ಅಂತರ್ರಾಷ್ಟ್ರೀಯ ನ್ಯೂಸ್

ಬ್ರೂನೈಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

(ನ್ಯೂಸ್ ಕಡಬ) newskadaba.com  ಬಂದರ್ ಸೆರಿ ಬೇಗವಾನ್, ಸೆ. 04.  ಎರಡು ದಿನದ ಭೇಟಿಗಾಗಿ ಬ್ರೂನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಆತ್ಮೀಯ ಸ್ವಾಗತ ದೊರೆಯಿತು. ಬ್ರೂನೈಯ ಸುಲ್ತಾನಹಾಜಿ ಹಸನಲ್ ಬೊಲ್ಕಿಯಾ ಅವರ ಆಹ್ವಾನದ ಮೇರೆಗೆ ಮೋದಿ ಬ್ರೂನೈಗೆ ಆಗಮಿಸಿದ್ದಾರೆ. ನಮ್ಮ ರಾಜತಾಂತ್ರಿಕ ಸಂಬಂಧದ 40 ವರ್ಷಗಳ ಸಂಭ್ರಮಾಚರಣೆಯಲ್ಲಿ ನಮ್ಮ ಐತಿಹಾಸಿಕ ಸಂಬಂಧವನ್ನು ಹೊಸ ಎತ್ತರಕ್ಕೆ ಏರಿಸಲು ಇದೊಂದು ಸುಸಂದರ್ಭವಾಗಿದೆ ಎಂದು ಮೋದಿ ಹೇಳಿದ್ದಾರೆ. ಬ್ರೂನೈಗೆ ಭಾರತೀಯ ಪ್ರಧಾನಿಯ ಮೊದಲ ದ್ವಿಪಕ್ಷೀಯ ಪ್ರವಾಸ […]

ಬ್ರೂನೈಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ Read More »

ಅಂತರ್ರಾಷ್ಟ್ರೀಯ ನ್ಯೂಸ್

ವಾಹನ ಅಪಘಾತ- 4 ಭಾರತೀಯರು ಮೃತ್ಯು..!

(ನ್ಯೂಸ್ ಕಡಬ) newskadaba.com  ನವದೆಹಲಿ, ಸೆ. 04.  ಟೆಕ್ಸಾಸ್‌ ನಲ್ಲಿ ಐದು ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಸಾವನ್ನಪ್ಪಿದ್ದಾರೆ. ಅರ್ಕಾನ್ಸಾಸ್ ನ ಬೆಂಟೊನ್‌ ವಿಲ್ಲೆಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. ಮೃತಪಟ್ಟವರನ್ನು ಆರ್ಯನ್ ರಘುನಾಥ್ ಓರಂಪಾಟಿ, ಫಾರೂಕ್ ಶೇಕ್, ಲೋಕೇಶ್ ಪಾಲಾಚಾರ್ಲ ಮತ್ತು ದರ್ಶಿನಿ ವಾಸುದೇವನ್ ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ಟ್ರಕ್ ಹಿಂಬದಿಯಿಂದ ಭಾರತೀಯರಿದ್ದ ಎಸ್‌ ಯುವಿ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು

ವಾಹನ ಅಪಘಾತ- 4 ಭಾರತೀಯರು ಮೃತ್ಯು..! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಫಿಲಿಫೈನ್ಸ್ ನಲ್ಲಿ ಚಂಡಮಾರುತ: ಪ್ರವಾಹ, ಭೂಕುಸಿತದಿಂದ 14 ಮಂದಿ ಸಾವು

(ನ್ಯೂಸ್ ಕಡಬ) newskadaba.com ಮನಿಲಾ, ಸೆ. 03.  ಫಿಲಿಫೈನ್ಸ್ ನಲ್ಲಿ ಚಂಡಮಾರುತದ ಪರಿಣಾಮ ಭಾರೀ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂಕುಸಿತದಿಂದಾಗಿ 14 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ದೇಶಾದ್ಯಂತ ವಿಮಾನಗಳ ಹಾರಾಟ ಹಾಗೂ ಹಡಗು ಸಂಚಾರ ಸ್ಥಗಿತಗೊಂಡಿದೆ. ಇದರ ಪರಿಣಾಮ ಸಾವಿರಾರು ಜನ ಪ್ರಯಾಣಿಕರು ಪರದಾಡುತವಂತಾಗಿದೆ ಅಲ್ಲದೇ ದೇಶಯಾಗಿ ಇಲೋಕೋಸ್ ನಾರ್ಟೆ ಪ್ರಾಂತ್ಯದ ಪಾವೊಯ್ ನಗರ ಸೇರಿದಂತೆ ದಕ್ಷಿಣ ಚೀನಾ ಸಮುದ್ರದ ಭಾಗದಲ್ಲಿ ಗಂಟೆಗೆ 75-125 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ

ಫಿಲಿಫೈನ್ಸ್ ನಲ್ಲಿ ಚಂಡಮಾರುತ: ಪ್ರವಾಹ, ಭೂಕುಸಿತದಿಂದ 14 ಮಂದಿ ಸಾವು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

‘ನಿಯಮ ಉಲ್ಲಂಘಿಸಿ ಅರ್ಲಿಂಗ್‌ ಟನ್ ಪವಿತ್ರ ಭೂಮಿಗೆ ಡೊನಾಲ್ಡ್ ಟ್ರಂಪ್ ಅಗೌರವ’ ಕಮಲಾ ಹ್ಯಾರಿಸ್  ಆರೋಪ         

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಸೆ. 02. ನಿಯಮ ಉಲ್ಲಂಘಿಸಿ ಅರ್ಲಿಂಗ್ ಟನ್ ರಾಷ್ಟ್ರೀಯ ಸಮಾಧಿಯಲ್ಲಿ ಛಾಯಾಚಿತ್ರಗಳನ್ನು ತೆಗೆದು ಪವಿತ್ರ ಭೂಮಿಗೆ ಡೊನಾಲ್ಡ್ ಟ್ರಂಪ್ ಅವರು ಅಗೌರವ ತೋರಿದ್ದಾರೆ ಎಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ. ‘ಅರ್ಲಿಂಗ್‌ ಟನ್ ರಾಷ್ಟ್ರೀಯ ಸಮಾಧಿಯು ಅಮೆರಿಕದ ವೀರರನ್ನು ಗೌರವಿಸಲು ಇರುವ ಸ್ಥಳವಾಗಿದ್ದು, ರಾಜಕೀಯಕ್ಕೆ ಮೀಸಲಿಟ್ಟ ಸ್ಥಳವಲ್ಲ. ರಾಜಕೀಯ ಲಾಭಗೋಸ್ಕರ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪವಿತ್ರ ಭೂಮಿಗೆ ಅಗೌರವ ತೋರಿದ್ದಾರೆ’ ಎಂದು ಆರೋಪಿಸಿದ್ದಾರೆ. ಇದೀಗ ಈ ಘಟನೆಯೇ ವಾಗ್ವಾದಕ್ಕೆ

‘ನಿಯಮ ಉಲ್ಲಂಘಿಸಿ ಅರ್ಲಿಂಗ್‌ ಟನ್ ಪವಿತ್ರ ಭೂಮಿಗೆ ಡೊನಾಲ್ಡ್ ಟ್ರಂಪ್ ಅಗೌರವ’ ಕಮಲಾ ಹ್ಯಾರಿಸ್  ಆರೋಪ          Read More »

ಅಂತರ್ರಾಷ್ಟ್ರೀಯ ನ್ಯೂಸ್

‘X’ ನಿರ್ಬಂಧಿಸಿದ ಭ್ರೆಝಿಲ್..?

(ನ್ಯೂಸ್ ಕಡಬ) newskadaba.com ಬ್ರೆಝಿಲ್, ಆ. 31. ಎಲಾನ್ ಮಸ್ಕ್ ಒಡೆತನದ ಜನಪ್ರಿಯ ಸಾಮಾಜಿಕ ಜಾಲತಾಣ ‘ಎಕ್ಸ್’ ಅನ್ನು ಬ್ರೇಜಿಲ್‌ ಸರಕಾರವು ನಿರ್ಬಂಧಿಸಲು ಪ್ರಾರಂಭಿಸಿದೆ. ಈ ತಿಂಗಳ ಮೊದಲಿನಿಂದಲೂ ಕಂಪನಿಯು ದಕ್ಷಿಣ ಅಮೆರಿಕಾದ ರಾಷ್ಟ್ರದಲ್ಲಿ ಕಾನೂನು ಪ್ರತಿನಿಧಿಯನ್ನು ಹೊಂದಿಲ್ಲ. ಬ್ರೆಜಿಲ್‌ ನಲ್ಲಿ ಕಾರ್ಯನಿರ್ವಹಿಸುವ ವಿದೇಶಿ ಕಂಪನಿಗಳು ಕಾನೂನು ನಿರ್ಧಾರಗಳ ಕುರಿತು ಯಾರಿಗಾದರೂ ಸೂಚನೆ ನೀಡಬಹುದೆಂದು ಖಚಿತಪಡಿಸಿಕೊಳ್ಳಲು ಸ್ಥಳೀಯ ಪ್ರಾತಿನಿಧ್ಯವನ್ನು ಹೊಂದಿರಬೇಕು ಮತ್ತು ಯಾವುದೇ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಅದನ್ನು ಅನುಸರಿಸಲು ವಿಫಲವಾದರೆ ಬ್ರೆಜಿಲ್‌ನಲ್ಲಿ ಎಕ್ಸ್ ಸೇವೆಗಳನ್ನು

‘X’ ನಿರ್ಬಂಧಿಸಿದ ಭ್ರೆಝಿಲ್..? Read More »

ಅಂತರ್ರಾಷ್ಟ್ರೀಯ ನ್ಯೂಸ್, ತಂತ್ರಜ್ಞಾನ

ಕೆನಡಾದಲ್ಲಿ ವಲಸೆ ನೀತಿ ಬದಲಿಸಲು ಆಗ್ರಹ   ವಿದೇಶಿ ವಿದ್ಯಾರ್ಥಿಗಳಿಂದ ಪ್ರತಿಭಟನೆ 

(ನ್ಯೂಸ್ ಕಡಬ) newskadaba.com ಟೊರಾಂಟೋ, ಆ. 30.  ಕೆನಡಾ ಸರ್ಕಾರದ ವಲಸೆ ನೀತಿಯಿಂದಾಗಿ ಅಲ್ಲಿ ಸುಮಾರು 70 ಸಾವಿರ ವಿದೇಶಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಲ್ಲಿ ಭಾರತೀಯರೇ ಬಹು ಸಂಖ್ಯಾತರು. ಈ ಕಾರಣದಿಂದಾಗಿ ಸರ್ಕಾರ ಕೂಡಲೇ ತನ್ನ ವಲಸೆ ನೀತಿ ಬದಲಿಸಬೇಕು ಎಂದು ಆಗ್ರಹಿಸಿ ವಿದೇಶಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದಾರೆ. ಪ್ರತಿಭಟನೆಗಳಲ್ಲಿ ಕೆನಡಾ ದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು ಮಾತ್ರವಲ್ಲ ಕುಶಲಕರ್ಮಿಗಳು, ವೃತ್ತಿಪರ ಕೌಶಲ್ಯ ಹೊಂದಿರುವ ಉದ್ಯೋಗಿಗಳೂ ಸೇರಿಕೊಂಡಿದ್ದಾರೆ. ಒಂದು ವೇಳೆ

ಕೆನಡಾದಲ್ಲಿ ವಲಸೆ ನೀತಿ ಬದಲಿಸಲು ಆಗ್ರಹ   ವಿದೇಶಿ ವಿದ್ಯಾರ್ಥಿಗಳಿಂದ ಪ್ರತಿಭಟನೆ  Read More »

ಅಂತರ್ರಾಷ್ಟ್ರೀಯ ನ್ಯೂಸ್

ಜಪಾನ್‌ನಲ್ಲಿ ಅಪ್ಪಳಿಸಿದ ಶಾನ್‌ಶಾನ್‌ ಚಂಡಮಾರುತ- ಮೂರು ಮಂದಿ ಸಾವು

(ನ್ಯೂಸ್ ಕಡಬ) newskadaba.com ಟೋಕಿಯೊ, ಆ. 29.  ನೈರುತ್ಯ ಜಪಾನ್‌ ಕಾಗೋ ಶಿಮಾ ಪ್ರಾಂತ್ಯಕ್ಕೆ ಶಾನ್ ಶಾನ್‌ ಚಂಡಮಾರುತ ಅಪ್ಪಳಿಸಿದ್ದು, ಮೂರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭಾರಿ ಮಳೆ, ಗಾಳಿಯಿಂದಾಗಿ ಅನೇಕ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನೈರುತ್ಯ ಕ್ಯುಶು ದ್ವೀಪ ಪ್ರದೇಶದಲ್ಲಿ ಗಂಟೆಗೆ 198 ಕಿ.ಮೀ . ವೇಗದಲ್ಲಿ ಚಂಡಮಾರುತ ಅಪ್ಪಳಿಸಿದೆ ಎಂದು ಹವಾಮಾನ ಇಲಾಖೆಯ ವರದಿ ಮಾಡಿದೆ.ಅತ್ಯಂತ ಪ್ರಬಲ ಚಂಡಮಾರುತದ ಎಚ್ಚರ ನೀಡಿರುವ ಅಧಿಕಾರಿಗಳು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಲಕ್ಷಾಂತರ ಮಂದಿಗೆ ಸೂಚನೆ

ಜಪಾನ್‌ನಲ್ಲಿ ಅಪ್ಪಳಿಸಿದ ಶಾನ್‌ಶಾನ್‌ ಚಂಡಮಾರುತ- ಮೂರು ಮಂದಿ ಸಾವು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಟೆಲಿಗ್ರಾಂ ಸಂಸ್ಥಾಪಕ ಪಾವೆಲ್ ಡುರೋವ್ ಜೈಲಿನಿಂದ ಬಿಡುಗಡೆ..!

(ನ್ಯೂಸ್ ಕಡಬ) newskadaba.com ಪ್ಯಾರಿಸ್, ಆ. 29. ಹಲವು ಆರೋಪಗಳಡಿಯಲ್ಲಿ ಬಂಧಿತನಾಗಿದ್ದ ಟೆಲಿಗ್ರಾಂ ಸಂಸ್ಥಾಪಕ ಪಾವೆಲ್‌ ಡುರೋವ್‌ ರನ್ನು 5.5 ದಶಲಕ್ಷ ಡಾಲರ್‌ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಫ್ರಾನ್ಸ್‌ ದೇಶದ ಅಧಿಕಾರಿಗಳು ಈತನಿಗೆ ದೇಶ ತೊರೆದು ಹೋಗುವಂತೆಯೂ ಆದೇಶಿಸಿದ್ದು, ಇದೀಗ ಫ್ರಾನ್ಸ್‌ ನಿಂದ ಬಹಿಷ್ಕಾರದ ಆದೇಶವನ್ನು ಹಿಂಪಡೆಯಲಾಗಿದೆ. ಜೊತೆಗೆ ವಾರಕ್ಕೆ ಎರಡು ಬಾರಿ ಪೊಲೀಸ್‌ ಠಾಣೆಗೆ ಭೇಟಿ ನೀಡುವಂತೆಯೂ ಸೂಚಿಸಲಾಗಿದೆ. ಟೆಲಿಗ್ರಾಂ ಅಪ್ಲಿಕೇಶನ್‌ನಲ್ಲಿ ಉಗ್ರವಾದ, ಮಕ್ಕಳ ಲೈಂಗಿಕ ವಿಡಿಯೋ, ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹರಡುತ್ತಿರುವ

ಟೆಲಿಗ್ರಾಂ ಸಂಸ್ಥಾಪಕ ಪಾವೆಲ್ ಡುರೋವ್ ಜೈಲಿನಿಂದ ಬಿಡುಗಡೆ..! Read More »

ಅಂತರ್ರಾಷ್ಟ್ರೀಯ ನ್ಯೂಸ್

ಢಾಕಾ ಸರೋವರದಲ್ಲಿ ಬಾಂಗ್ಲಾದೇಶ ಟಿವಿ ಪತ್ರಕರ್ತೆಯ ಮೃತದೇಹ ಪತ್ತೆ 

(ನ್ಯೂಸ್ ಕಡಬ) newskadaba.com ಢಾಕಾ, ಆ. 29. ಬಾಂಗ್ಲಾದೇಶ ಟಿವಿ ಪತ್ರಕರ್ತೆ ಸಾರಾ ರಹನುಮಾ ಅವರ ಮೃತದೇಹವು ಢಾಕಾದ ಹತಿರ್ ಜೀಲ್ ಸರೋವರದಲ್ಲಿ ಪತ್ತೆಯಾಗಿದೆ. ಸರೋವರದಲ್ಲಿ ಆಕೆಯ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ. ಮೃತದೇಹವನ್ನು ಸರೋವರದಿಂದ ಹೊರತೆಗೆಯಲಾಗಿದೆ ಎಂದು ವರದಿ ತಿಳಿದುಬಂದಿದೆ. ಇನ್ನು ಸಾವಿಗೂ ಮುನ್ನ ಸಾರಾ ನಿನ್ನೆ ರಾತ್ರಿ ಫೇಸ್ ಬುಕ್‌ ನಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದರು. ಜೊತೆಗೆ ಹಿಂದಿನ ಪೋಸ್ಟ್ ನಲ್ಲಿ ಅವರು, ಸಾವಿಗೆ ಸಮಾನವಾದ ಜೀವನವನ್ನು ಬದುಕುವುದಕ್ಕಿಂತ ಸಾಯುವುದು ಉತ್ತಮ ಎಂದು ಪೋಸ್ಟ್ ಮಾಡಿದ್ದರು. ಈ

ಢಾಕಾ ಸರೋವರದಲ್ಲಿ ಬಾಂಗ್ಲಾದೇಶ ಟಿವಿ ಪತ್ರಕರ್ತೆಯ ಮೃತದೇಹ ಪತ್ತೆ  Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಮುಖ್ಯಸ್ಥರಾಗಿ ಹಿರಿಯ ಐಪಿಎಸ್‌ ಅಧಿಕಾರಿ ಬಿ. ಶ್ರೀನಿವಾಸನ್‌ ನೇಮಕ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 28. ಹಿರಿಯ ಐಪಿಎಸ್‌ ಅಧಿಕಾರಿ ಬಿ. ಶ್ರೀನಿವಾಸನ್‌ ಅವರನ್ನು ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಶ್ರೀನಿವಾಸನ್‌ ಅವರು ಬಿಹಾರ ಕೆಡರ್ ನ 1992ರ ಬ್ಯಾಚ್‌ ಐಪಿಎಸ್‌ ಅಧಿಕಾರಿಯಾಗಿದ್ದಾರೆ ಎಂದು ವರದಿ ಪ್ರಕಟಣೆ ತಿಳಿಸಿದೆ. ‘ಶ್ರೀನಿವಾಸನ್‌ ಅವರನ್ನು ಎನ್‌ಎಸ್‌ಜಿ ಮಹಾ ನಿರ್ದೇಶಕರನ್ನಾಗಿ ನೇಮಿಸಲು ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ. ಅವರ ಅಧಿಕಾರ ಅವಧಿಯು ‘2027ರ ಆಗಸ್ಟ್‌ 31ರ ವರೆಗೆ ಇರಲಿದೆ’ ಎಂದು ಸಿಬ್ಬಂದಿ ಸಚಿವಾಲಯದ

ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಮುಖ್ಯಸ್ಥರಾಗಿ ಹಿರಿಯ ಐಪಿಎಸ್‌ ಅಧಿಕಾರಿ ಬಿ. ಶ್ರೀನಿವಾಸನ್‌ ನೇಮಕ Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top