ಅಂತರ್ರಾಷ್ಟ್ರೀಯ ನ್ಯೂಸ್

ಚಂದ್ರನ ವೀಕ್ಷಣೆಗೆ ಇಷ್ಟೊಂದು ಕಸರತ್ತು ಮಾಡುವ ಅಗತ್ಯವಿಲ್ಲ- ಚಂದ್ರಯಾನ-3ರ ಬಗ್ಗೆ ವ್ಯಂಗ್ಯವಾಡಿದ ಮಾಜಿ ಸಚಿವ

(ನ್ಯೂಸ್ ಕಡಬ) newskadaba.com ಇಸ್ಲಾಮಾಬಾದ್‌, ಜು. 19. ಭಾರತದ ಮಹತ್ವಾಕಾಂಕ್ಷೆಯಾದ ಚಂದ್ರಯಾನ-3 ರ ಕುರಿತು ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಮಾಜಿ ಸಚಿವ ಫವಾದ್‌ ಚೌಧರಿ, ಚಂದ್ರನ ವೀಕ್ಷಣೆಗಾಗಿ ಇಷ್ಟೊಂದು ಕಸರತ್ತು ಮಾಡುವ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದೀಗ ಫವಾದ್ ಚೌದರಿ ಅವರ ಸಂದರ್ಶನದ ವೀಡಿಯೋ ತುಣುಕೊಂದು ಎಲ್ಲೆಡೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರು ಇಸ್ರೋ ಸಂಸ್ಥೆ ನಡೆಸಿದ ಚಂದ್ರನ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಶ್ನೆಗೆ, ಬಾಹ್ಯಾಕಾಶದಲ್ಲಿ ಚಂದ್ರನ ಸ್ಥಾನ ಏನೆಂದು ನಮಗೆ ಗೊತ್ತಿದೆ. ಯಾವಾಗ ಹುಟ್ಟುತ್ತಾನೆ, […]

ಚಂದ್ರನ ವೀಕ್ಷಣೆಗೆ ಇಷ್ಟೊಂದು ಕಸರತ್ತು ಮಾಡುವ ಅಗತ್ಯವಿಲ್ಲ- ಚಂದ್ರಯಾನ-3ರ ಬಗ್ಗೆ ವ್ಯಂಗ್ಯವಾಡಿದ ಮಾಜಿ ಸಚಿವ Read More »

ಅಂತರ್ರಾಷ್ಟ್ರೀಯ ನ್ಯೂಸ್

ಆಸ್ಟ್ರೇಲಿಯಾ ಸಮುದ್ರತೀರದಲ್ಲಿ ನಿಗೂಢ ವಸ್ತು ಪತ್ತೆ- ಚಂದ್ರಯಾನ-3ರ ಭಾಗವೆಂದು ಶಂಕೆ..!

(ನ್ಯೂಸ್ ಕಡಬ) newskadaba.com ಆಸ್ಟ್ರೇಲಿಯಾ, ಜು. 19. ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆಯು ಪಶ್ಚಿಮ ಆಸ್ಟ್ರೇಲಿಯಾದ ಜುರಿಯನ್ ಕೊಲ್ಲಿಯ ಬಳಿಯ ಕಡಲತೀರದಲ್ಲಿ ಪತ್ತೆಯಾದ ವಸ್ತುವಿನ ಬಗ್ಗೆ ತನಿಖೆ ನಡೆಸುತ್ತಿದ್ದು, ಇದು ಭಾರತದ ಚಂದ್ರಯಾನ -3 ಮಿಷನ್‌ನ ಭಾಗವಾಗಿರಬಹುದು ಎಂಬ ಶಂಕಿಸಲಾಗಿದೆ. ಭಾನುವಾರದಂದು ಮಧ್ಯಾಹ್ನ ಮಧ್ಯ ಪಶ್ಚಿಮ ಕರಾವಳಿಯ ಗ್ರೀನ್ ಹೆಡ್ ಟೌನ್ ಬಳಿ ನಿಗೂಢ ವಸ್ತುವೊಂದು ನೀರಿನಲ್ಲಿ ತೇಲುತ್ತಿರುವುದನ್ನು ಗಮನಿಸಿದ ಪ್ರದೇಶದ ನಿವಾಸಿಗಳು ಅದನ್ನು ನೀರಿನಿಂದ ಎಳೆದು ತಂದಿದ್ದಾರೆ. ಕಡಲತೀರದಲ್ಲಿ ಸಿಕ್ಕ ವಸ್ತುವೊಂದು ಇದೀಗ ಭಾರೀ ಸಂಚಲನ ಮೂಡಿಸಿದೆ.

ಆಸ್ಟ್ರೇಲಿಯಾ ಸಮುದ್ರತೀರದಲ್ಲಿ ನಿಗೂಢ ವಸ್ತು ಪತ್ತೆ- ಚಂದ್ರಯಾನ-3ರ ಭಾಗವೆಂದು ಶಂಕೆ..! Read More »

ಅಂತರ್ರಾಷ್ಟ್ರೀಯ ನ್ಯೂಸ್

ಕರಾಚಿಯಲ್ಲಿ 150 ವರ್ಷ ಹಳೆಯ ಮಾರಿ ಮಾತಾ ಹಿಂದೂ ದೇವಸ್ಥಾನ ಧ್ವಂಸ

(ನ್ಯೂಸ್ ಕಡಬ)newskadaba.com ಪಾಕಿಸ್ತಾನ, ಜು.18. 150 ವರ್ಷಗಳಷ್ಟು ಹಳೆಯದಾದ ಮಾರಿ ಮಾತಾ ಹಿಂದೂ ದೇವಾಸ್ಥಾನವನ್ನು ಕರಾಚಿಯಲ್ಲಿ ನೆಲಸಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರದೇಶದಲ್ಲಿ ವಿದ್ಯುತ್ ಸ್ಥಗಿತಗೊಳ್ಳುತ್ತಿದ್ದಂತೆ ಬುಲ್ಡೋಜರ್ ಬಂದು ನಿಂತಿದ್ದು, ನೋಡನೋಡುತ್ತಿದ್ದಂತೆ ದೇವಾಸ್ಥಾನವನ್ನು ಧ್ವಂಸಗೊಳಿಸಲಾಗಿದೆ. ಇನ್ನು 150 ವರ್ಷಗಳ ಹಿಂದೆ ದೇವಾಸ್ಥಾನವನ್ನು ನಿರ್ಮಿಸಲಾಗಿದ್ದು ಇದರ ಅಂಗಳದಲ್ಲಿ ನಿಧಿ ಹೂತಿಡಲಾಗಿದ್ದು, ಆಕ್ರಮಣಕಾರರು ಬಹಳ ದಿನಗಳಿಂದ ಇದರ ಮೇಲೆ ಕಣ್ಣಿಟ್ಟಿದ್ದರು ಎಂದು ವರದಿಯಾಗಿದೆ.

ಕರಾಚಿಯಲ್ಲಿ 150 ವರ್ಷ ಹಳೆಯ ಮಾರಿ ಮಾತಾ ಹಿಂದೂ ದೇವಸ್ಥಾನ ಧ್ವಂಸ Read More »

ಅಂತರ್ರಾಷ್ಟ್ರೀಯ ನ್ಯೂಸ್

ಖಲಿಸ್ತಾನಿಗಳ ದಾಳಿ ವಿರೋಧಿಸಿ ಭಾರತೀಯರ ಪ್ರತಿಭಟನೆ

(ನ್ಯೂಸ್ ಕಡಬ)newskadaba.com ಅಮೇರಿಕಾ, ಜು.18. ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿರುವ ಭಾರತೀಯ ದೂತವಾಸ ಕಚೇರಿ ಮೇಲೆ ಇತ್ತೀಚೆಗೆ ಖಲಿಸ್ತಾನಿ ಬೆಂಬಲಿಗರು ದಾಳಿ ಖಂಡಿಸಿ ಭಾರತೀಯ ಸಮುದಾಯದವರು ಮೌನ ಪ್ರತಿಭಟನೆ ನಡೆಸಿದ್ದಾರೆ. ಸ್ಯಾನ್‌ ಫ್ರಾನ್ಸಿಸ್ಕೊದ ದೂತವಾಸ ಕಚೇರಿ ಎದುರು ಭಾರತವನ್ನು ಬೆಂಬಲಿಸಿ ನೂರಾರು ಭಾರತೀಯ ಸಮುದಾಯದವರು ಬೃಹತ್‌ ಮೌನ ರ್ಯಾಲಿ ನಡೆಸಿದ್ದಾರೆ. ಇನ್ನು ಇದೇ ವೇಳೆ ದಾಳಿಯನ್ನು ಉಗ್ರರ ಕೃತ್ಯವೆಂದು ಹಾಗೂ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಖಲಿಸ್ತಾನಿಗಳ ದಾಳಿ ವಿರೋಧಿಸಿ ಭಾರತೀಯರ ಪ್ರತಿಭಟನೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಮೊದಲ ಪೋಸ್ಟಿಂಗ್‌ ನಲ್ಲಿಯೇ ಲಂಚಕ್ಕೆ ಕೈಯೊಡ್ಡಿದ ಮಹಿಳಾ ಅಧಿಕಾರಿ ➤ ರೆಡ್ ಹ್ಯಾಂಡ್ ಆಗಿ ACB ಬಲೆಗೆ

(ನ್ಯೂಸ್ ಕಡಬ)newskadaba.com  ಹಜಾರಿಬಾಗ್, ಜು.18. ವ್ಯಕ್ತಿಯೊಬ್ಬರಿಂದ ಲಂಚ ಪಡೆದುಕೊಳ್ಳುತ್ತಿದ್ದ ಸರ್ಕಾರಿ ಅಧಿಕಾರಿಣಿಯೊಬ್ಬರನ್ನು ಜಾರ್ಖಂಡ್‌ ನ ಹಜಾರಿಬಾಗ್ ಭ್ರಷ್ಟಾಚಾರ ನಿಯಂತ್ರಣ ದಳ (ಎಸಿಬಿ) ರೆಡ್ ಹ್ಯಾಂಡ್ ಆಗಿ ಹಿಡಿದಿದೆ ಎಂದು ವರದಿಯಾಗಿದೆ. ಬಂಧಿತ ಮಹಿಳಾ ಅಧಿಕಾರಿಯನ್ನು ಮಿಥಾಲಿ ಶರ್ಮಾ ಎಂದು ಗುರುತಿಸಲಾಗಿದ್ದು, ಎಂಟು ತಿಂಗಳ ಹಿಂದೆ ಜಾರ್ಖಂಡ್‌ನ ಕೊಡೆರ್ಮಾದಲ್ಲಿ ಸಹಕಾರ ಇಲಾಖೆಯ ಸಹಾಯಕ ರಿಜಿಸ್ಟ್ರಾರ್ ಆಗಿ ನಿಯೋಜನೆಗೊಂಡಿದ್ದರು. ಇದು ಅವರ ವೃತ್ತಿ ಜೀವನದ ಮೊದಲ ಪೋಸ್ಟಿಂಗ್ ಆಗಿದೆ ಎಂದು ತಿಳಿದುಬಂದಿದೆ.  

ಮೊದಲ ಪೋಸ್ಟಿಂಗ್‌ ನಲ್ಲಿಯೇ ಲಂಚಕ್ಕೆ ಕೈಯೊಡ್ಡಿದ ಮಹಿಳಾ ಅಧಿಕಾರಿ ➤ ರೆಡ್ ಹ್ಯಾಂಡ್ ಆಗಿ ACB ಬಲೆಗೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಮಾನಹಾನಿ ಪ್ರಕರಣದಲ್ಲಿ ಶಿಕ್ಷೆ ➤ ರಾಹುಲ್ ಗಾಂಧಿ ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂಕೋರ್ಟ್

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಜು.18. ‘ಎಲ್ಲ ಕಳ್ಳರಿಗೂ ಮೋದಿ ಸರ್‌ನೇಮ್ ಇದೆ’ ಎಂಬ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ರಾಹುಲ್ ಗಾಂಧಿ ಅವರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಜುಲೈ 21ರ ವಿಚಾರಣೆಗೆ ಒಳಪಡಿಸಲಿದೆ. ಸೂರತ್ ನ್ಯಾಯಾಲಯವು ತಮಗೆ ವಿಧಿಸಿರುವ ಶಿಕ್ಷೆಗೆ ತಡೆ ನೀಡುವಂತೆ ಕೋರಿ ರಾಹುಲ್ ಗಾಂಧಿ ಅವರು ಅರ್ಜಿ ಸಲ್ಲಿಸಿದ್ದರು. ಇದನ್ನು ತುರ್ತು ವಿಚಾರಣೆಗೆ ಎತ್ತಿಕೊಳ್ಳುವಂತೆ ಮನವಿ ಮಾಡಲಾಗಿತ್ತು. ಸಿಜೆಐ ಡಿವೈ ಚಂದ್ರಚೂಡ್

ಮಾನಹಾನಿ ಪ್ರಕರಣದಲ್ಲಿ ಶಿಕ್ಷೆ ➤ ರಾಹುಲ್ ಗಾಂಧಿ ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂಕೋರ್ಟ್ Read More »

ಅಂತರ್ರಾಷ್ಟ್ರೀಯ ನ್ಯೂಸ್

ಅಮೆಜಾನ್ ಕಾಡಿನಲ್ಲಿ ಪತ್ತೆಯಾಗಿದ್ದ ನಾಲ್ಕು ಮಕ್ಕಳು ಆಸ್ಪತ್ರೆಯಿಂದ ಬಿಡುಗಡೆ !

(ನ್ಯೂಸ್ ಕಡಬ)newskadaba.com ಕೊಲಂಬಿಯಾ, ಜು.15. ವಿಮಾನವೊಂದು ಪತನಗೊಂಡ ಬಳಿಕ 40 ದಿನ ಅಮೆಜಾನ್‌ ದಟ್ಟ ಅರಣ್ಯದಲ್ಲಿ ಸಿಲುಕಿದ್ದ ನಾಲ್ಕು ಮಕ್ಕಳು ಚಿಕಿತ್ಸೆ ಪಡೆದು ಒಂದು ತಿಂಗಳ ಬಳಿಕ ಸೇನಾ ಅಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಮೇ 1ರಂದು ಕೊಲಂಬಿಯಾದ ಅಮೆಜಾನ್ ದಟ್ಟಾರಣ್ಯದಲ್ಲಿ ವಿಮಾನವೊಂದು ಪತನಗೊಂಡಿತ್ತು. ನಾಪತ್ತೆಯಾಗಿದ್ದ ಮಕ್ಕಳಿಗಾಗಿ ಕೊಲಂಬಿಯಾ ಸೇನೆ ‘ಆಪರೇಷನ್‌ ಆನ್‌ ಹೋಪ್‌’ ಹೆಸರಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಕಾರ್ಯಾಚರಣೆಯಲ್ಲಿ ಲೆಸ್ಲಿ (13 ), ಸೊಲೀನಿ (9), ಟೈನ್ ನೊರಿಯಲ್ (4)

ಅಮೆಜಾನ್ ಕಾಡಿನಲ್ಲಿ ಪತ್ತೆಯಾಗಿದ್ದ ನಾಲ್ಕು ಮಕ್ಕಳು ಆಸ್ಪತ್ರೆಯಿಂದ ಬಿಡುಗಡೆ ! Read More »

ಅಂತರ್ರಾಷ್ಟ್ರೀಯ ನ್ಯೂಸ್

“ನನಗೆ ಹುಡುಗ ಬೇಕು.. ಹುಡುಕಿ ಕೊಟ್ಟವರಿಗೆ 4 ಲಕ್ಷ ರೂ. ಬಹುಮಾನ”- ಬಂಪರ್ ಆಫರ್ ಘೋಷಿಸಿದ ಮಹಿಳೆ

(ನ್ಯೂಸ್ ಕಡಬ) newskadaba.com ಅಮೆರಿಕಾ, ಜು. 15. ಹುಡುಗಿಯೋರ್ವಳು ತನಗೆ ಇಷ್ಟವಾದ ಗುಣಗಳಿರುವ ವ್ಯಕ್ತಿಯನ್ನು ಹುಡುಕಿಕೊಟ್ಟವರಿಗೆ ಲಕ್ಷ ರೂ.ಗಳ ಬಹುಮಾನ ನೀಡುವುದಾಗಿ ಭರ್ಜರಿ ಆಫರ್ ಘೋಷಿಸಿದ ಕುರಿತು ವರದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹತ್ತು ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ಅಮೆರಿಕದ ಲಾಸ್ ಏಂಜಲೀಸ್‌ನ 35 ವರ್ಷದ ಸುಂದರಿ ಇದೀಗ ಮದುವೆಯಾಗಲು ಬಯಸಿದ್ದಾಳೆ. ತನ್ನ ಗಂಡನಾಗುವ ಪುರುಷನಿಗೆ ಯಾವ-ಯಾವ ಗುಣಗಳು ಇರಬೇಕು ಎಂಬುದನ್ನೂ ಹೇಳಿದ್ದಾಳೆ. ಅಲ್ಲದೇ ಅಂತಹ ವ್ಯಕ್ತಿಯನ್ನು ಪತ್ತೆ ಮಾಡಿ ಮಾಹಿತಿ ನೀಡಿದಲ್ಲಿ ಅಂಥವರಿಗೆ 5000 ಡಾಲರ್

“ನನಗೆ ಹುಡುಗ ಬೇಕು.. ಹುಡುಕಿ ಕೊಟ್ಟವರಿಗೆ 4 ಲಕ್ಷ ರೂ. ಬಹುಮಾನ”- ಬಂಪರ್ ಆಫರ್ ಘೋಷಿಸಿದ ಮಹಿಳೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಪ್ರಧಾನಿ ಮೋದಿಗೆ ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ

(ನ್ಯೂಸ್ ಕಡಬ) newskadaba.com ಫ್ರಾನ್ಸ್, ಜು. 14. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫ್ರಾನ್ಸ್​ನ ಅತ್ಯುನ್ನತ ಗೌರವವಾದ ‘ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್’ ಪುರಸ್ಕಾರವನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ನೀಡಿ ಗೌರವಿಸಿದರು. ಎಲಿಸೀ ಅರಮನೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರಿಗೆ ಫ್ರಾನ್ಸ್ ಅತ್ಯುನ್ನತ ಪುರಸ್ಕಾರ ನೀಡಲಾಯಿತು. ಈ ಮೂಲಕ ಫ್ರಾನ್ಸ್​ನ ಅತ್ಯುನ್ನತ ಗೌರವ ಸ್ವೀಕರಿಸಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾದರು. ಪ್ರಧಾನಿ ಮೋದಿಯವರಿಗಿಂತ

ಪ್ರಧಾನಿ ಮೋದಿಗೆ ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ Read More »

ಅಂತರ್ರಾಷ್ಟ್ರೀಯ ನ್ಯೂಸ್

ಹೃದಯಾಘಾತ- ನೇಪಾಳ ಪ್ರಧಾನಿಗೆ ಪತ್ನಿವಿಯೋಗ

(ನ್ಯೂಸ್ ಕಡಬ) newskadaba.com ನೇಪಾಳ, ಜು. 12. ನೇಪಾಳದ ಪ್ರಧಾನಿ ಪುಷ್ಪ ಕಮಲ್‌ ದಹಾಲ್‌ ಅವರ ಪತ್ನಿ ಸೀತಾ ದಹಾಲ್‌ (69) ಹೃದಯಾಘಾತದಿಂದ ನಿಧನರಾಗಿದ್ದಾರೆ. ವರದಿಗಳ ಪ್ರಕಾರ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸೀತಾ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಕಠ್ಮಂಡುವಿನಲ್ಲಿ ನಾರ್ವಿಕ್ ಇಂಟರ್ನ್ಯಾಷನಲ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೃದಯಾಘಾತ- ನೇಪಾಳ ಪ್ರಧಾನಿಗೆ ಪತ್ನಿವಿಯೋಗ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್
Scroll to Top