ಅಂತರ್ರಾಷ್ಟ್ರೀಯ ನ್ಯೂಸ್

ಗೋದಾಮಿನಲ್ಲಿ ಅಗ್ನಿ ಅವಘಡ ➤3,400 ಜನರನ ಸ್ಥಳಾಂತರ

(ನ್ಯೂಸ್ ಕಡಬ) Newskadaba.com: ಹಾಂಗ್ ಕಾಂಗ್; ಮಾ,25  ನಗರದ ಕೈಗಾರಿಕಾ ಪ್ರದೇಶವಾದ ಕೌಲೂನ್‌ನ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಸರ್ಕಾರ ತಿಳಿಸಿದೆ.ಬೆಂಕಿಯ ಪರಿಣಾಮ ಕಟ್ಟಡದಿಂದ ದಟ್ಟ ಹೊಗೆ ಹೊರಬರುತ್ತಿರುವುದು ಕಂಡು ಬಂದಿದೆ. ಹೀಗಾಗಿ ಹತ್ತಿರದಲ್ಲಿನ ನಾಲ್ಕು ಶಾಲೆಯ ವಿದ್ಯಾರ್ಥಿಗಳು ಹಾಗೂ ಹತ್ತಿರದಲ್ಲಿದ್ದ ಕಟ್ಟಡಗಳಲ್ಲಿನ ನಿವಾಸಿಗಳು ಸೇರಿ 3,400 ಜನರನ್ನು ಸ್ಥಳಾಂತರಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಈ ಘಟನೆಯಲ್ಲಿ, ಹೊಗೆ ಸೇವಿಸಿ ಇಬ್ಬರು ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಬೆಂಕಿ ಕಾಣಿಸಿಕೊಂಡಿರುವುದಕ್ಕೆ ನಿಖರ ಕಾರಣ […]

ಗೋದಾಮಿನಲ್ಲಿ ಅಗ್ನಿ ಅವಘಡ ➤3,400 ಜನರನ ಸ್ಥಳಾಂತರ Read More »

ಅಂತರ್ರಾಷ್ಟ್ರೀಯ ನ್ಯೂಸ್

ಮಾ.26 ರಂದು ಭೂಮಿ ಸಮೀಪ ಹಾದುಹೋಗಲಿದೆ ಬೃಹತ್ ಕ್ಷುದ್ರಗ್ರಹ ➤ ನಾಸಾ

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 24. 50 ಮೀಟರ್‌ಗಿಂತಲೂ ಹೆಚ್ಚು ವ್ಯಾಸದ ಬೃಹತ್ ಕ್ಷುದ್ರಗ್ರಹವು ಮಾರ್ಚ್ 26 ರಂದು ಭೂಮಿಗೆ ಹತ್ತಿರವಾಗಲು ಸಜ್ಜಾಗಿದೆ ಎಂದು NASA ಅಧಿಕೃತ ಮಾಹಿತಿ ನೀಡಿದೆ. 2023 DZ2 ಎಂಬ ಹೆಸರಿನ ಹೊಸದಾಗಿ ಪತ್ತೆಯಾದ ಕ್ಷುದ್ರಗ್ರಹವು ಭೂಮಿಯ ಸಮೀಪ ಆಗಮಿಸಲಿದೆ ಎಂದು ನಾಸಾ ಟ್ವಿಟರ್ ನಲ್ಲಿ ಬಹಿರಂಗಪಡಿಸಿದೆ.

ಮಾ.26 ರಂದು ಭೂಮಿ ಸಮೀಪ ಹಾದುಹೋಗಲಿದೆ ಬೃಹತ್ ಕ್ಷುದ್ರಗ್ರಹ ➤ ನಾಸಾ Read More »

ಅಂತರ್ರಾಷ್ಟ್ರೀಯ ನ್ಯೂಸ್

ಇದು ನನ್ನ ಕೊನೆಯ ಪ್ರೀತಿ ➤ 92ನೇ ವಯಸ್ಸಿಗೆ 5ನೇ ಮದುವೆಯಾದ ಉದ್ಯಮಿ

(ನ್ಯೂಸ್ ಕಡಬ) newskadaba.com ನ್ಯೂಯಾರ್ಕ್, ಮಾ. 21. ಮಾಧ್ಯಮ ಕ್ಷೇತ್ರದ ದಿಗ್ಗಜ ರೂಪರ್ಟ್ ಮುರ್ಡೋಕ್ ತಮ್ಮ 92ನೇ ವಯಸ್ಸಿನಲ್ಲಿ ಐದನೇ ಮದುವೆಯಾಗುತ್ತಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ರೂಪರ್ಟ್, ನಾನು ತುಂಬಾ ನರ್ವಸ್ ಆಗಿದ್ದು ನನಗೆ ನಿಜಕ್ಕೂ ಮತ್ತೊಮ್ಮೆ ಪ್ರೀತಿಯಲ್ಲಿ ಬೀಳಲು ಭಯವಾಗುತ್ತಿತ್ತು. ಆದರೂ ಇದು ನನ್ನ ಕೊನೆಯ ಪ್ರೀತಿ ಎಂದು ನನಗೆ ಗೊತ್ತಿದೆ ಎಂದಿದ್ದಾರೆ.

ಇದು ನನ್ನ ಕೊನೆಯ ಪ್ರೀತಿ ➤ 92ನೇ ವಯಸ್ಸಿಗೆ 5ನೇ ಮದುವೆಯಾದ ಉದ್ಯಮಿ Read More »

ಅಂತರ್ರಾಷ್ಟ್ರೀಯ ನ್ಯೂಸ್

ಟರ್ಕಿ ಭೂಕಂಪ ನೆಲೆಯಲ್ಲಿ ಪ್ರವಾಹ ➤ 14 ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ಟರ್ಕಿ, ಮಾ. 17. ಟರ್ಕಿ ಸಿರಿಯಾ ಗಡಿಯಲ್ಲಿ ಭೂಕಂಪ ಸಂಭವಿಸಿದ್ದ ಪ್ರದೇಶದಲ್ಲಿ ದಿಢೀರ್ ಪ್ರವಾಹ ನುಗ್ಗಿದ್ದರಿಂದ ಹಲವರು ಕೊಚ್ಚಿ ಹೋಗಿದ್ದು, 14 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಟರ್ಕಿ ಸಿರಿಯಾ ಗಡಿಯ ಸನ್ಲಿಯುರ್ಫಾ ಒಂದರಲ್ಲಿಯೇ ಇಬ್ಬರು ಮಕ್ಕಳು ಸೇರಿ 12 ಮಂದಿ ಮೃತರಾದರು. ಪ್ರವಾಹ ಸಂತ್ರಸ್ತರ ರಕ್ಷಣೆಗೆ 10 ತಂಡಗಳನ್ನು ರಚಿಸಲಾಗಿದೆ. 5 ಮಂದಿ ಕಾಣೆಯಾಗಿದ್ದಾರೆ ಎನ್ನಲಾಗಿದೆ.  

ಟರ್ಕಿ ಭೂಕಂಪ ನೆಲೆಯಲ್ಲಿ ಪ್ರವಾಹ ➤ 14 ಮಂದಿ ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಒಮಾನ್ ದೇಶಕ್ಕೆ ತೆರಳಲು ಇಚ್ಛಿಸುವವರಿಗೆ ಗುಡ್ ನ್ಯೂಸ್: ಭಾರತ ಸೇರಿದಂತೆ 103 ದೇಶದವರಿಗೆ ಉಚಿತ ವೀಸಾ ಘೋಷಣೆ

(ನ್ಯೂಸ್ ಕಡಬ) newskadaba.com ಒಮಾನ್, ಮಾ.17. ನೈಸರ್ಗಿಕ ಸೌಂದರ್ಯ, ಶ್ರೀಮಂತ ಇತಿಹಾಸ ಮತ್ತು ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾದ ಒಮಾನ್‌ ದೇಶವು ಭಾರತ ಸೇರಿದಂತೆ ನೂರಕ್ಕೂ ಹೆಚ್ಚಿನ ದೇಶಗಳಿಗೆ 14 ದಿನಗಳ ಉಚಿತ ವೀಸಾವನ್ನು ಘೋಷಿಸಿದೆ. ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಒಮಾನ್ ದೇಶಕ್ಕೆ ಭಾರತ ಸೇರಿದಂತೆ 103 ದೇಶಗಳ ಪ್ರಜೆಗಳು 14 ದಿನಗಳವರೆಗೆ ಮುಕ್ತ ಪ್ರವೇಶವನ್ನು ಪಡೆಯಬಹುದು ಎಂದು ರಾಯಲ್ ಓಮನ್ ಪೊಲೀಸ್ (ROP) ಪ್ರಕಟಿಸಿದೆ.  

ಒಮಾನ್ ದೇಶಕ್ಕೆ ತೆರಳಲು ಇಚ್ಛಿಸುವವರಿಗೆ ಗುಡ್ ನ್ಯೂಸ್: ಭಾರತ ಸೇರಿದಂತೆ 103 ದೇಶದವರಿಗೆ ಉಚಿತ ವೀಸಾ ಘೋಷಣೆ Read More »

ಅಂತರ್ರಾಷ್ಟ್ರೀಯ ನ್ಯೂಸ್

➤ಯುಎಸ್ ಅಭಿವೃದ್ಧಿ ನೀತಿ ಸಮಿತಿಗೆ ಇಬ್ಬರು ಭಾರತೀಯರು ಆಯ್ಕೆ

(ನ್ಯೂಸ್ ಕಡಬ) newskadaba.com. ಅಮೇರಿಕ, ಮಾ 11. ವ್ಯಾಪಾರ ಮತ್ತು ನೀತಿ ಅಭಿವೃದ್ಧಿ ಸಮಿತಿಗೆ ಇಬ್ಬರು ಭಾರತೀಯ-ಅಮೆರಿಕನ್ನರನ್ನು ಅಧ್ಯಕ್ಷ ಜೋಬೈಡನ್ ಆಡಳಿತಕ್ಕೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಫ್ಲೆಕ್ಸ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ರೇವತಿ ಅದ್ವೈತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ಮಂಡಳಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಮನೀಶ್ ಬಾಪ್ನಾ ಅವರನ್ನು ವ್ಯಾಪಾರ ನೀತಿ ಮತ್ತು ಮಾತುಕತೆಯ ಸಲಹಾ ಸಮಿತಿಗೆ ನೇಮಿಸಲಾಗಿದೆ. ಅಮೇರಿಕಾದ ವ್ಯಾಪಾರ ನೀತಿಯ ಅಭಿವೃದ್ಧಿ, ಅನುಷ್ಠಾನ ಮತ್ತು ಆಡಳಿತದ ವಿಷಯಗಳ ಕುರಿತು ಅಮೇರಿಕಾದ ವ್ಯಾಪಾರ ಪ್ರತಿನಿಧಿ ಸಭೆಗೆ ಸಲಹೆ ನೀಡುವ

➤ಯುಎಸ್ ಅಭಿವೃದ್ಧಿ ನೀತಿ ಸಮಿತಿಗೆ ಇಬ್ಬರು ಭಾರತೀಯರು ಆಯ್ಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ರಾಷ್ಟ್ರೀಯ ನ್ಯೂಸ್

➤ ಚೀನಾದ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಆಯ್ಕೆ

(ನ್ಯೂಸ್ ಕಡಬ) newskadaba.com. ಚೀನಾ. ಮಾ 11. ಸಂಸತ್ತು ಸರ್ವಾನುಮತದಿಂದ ಕ್ಸಿ-ನ್ ಪಿಂಗ್ ಅವರನ್ನು ಅಧ್ಯಕ್ಷರನ್ನಾಗಿ  ಆಯ್ಕೆ ಮಾಡಿತು. 2, 952 ಮತಗಳನ್ನು ಪಡೆದ ಅವರು ಮೂರನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ಆಯ್ಕೆಯಾದರು. ಅಲ್ಲದೆ ದೇಶದ ಕೇಂದ್ರ ಮಿಲಿಟರಿ ಆಯೋಗದ ಮುಖ್ಯಸ್ಥರಾಗಿಯೂ ಕ್ಸಿ-ಜಿನ್ ಪಿಂಗ್ ಪುನರಾಯ್ಕೆಗೊಂಡರು. ಇದೇ ವೇಳೆ ಮೂರನೇ ಅವಧಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕ್ಸಿ-ಜಿನ್ ಪಿಂಗ್, ದೇಶದ ಸಂವಿಧಾನಕ್ಕೆ ಬದ್ದನಾಗಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದರು.

➤ ಚೀನಾದ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಆಯ್ಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್

➤ ಹಾವಿನಿಂದ ಮಾಲೀಕನನ್ನು ರಕ್ಷಿಸಿದ ಶ್ವಾನ

(ನ್ಯೂಸ್ ಕಡಬ) newskadaba.com. ದಕ್ಷಿಣ ಆಫ್ರಿಕಾ, ಮಾ 11  ಮಂಚದ ಹಿಂದೆ ಇದ್ದ ವಿಷಕಾರಿ ಹಾವಿನಿಂದ ಮಾಲೀಕನನ್ನು ನಾಯಿ ಕಾಪಾಡಿದೆ. ಕುತೂಹಲದಿಂದ ರೊಟ್‌ವೀಲರ್ ನಾಯಿಯು ಮಂಚದ ಮೇಲೆ ಬೊಗಳುತ್ತಿತ್ತು ಮತ್ತು ಅದರ ಮಾಲೀಕರು ಮಂಚದ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದಾಗಲೆಲ್ಲಾ ಕೆಲ ದಿನಗಳವರೆಗೆ ದೂರ ತಳ್ಳುತ್ತಿತ್ತು. ಇದನ್ನು ಗಮನಿಸಿದ ನಂತರ, ನಾಯಿಯ ಮಾಲೀಕರು ಅದು ಏನನ್ನು ಸೂಚಿಸುತ್ತಿದೆ ಎಂದು  ಮಂಚದ ಕೆಳಗೆ ಹುಡುಕಾಟ ನಡೆಸಿದರು. ಆಗ ಅಲ್ಲಿ ಅವರು ಅಪಾಯಕಾರಿ ಕಪ್ಪು ಮಾಂಬಾ ಹಾವು ಅಡಗಿರುವುದನ್ನು ಕಂಡುಹಿಡಿದರು. ದಕ್ಷಿಣ ಆಫ್ರಿಕಾದ

➤ ಹಾವಿನಿಂದ ಮಾಲೀಕನನ್ನು ರಕ್ಷಿಸಿದ ಶ್ವಾನ Read More »

ಅಂತರ್ರಾಷ್ಟ್ರೀಯ ನ್ಯೂಸ್

➤ 25ರ ಯುವಕನಿಗೆ 62ರ ಅಜ್ಜಿಯೊಂದಿಗೆ ಮದುವೆ

(ನ್ಯೂಸ್ ಕಡಬ) newskadaba.com. ಜಾರ್ಜಿಯಾ ಮಾ.10. 25 ವರ್ಷದ ಕರ್ರಾನ್ ಮೆಕೇನ್ ಮತ್ತು 62 ವರ್ಷದ ಚೆರಿಲ್ ಮೆಕ್‌ಗ್ರೆಗರ್ ನಡುವೆ ನಡೆದ ಘಟನೆಯಿದು. ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದ ಈ ಜೋಡಿ ವಯಸ್ಸಿನ ಕಾರಣಕ್ಕೆ ಚರ್ಚೆಯಲ್ಲಿದೆ. ಅವರ ವಯಸ್ಸಿನ ಅಂತರದಿಂದಾಗಿ ಅವರನ್ನು ಅನೇಕರು ಟ್ರೋಲ್ ಮಾಡ್ತಾ ಇದ್ದಾರೆ. ಕರ್ರಾನ್ ಮತ್ತು ಚೆರಿಲ್ ಇಬ್ಬರೂ 2012 ರಲ್ಲಿ ಮೊದಲ ಬಾರಿಗೆ ಭೇಟಿಯಾದರು. ಆಗ ಅವರು ಡೈರಿ ಕ್ವೀನ್ ಎಂಬ ಫಾಸ್ಟ್ ಫುಡ್ ಚೈನ್​ನಲ್ಲಿ ಕೆಲಸ ಮಾಡುತ್ತಿದ್ದರು. ಆಗ ಕುರಾನ್​ಗೆ ಕೇವಲ

➤ 25ರ ಯುವಕನಿಗೆ 62ರ ಅಜ್ಜಿಯೊಂದಿಗೆ ಮದುವೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಬಾಂಬ್ ಸ್ಫೋಟ ➤ ತಾಲಿಬಾನ್ ಗವರ್ನರ್ ಸೇರಿ ಮೂವರು ಮೃತ್ಯು

(ನ್ಯೂಸ್ ಕಡಬ) newskadaba.com ಕಾಬೂಲ್‌, ಮಾ. 10. ಅಫ್ಘಾನಿಸ್ತಾನದ ಮಜಾರ್‌-ಇ-ಷರೀಫ್ ಪ್ರದೇಶದಲ್ಲಿ ಬಾಂಬ್ ಸ್ಪೋಟ ಸಂಭವಿಸಿದ ಪರಿಣಾಮ ಪ್ರಾಂತೀಯ ಗವರ್ನರ್ ದಾವೂದ್‌ ಮುಜ್ಮಲ್‌ ಸಹಿತ ಮೂವರು ಮೃತಪಟ್ಟ ಘಟನೆ ವರದಿಯಾಗಿದೆ. ಸ್ಪೋಟದ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಾಲಿಬಾನ್ ವಿರೋಧಿ ಉಗ್ರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್ಸ್ ನ ಖೊರಾಸನ್‌ ಘಟಕವು ಸ್ಪೋಟ ನಡೆಸಿರಬಹುದು ಎಂದು ಶಂಕಿಸಲಾಗಿದೆ ಎಂದು ತಾಲಿಬಾನ್‌ ಮುಖ್ಯ ವಕ್ತಾರ ಜಬೀಬುಲ್ಲಾ ಮುಜಾಹಿದ್‌ ತಿಳಿಸಿರುವುದಾಗಿ ವರದಿಯಾಗಿದೆ.

ಬಾಂಬ್ ಸ್ಫೋಟ ➤ ತಾಲಿಬಾನ್ ಗವರ್ನರ್ ಸೇರಿ ಮೂವರು ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್
Scroll to Top