ಅಂತರ್ರಾಷ್ಟ್ರೀಯ ನ್ಯೂಸ್

ಶಾಲೆಗೆ ತೆರಳಿದ್ದ 317ಕ್ಕೂ ಅಧಿಕ ಬಾಲಕಿಯರ ಅಪಹರಣ..!

(ನ್ಯೂಸ್ ಕಡಬ) newskadaba.com ಉತ್ತರನೈಜೀರಿಯಾ, ಫೆ. 27. ವಸತಿ ಶಾಲೆಯೊಂದರಿಂದ 317ಕ್ಕೂ ಅಧಿಕ ಬಾಲಕಿಯರನ್ನು ಬಂದೂಕುಧಾರಿಗಳು ಅಪಹರಿಸಿರುವ ಘಟನೆ ಉತ್ತರ ನೈಜೀರಿಯಾದಲ್ಲಿ ನಡೆದಿದೆ. ನೈಜೀರಿಯಾದ ಜಂಗೆಬೆ ಪಟ್ಟಣದಲ್ಲಿರುವ ಬಾಲಕಿಯರ ಸರ್ಕಾರಿ ಕಿರಿಯ ಮಾಧ್ಯಮಿಕ ಶಾಲೆಯಿಂದ ವಿದ್ಯಾರ್ಥಿನಿಯರ ಸಾಮೂಹಿಕ ಅಪಹರಣ ಮಾಡಲಾಗಿದ್ದು, ಪೊಲೀಸ್‌ ಮತ್ತು ಮಿಲಿಟರಿ ಪಡೆ ವಿದ್ಯಾರ್ಥಿನಿಯರ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಶಾಲೆಯ ಸಮೀಪವೇ ದೊಡ್ಡ ಪ್ರಮಾಣದ ಸೇನಾ ಪಡೆಯಿದ್ದರೂ, ಬಾಲಕಿಯರನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನೈಜೀರಿಯಾ ಅಧ್ಯಕ್ಷ ಮುಹಮ್ಮದ್ […]

ಶಾಲೆಗೆ ತೆರಳಿದ್ದ 317ಕ್ಕೂ ಅಧಿಕ ಬಾಲಕಿಯರ ಅಪಹರಣ..! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಕಾರಿನಲ್ಲಿ ಕೋಕೇನ್ ಸಾಗಾಟ ➤ ಬಿಜೆಪಿ ನಾಯಕಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಪಶ್ಚಿಮ ಬಂಗಾಳ, ಫೆ. 20. ಬಿಜೆಪಿಯ ಯುವ ನಾಯಕಿ ಪಮೇಲಾ ಗೋಸ್ವಾಮಿ ಅವರನ್ನು ಕಾರಿನಲ್ಲಿ ಕೊಕೇನ್(ಮಾದಕ ದ್ರವ್ಯ) ಸಾಗಿಸುತ್ತಿದ್ದ ಆರೋಪದಡಿ ಪೊಲೀಸರು ಶುಕ್ರವಾರದಂದು ಬಂಧಿಸಿದ್ದಾರೆ. ಬಿಜೆಪಿ ಯುವ ನಾಯಕಿಯಾಗಿರುವ ಪಮೇಲಾ ಗೋಸ್ವಾಮಿ ಮತ್ತು ಅವರ ಸ್ನೇಹಿತ ಪ್ರೋಬೀರ್‌ ಕುಮಾರ್‌ ಡೇ ಅವರನ್ನು ಕಲ್ಕತ್ತಾದ ನ್ಯೂ ಅಲಿಪುರ್‌ ಪ್ರದೇಶದ ಎನ್‌.ಆರ್‌ ಅವೆನ್ಯೂ ಎಂಬಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಅವರು ತಮ್ಮ ಕಾರಿನಲ್ಲಿ ಕೊಕೇನ್ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿ ಕೋಕೇನ್ ಸಾಗಾಟ ➤ ಬಿಜೆಪಿ ನಾಯಕಿ ಅರೆಸ್ಟ್ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಕೆಸಿಎಫ್ ದಿನಾಚರಣೆ ಪ್ರಯುಕ್ತ ಬಹರೈನ್ ರಾಷ್ಟ್ರೀಯ ಸಮಿತಿ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ದುಬೈ, ಫೆ. 10. ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ವತಿಯಿಂದ ಕೆಸಿಎಫ್ ದಿನಾಚರಣೆ ಪ್ರಯುಕ್ತ ಸ್ವಯಂ ಪ್ರೇರಿತವಾಗಿ ನಡೆದ ಬೃಹತ್ ರಕ್ತದಾನ ಶಿಬಿರವು ಸಲ್ಮಾನಿಯ ಮೆಡಿಕಲ್ ಸೆಂಟರ್ ನಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು. ಫೆಬ್ರವರಿ 5 ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಅಬ್ದುಲ್ ಖಾದರ್ ಉಸ್ತಾದ್ ರವರ ದುಃಆ ಮೂಲಕ ಆರಂಭಗೊಂಡ ಶಿಬಿರದಲ್ಲಿ ಕೆಸಿಎಫ್ ನ ಸದಸ್ಯರು ಮತ್ತು ಇಲ್ಲಿನ ಸ್ವದೇಶಿಗಳು ವಿದೇಶಿಯರು ಸೇರಿ ನೂರರಷ್ಟು ಮಿಕ್ಕ ರಕ್ತದಾನಿಗಳು ಭಾಗವಹಿಸಿದ್ದರು. ಕೆಸಿಎಫ್

ಕೆಸಿಎಫ್ ದಿನಾಚರಣೆ ಪ್ರಯುಕ್ತ ಬಹರೈನ್ ರಾಷ್ಟ್ರೀಯ ಸಮಿತಿ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ Read More »

ಅಂತರ್ರಾಷ್ಟ್ರೀಯ ನ್ಯೂಸ್

ವಿದೇಶಿ ಪ್ರಯಾಣಿಕರಿಗೆ ಮೇ .17ರ ವರೆಗೆ ಸೌದಿ ಅರೇಬಿಯಾ ಪ್ರಯಾಣ ನಿಷೇಧ..!

(ನ್ಯೂಸ್ ಕಡಬ) newskadaba.com ರಿಯಾದ್, ಜ. 30. ಸೌದಿ ಅರೇಬಿಯವು ತನ್ನ ಭೂಗಡಿ, ಬಂದರು ಮತ್ತು ವಿಮಾನ ನಿಲ್ದಾಣಗಳನ್ನು ವಿದೇಶಿಯರಿಗೆ ತೆರೆಯುವುದನ್ನು ಮೇ 17ರವರೆಗೆ ಮುಂದೂಡಿದೆ ಎಂದು ದೇಶದ ಆಂತರಿಕ ಸಚಿವಾಲಯ ತಿಳಿಸಿದೆ.      

ವಿದೇಶಿ ಪ್ರಯಾಣಿಕರಿಗೆ ಮೇ .17ರ ವರೆಗೆ ಸೌದಿ ಅರೇಬಿಯಾ ಪ್ರಯಾಣ ನಿಷೇಧ..! Read More »

ಅಂತರ್ರಾಷ್ಟ್ರೀಯ ನ್ಯೂಸ್

ಅಬುಧಾಬಿ ಪ್ರವೇಶಕ್ಕೆ ‘ಅಲ್ ಹಸನ್’ ಆ್ಯಪ್ ಕಡ್ಡಾಯ..!

(ನ್ಯೂಸ್ ಕಡಬ) newskadaba.com ಅಬುಧಾಬಿ, ಜ. 30. ಯುಎಇ ನಿವಾಸಿಗಳು ರಾಜಧಾನಿ ಅಬುಧಾಬಿಯನ್ನು ಪ್ರವೇಶಿಸಬೇಕಾದರೆ ಸಂಪರ್ಕ ಪತ್ತೆಹಚ್ಚುವ ‘ಅಲ್ ಹಸನ್’ ಎಂಬ ಆ್ಯಪ್ ಅನ್ನು ಚಾಲನೆಯಲ್ಲಿಡುವುದು ಅಗತ್ಯವಾಗಿದೆ ಎಂದು ಅಬುಧಾಬಿ ಪೊಲೀಸರು ಸೂಚಿಸಿದ್ದಾರೆ. ಫೆಬ್ರವರಿ 1ರಿಂದ ಅಬುಧಾಬಿ ಪ್ರವೇಶಿಸ ಬಯಸುವವರು, ತಮಗೆ ಕೊರೋನ ವೈರಸ್ ಸೋಂಕು ಇಲ್ಲ ಎನ್ನುವುದನ್ನು ತೋರಿಸುವ ಪರೀಕ್ಷಾ ಫಲಿತಾಂಶ ಮತ್ತು ಕೊರೋನ ವೈರಸ್ ಪತ್ತೆಹಚ್ಚಲು ಯಾವ ಮಾದರಿಯ ಪರೀಕ್ಷೆಯನ್ನು ಮಾಡಲಾಗಿದೆ ಎನ್ನುವುದನ್ನು ಈ ಆ್ಯಪ್‌ನ ಮೂಲಕ ತೋರಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಬುಧಾಬಿ ಪ್ರವೇಶಕ್ಕೆ ‘ಅಲ್ ಹಸನ್’ ಆ್ಯಪ್ ಕಡ್ಡಾಯ..! Read More »

ಅಂತರ್ರಾಷ್ಟ್ರೀಯ ನ್ಯೂಸ್

ವಿಮಾನ ಅಪಘಾತ ➤ ನಾಲ್ವರು ಫುಟ್ ಬಾಲ್ ಆಟಗಾರರು ಮೃತ್ಯು

(ನ್ಯೂಸ್ ಕಡಬ) newskadaba.com ಸಾವೊ ಪೌಲೊ, ಜ. 25. ಭಾನುವಾರದಂದು ನಡೆದ ವಿಮಾನ ಅಪಘಾತದಲ್ಲಿ ಪಲ್ಮಾಸ್ ಫುಟ್‌ಬಾಲ್ ಕ್ಲಬ್‌ನ ಅಧ್ಯಕ್ಷ ಹಾಗೂ ನಾಲ್ವರು ಆಟಗಾರರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರನ್ನು ಕ್ಲಬ್ ಅಧ್ಯಕ್ಷ ಲೂಕಾಸ್‌ ಮೇರಾ, ಆಟಗಾರರಾದ ಲೂಕಾಸ್ ಪ್ರಕ್ಸಿಡಿಸ್‌, ಗುಲೆರ್ಮೆ ನೊಯೆ, ರಣುಲ್‌ ಮತ್ತು ಮಾರ್ಕಸ್ ಮೋಲಿನರಿ ಎಂದು ಗುರುತಿಸಲಾಗಿದೆ. ಬ್ರೆಜಿಲಿಯನ್ ಕಪ್ ಟೂರ್ನಿಯ ಪಂದ್ಯದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ತಂಡವನ್ನು ಕರೆದೊಯ್ಯಲು ಸಜ್ಜಾಗಿದ್ದ ಲಘು ವಿಮಾನ ಟೇಕ್ ಆಫ್ ಸಂದರ್ಭದಲ್ಲಿ ಅಪಘಾತಕಕ್ಕೆ ಈಡಾಗಿತ್ತು.

ವಿಮಾನ ಅಪಘಾತ ➤ ನಾಲ್ವರು ಫುಟ್ ಬಾಲ್ ಆಟಗಾರರು ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ವಾಷಿಂಗ್ಟನ್: ಇಂದು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್ ಡಿಸಿ, ಜ. 20. ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬೈಡನ್ ಮತ್ತು ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡ ಕಮಲಾ ಹ್ಯಾರಿಸ್ ಅವರಿಗೆ ಇಂದು ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಇದರ ಜೊತೆಗೆ ಸೋಲೊಪ್ಪಿಕೊಂಡಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಂದು ತನ್ನ ವಿದಾಯ ಭಾಷಣ ಮಾಡಲಿದ್ದಾರೆ.

ವಾಷಿಂಗ್ಟನ್: ಇಂದು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ Read More »

ಅಂತರ್ರಾಷ್ಟ್ರೀಯ ನ್ಯೂಸ್

ಕೋಟ್ಯಂತರ ಬಳಕೆದಾರರನ್ನು ಕಳೆದುಕೊಂಡ ಬಳಿಕ ಪ್ರೈವೆಸಿ ಪಾಲಿಸಿ ವಾಪಸ್ ➤ ಡ್ಯಾಮೇಜ್ ಸರಿಪಡಿಸಲು ಪರದಾಡುತ್ತಿರುವ ವಾಟ್ಸ್ಅಪ್ | ಸ್ಟೇಟಸ್ ನಲ್ಲಿ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜ.17. ಹೊಸ ಪ್ರೈವೆಸಿ ಪಾಲಿಸಿ ಹೊರತರಲು ಉದ್ದೇಶಿಸಿದ್ದ ವಾಟ್ಸ್ಅಪ್ ಸಂಸ್ಥೆಯು ಎಚ್ಚೆತ್ತುಕೊಂಡಿದ್ದು, ಕಂಪೆನಿಯ ಮೇಲಾಗಿರುವ ಡ್ಯಾಮೇಜನ್ನು ಸರಿಪಡಿಸಲು ಪರದಾಡುತ್ತಿದೆ. ವಾಟ್ಸ್ಅಪ್ ಕಂಪೆನಿಯು ತನ್ನೆಲ್ಲಾ ಮಾಹಿತಿಯನ್ನು ಬೇರೆ ಕಂಪೆನಿಗೆ ಮಾರಾಟ ಮಾಡಲು ಬಳಕೆದಾರರ ಅನುಮತಿ ಕೇಳಿತ್ತು. ಇದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾದ ಬಳಿಕ ರಾತ್ರಿ ಬೆಳಗಾಗುವುದರ ಒಳಗೆ ಕೋಟ್ಯಂತರ ಬಳಕೆದಾರರು ವಾಟ್ಸ್ಅಪ್ ಗೆ ಪರ್ಯಾಯವಾಗಿ ಸಿಗ್ನಲ್ ಮತ್ತು ಟೆಲಿಗ್ರಾಂ ಆ್ಯಪ್ ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು‌. ಕೋಟ್ಯಂತರ ಬಳಕೆದಾರರನ್ನು ಕಳೆದುಕೊಂಡ ಬಳಿಕ ಕೊನೆಗೂ ಎಚ್ಚೆತ್ತುಕೊಂಡ

ಕೋಟ್ಯಂತರ ಬಳಕೆದಾರರನ್ನು ಕಳೆದುಕೊಂಡ ಬಳಿಕ ಪ್ರೈವೆಸಿ ಪಾಲಿಸಿ ವಾಪಸ್ ➤ ಡ್ಯಾಮೇಜ್ ಸರಿಪಡಿಸಲು ಪರದಾಡುತ್ತಿರುವ ವಾಟ್ಸ್ಅಪ್ | ಸ್ಟೇಟಸ್ ನಲ್ಲಿ ಸ್ಪಷ್ಟನೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ತಂತ್ರಜ್ಞಾನ, ಲೈಫ್‍ಸ್ಟೈಲ್

ಅಂಗಾಂಗ ದಾನ ಮಾಡಿ‌ 5 ಜೀವಗಳನ್ನು ಉಳಿಸಿದ ಇಪ್ಪತ್ತು ತಿಂಗಳ ಮಗು…! ➤ ಈ ಮೂಲಕ ಅತೀ ಕಿರಿಯ ಅಂಗಾಂಗ‌ ದಾನಿಯಾದ ಧನಿಷ್ಠಾ

(ನ್ಯೂಸ್ ಕಡಬ) newskadaba.com ಪಾಟ್ನಾ, ಜ. 15. ಇಪ್ಪತ್ತು ತಿಂಗಳ ಮಗುವಿನ ಅಂಗಾಗಳನ್ನು ದಾನ ಮಾಡುವ ಮೂಲಕ ದೇಶದ ಅತೀ ಕಿರಿಯ ಅಂಗಾಂಗ ದಾನಿಯಾಗಿ ಗುರುತಿಸಿಕೊಂಡಿದೆ. ದಿಲ್ಲಿಯ ಒಂದು ದಂಪತಿಯ 20 ತಿಂಗಳ ಧನಿಷ್ಠಾ ಎಂಬ ಮಗುವೊಂದು ಜನವರಿ 8ರ ಸಂಜೆ ಮನೆಯ ಮೊದಲನೇ ಮಹಡಿಯ ಬಾಲ್ಕನಿಯಲ್ಲಿ ಆಡುತ್ತಿದ್ದ ಸಂದರ್ಭ ಕೆಳಗೆ ಬಿದ್ದಿತ್ತು. ತಕ್ಷಣವೇ ಮಗುವನ್ನು ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ದಾಖಲಿಸಿದ್ದರು. ಆದರೆ, ಜನವರಿ 11ರಂದು ವೈದ್ಯರು ಮಗುವಿನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಹೇಳಿದ್ದರು. ಧನಿಷ್ಟಾಳಿಗೆ ಚಿಕಿತ್ಸೆ ಮುಂದುವರಿದಿದ್ದರೂ

ಅಂಗಾಂಗ ದಾನ ಮಾಡಿ‌ 5 ಜೀವಗಳನ್ನು ಉಳಿಸಿದ ಇಪ್ಪತ್ತು ತಿಂಗಳ ಮಗು…! ➤ ಈ ಮೂಲಕ ಅತೀ ಕಿರಿಯ ಅಂಗಾಂಗ‌ ದಾನಿಯಾದ ಧನಿಷ್ಠಾ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಇಂದಿನಿಂದ ತನ್ನೆಲ್ಲಾ ಗಡಿಗಳನ್ನು ತೆರೆದು ಸೇವೆಯನ್ನು ಆರಂಭಿಸಲಿರುವ ಸೌದಿ ಅರೇಬಿಯಾ

(ನ್ಯೂಸ್ ಕಡಬ) newskadaba.com ಜಿದ್ದಾ, ಜ. 03.  ಹೊಸ ಪ್ರಬೇಧದ ಕೊರೋನಾ ವೈರಸ್ ಹರಡಿದ್ದರಿಂದ ಬಂದ್ ಮಾಡಲಾಗಿದ್ದ ಎಲ್ಲಾ ಗಡಿಗಳನ್ನು ಸೌದಿ ಅರೇಬಿಯಾವು ಇಂದು ತೆರೆಯಲಿದ್ದು, ಇಂದು ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಹೊರ ದೇಶಗಳಿಂದ ವಿಮಾನಗಳು ಆಗಮಿಸಬಹುದು ಎಂದು ಪ್ರಕಟಣೆ ತಿಳಿಸಿದೆ.   ಜೊತೆಗೆ ಹೊಸ ರೂಪಾಂತರಿತ ವೈರಸ್ ಹರಡಿದ ದೇಶಗಳಿಂದ ಬರುವ ಜನರು ಸೌದಿಯಲ್ಲಿ ಹದಿನಾಲ್ಕು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ.

ಇಂದಿನಿಂದ ತನ್ನೆಲ್ಲಾ ಗಡಿಗಳನ್ನು ತೆರೆದು ಸೇವೆಯನ್ನು ಆರಂಭಿಸಲಿರುವ ಸೌದಿ ಅರೇಬಿಯಾ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top