ಕರಾವಳಿ

ಕಡಬ: ಕಾರ್ಮಿಕರಿಂದ ಮೊಬೈಲ್ ಎಗರಿಸಿ ಪರಾರಿಯಾದ ಅಪರಿಚಿತರು..!

(ನ್ಯೂಸ್ ಕಡಬ) newskadaba.com ಕಡಬ, ಡಿ. 22. ಇಲ್ಲಿನ ಮಿನಿ ವಿಧಾನಸೌಧದ ಕಟ್ಟಡ ಕಾಮಗಾರಿ ಮಾಡುತ್ತಿದ್ದ ಹಿಂದಿ ಕಾರ್ಮಿಕರ ಮೊಬೈಲ್ ನ್ನು ಬೈಕ್ ನಲ್ಲಿ ಬಂದ ಅಪರಿಚಿತರು ಎಗರಿಸಿಕೊಂಡು ಪರಾರಿಯಾದ ಘಟನೆ ಕಡಬದಲ್ಲಿ ಬುಧವಾರದಂದು ಸಂಜೆ ನಡೆದಿದೆ. ಕಡಬ ತಹಶೀಲ್ದಾರ್ ಕಛೇರಿಯ ಹಿಂಭಾಗದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅಲ್ಲಿಗೆ ಬೈಕ್ ನಲ್ಲಿ ಬಂದ ಅಪರಿಚಿತರು ತುರ್ತು ಕರೆಯನ್ನು ಮಾಡಲು ಮೊಬೈಲ್ ಕೊಡುವಂತೆ ಕೇಳಿದ್ದು, ಅದರಂತೆ ಕಾರ್ಮಿಕರು ಮೊಬೈಲ್ ಕೊಟ್ಟಿದ್ದಾರೆ. ಮೊಬೈಲ್ ಸಿಗುತ್ತಿದ್ದಂತೆಯೇ ಯುವಕರು ಪರಾರಿಯಾಗಿದ್ದು, ಕಡಬ ಠಾಣೆಯಲ್ಲಿ […]

ಕಡಬ: ಕಾರ್ಮಿಕರಿಂದ ಮೊಬೈಲ್ ಎಗರಿಸಿ ಪರಾರಿಯಾದ ಅಪರಿಚಿತರು..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪತ್ನಿ ತವರುಮನೆಗೆ ಹೋಗಿದ್ದ ಸಂದರ್ಭ ಪತಿ ಕಾಣೆ..! ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 22. ಹೆಂಡತಿ ತವರುಮನೆಗೆ ಹೋಗಿದ್ದ ಸಂದರ್ಭ ಪತಿ ಸಂಶುದ್ದೀನ್ ಎಂಬಾತನೋರ್ವ ಮನೆಬಿಟ್ಟು ಹೋದ ಘಟನೆ ತಾಲೂಕಿನ ಕುವೆಟ್ಟು ಗ್ರಾಮದ ಸುನ್ನತ್ ಕೆರೆ ಎಂಬಲ್ಲಿ ನಡೆದಿದೆ. ಪತ್ನಿ ಹಾಗೂ ಎರಡು ಗಂಡುಮಕ್ಕಳೊಂದಿಗೆ ವಾಸವಾಗಿದ್ದ ಸಂಶುದ್ದೀನ್ ಅವರ ಪತ್ನಿ ಸುಮಾರು ಎರಡು ತಿಂಗಳ ಹಿಂದೆ ತವರುಮನೆಗೆ ಹೋಗಿದ್ದು ಪ್ರತೀದಿನ ಪತಿಯೊಂದಿಗೆ ಫೋನ್ ಮೂಲಕ ಮಾತನಾಡುತ್ತಿದ್ದರು ಎನ್ನಲಾಗಿದೆ. ಡಿ.‌ 18ರಂದು ಪತಿ ಯಾವುದೇ ಕರೆ ಮಾಡದೇ ಇದ್ದು, ಡಿ. 19 ರಂದು ಪತ್ನಿ ಸಂಶುದ್ದೀನ್

ಪತ್ನಿ ತವರುಮನೆಗೆ ಹೋಗಿದ್ದ ಸಂದರ್ಭ ಪತಿ ಕಾಣೆ..! ➤ ದೂರು ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಪಾದಚಾರಿ ಮಹಿಳೆಗೆ ಬೈಕ್ ಢಿಕ್ಕಿ – ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 22. ಪಾದಚಾರಿ ಮಹಿಳೆಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಾಯಗೊಂಡ ಘಟನೆ ಅಡ್ಕಾರು ಎಂಬಲ್ಲಿ ಬುಧವಾರದಂದು ನಡೆದಿದೆ. ಗಾಯಾಳು ಮಹಿಳೆಯನ್ನು ಅಡ್ಕಾರು ನಿವಾಸಿ ಶಕುಂತಲಾ ಎಂದು ಗುರುತಿಸಲಾಗಿದೆ. ಇವರು ಇಂದು ಬೆಳಗ್ಗೆ ಮೀಟಿಂಗ್ ಒಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ವೇಳೆ ದ್ವಿಚಕ್ರ ವಾಹನವೊಂದು ಢಿಕ್ಕಿ ಹೊಡೆದಿದೆ. ತಕ್ಷಣವೇ ಅವರನ್ನು ಸ್ಥಳೀಯರು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

ಸುಳ್ಯ: ಪಾದಚಾರಿ ಮಹಿಳೆಗೆ ಬೈಕ್ ಢಿಕ್ಕಿ – ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋಸಾಗಾಟ ➤ 2 ಕರುಗಳ ರಕ್ಷಣೆ, ಚಾಲಕ ಪರಾರಿ..!

(ನ್ಯೂಸ್ ಕಡಬ) newskadaba.com ಬೈಂದೂರು, ಡಿ. 22. ಅಕ್ರಮ ಜಾನುವಾರು ಸಾಗಾಟವನ್ನು ತಡೆದ ಪೊಲೀಸರು ಹಿಂಸಾತ್ಮಕವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ಎರಡು ಕರುಗಳನ್ನು ರಕ್ಷಿಸಿದ ಘಟನೆ ಯಡ್ತರೆ ಜಂಕ್ಷನ್ ಬಳಿ ನಡೆದಿದೆ. ಎರಡು ಕರುಗಳನ್ನು ಕಳವುಗೈದು ಕಾರಿನಲ್ಲಿ ತುಂಬಿಸಿಕೊಂಡು ಕಿರಿಮಂಜೇಶ್ವರದಿಂದ ಬೈಂದೂರು ಕಡೆಗೆ ಸಾಗಿಸುತ್ತಿರುವ ಖಚಿತ ಮಾಹಿತಿ ದೊರೆತ ಬೈಂದೂರು ಪೊಲೀಸರು ಯಡ್ತರೆ ಜಂಕ್ಷನ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದು, ಈ ವೇಳೆ ಉಪ್ಪುಂದ ಕಡೆಯಿಂದ ಬೈಂದೂರು ಕಡೆಗೆ ಅತೀ ವೇಗವಾಗಿ ಬರುತ್ತಿದ್ದ ಕಾರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ.

ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋಸಾಗಾಟ ➤ 2 ಕರುಗಳ ರಕ್ಷಣೆ, ಚಾಲಕ ಪರಾರಿ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಯುವ ಕವಯಿತ್ರಿ ರಶ್ಮಿ ಸನಿಲ್ ಅವರಿಗೆ ಹ್ಯಾಟ್ರಿಕ್ ರಾಜ್ಯ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಮಂಡ್ಯ, ಡಿ. 21. ಜಿಲ್ಲೆಯ ಗಾಂಧಿಭವನದಲ್ಲಿ ಡಿ. 18ರಂದು ನಡೆದ ಕಸ್ತೂರಿ ಸಿರಿಗನ್ನಡ ವೇದಿಕೆಯ ಕವಿಗೋಷ್ಠಿ ಹಾಗೂ ಕಡಲು ಪುಸ್ತಕ ಬಿಡುಗಡೆ ರಾಜ್ಯೋತ್ಸವ ಪುರಸ್ಕಾರ ಸಮಾರಂಭದಲ್ಲಿ ಮಂಗಳೂರಿನ ಯುವ ಕವಯಿತ್ರಿ ರಶ್ಮಿ ಸನಿಲ್ ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಂದು ವರ್ಷದಲ್ಲಿ ಸತತವಾಗಿ 3 ರಾಜ್ಯ ಪ್ರಶಸ್ತಿ ಪಡೆದು ಹ್ಯಾಟ್ರಿಕ್ ಪ್ರಶಸ್ತಿ ಮುಡಿಗೇರಿಸಿಕೊಂಡು ಮಂಗಳೂರಿಗೆ ಕೀರ್ತಿ ತಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷರಾದ ಪೋತೆರ ಮಹದೇವು ಹಾಗೂ ಮುಖ್ಯ

ಯುವ ಕವಯಿತ್ರಿ ರಶ್ಮಿ ಸನಿಲ್ ಅವರಿಗೆ ಹ್ಯಾಟ್ರಿಕ್ ರಾಜ್ಯ ಪ್ರಶಸ್ತಿ Read More »

ಕರಾವಳಿ, ಕರ್ನಾಟಕ

ಶಿರಾಡಿ ಘನತ್ಯಾಜ್ಯ ಘಟಕಕ್ಕೆ ಕಾಯ್ದಿರಿಸಿದ ಜಾಗ ಅತಿಕ್ರಮಣ ➤ ಪೊಲೀಸ್ ಬಂದೋಬಸ್ತ್ ಮೂಲಕ ತೆರವು

(ನ್ಯೂಸ್ ಕಡಬ) newskadaba.com ಶಿರಾಡಿ, ಡಿ. 22. ಶಿರಾಡಿ ಗ್ರಾ.ಪಂ. ವ್ಯಾಪ್ತಿಯ ಪದಂಬಳ ಎಂಬಲ್ಲಿ ಗ್ರಾ.ಪಂ.ನ ಘನತ್ಯಾಜ್ಯ ಘಟಕಕ್ಕೆಂದು ಮಂಜೂರುಗೊಳಿಸಲಾಗಿದ್ದ ಸರಕಾರಿ ಜಾಗದ ಅತಿಕ್ರಮಣವನ್ನು ಪೊಲೀಸ್ ಬಿಗಿ ಬಂದೋಬಸ್ತ್ ಮೂಲಕ ಪಂಚಾಯತ್ ವತಿಯಿಂದ ತೆರವುಗೊಳಿಸಲಾಯಿತು. ಶಿರಾಡಿ ಗ್ರಾಮದ ಪದಂಬಳದಲ್ಲಿ ಸರ್ವೇ ನಂಬರ್ 87/1 ರ ಪೈಕಿ 50 ಸೆಂಟ್ಸ್ ಜಾಗವನ್ನು ಪಂಚಾಯತ್ ನ ಘನತ್ಯಾಜ್ಯ ಘಟಕಕ್ಕೆ ಎಂದು ಕಾಯ್ದಿರಿಸಲಾಗಿತ್ತು. ಆದರೆ ಇದನ್ನು ಸ್ಥಳೀಯ ವ್ಯಕ್ತಿಯೋರ್ವ ಅತಿಕ್ರಮಿಸಿಕೊಂಡಿದ್ದು, ಈ ಹಿನ್ನೆಲೆ ನೆಲ್ಯಾಡಿ ಹೊರಠಾಣಾ ಪೊಲೀಸರ ಬಂದೋಬಸ್ತ್ ಮೂಲಕ ಜೆಸಿಬಿ

ಶಿರಾಡಿ ಘನತ್ಯಾಜ್ಯ ಘಟಕಕ್ಕೆ ಕಾಯ್ದಿರಿಸಿದ ಜಾಗ ಅತಿಕ್ರಮಣ ➤ ಪೊಲೀಸ್ ಬಂದೋಬಸ್ತ್ ಮೂಲಕ ತೆರವು Read More »

ಕರಾವಳಿ, ಕರ್ನಾಟಕ

ಪಿ.ಎ ಇಂಜಿನಿಯರಿಂಗ್ ಕಾಲೇಜು ಅಧ್ಯಕ್ಷರಾದ ಇಬ್ರಾಹಿಂ ಹಾಜಿ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಸಂತಾಪ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 21. ಪಿಎ ಎಂಜಿನಿಯರಿಂಗ್ ಕಾಲೇಜು ಅಧ್ಯಕ್ಷ ಪಿ.ಎ.ಇಬ್ರಾಹಿಂ ಹಾಜಿಯವರ ಅಗಲುವಿಕೆಯು ಸಮುದಾಯಕ್ಕೆ ಮತ್ತು ನಾಡಿಗೆ ತುಂಬಲಾಗದ ನಷ್ಟವಾಗಿದೆ. ಹಲವಾರು ಸಂಘ ಸಂಸ್ಥೆಗಳಿಗೆ ನೇತೃತ್ವ ವಹಿಸಿದವರು. ಈ ಸೇವೆಗೆ ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಾಜಿಯವರು ಹಲವು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೃತರ ಪಾರತ್ರಿಕ ಜೀವನವನ್ನು ಭಗವಂತನು ಯಶಸ್ಸು ಗೊಳಿಸಲಿ.‌ ಕುಟುಂಬ ವರ್ಗ ಮತ್ತು ಹಿತೈಷಿಗಳಿಗೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪಾಪ್ಯುಲರ್ ಫ್ರಂಟ್ ದಕ್ಷಿಣ

ಪಿ.ಎ ಇಂಜಿನಿಯರಿಂಗ್ ಕಾಲೇಜು ಅಧ್ಯಕ್ಷರಾದ ಇಬ್ರಾಹಿಂ ಹಾಜಿ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಸಂತಾಪ Read More »

ಕರಾವಳಿ, ಕರ್ನಾಟಕ

ಆತೂರು: ರೇಂಜ್ ಮಟ್ಟದ ಮುಸಾಬಖ- 21 ➤ ತದ್ಬೀರುಲ್ ಇಸ್ಲಾಂ ಕೇಂದ್ರ ಮದರಸ ಚಾಂಪಿಯನ್

(ನ್ಯೂಸ್ ಕಡಬ) newskadaba.com ಆತೂರು, ಡಿ. 21. ಆತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದರಸ ಮ್ಯಾನೇಜ್ಮೆಂಟ್ ಆತೂರು ರೇಂಜ್ ಇದರ ವತಿಯಿಂದ ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ವಿಧ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸುವ ಮದರಸ ವಿದ್ಯಾರ್ಥಿಗಳ “ಮುಸಾಬಖ-21 (ವಿದ್ಯಾರ್ಥಿ ಫೆಸ್ಟ್)” ಡಾ ಶಾಹ್ ಉಸ್ತಾದ್ ಮಕ್ಬರ ಝಿಯಾರತ್ ನೊಂದಿಗೆ ಶಂಸುಲ್ ಉಲಮಾ ನಗರ ಖುತುಬಿಯಾ ಜುಮಾ ಮಸೀದಿ ಗಂಡಿಬಾಗಿಲು ಮಸೀದಿ ವಠಾರದಲ್ಲಿ ನಡೆಯಿತು. ಸ್ಥಳೀಯ ಜಮಾಹತ್ ಅಧ್ಯಕ್ಷರಾದ ಆದಂ ಹಾಜಿ ಪೋರಿಂಗ ಧ್ವಜಾರೋಹಣ ನೆರವೇರಿಸಿದರು. ಬೆಳಿಗ್ಗೆ

ಆತೂರು: ರೇಂಜ್ ಮಟ್ಟದ ಮುಸಾಬಖ- 21 ➤ ತದ್ಬೀರುಲ್ ಇಸ್ಲಾಂ ಕೇಂದ್ರ ಮದರಸ ಚಾಂಪಿಯನ್ Read More »

ಕರಾವಳಿ, ಕರ್ನಾಟಕ

ಈ 5 ವಸ್ತುಗಳು ಮನೆಯಲ್ಲಿ ಇದ್ದರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಆಗುತ್ತದೆ

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಮನೆಯ ಅಲಂಕಾರಕ್ಕಾಗಿ ಎಂದು ಕೆಲವು ವಸ್ತುಗಳನ್ನು ಇಡುತ್ತಾರೆ, ಇನ್ನು ಕೆಲವರು ಮನೆಯಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ ವಾಸ್ತು ದೋಷಗಳು ಇದ್ದರೆ ಅವುಗಳು ನಿವಾರಣೆಯಾಗಲಿ ಎಂದು ವಾಸ್ತುವಿಗೆ ಸಂಬಂಧಿಸಿದಂತಹ ವಸ್ತುಗಳನ್ನು ಮನೆಯಲ್ಲಿ ಇಡುತ್ತಾರೆ. ಇನ್ನು ಮನೆಯಲ್ಲಿ ಸಮಸ್ಯೆಗಳು ಇದ್ದರೆ, ವಾಸ್ತು ದೋಷ ಗಳು ಇದ್ದರೆ, ಮನೆಯಲ್ಲಿ ಏನಾದರೂ ನಕಾರತ್ಮಕ ಶಕ್ತಿಗಳಿಂದ ಕಲಹಗಳು ಜಗಳಗಳು ಉಂಟಾಗುತ್ತಿದ್ದರೆ, ಜೀವನದಲ್ಲಿ ಅದೃಷ್ಟವೇ ಇಲ್ಲ ಎನ್ನುವುದಾದರೆ ತಪ್ಪದೇ ಮನೆಯಲ್ಲಿ ಈ 5 ವಸ್ತುಗಳನ್ನು ಇಡಬೇಕು. ಮನೆಯಲ್ಲಿ 5

ಈ 5 ವಸ್ತುಗಳು ಮನೆಯಲ್ಲಿ ಇದ್ದರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಆಗುತ್ತದೆ Read More »

ಅಡುಗೆ, ಅಂತರ್ರಾಷ್ಟ್ರೀಯ ನ್ಯೂಸ್, ಆರೋಗ್ಯ ಮಾಹಿತಿ, ಉದ್ಯೋಗ, ಕರಾವಳಿ, ಕರ್ನಾಟಕ, ಕ್ರೀಡಾ ನ್ಯೂಸ್, ಕ್ರೈಮ್ ನ್ಯೂಸ್, ತಂತ್ರಜ್ಞಾನ, ಬ್ರೇಕಿಂಗ್ ನ್ಯೂಸ್, ಭವಿಷ್ಯ, ರಾಷ್ಟ್ರೀಯ ನ್ಯೂಸ್, ಲೈಫ್‍ಸ್ಟೈಲ್, ವಿಶೇಷ ಲೇಖನಗಳು, ಸಿನಿಮಾ

ಮಾಣಿ: ಆಟೋ ರಿಕ್ಷಾ ಹಾಗೂ ಬೈಕ್ ನಡುವೆ ಢಿಕ್ಕಿ ➤ ಸವಾರರಿಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಮಾಣಿ, ಡಿ. 21. ರಿಕ್ಷಾ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರರಿಬ್ಬರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ನಡೆದಿದೆ. ಮಾಣಿಯಿಂದ ಗಡಿಯಾರ ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾಕ್ಕೆ ಉಪ್ಪಿನಂಗಡಿ ಕಡೆಯಿಂದ ವೇಗವಾಗಿ ಬಂದ ಬೈಕ್ ಡಿಕಿ ಹೊಡೆದಿದ್ದು, ಪರಿಣಾಮ ಬೈಕ್ ಸವಾರ ಹಾಗೂ ಸಹಸವಾರನಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಮಾಣಿ: ಆಟೋ ರಿಕ್ಷಾ ಹಾಗೂ ಬೈಕ್ ನಡುವೆ ಢಿಕ್ಕಿ ➤ ಸವಾರರಿಬ್ಬರು ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top