಿತದಿಂದಾಗಿ ಸುಮಾರು 100 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ

ಪ್ರವಾಹದಿಂದ ತತ್ತರಿಸಿದ ಶ್ರೀಲಂಕಾಗೆ ಭಾರತ ನೆರವು: ‘ಆಪರೇಷನ್ ಸಾಗರ ಬಂಧು’ ಅಡಿ ಕಾರ್ಯಾಚರಣೆ ಆರಂಭ Read More »

ಅಂತರ್ರಾಷ್ಟ್ರೀಯ ನ್ಯೂಸ್

ಶೇಖ್ ಹಸೀನಾಗೆ 21 ವರ್ಷ ಜೈಲು ಶಿಕ್ಷೆ ವಿಧಿಸಿದ ಢಾಕಾ ಕೋರ್ಟ್

(ನ್ಯೂಸ್‌ ಕಡಬ) newskadaba.com,  ನ.28: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ವಿರುದ್ಧ ದಾಖಲಾದ ಮೂರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಢಾಕಾ ಕೋರ್ಟ್ 21 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸಂಚು, ವಂಚನೆಯ ಮೂರು ಪ್ರಕರಣಗಳನ್ನು ವಿಚಾರಣೆ ನಡೆಸಿದ ಕೋರ್ಟ್ ತಲಾ 7 ವರ್ಷಗಳಂತೆ 21 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಶೇಖ್ ಹಸೀನಾ ಪುತ್ರ, ಪುತ್ರಿಗೂ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಢಾಕಾದ ಪುರ್ಬಾಚಲ್ ಪ್ರದೇಶದಲ್ಲಿ ಸರ್ಕಾರಿ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ

ಶೇಖ್ ಹಸೀನಾಗೆ 21 ವರ್ಷ ಜೈಲು ಶಿಕ್ಷೆ ವಿಧಿಸಿದ ಢಾಕಾ ಕೋರ್ಟ್ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಶ್ರೀಲಂಕಾ: ಭಾರೀ ಮಳೆ, ಪ್ರವಾಹ, ಭೂಕುಸಿತಕ್ಕೆ 50 ಕ್ಕೂ ಹೆಚ್ಚು ಮಂದಿ ಸಾವು

(ನ್ಯೂಸ್‌ ಕಡಬ) newskadaba.com,  ನ.28: ಶ್ರೀಲಂಕಾದಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಪ್ರವಾಹ ಮತ್ತು ಭೂಕುಸಿತಗಳಿಂದ ಇಲ್ಲಿವರೆಗೆ 50ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದ 600 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ, ಹೆಚ್ಚುತ್ತಿರುವ ವಿಪತ್ತು ಹಿನ್ನೆಲೆಯಲ್ಲಿ, ಶ್ರೀಲಂಕಾ ಸರ್ಕಾರ ಶುಕ್ರವಾರ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ. ಕಳೆದ ವಾರದಿಂದಲೇ ಹವಾಮಾನ ವೈಪರೀತ್ಯಗೊಂಡಿದ್ದು, ಗುರುವಾರದಿಂದ ಮಳೆ ಪ್ರಮಾಣ ತೀವ್ರವಾಗಿ

ಶ್ರೀಲಂಕಾ: ಭಾರೀ ಮಳೆ, ಪ್ರವಾಹ, ಭೂಕುಸಿತಕ್ಕೆ 50 ಕ್ಕೂ ಹೆಚ್ಚು ಮಂದಿ ಸಾವು Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮದುವೆ ಸಮಾರಂಭದಿಂದ ಹಿಂದಿರುಗುತ್ತಿದ್ದಾಗ ಕಾಲುವೆಗೆ ಬಿದ್ದ ಕಾರು – 5 ಮಂದಿ ಸಾವು, ಇಬ್ಬರು ಗಂಭೀರ

(ನ್ಯೂಸ್‌ ಕಡಬ) newskadaba.com,  ನ.26 ಲಕ್ನೋ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದ ಸಭೆಗೆ ಗೈರಾದ ಕಾರಣ ಅಮಾನತುಗೊಂಡ ಅಧಿಕಾರಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 25 ವರ್ಷದ ಗುಮಾಸ್ತ ಸುಧೀರ್ ಕುಮಾರ್ ಆತ್ಮಹತ್ಯೆಗೆ ಶರಣಾದವರು. ಇವರಿಗೆ ಮದುವೆ ನಿಶ್ಚಯವಾಗಿತ್ತು. ವಿವಾಹಕ್ಕೆ ಒಂದು ದಿನವಷ್ಟೇ ಬಾಕಿ ಇರುವಾಗ, ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.ವಿವಾಹದ ಸಿದ್ಧತೆಗಳಿಂದಾಗಿ ಭಾನುವಾರ ಅಧಿಕೃತ ಸಭೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಕುಮಾರ್‌ನನ್ನು ಅಮಾನತು ಮಾಡಿದ್ದರು. ಇದರಿಂದ ನನ್ನ ಸಹೋದರ

ಮದುವೆ ಸಮಾರಂಭದಿಂದ ಹಿಂದಿರುಗುತ್ತಿದ್ದಾಗ ಕಾಲುವೆಗೆ ಬಿದ್ದ ಕಾರು – 5 ಮಂದಿ ಸಾವು, ಇಬ್ಬರು ಗಂಭೀರ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಡಿಸೆಂಬರ್ ತಿಂಗಳಲ್ಲಿ ವಿವಿಧೆಡೆ 18 ದಿನ ಬ್ಯಾಂಕ್ ರಜೆ

(ನ್ಯೂಸ್‌ ಕಡಬ) newskadaba.com,  ನ.25 ನವದೆಹಲಿ:ಹಬ್ಬಗಳ ಸೀಸನ್ ಮುಗಿದಿದ್ದರೂ ವರ್ಷಾಂತ್ಯದ ತಿಂಗಳಾದ ಡಿಸೆಂಬರ್​ನಲ್ಲಿ ರಜಾ ದಿನಗಳಿಗೆ ಬರವಿದ್ದಂತಿಲ್ಲ. ಆರ್​ಬಿಐ ಕ್ಯಾಲೆಂಡರ್ ಪ್ರಕಾರ ದೇಶದ ವಿವಿಧೆಡೆ ಬ್ಯಾಂಕುಗಳಿಗೆ ಒಟ್ಟು 18 ದಿನಗಳವರೆಗೆ ರಜೆ ಇದೆ. ಇದರಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳೂ ಒಳಗೊಂಡಿವೆ. ಈ ಡಿಸೆಂಬರ್​ನಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಸಾರ್ವತ್ರಿಕ ರಜೆ ಇದೆ. ಉಳಿದಂತೆ ಬೇರೆ ಬೇರೆ ದಿನಗಳು ಪ್ರಾದೇಶಿಕ ರಜೆಗಳಿವೆ. ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಕಡೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 20ರಿಂದಲೇ ರಜೆಗಳು

ಡಿಸೆಂಬರ್ ತಿಂಗಳಲ್ಲಿ ವಿವಿಧೆಡೆ 18 ದಿನ ಬ್ಯಾಂಕ್ ರಜೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಾಲಿವುಡ್‍ ಹಿರಿಯ ನಟ ಧರ್ಮೇಂದ್ರ ವಿಧಿವಶ.!

(ನ್ಯೂಸ್‌ ಕಡಬ) newskadaba.com,  ನ.24 ಮುಂಬೈ : ಕಳೆದ ಹಲವು ದಿನಗಳಿಂದ ತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್‍ನ ಹೀ ಮ್ಯಾನ್, ಎವರ್‍ಗ್ರೀನ್ ಸ್ಟಾರ್, ಆಕ್ಷನ್ ಕಿಂಗ್ ಎಂದು ಜನಪ್ರಿಯರಾಗಿದ್ದ ಹಿರಿಯ ನಟ ಧರ್ಮೇಂದ್ರ (89) ಅವರು ಸೋಮವಾರ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಧರ್ಮೇಂದ್ರ ಅವರು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಸೋಮವಾರ ಬೆಳಿಗ್ಗೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ರಾಷ್ಟ್ರಪರಿ ದ್ರೌಪತಿ ಮುರ್ಮು, ಉಪ ರಾಷ್ಟ್ರಪತಿ ರಾಧಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಸಂತಾಪ

ಬಾಲಿವುಡ್‍ ಹಿರಿಯ ನಟ ಧರ್ಮೇಂದ್ರ ವಿಧಿವಶ.! Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮೇಡ್ ಇನ್ ಚೈನಾ, ಟರ್ಕಿ ಶಸ್ತ್ರಾಸ್ತ್ರ ಭಾರತಕ್ಕೆ ಪೂರೈಕೆ- ನಾಲ್ವರ ಬಂಧನ

(ನ್ಯೂಸ್‌ ಕಡಬ) newskadaba.com,  ನ.22:   ಚೀನಾ ಮತ್ತು ಟರ್ಕಿಯಲ್ಲಿ ತಯಾರಾದ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಪೂರೈಸುತ್ತಿದ್ದ ಪ್ರಮುಖ ಅಂತರರಾಷ್ಟ್ರೀಯ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ದೆಹಲಿಯ ಪೊಲೀಸರು ಭೇದಿಸಿ, ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗೆ ಸಂಬಂಧಿಸಿದ ಸಿಂಡಿಕೇಟ್, ಚೀನಾ ಮತ್ತು ಟರ್ಕಿಯಲ್ಲಿ ತಯಾರಾದ ಉನ್ನತ ದರ್ಜೆಯ ಪಿಸ್ತೂಲ್‌ಗಳನ್ನು ಪಾಕಿಸ್ತಾನದ ಮೂಲಕ ಭಾರತಕ್ಕೆ ಪೂರೈಸುತ್ತಿತ್ತು. ಪೊಲೀಸರು ಈ ಅಕ್ರಮ ಶಸ್ತ್ರಾಸ್ತ್ರ ಗ್ಯಾಂಗ್‌ನ ನಾಲ್ವರು ಪ್ರಮುಖ ಸದಸ್ಯರನ್ನು ಬಂಧಿಸಿ 10 ದುಬಾರಿ ವಿದೇಶಿ

ಮೇಡ್ ಇನ್ ಚೈನಾ, ಟರ್ಕಿ ಶಸ್ತ್ರಾಸ್ತ್ರ ಭಾರತಕ್ಕೆ ಪೂರೈಕೆ- ನಾಲ್ವರ ಬಂಧನ Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top