ಕರಾವಳಿ

ಅಟೋ ರಿಕ್ಷಾ ಪಲ್ಟಿ ➤ ಓರ್ವ ಪ್ರಯಾಣಿಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 10. ಅಟೋ ರಿಕ್ಷಾವೊಂದು ಪಲ್ಟಿಯಾಗಿ ಪ್ರಯಾಣಿಕೊನೋರ್ವ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಸೋಮಂತಡ್ಕ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಕಕ್ಕಿಂಜೆ ನಿವಾಸಿ ಢೀಕಯ್ಯ ಎಂದು ಗುರುತಿಸಲಾಗಿದೆ. ಹೇಮಂತ್ ಎಂಬವರು ಚಲಾಯಿಸುತ್ತಿದ್ದ ರಿಕ್ಷಾಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನೆಯಿಂದಾಗಿ ಅಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.    

ಅಟೋ ರಿಕ್ಷಾ ಪಲ್ಟಿ ➤ ಓರ್ವ ಪ್ರಯಾಣಿಕನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪಾಂಗಾಳ: ಆರೂಢ ಪ್ರಶ್ನೆಯಲ್ಲಿ ಗೋಚರಿಸಿದ ಪ್ರಾಚೀನ ಲಕ್ಷ್ಮೀ ನಾರಾಯಣ ವಿಗ್ರಹ..!

(ನ್ಯೂಸ್ ಕಡಬ) newskadaba.com ಕಾಪು, ಡಿ.10. ಪಾಂಗಾಳ ಶ್ರೀ ಬ್ರಹ್ಮಲಿಂಗೇಶ್ವರ ಆದಿ ಆಲಡೆಯಲ್ಲಿ ಜೀರ್ಣೋದ್ಧಾರ ಕೆಲಸದ ಪೂರ್ವಭಾವಿಯಾಗಿ ಆರೂಢ ಪ್ರಶ್ನೆಯನ್ನು ಮಂಗಳೂರಿನ ಪ್ರಸಿದ್ಧ ಜ್ಯೋತಿಷ್ಯರಾದ ಶಶಿ ಕುಮಾರ್ ಪಂಡಿತ್ ಇವರ ನೇತೃತ್ವದಲ್ಲಿ, ಕ್ಷೇತ್ರದ ತಂತ್ರಿಗಳಾದ ಉಂಡಾರು ನಾಗರಾಜ ತಂತ್ರಿಗಳ ಉಪಸ್ಥಿತಿಯಲ್ಲಿ ಇರಿಸಲಾಗಿತ್ತು. ಇಟ್ಟಂತಹ ಪ್ರಶ್ನೆಯಲ್ಲಿ ಅಚ್ಛರಿಯ ವಿಷಯವೊಂದು ಗೋಚರವಾಗಿದೆ. ಸ್ಥಳದ ಚರಿತ್ರೆಯ ಬಗ್ಗೆ ಜಾಗದ ಬಗ್ಗೆ ವಿಮರ್ಶೆ ಮಾಡಿದ ಜ್ಯೋತಿಷ್ಯರು ಒಂದು ಅಚ್ಚರಿಯ ಸಂಗತಿಯನ್ನು ತಿಳಿಸಿದ್ದರು. ಅದೇನೆಂದರೆ ಈ ಪಾಂಗಾಳ ಆಲಡೆಯ ನೈರುತ್ಯ ಭಾಗದಲ್ಲಿ ಸರಿಸುಮಾರು ನೂರು

ಪಾಂಗಾಳ: ಆರೂಢ ಪ್ರಶ್ನೆಯಲ್ಲಿ ಗೋಚರಿಸಿದ ಪ್ರಾಚೀನ ಲಕ್ಷ್ಮೀ ನಾರಾಯಣ ವಿಗ್ರಹ..! Read More »

ಕರಾವಳಿ, ಕರ್ನಾಟಕ

ಬಸ್ಸಿನಲ್ಲಿ ಅನ್ಯಕೋಮಿನ ಜೋಡಿ ಪತ್ತೆ ➤ ಸಾರ್ವಜನಿಕರಿಂದ ಬುದ್ದಿಮಾತು..!

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 10. ಮಂಗಳೂರಿನಿಂದ ಉಡುಪಿ ಕಡೆಗೆ ಬಸ್ಸಿನಲ್ಲಿ ತೆರಳುತ್ತಿದ್ದ ಅನ್ಯ ಕೋಮಿನ ಜೋಡಿಯೊಂದನ್ನು ಹಿಡಿದ ಸಾರ್ವಜನಿಕರು ಬುದ್ದಿಮಾತು ಹೇಳಿದ ಘಟನೆ ನಡೆದಿದೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಅನ್ಯಕೋಮಿನ ಜೋಡಿಯೊಂದು ಬಸ್ಸಿನಲ್ಲಿ ರಾಸಲೀಲೆಯಲ್ಲಿ ತೊಡಗಿದ್ದ ವೇಳೆ ಸಾರ್ವಜನಿಕರು ಬಸ್ ನಿರ್ವಾಹಕರ ಗಮನಕ್ಕೆ ತಂದಿದ್ದು, ಇಬ್ಬರನ್ನೂ ವಿಚಾರಣೆ ಮಾಡುವ ವಿಡಿಯೋ ವೈರಲ್ ಆಗಿತ್ತು.

ಬಸ್ಸಿನಲ್ಲಿ ಅನ್ಯಕೋಮಿನ ಜೋಡಿ ಪತ್ತೆ ➤ ಸಾರ್ವಜನಿಕರಿಂದ ಬುದ್ದಿಮಾತು..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಬ್ರಹ್ಮಣ್ಯ: ಯುವ ತೇಜಸ್ಸು ಟ್ರಸ್ಟ್ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ. 10. ಸುಮಾರು ಐದು ವರ್ಷಗಳ ಹಿಂದೆ ‘ಒಂದಿಷ್ಟು ಸಮಾಜಕ್ಕಾಗಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭವಾದ ಯುವ ತೇಜಸ್ಸು ಟ್ರಸ್ಟ್ ಸುಬ್ರಹ್ಮಣ್ಯ ವತಿಯಿಂದ ಆಂಬ್ಯುಲೆನ್ಸ್ ಸೇವೆ ನೀಡುವ ಉದ್ದೇಶದಿಂದ ದಾನಿಗಳಿಂದ ಹಣ ಸಂಗ್ರಹಿಸಿ ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡಲಾಯಿತು. ಅವಧೂತ ವಿನಯ್ ಗುರೂಜಿ ಆಂಬ್ಯುಲೆನ್ಸ್ ಚಲಾಯಿಸಿ ಆಶೀರ್ವಾದ ಮಾಡಿದರು. ಈ ಸಂದರ್ಭದಲ್ಲಿ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ರಂಗಯ್ಯ ಶೆಟ್ಟಿಗಾರ್, ರವಿ

ಸುಬ್ರಹ್ಮಣ್ಯ: ಯುವ ತೇಜಸ್ಸು ಟ್ರಸ್ಟ್ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ Read More »

ಕರಾವಳಿ, ಕರ್ನಾಟಕ

ಸುಳ್ಯ: ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆ ➤ ಅಪಾರ ಪ್ರಮಾಣದ ಕೃಷಿ‌ಹಾನಿ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 10. ಕಾಡಾನೆ ದಾಳಿ ಮತ್ತೆ ಮುಂದುವರೆದಿದ್ದು, ಅಲೆಟ್ಟಿ ಗ್ರಾಮದ ಅರಂಬೂರು ಜಗದೀಶ್ ಸರಳಿಕುಂಜ ಮತ್ತು ವೆಂಕಟ್ರಮಣ ಸರಳಿಕುಂಜ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆಯು ದಾಳಿ ನಡೆಸಿ, ಅಒಅರ ಪ್ರಮಾಣದ ತೆಂಗು ಹಾಗೂ ಬಾಳೆಗಳನ್ನು ನಾಶಗೊಳಿಸಿದ ಘಟನೆ ವರದಿಯಾಗಿದೆ.      

ಸುಳ್ಯ: ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆ ➤ ಅಪಾರ ಪ್ರಮಾಣದ ಕೃಷಿ‌ಹಾನಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಆಲಂಕಾರು: ಮೊಗೇರ ಸಂಘದ ವತಿಯಿಂದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸೇನಾಧಿಕಾರಿಗಳಿಗೆ ನುಡಿನಮನ

(ನ್ಯೂಸ್ ಕಡಬ) newskadaba.com ಅಲಂಕಾರು, ಡಿ. 10. ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಸೈನಿಕರಿಗೆ ಮೊಗೇರ ಸಂಘ ಅಲಂಕಾರು ಮಂಡಲದ ವತಿಯಿಂದ ನುಡಿನಮನ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಮಹಾಬಲ ಪಡುಬೆಟ್ಟು, ಸೇನಾ ಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಅವರು ದೇಶದ ದೊಡ್ಡ ಸಂಪತ್ತಾಗಿದ್ದರು. ಸುಮಾರು ನಾಲ್ಕು ದಶಕಗಳಿಂದ ಭಾರತೀಯ ಸೇನೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಾ ಸೇನೆಯ ಮೂರು ಪಡೆಯ ಮುಖ್ಯಸ್ಥರಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು‌.

ಆಲಂಕಾರು: ಮೊಗೇರ ಸಂಘದ ವತಿಯಿಂದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸೇನಾಧಿಕಾರಿಗಳಿಗೆ ನುಡಿನಮನ Read More »

ಕರಾವಳಿ, ಕರ್ನಾಟಕ

ವಕೀಲ ರಾಜೇಶ್ ಭಟ್ ಪ್ರಕರಣ ➤ ಪತ್ನಿ ಸಹಿತ ಮತ್ತಿಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 10. ಕಾನೂನು ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿ, ತಲೆಮರೆಸಿಕೊಂಡಿರುವ ಆರೋಪಿಯ ಪತ್ನಿ ಹಾಗೂ ಆರೋಪಿಗೆ ಸಹಕರಿಸಿದ ಅಚ್ಯುತ ಭಟ್ ಎಂಬಾತನ ಮಗ ಅಲೋಕ್ ನನ್ನು ಕೂಡಾ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ. ಆರೋಪಿ ವಕೀಲ ಕೆ.ಎಸ್.ಎನ್ ರಾಜೇಶ್ ಭಟ್ ವಿರುದ್ದ ಲೈಂಗಿಕ ಕಿರುಕುಳ ನಿಡಿರುವ ಕುರಿತು ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದರ ಬೆನ್ನಲ್ಲೇ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಇದಕ್ಕೆ ಸಹಕರಿಸಿದ್ದ ಆರೋಪದ ಮೇರೆಗೆ ಈ ಹಿಂದೆ ಅನಂತ್

ವಕೀಲ ರಾಜೇಶ್ ಭಟ್ ಪ್ರಕರಣ ➤ ಪತ್ನಿ ಸಹಿತ ಮತ್ತಿಬ್ಬರ ಬಂಧನ Read More »

ಕರಾವಳಿ, ಕರ್ನಾಟಕ

ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಶೀಘ್ರವೇ ಬಂಧಿಸಿ ➤ ಶ್ರೀರಾಮ ಸೇನೆ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 10. ವಾಹನದ ಇನ್ಶೂರೆನ್ಸ್ ನೆಪದಲ್ಲಿ ಶ್ರೀರಾಮ ಸೇನೆಯ ಕಾರ್ಯರ್ತರೋರ್ವರಿಗೆ ಉಡುಪಿಯಲ್ಲಿನ ರಾಜಾಂಗಣಕ್ಕೆ ಕರೆಸಿಕೊಂಡ ದುಷ್ಕರ್ಮಿಗಳು ಏಕಾಏಕಿ ರಾಡ್ ನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಕುರಿತು ಮಾತನಾಡಿದ ರಾಮ್ ಸೇನಾ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು, ನಮ್ಮ ಕಾರ್ಯಕರ್ತನ ಮೇಲೆ ನಡೆದಿರುವ ಹಲ್ಲೆಯನ್ನು ಯಾವುದೇ ಕಾರಣಕ್ಕೂ ನಾವು ಸಹಿಸಲ್ಲ, ನಮ್ಮವರ ಮೇಲೆ ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಉಡುಪಿ, ದ.ಕ ಜಿಲ್ಲೆಯ ಶ್ರೀರಾಮ ಸೇನೆಯ ಕಾರ್ಯಕರ್ತರಿಂದ ತೀವ್ರ ಹೋರಾಟ

ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಶೀಘ್ರವೇ ಬಂಧಿಸಿ ➤ ಶ್ರೀರಾಮ ಸೇನೆ ಎಚ್ಚರಿಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿಧಾನ ಪರಿಷತ್ ಚುನಾವಣೆ ➤ ಕಡಬ ತಾಲೂಕಿನಲ್ಲಿ ಬಿರುಸಿನ ಮತದಾನ

(ನ್ಯೂಸ್ ಕಡಬ) newskadaba.com ಕಡಬ, ಡಿ. 10. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯರ ಆಯ್ಕೆಗೆ ಶುಕ್ರವಾರದಂದು ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ ಎಂಟು ಗಂಟೆಗೆ ಕಡಬ ತಾಲೂಕಿನಾದ್ಯಂತ ಬಿರುಸಿನ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ತಾಲೂಕಿನ 21 ಮತಗಟ್ಟೆಯಲ್ಲಿ 285 ಮತದಾರರು ಮತ ಚಲಾಯಿಸಲಿದ್ದಾರೆ. ತಾಲೂಕಿನ 21 ಗ್ರಾ.ಪಂ.ಗಳ 285 ಮಂದಿ ಸದಸ್ಯರು ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಆಲಂಕಾರು- 11, ಬೆಳಂದೂರು- 15, ಬಿಳಿನೆಲೆ-9, ಗೋಳಿತೊಟ್ಟು- 17, ಐತ್ತೂರು-11, ಕಡ್ಯ-ಕೊಣಾಜೆ-5, ಕಾಣಿಯೂರು- 16, ಕುಟ್ರುಪಾಡಿ-_17, ಕೊಯಿಲ-14, ಕೊಂಬಾರು- 9,

ವಿಧಾನ ಪರಿಷತ್ ಚುನಾವಣೆ ➤ ಕಡಬ ತಾಲೂಕಿನಲ್ಲಿ ಬಿರುಸಿನ ಮತದಾನ Read More »

ಕರಾವಳಿ, ಕರ್ನಾಟಕ

ಉಪ್ಪಿನಂಗಡಿ: ಸರಣಿ ಅಪಘಾತ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 10. ಲಾರಿ ಹಾಗೂ ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಲಾರಿ ಪಲ್ಟಿಯಾಗಿ ರಸ್ತೆ ಮಧ್ಯೆ ಬಿದ್ದಿದ್ದು, ಅಪಘಾತಕ್ಕೀಡಾದ ಕಾರಿನ ಹಿಂದೆ ಬರುತ್ತಿದ್ದ ಇನ್ನೊಂದು ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಮಗುಚಿ ಬಿದ್ದು, ಉಂಟಾದ ಸರಣಿ ಅಪಘಾತದಲ್ಲಿ ಮೂವರು ಗಾಯಗೊಂಡ‌ ಘಟನೆ ರಾ.ಹರ. 75ರ ಪಂಜಾಲ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಕಾರು ಚಾಲಕ ಸಂತೋಷ್, ಲಾರಿ‌ ಚಾಲಕರಾದ ಶೀತಲ್ ಹಾಗೂ ಹೇಮಂತ್ ಎಂದು ಗುರುತಿಸಲಾಗಿದೆ. ಮೆಲ್ಕಾರಿನಿಂದ ನೆಲ್ಯಾಡಿ

ಉಪ್ಪಿನಂಗಡಿ: ಸರಣಿ ಅಪಘಾತ ➤ ಮೂವರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top