ಕರಾವಳಿ

ದ.ಕ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಕೊರೋನಾ ➤ ನೆಲ್ಯಾಡಿಯ ಶಾಲೆ ಸೇರಿದಂತೆ ಜಿಲ್ಲೆಯ 10 ಶಾಲೆಗಳು ಬಂದ್..!

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 21. ದ.ಕ ಜಿಲ್ಲೆಯಲ್ಲಿ ಗುರುವಾರದಂದು ಒಟ್ಟು 32 ವಿದ್ಯಾರ್ಥಿಗಳು ಹಾಗೂ ಏಳು ಮಂದಿ ಶಿಕ್ಷಕರಲ್ಲಿ ಕೊರೋನಾ ಸೋಂಕು ಕಂಡುಬಂದಿದ್ದು, ಇದುವರೆಗೆ ಹತ್ತು ಶಾಲೆಗಳನ್ನು ಮುಚ್ಚಲಾಗಿದೆ. ಮಂಗಳೂರು ದಕ್ಷಿಣದ ಪೆರ್ಮನ್ನೂರಿನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಐದು ವಿದ್ಯಾರ್ಥಿಗಳಲ್ಲಿ ಸೋಂಕು ಕಂಡುಬಂದ ಹಿನ್ನೆಲೆ ಒಂದು ವಾರಗಳ ಕಾಲ ತರಗತಿಗಳನ್ನು ಮುಚ್ಚಿ ಆನ್ ಲೈನ್ ತರಗತಿ ನಡೆಸಲಾಗುತ್ತದೆ. ಪುತ್ತೂರು ತಾಲೂಕಿನ ಉದನೆ ಬಿಷಪ್ ಪೋಲಿಕಾರ್ಷಸ್ ಪಬ್ಲಿಕ್ ಶಾಲೆಯ ಆರು ಮಕ್ಕಳು ಮತ್ತು […]

ದ.ಕ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಕೊರೋನಾ ➤ ನೆಲ್ಯಾಡಿಯ ಶಾಲೆ ಸೇರಿದಂತೆ ಜಿಲ್ಲೆಯ 10 ಶಾಲೆಗಳು ಬಂದ್..! Read More »

ಕರಾವಳಿ, ಕರ್ನಾಟಕ

ಬೆಳ್ಳಾರೆ: ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿ.! ➤ ಪ್ರಯಾಣಿಕರು ಪಾರು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜ. 21. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾದ ಪರಿಣಾಮ ಮೂವರು ಗಾಯಗೊಂಡ ಘಟನೆ ನಡೆದಿದೆ. ಕಾರಿನಲ್ಲಿ ಮದುಮಗ ಸೇರಿದಂತೆ ಐವರು ಪ್ರಯಾಣಿಸುತ್ತಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮೋರಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯ ತೀವ್ರತೆಗೆ ತಕ್ಷಣವೇ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.    

ಬೆಳ್ಳಾರೆ: ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿ.! ➤ ಪ್ರಯಾಣಿಕರು ಪಾರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಗೆ ಅಡ್ಡಿಪಡಿಸಿದ ಪ್ರಕರಣ ➤ ಕಾರು ಚಾಲಕನ ಬಂಧನ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 21. ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಕರೆದೊಯ್ಯುತ್ತಿದ್ದ ಅಂಬ್ಯುಲೆನ್ಸ್‌ಗೆ ಅಡ್ಡಲಾಗಿ ಸುಮಾರು 30 ಕಿಲೋ ಮೀಟರ್ ತನಕ ಸೈಡ್ ಕೊಡದೇ ಸತಾಯಿಸಿದ ಘಟನೆಗೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಕಾರು ಚಾಲಕನನ್ನು ಬಂಧಿಸಿದ್ದಾರೆ‌. ಬಂಧಿತನನ್ನು ಅತ್ತಾವರದ ಮೋನಿಷ್ ರೆಹಮಾನ್ ಎಂದು ಗುರುತಿಸಲಾಗಿದೆ. ಈತ ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಭಟ್ಕಳಕ್ಕೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಗೆ ಸೈಡ್ ಬಿಡದೇ ಸತಾಯಿಸಿದ್ದಲ್ಲದೇ ಪಾರ್ಕಿಂಗ್ ಲೈಟ್ ಹಾಕಿ ಮುಂದಿನಿಂದ ವೇಗವಾಗಿ ಸಂಚರಿಸುತ್ತಾ ಪದೇ

ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಗೆ ಅಡ್ಡಿಪಡಿಸಿದ ಪ್ರಕರಣ ➤ ಕಾರು ಚಾಲಕನ ಬಂಧನ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೊಂಬಾರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ ➤ ರಬ್ಬರ್ ಕಾರ್ಮಿಕರಿಂದ ಕೆ.ಎಫ್.ಡಿ.ಸಿ ಲಾರಿ ತಡೆಹಿಡಿದು ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಜ. 20. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ಅಭಿವೃದ್ದಿ ನಿಗಮದ ಮೂಜೂರು ಘಟಕದ ಕೊಂಬಾರು ಮಂಡೇಕರ ಬ್ಲಾಕ್ ನಲ್ಲಿ ಕೆ.ಎಫ್.ಡಿ.ಸಿ ರಬ್ಬರ್ ಹಾಲು ಸಾಗಾಟದ ಲಾರಿಯನ್ನು ತಡೆಹಿಡಿದು ಕಾರ್ಮಿಕರು ಪ್ರತಿಭಟನೆ ನಡೆಸಿದರು. ವೇತನ ಪರಿಷ್ಕರಣೆ, ಮೂರ್ತೆ ಮಾಡಲು ರಬ್ಬರ್ ಮರಗಳನ್ನು ಕಡಿತಗೊಳಿಸುವುದು, ಬೇಡಿಕೆ ಈಡೇರಿಕೆಗೆ ಹಾಗೂ ಮಾತುಕತೆಗೆ ದಿನಾಂಕ ನಿಗದಿ ಮಾಡುವುದು ಹಾಗೂ ಸುಮಾರು ವರ್ಷಗಳಿಂದ ದುಡಿಯುತ್ತಿರುವ ರಬ್ಬರ್ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಹಲವಾರು ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕರು ಲಾರಿಯನ್ನು ತಡೆಹಿಡಿದು

ಕೊಂಬಾರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ ➤ ರಬ್ಬರ್ ಕಾರ್ಮಿಕರಿಂದ ಕೆ.ಎಫ್.ಡಿ.ಸಿ ಲಾರಿ ತಡೆಹಿಡಿದು ಪ್ರತಿಭಟನೆ Read More »

ಕರಾವಳಿ, ಕರ್ನಾಟಕ

ಮಂಗಳೂರು: ಆಂಬ್ಯುಲೆನ್ಸ್ ಗೆ ಸೈಡ್ ಕೊಡದೇ ಹುಚ್ಚಾಟ ➤ ಸುಮಾರು 30 ಕಿ.ಮೀ. ವರೆಗೂ ಸತಾಯಿಸಿದ ಯುವಕರು…!

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 20. ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಭಟ್ಕಳಕ್ಕೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಗೆ ಕಾರು ಚಾಲಕನೋರ್ವ ಸುಮಾರು 30 ಕಿ.ಮೀ ತನಕ ದಾರಿ ಬಿಡದೇ ಸತಾಯಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮುಲ್ಕಿಯಿಂದ ಆಂಬ್ಯುಲೆನ್ಸ್ ಗೆ ಅಡ್ಡಬಂದ ಕೆಎ19 ಎಂಡಿ6843 ನೋಂದಣಿಯ ಚೆವರ್ಲೊ ಬೀಟ್ ಕಾರು ಉಡುಪಿ ನಗರದವರೆಗೂ ದಾರಿಕೊಡದೇ ಸತಾಯಿಸಿದ್ದನ್ನು ಆಂಬ್ಯುಲೆನ್ಸ್ ನಲ್ಲಿದ್ದವರು ಸೆರೆಹಿಡಿದಿದ್ದಾರೆ. ಅಲ್ಲದೇ ಪಾರ್ಕಿಂಗ್ ಲೈಟ್ ಹಾಕುತ್ತಾ ಮುಂದಿನಿಂದ ವೇಗವಾಗಿ ಸಂಚರಿಸುತ್ತಾ ಕಾರಿನಲ್ಲಿ ಅಡ್ಡಪಡಿಸುತ್ತಿದ್ದ

ಮಂಗಳೂರು: ಆಂಬ್ಯುಲೆನ್ಸ್ ಗೆ ಸೈಡ್ ಕೊಡದೇ ಹುಚ್ಚಾಟ ➤ ಸುಮಾರು 30 ಕಿ.ಮೀ. ವರೆಗೂ ಸತಾಯಿಸಿದ ಯುವಕರು…! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ (ಜ. 20) ಕೊರೋನಾ ಅಪ್ಡೇಟ್ಸ್ ➤ ಪುತ್ತೂರು, ಕಡಬ ತಾಲೂಕಿನಲ್ಲಿ 27 ಪ್ರಕರಣ ದೃಢ..!

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 20. ಕೊರೋನಾ ರೂಪಾಂತರಿ ಮೂರನೇ ಅಲೆಯು ಅಟ್ಟಹಾಸ ಮೆರೆಯುತ್ತಿದ್ದು, ಇಂದಿನ (ಜ. 20)ರ ವರದಿಯಂತೆ ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ 27 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.        

ಇಂದಿನ (ಜ. 20) ಕೊರೋನಾ ಅಪ್ಡೇಟ್ಸ್ ➤ ಪುತ್ತೂರು, ಕಡಬ ತಾಲೂಕಿನಲ್ಲಿ 27 ಪ್ರಕರಣ ದೃಢ..! Read More »

ಕರಾವಳಿ

ಮಂಗಳೂರು: ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಡಳಿತದಿಂದ ಮಾರ್ಗಸೂಚಿ ಪ್ರಕಟ ➤ ಉಲ್ಲಂಘಿಸಿದಲ್ಲಿ ಸೂಕ್ತ ಕ್ರಮ- ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 20. ಜಿಲ್ಲೆಯ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್-19ರ ಕ್ಲಸ್ಟರ್‍ಗಳು ಪತ್ತೆಯಾಗುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತವು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಮಾರ್ಗಸೂಚಿಗಳು ಇಂತಿವೆ: 1. ಮೆಡಿಕಲ್, ಪ್ಯಾರಾಮೆಡಿಕಲ್ ಇತರ ವೈದ್ಯಕೀಯ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕೋವಿಡ್ ಲಕ್ಷಣಗಳು ಇರುವ ಬಗ್ಗೆ ಪ್ರತಿ ದಿನ ಸ್ಕ್ರೀನಿಂಗ್ ಮಾಡಿಸಬೇಕು ಮತ್ತು ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಅಂತವರನ್ನು ಈಗಾಗಲೇ

ಮಂಗಳೂರು: ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಡಳಿತದಿಂದ ಮಾರ್ಗಸೂಚಿ ಪ್ರಕಟ ➤ ಉಲ್ಲಂಘಿಸಿದಲ್ಲಿ ಸೂಕ್ತ ಕ್ರಮ- ಜಿಲ್ಲಾಧಿಕಾರಿ Read More »

ಕರಾವಳಿ, ಕರ್ನಾಟಕ

ಬೆಳೆ ಕಟಾವು ಪ್ರಯೋಗಕ್ಕೆ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 20. ಕೃಷಿ ಅಂಕಿ ಅಂಶ ಸಮನ್ವಯ ಸಮಿತಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ 2021-22ರ ಹಿಂಗಾರು ಋತುವಿನ ಬೆಳೆ ಅಂದಾಜು ಸಮೀಕ್ಷೆ ಯೋಜನೆಯಡಿ ಜಿಲ್ಲೆಗೆ ನಿಗದಿಪಡಿಸಿದ 540 ಬೆಳೆ ಕಟಾವು ಪ್ರಯೋಗಗಳನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು. ಜಿಲ್ಲಾ ಸಾಂಖ್ಯಿಕ ಅಧಿಕಾರಿ ಉದಯ್ ಶೆಟ್ಟಿ ಸಭೆಯಲ್ಲಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ವರ್ಚುವಲ್ ಮಾಧ್ಯಮದ ಮೂಲಕ ಸಭೆಗೆ ಹಾಜರಾಗಿದ್ದರು.    

ಬೆಳೆ ಕಟಾವು ಪ್ರಯೋಗಕ್ಕೆ ಸೂಚನೆ Read More »

ಕರಾವಳಿ, ಕರ್ನಾಟಕ

ಜನನ-ಮರಣ ನೋಂದಣಿ ಕಡ್ಡಾಯವಾಗಿ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com. ಮಂಗಳೂರು, ಜ. 20. ಜಿಲ್ಲೆಯಲ್ಲಿ ಜನನ ಹಾಗೂ ಮರಣ ನೋಂದಣಿ ಪ್ರಕ್ರಿಯೆಯನ್ನು ಶೇ.100ರಷ್ಟು ಕಡ್ಡಾಯವಾಗಿ ದಾಖಲಿಸಲೇಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸೂಚಿಸಿದ್ದಾರೆ. ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಜನನ-ಮರಣ ನೋಂದಣಿ ಹಾಗೂ ಕೃಷಿ ಅಂಕಿ ಅಂಶಗಳ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನನ-ಮರಣದ ಯಾವುದೇ ನೋಂದಣಿ ಕೂಡ ಬಿಟ್ಟುಹೋಗಬಾರದು ಮತ್ತು ಮರಣ ನೋಂದಣಿಯಲ್ಲಿ ಮರಣ ಕಾರಣವನ್ನು ನಿಖರವಾಗಿ ದಾಖಲಿಸಬೇಕು. ನಗರ

ಜನನ-ಮರಣ ನೋಂದಣಿ ಕಡ್ಡಾಯವಾಗಿ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ Read More »

ಕರಾವಳಿ, ಕರ್ನಾಟಕ

ಉಡುಪಿ ಸ್ಕಾರ್ಫ್ ವಿವಾದ ➤ ಕಾಲೇಜ್ ಗೇಟ್ ಮುಂಬಾಗ ಬಿತ್ತಿ ಪತ್ರ ಪ್ರದರ್ಶಿಸಿ ನಿಂತ ಸಂತ್ರಸ್ತ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಉಡುಪಿ, ಜ. 20. ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಹಾಕಿದ್ದಾರೆ ಎಂಬ ಕಾರಣಕ್ಕೆ ತರಗತಿಯಿಂದ ಹೊರ ಹಾಕಲ್ಪಟ್ಟ ಘಟನೆಗೆ ಇನ್ನೂ ಅಂತ್ಯಕಂಡಿಲ್ಲ. ಇದರ ಭಾಗವಾಗಿ ಇಂದು ವಿದ್ಯಾರ್ಥಿಗಳು ನಮಗೆ ನ್ಯಾಯ ಒದಗಿಸಿ ಎಂದು ಕಾಲೇಜು ಗೇಟ್ ಮುಂಭಾಗ ಭಿತ್ತಿಪತ್ರ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದಾರೆ. ಅಧಿಕಾರಿಗಳು ಗಮನಹರಿಸದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ, ನಮಗೆ ತರಗತಿಗಳು ಸಿಗುತ್ತಿಲ್ಲ, ನಮ್ಮ ಸಂವಿಧಾನಾತ್ಮಕ ಹಕ್ಕನ್ನು ಕಸಿದಿಟ್ಟು ಮಾನಸಿಕವಾಗಿ ತೊಂದರೆ ಕೊಡುತ್ತಿದ್ದಾರೆಯೆಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.    

ಉಡುಪಿ ಸ್ಕಾರ್ಫ್ ವಿವಾದ ➤ ಕಾಲೇಜ್ ಗೇಟ್ ಮುಂಬಾಗ ಬಿತ್ತಿ ಪತ್ರ ಪ್ರದರ್ಶಿಸಿ ನಿಂತ ಸಂತ್ರಸ್ತ ವಿದ್ಯಾರ್ಥಿಗಳು Read More »

ಕರಾವಳಿ, ಕರ್ನಾಟಕ
Scroll to Top