ಅಂತರ್ರಾಷ್ಟ್ರೀಯ ನ್ಯೂಸ್

ರಿಯಾದ್ : ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ

(ನ್ಯೂಸ್‌ ಕಡಬ) newskadaba.com,  ಸೆ. 19 ರಿಯಾದ್ : ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ರಿಯಾದ್ ಭೇಟಿಯ ಸಂದರ್ಭದಲ್ಲಿ ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಇಬ್ಬರಲ್ಲಿ ಯಾರ ಮೇಲೆಯೇ ಯುದ್ಧ ನಡೆಯಲಿ, ಎರಡು ದೇಶಗಳ ವಿರುದ್ಧ ಆಕ್ರಮಣ ಎಂದು ಪರಿಗಣಿಸುವುದು’ ಒಪ್ಪಂದದ ಪ್ರಮುಖ ಷರತ್ತಾಗಿದೆ. ಈ ಕುರಿತು ಭಾರತ ಪ್ರತಿಕ್ರಿಯೆ ನೀಡಿದ್ದು, ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ನಡುವೆ ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕುವ ವರದಿಗಳನ್ನು […]

ರಿಯಾದ್ : ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉತ್ತರಾಖಂಡ : ಚಮೋಲಿ ಜಿಲ್ಲೆಯಲ್ಲಿ ಭೂಕುಸಿತ, ಮನೆಗಳು ಕುಸಿದು 5 ಮಂದಿ ಕಣ್ಮರೆ

(ನ್ಯೂಸ್‌ ಕಡಬ) newskadaba.com,  ಸೆ.18 ಉತ್ತರಾಖಂಡದ ಚಮೋಲಿ ಜಿಲ್ಲೆಯ ನಂದನಗರದಲ್ಲಿ ಇಂದು ಗುರುವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟದಿಂದ ಉಂಟಾದ ಭೂಕುಸಿತದಲ್ಲಿ ಮನೆಗಳು ಕುಸಿದು ಕನಿಷ್ಠ 5 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ನಗರ ಪಂಚಾಯತ್ ನಂದನಗರದ ಕುಂತ್ರಿ ವಾರ್ಡ್‌ನಲ್ಲಿ ಭೂಕುಸಿತವಾಗಿ 6 ಮನೆಗಳು ನಾಶಪಡಿಸಿವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ. ಭೂಕುಸಿತ ಸಂಭವಿಸಿದ ಸಮಯದಲ್ಲಿ 7 ಮಂದಿ ಮನೆಯ ಒಳಗೆ ಇದ್ದರು, ಅವರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ, ಇನ್ನೂ ಐವರು ನಾಪತ್ತೆಯಾಗಿದ್ದಾರೆ. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್

ಉತ್ತರಾಖಂಡ : ಚಮೋಲಿ ಜಿಲ್ಲೆಯಲ್ಲಿ ಭೂಕುಸಿತ, ಮನೆಗಳು ಕುಸಿದು 5 ಮಂದಿ ಕಣ್ಮರೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಲಕ್ನೋ : ಬೀದಿ ನಾಯಿಗಳ ದಾಳಿಯನ್ನು ತಡೆಯಲು ಉತ್ತರ ಪ್ರದೇಶ ಕಠಿಣ ಕ್ರಮಕ್ಕೆ ಮುಂದಾದ ಯುಪಿ ಸರ್ಕಾರ

(ನ್ಯೂಸ್‌ ಕಡಬ) newskadaba.com,  ಸೆ.17 ಲಕ್ನೋ : ಬೀದಿ ನಾಯಿಗಳ ದಾಳಿಯನ್ನು ತಡೆಯಲು ದಿಟ್ಟ ಕ್ರಮಕ್ಕೆ ಮುಂದಾಗಿದ್ದು, ಪ್ರಚೋದನೆ ಇಲ್ಲದೆ ಮಾನವರನ್ನು ಮೊದಲ ಸಲ ಕಚ್ಚಿದ್ರೆ ಅದನ್ನು 10 ದಿನಗಳವರೆಗೆ ಪ್ರಾಣಿ ಕೇಂದ್ರದಲ್ಲಿ ಇರಿಸಲಾಗುತ್ತದೆ. ಮತ್ತೆ ಅದೇ ತಪ್ಪನ್ನು ಅದು ಮುಂದುವರಿಸಿದರೆ ಆ ನಾಯಿಗೆ ಜೀವಾವಧಿ ಶಿಕ್ಷೆ ವಿಧಿಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಗ್ರಾಮೀಣ ಮತ್ತು ನಗರ ನಾಗರಿಕ ಸಂಸ್ಥೆಗಳಿಗೆ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜತ್ ಆದೇಶ ಹೊರಡಿಸಿದ್ದು, ‘ಶಿಕ್ಷೆಗೆ ಗುರಿಯಾದ ನಾಯಿಗಳಿಗೆ ಬಚಾವ್ ಆಗಲು ಇರುವ

ಲಕ್ನೋ : ಬೀದಿ ನಾಯಿಗಳ ದಾಳಿಯನ್ನು ತಡೆಯಲು ಉತ್ತರ ಪ್ರದೇಶ ಕಠಿಣ ಕ್ರಮಕ್ಕೆ ಮುಂದಾದ ಯುಪಿ ಸರ್ಕಾರ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಡೆಹ್ರಾಡೂನ್‌ : ಭಾರೀ ಮಳೆಗೆ ಮೇಘಸ್ಫೋಟ – ಹಲವಾರು ಮನೆಗಳು ಹಾಗೂ ಐಟಿ ಪಾರ್ಕ್ ತೀವ್ರ ಜಲಾವೃತ

(ನ್ಯೂಸ್‌ ಕಡಬ) newskadaba.com,  ಸೆ.16 ಡೆಹ್ರಾಡೂನ್ : ಸೋಮವಾರ(ಸೆ..15)  ರಾತ್ರಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಭಾರೀ ಮಳೆಯಿಂದಾಗಿ ಮೇಘಸ್ಫೋಟ ಸಂಭವಿಸಿದ್ದು, ತಪೋವನ್‌ನಲ್ಲಿ ಮನೆಗಳು ಮತ್ತು ಐಟಿ ಪಾರ್ಕ್ ಪ್ರದೇಶದಲ್ಲಿ ಜಲಾವೃತವಾಗಿದೆ. 2 ಜನ  ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಮೇಘಸ್ಫೋಟ ನಂತರ ಕಾರ್ಲಿಗಾಡ್ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಹಾನಿ ಉಂಟಾಗಿದೆ. ಆ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ತೀವ್ರ ಮತ್ತು ನಿರಂತರ ಮಳೆಯಿಂದಾಗಿ ಹೊಳೆ ಅಪಾಯಕಾರಿಯಾಗಿ ಉಬ್ಬಿದ್ದು, ಸೋಮವಾರ ರಾತ್ರಿ ಪ್ರಮುಖ ಸೇತುವೆ

ಡೆಹ್ರಾಡೂನ್‌ : ಭಾರೀ ಮಳೆಗೆ ಮೇಘಸ್ಫೋಟ – ಹಲವಾರು ಮನೆಗಳು ಹಾಗೂ ಐಟಿ ಪಾರ್ಕ್ ತೀವ್ರ ಜಲಾವೃತ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

‘ಅಕ್ರಮ ವಲಸಿಗರ ಅಪರಾಧಿಗಳ ಬಗ್ಗೆ ಮೃದು ಧೋರಣೆ ತೋರುವ ಸಮಯ ಮುಗಿದಿದೆ’- ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

(ನ್ಯೂಸ್‌ ಕಡಬ) newskadaba.com,  ಸೆ.16 ವಾಷಿಂಗ್ಟನ್‌ : ಅಕ್ರಮ ವಲಸಿಗ ಅಪರಾಧಿಗಳ ಬಗ್ಗೆ ಮೃದು ಧೋರಣೆ ತೋರುವ ಸಮಯ ನಮ್ಮ ಆಡಳಿತದಲ್ಲಿ ಮುಗಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಇತ್ತೀಚೆಗೆ ಡಲ್ಲಾಸ್‌ ನಗರದಲ್ಲಿ ನಡೆದ ಕರ್ನಾಟಕ ಮೂಲದ ಚಂದ್ರ ನಾಗಮಯ್ಯಲ್ಲಯ್ಯ ಶಿರಚ್ಛೇದದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಸೋಷಿಯಲ್‌ ಮೀಡಿಯಾ ವೇದಿಕೆ ಟ್ರುತ್‌ ಸೋಷಿಯಲ್‌ನಲ್ಲಿ ಪ್ರತಿಕ್ರಿಯಿಸಿದ್ದು, ಪ್ರಕರಣದ ಆರೋಪಿಯ ಮೇಲೆ ಫಸ್ಟ್‌ ಗ್ರೇಡ್‌ನ ಕೊಲೆ ಆರೋಪ ಹೊರಿಸಲಾಗುವುದು. ಜೊತೆಗೆ ಕಾನೂನಿನ ಪೂರ್ಣ ಪ್ರಮಾಣದಲ್ಲಿ ವಿಚಾರಣೆಗೆ

‘ಅಕ್ರಮ ವಲಸಿಗರ ಅಪರಾಧಿಗಳ ಬಗ್ಗೆ ಮೃದು ಧೋರಣೆ ತೋರುವ ಸಮಯ ಮುಗಿದಿದೆ’- ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪಾಕ್‌ ವಿರುದ್ಧದ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ನಾಯಕ ಸೂರ್ಯ ಯಾದವ್ ಅರ್ಪಣೆ

(ನ್ಯೂಸ್‌ ಕಡಬ) newskadaba.com,  ಸೆ.16 ದುಬೈ: ಏಷ್ಯಾ ಕಪ್‌ 2025ರ ಟೂರ್ನಿಯ ಪಾಕ್‌ ವಿರುದ್ಧದ ಗೆಲುವನ್ನು ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ನಾಯಕ ಸೂರ್ಯಕುಮಾರ್‌ ಯಾದವ್‌ ಅರ್ಪಿಸಿದ್ದಾರೆ. ಪಂದ್ಯ ಗೆದ್ದ ಬಳಿಕ ಮಾತನಾಡಿದ ಸೂರ್ಯಕುಮಾರ್, ಇದೊಂದು ಪರಿಪೂರ್ಣ ಸಂದರ್ಭ ಎಂದು ನಾನು ಭಾವಿಸುತ್ತೇನೆ. ಪಹಲ್ಗಾಮ್ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು‌ ನಿಲ್ಲುತ್ತೇವೆ, ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತೇವೆ. ಈ ಗೆಲುವನ್ನು ನಮ್ಮ ಎಲ್ಲಾ ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಬಯಸುತ್ತೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತಾರೆ ಎಂದು ಆಶಿಸುತ್ತೇವೆ

ಪಾಕ್‌ ವಿರುದ್ಧದ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ನಾಯಕ ಸೂರ್ಯ ಯಾದವ್ ಅರ್ಪಣೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬ್ಯಾಡ್ಮಿಂಟನ್ ಆಟಗಾರ್ತಿ ತಾರೆ ಜ್ವಾಲಾ ಗುಟ್ಟಾ 30 ಲೀಟರ್ ಎದೆ ಹಾಲು ದಾನ

(ನ್ಯೂಸ್‌ ಕಡಬ) newskadaba.com,  ಸೆ.15  ಮುಂಬೈ :  ಕಾಮನ್‌ವೆಲ್ತ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತಕ್ಕಾಗಿ ಹಲವು ಪದಕಗಳನ್ನು ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಗುಟ್ಟಾ ಈಗ ನಿಸ್ವಾರ್ಥ ಸೇವೆಯ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ವಿಶಾಲ್ ಮತ್ತು ಜ್ವಾಲಾ ಗುಟ್ಟಾ ದಂಪತಿಗೆ ಮುದ್ದಾದ ಹೆಣ್ಣು ಮಗುವಿನ ಪೋಷಕರಾಗಿದ್ದು, ತನ್ನ ಮಗುವಿಗೆ ಹಾಲುಣಿಸಿದ ಬಳಿಕ, ಉಳಿದ ಎದೆ ಹಾಲನ್ನು ಗುಟ್ಟಾ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿಗೆ ದಾನ ಮಾಡುತ್ತಿದ್ದಾರೆ. ಕಳೆದ 4 ತಿಂಗಳಿನಿಂದ, ಅವರು ಪ್ರತಿದಿನ ಸರ್ಕಾರಿ ಆಸ್ಪತ್ರೆಗಳಿಗೆ 600 ಮಿಲಿಲೀಟರ್

ಬ್ಯಾಡ್ಮಿಂಟನ್ ಆಟಗಾರ್ತಿ ತಾರೆ ಜ್ವಾಲಾ ಗುಟ್ಟಾ 30 ಲೀಟರ್ ಎದೆ ಹಾಲು ದಾನ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಲಂಡನ್ : ವಲಸೆ ವಿರೋಧಿ ಪ್ರತಿಭಟನೆ – ಪೊಲೀಸರ ಮೇಲೆ ಹಲ್ಲೆ

(ನ್ಯೂಸ್‌ ಕಡಬ) newskadaba.com,  ಸೆ.15  ಲಂಡನ್ : ಬಲಪಂಥೀಯ ಕಾರ್ಯಕರ್ತ ಟಾಮಿ ರಾಬಿನ್ಸನ್ ನೇತೃತ್ವದಲ್ಲಿ ಲಂಡನ್‌ನಲ್ಲಿ ನಡೆದ ವಲಸೆ ವಿರೋಧಿ ಬೃಹತ್ ಪ್ರತಿಭಟನೆಯಲ್ಲಿ 1.10 ಲಕ್ಷಗಿಂತ ಹೆಚ್ಚು ಜನರು ಭಾಗವಹಿಸಿದ್ದು, ಈ ಮೆರವಣಿಗೆ ಅಪಾಯಕಾರಿ ತಿರುವು ಪಡೆದಿದೆ. ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಪೊಲೀಸ್ ಇಲಾಖೆ ನೀಡಿದ ಮಾಹಿತಿಯಂತೆ, 26 ಅಧಿಕಾರಿಗಳು ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಕೆಲವು ಅಧಿಕಾರಿಗಳಿಗೆ ಮೂಗು, ಮುಖ ಸೇರಿದಂತೆ ಹಲವು ಕಡೆ ತೀವ್ರ ಗಾಯಗಳಾಗಿವೆ ಮತ್ತು ಹಲವರಿಗೆ

ಲಂಡನ್ : ವಲಸೆ ವಿರೋಧಿ ಪ್ರತಿಭಟನೆ – ಪೊಲೀಸರ ಮೇಲೆ ಹಲ್ಲೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಠ್ಮಂಡು : ‘ ನಾನು ಅಧಿಕಾರದ ಆಸೆಯಿಂದ ಬಂದಿಲ್ಲ, ಆರು ತಿಂಗಳಿಗಿಂತ ಹೆಚ್ಚು ದಿನ ಇರಲ್ಲ’- ನೇಪಾಳ ಪ್ರಧಾನಿ ಸುಶೀಲಾ ಕರ್ಕಿ

(ನ್ಯೂಸ್‌ ಕಡಬ) newskadaba.com,  ಸೆ.15 : ಕಠ್ಮಂಡು :   ನೇಪಾಳದ ನೂತನ ಹಂಗಾಮಿ ಪ್ರಧಾನಿ ಸುಶೀಲಾ ಕರ್ಕಿ ಅವರು ‘ನಾನು ಅಧಿಕಾರದ ಆಸೆಯಿಂದ ಬಂದಿಲ್ಲ, 6 ತಿಂಗಳಿಗಿಂತ ಹೆಚ್ಚು ದಿನ ಇರಲ್ಲ ‘ ಎಂದು ತಿಳಿಸಿದ್ದಾರೆ ಹಂಗಾಮಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಹೊಸ ಸಂಸತ್ತಿಗೆ ಜವಾಬ್ದಾರಿಯನ್ನು ಹಸ್ತಾಂತರಿಸುತ್ತೇವೆ. ನಿಮ್ಮ ಬೆಂಬಲವಿಲ್ಲದೆ ನಾವು ಯಶಸ್ವಿಯಾಗುವುದಿಲ್ಲ. ಕೆ.ಪಿ.ಶರ್ಮಾ ಓಲಿ ಸರ್ಕಾರ ಉರುಳಿಸಿದ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರವ್ಯಾಪಿ ‘ಜೆನ್-ಝಡ್’ ಪ್ರತಿಭಟನೆಗಳನ್ನು ಅವರು ಶ್ಲಾಘಿಸಿದರು.

ಕಠ್ಮಂಡು : ‘ ನಾನು ಅಧಿಕಾರದ ಆಸೆಯಿಂದ ಬಂದಿಲ್ಲ, ಆರು ತಿಂಗಳಿಗಿಂತ ಹೆಚ್ಚು ದಿನ ಇರಲ್ಲ’- ನೇಪಾಳ ಪ್ರಧಾನಿ ಸುಶೀಲಾ ಕರ್ಕಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಷ್ಯಾದ ಕರಾವಳಿಯಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ

(ನ್ಯೂಸ್‌ ಕಡಬ) newskadaba.com,  ಸೆ.13 : ರಷ್ಯಾದ ಕರಾವಳಿಯಲ್ಲಿ ಶನಿವಾರ ಬೆಳಗಿನ ಜಾವ 2:23 ಕ್ಕೆ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಹಾಗೂ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಒಂದು ತಿಂಗಳ ಹಿಂದೆಯಷ್ಟೇ 8.8 ತೀವ್ರತೆಯ ಭೀಕರ ಭೂಕಂಪ ಸಂಭವಿಸಿ, ಸುನಾಮಿ ಉಂಟಾಗಿತ್ತು. ಇದೀಗ ಮತ್ತೆ ಪ್ರಬಲ ಭೂಕಂಪ ಸಂಭವಿಸಿದ ಹಿನ್ನೆಲೆ, ಸುನಾಮಿ ಆತಂಕ ಎದುರಾಗಿದೆ. ರಷ್ಯಾದ ಕಮ್ಚಟ್ಕಾ ಪ್ರದೇಶದ ಪೂರ್ವ ಕರಾವಳಿಯ ಬಳಿ ಭೂಕಂಪ ಸಂಭವಿಸಿದೆ. 10 ಕಿಮೀ

ರಷ್ಯಾದ ಕರಾವಳಿಯಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top