ಕರಾವಳಿ

ಜ. 31ರಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ರದ್ದು…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 29. ರಾಜ್ಯದ ಜ. 31ರಿಂದ ನೈಟ್ ಕರ್ಫ್ಯೂ ಇರುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಇನ್ನು ಮುಂದೆ ದೇವಾಲಯ, ಮಸೀದಿ, ಚರ್ಚ್ ಗಳಲ್ಲಿ ಎಲ್ಲಾ ಧಾರ್ಮಿಕ ಸೇವೆಗಳಿಗೆ ಅವಕಾಶವಿದ್ದು, ಆದರೆ ಏಕಕಾಲಕ್ಕೆ 50 ಜನರಿಗಷ್ಟೇ ಸೇರಲು ಅವಜಾಶವಿದೆ. ಸಿನಿಮಾ ಥಿಯೇಟರ್ ಗಳಲ್ಲಿ ಶೆ. 50ರ ನಿಯಮ ಜಾರಿಗೊಳಿಸಲು ನಿರ್ಧಾರಿಸಲಾಗಿದೆ. ಧರಣಿ, ಜಾತ್ರೆ ಹಾಗೂ ಪ್ರತಿಭಟನೆಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ. ಕಛೇರಿಗಳಲ್ಲಿ ಶೆ.‌100 ಸಿಬ್ಬಂದಿಯೊಂದಿಗೆ […]

ಜ. 31ರಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ರದ್ದು…! Read More »

ಕರಾವಳಿ

ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಬಿ.ಎಸ್ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 29. ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಇಸ್ಮಾಯಿಲ್ ಬಿ.ಎಸ್ ಅವರನ್ನು ನೇಮಿಸಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಆದೇಶಿಸಿದ್ದಾರೆ. ಸಾಮಾಜಿಕ ಸೇವೆಗಳಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಕೊರೋನಾ ಸಮಯದಲ್ಲಿ ಕೋವಿಡ್ ವಾರಿಯರ್ ಆಗಿಯೂ ಸೇವೆ ಸಲ್ಲಿಸಿದ್ದರು.

ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಬಿ.ಎಸ್ ನೇಮಕ Read More »

ಕರಾವಳಿ, ಕರ್ನಾಟಕ

ಸೇತುವೆ ಮೇಲಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 29. ಕಿರುಸೇತುವೆಯಿಂದ ತೋಡಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಣೆಮಂಗಳೂರಿನಲ್ಲಿ ಶನಿವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಬಂಟ್ವಾಳ ಸಜಿಪಮುನ್ನೂರು ಗ್ರಾಮದ ಮಡಿವಾಳಪಡ್ಪು ನಿವಾಸಿ ದೇವಪ್ಪ ಮಡಿವಾಳ (60) ಎಂದು ಗುರುತಿಸಲಾಗಿದೆ. ಪ್ರಗತಿಪರ ಕೃಷಿಕರಾಗಿದ್ದ ಇವರು, ಇಂದು ಬೆಳಗ್ಗೆ ಮನೆಯಿಂದ ಹೊರಟ ಅವರು ಪಾಣೆಮಂಗಳೂರು ಕಿರುಸೇತುವೆ ಬಳಿ ನೀರಿಗೆ ಹಾರಿದ್ದಾರೆ. ಸ್ಥಳೀಯರು ಇದನ್ನು ಗಮನಿಸಿ ಮಾಹಿತಿ ನೀಡಿದ್ದು, ಬಂಟ್ವಾಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಸೇತುವೆ ಮೇಲಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕುಕ್ಕೇ ಶ್ರೀ ದೇವಳದ ಕಾಣಿಕೆ ಹುಂಡಿ ಎಣಿಕೆಯ ವೇಳೆ ಹಣ ಕಳವು ➤ ಮಹಿಳೆ ಅಂದರ್…!

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ. 29. ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿ ಎಣಿಕೆಯ ವೇಳೆ ಸಿಬ್ಬಂದಿ ಮಹಿಳೆಯೋರ್ವರು ಹಣ ಕಳ್ಳತನ ಮಾಡಿ ಸಿಕ್ಕಿಬಿದ್ದ ಘಟನೆ ಗುರುವಾರದಂದು ನಡೆದಿದೆ.   ದೇವಸ್ಥಾನದ ಹುಂಡಿ ಎಣಿಕೆ ಮಾಡುತ್ತಿದ್ದ ವೇಳೆ ಬಾಲಕಿ ಎಂಬ ಮಹಿಳೆಯೋರ್ವರು ಹಣವನ್ನು ಕದ್ದು ಬಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದ ಸೆಕ್ಯುರಿಟಿ ಗಾರ್ಡ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಕುರಿತು ಕುಕ್ಕೇ ಶ್ರೀ ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ಮಹಿಳೆಯನ್ನು ವಶಕ್ಕೆ

ಕುಕ್ಕೇ ಶ್ರೀ ದೇವಳದ ಕಾಣಿಕೆ ಹುಂಡಿ ಎಣಿಕೆಯ ವೇಳೆ ಹಣ ಕಳವು ➤ ಮಹಿಳೆ ಅಂದರ್…! Read More »

ಕರಾವಳಿ, ಕರ್ನಾಟಕ

ರೋಗಿ ನರಳಾಡುತ್ತಿದ್ದರೂ ಚಿಕಿತ್ಸೆ ನೀಡದೆ ಗೇಮ್ ನಲ್ಲಿ ಮಗ್ನರಾದ ವೆನ್ಲಾಕ್ ಆಸ್ಪತ್ರೆ ಸಿಬ್ಬಂದಿಗಳು- ವಿಡಿಯೋ ವೈರಲ್…! ➤ ಕುಟುಂಬಿಕರಿಂದ ವ್ಯಾಪಕ ಆಕ್ರೋಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 29. ವೆನ್ಲಾಕ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ರೋಗಿಗಳಿಗೆ ಚಿಕಿತ್ಸೆ ನೀಡುವುದರ ಬದಲು ತಮ್ಮ ಕಂಪ್ಯೂಟರ್ ನಲ್ಲಿ ಆಟವಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜ. 22ರಂದು ವಿಜಯ್ ಎಂಬವರು ಅಧಿಕ ರಕ್ತದೊತ್ತಡದಿಂದ ಬಿದ್ದು ತಲೆಗೆ ಪೆಟ್ಟಾಗಿದ್ದು, ತಕ್ಷಣವೇ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿನ ಸಿಬ್ಬಂದಿಗಳು ರೋಗಿಗೆ ಚಿಕಿತ್ಸೆ ನೀಡುವ ಬದಲು ತಮ್ಮ ಕಂಪ್ಯೂಟರ್ ನಲ್ಲಿ ಗೇಮ್ ಆಡುತ್ತಿದ್ದರು ಎನ್ನಲಾಗಿದೆ. ರೋಗಿಯ ಜೊತೆಗಿದ್ದ ಆಪ್ತರು ವೈದ್ಯರು

ರೋಗಿ ನರಳಾಡುತ್ತಿದ್ದರೂ ಚಿಕಿತ್ಸೆ ನೀಡದೆ ಗೇಮ್ ನಲ್ಲಿ ಮಗ್ನರಾದ ವೆನ್ಲಾಕ್ ಆಸ್ಪತ್ರೆ ಸಿಬ್ಬಂದಿಗಳು- ವಿಡಿಯೋ ವೈರಲ್…! ➤ ಕುಟುಂಬಿಕರಿಂದ ವ್ಯಾಪಕ ಆಕ್ರೋಶ Read More »

ಕರಾವಳಿ, ಕರ್ನಾಟಕ

ಕಾರಿಂಜೇಶ್ವರ ಕ್ಷೇತ್ರದ ಸಮೀಪ ಗಣಿಗಾರಿಕೆ ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಿ ➤ ಸಚಿವ ಹಾಲಪ್ಪ ಆಚಾರ್ ಗೆ ಪೇಜಾವರ ಶ್ರೀ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 29. ರಾಜ್ಯ ಗಣಿ ಹಾಗೂ ಭೂವಿಜ್ಞಾನ ಮತ್ತು ಮಕ್ಕಳ ಮಹಿಳಾ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯ ಮಂತ್ರಿ ಹಾಲಪ್ಪ ಆಚಾರ್ ಅವರು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶಿರ್ವಾದ ಪಡೆದರು. ಈ ಸಂದರ್ಭದಲ್ಲಿ ಪ್ರಾಚೀನ ತೀರ್ಥಕ್ಷೇತ್ರ ನರಹರಿ ಪರ್ವತದ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಆಸುಪಾಸಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ದೇವಸ್ಥಾನದ ಪವಿತ್ರತೆಗೆ ಧಕ್ಕೆಯಾಗುತ್ತಿರುವ ಹಿನ್ನೆಲೆ ಅಲ್ಲಿ ಗಣಿಗಾರಿಕೆ ನಿಲ್ಲಿಸುವಂತೆ ಸಚಿವರಿಗೆ ಲಿಖಿತ ಮನವಿ ಸಲ್ಲಿಸಿದರು.

ಕಾರಿಂಜೇಶ್ವರ ಕ್ಷೇತ್ರದ ಸಮೀಪ ಗಣಿಗಾರಿಕೆ ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಿ ➤ ಸಚಿವ ಹಾಲಪ್ಪ ಆಚಾರ್ ಗೆ ಪೇಜಾವರ ಶ್ರೀ ಮನವಿ Read More »

ಕರಾವಳಿ, ಕರ್ನಾಟಕ

ಸಮಾಜ ಸೇವೆಯನ್ನು ಗುರುತಿಸಿ ಡಾಕ್ಟರೇಟ್ ಪದವಿಗೆ ಆಯ್ಕೆಯಾದ ಸುಳ್ಯದ ಬಶೀರ್ ಆರ್.ಬಿ..!

(ನ್ಯೂಸ್ ಕಡಬ) newskadaba.com ಸುಳ್ಯ, ಜ. 29. ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾಗಿ ಹಲವಾರು ಸಮಾಜ ಸೇವೆಯಲ್ಲಿ ಸಕ್ರಿಯರಾಗಿ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿರುವ ಬಶೀರ್ ಆರ್ ಬಿ ಪೈಚಾರ್ ಇವರು ಡಾಕ್ಟರೇಟ್ ಪದವಿಗೆ ಆಯ್ಕೆಯಾಗಿದ್ದಾರೆ. ಬಶೀರ್ ಆರ್.ಬಿ ಪೈಚಾರು ಇವರು ಇಂದು (ಜ. 29) ಬೆಂಗಳೂರಿನ ಹೊಸೂರಿನಲ್ಲಿ ನಡೆಯಲಿರುವ ಏಷ್ಯಾ ವೇದಿಕ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿಯ ಕಾರ್ಯಕ್ರಮವೊಂದರಲ್ಲಿ ಇವರ ಸಮಾಜ ಸೇವೆಯನ್ನು ಪರಿಗಣಿಸಿ ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ.

ಸಮಾಜ ಸೇವೆಯನ್ನು ಗುರುತಿಸಿ ಡಾಕ್ಟರೇಟ್ ಪದವಿಗೆ ಆಯ್ಕೆಯಾದ ಸುಳ್ಯದ ಬಶೀರ್ ಆರ್.ಬಿ..! Read More »

ಕರಾವಳಿ, ಕರ್ನಾಟಕ

ಸುಳ್ಯ: ನೂತನ ಸಚಿವರಿಂದ ನಾಳೆ (ಜ. 30) ಲೋಕಾರ್ಪಣೆಗೆ ಸಿದ್ದವಾದ ಅಕ್ಸಿಜನ್ ಘಟಕ..!

(ನ್ಯೂಸ್ ಕಡಬ) newskadaba.com ಸುಳ್ಯ, ಜ. 29. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ನಿರ್ಮಾಣಗೊಂಡಿದ್ದು, ಲೋಕಾರ್ಪಣೆಗೆ ಸಿದ್ದವಾಗಿದೆ. ಕೊರೋನಾ ಹಾವಳಿ ಮಿತಿಮೀರಿದ್ದ ಕಳೆದ ಎರಡು ವರ್ಷಗಳಲ್ಲಿ ಆಮ್ಲಜನಕ ಕೊರತೆಯಿಂದ ದೇಶಾದ್ಯಂತ ಹಲವಾರು ಮಂದಿ ಮೃತರಾಗಿದ್ದು, ಹೀಗಾಗಿ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕ ಸ್ಥಾಪಿಸಲು ಸರಕಾರ ಒತ್ತು ನೀಡಿದ್ದರಿಂದ ಕುದುರೆಮುಖ ಕಬ್ಬಿಣದ ಅದಿರು ಉತ್ಪಾದಕ ಕಂಪನಿಯ ಸಾಮಾಜಿಕ ಕ್ಷೇಮ ನಿಧಿಯಿಂದ 40 ಲಕ್ಷ ರೂ. ವೆಚ್ಚದಲ್ಲಿ ಆಮ್ಲಜನಕ ಘಟಕ ತೆರೆಯಲಾಗಿದೆ. ಇದರ ಉದ್ಘಾಟನೆಯನ್ನು ಜ. 30ರಂದು

ಸುಳ್ಯ: ನೂತನ ಸಚಿವರಿಂದ ನಾಳೆ (ಜ. 30) ಲೋಕಾರ್ಪಣೆಗೆ ಸಿದ್ದವಾದ ಅಕ್ಸಿಜನ್ ಘಟಕ..! Read More »

ಕರಾವಳಿ, ಕರ್ನಾಟಕ

ಕಡಬ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಗೆ ಅವಮಾನ ➤ ನ್ಯಾಯಧೀಶರ ವಿರುದ್ದ ಸ್ವಯಂ ದೂರು ದಾಖಲಿಸುವಂತೆ ಭೀಮ್ ಆರ್ಮಿ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಜ. 29. ರಾಯಚೂರಿನಲ್ಲಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ್ ಗೌಡ ತಮ್ಮ ವೃತ್ತಿಜೀವನಕ್ಕೆ ಅವಮಾನ ಮಾಡಿದ್ದಲ್ಲದೇ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೂ ಅವಮಾನ ಮಾಡಿರುವುದನ್ನು ಖಂಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಡಬ ಘಟಕದ ಭೀಮ್ ಆರ್ಮಿ ಸಂಘಟನೆಯು ತಹಶೀಲ್ದಾರ್ ಮೂಲಕ ಮುಖ್ಯ ನ್ಯಾಯಾಧೀಶರು ಉಚ್ಚ ನ್ಯಾಯಾಲಯ ಬೆಂಗಳೂರು ಮತ್ತು ದ.ಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ. ನ್ಯಾಯಾಧೀಶರಿಗೆ ತಕ್ಕ ಶಿಕ್ಷೆಯನ್ನು ವಿಧಿಸಿ, ನ್ಯಾಯಾಂಗದ ಗೌರವವನ್ನು ಎತ್ತಿಹಿಡಿದು ಇವರ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಒತ್ತಾಯಿಸಿದ್ದಾರೆ. ಅಲ್ಲದೇ

ಕಡಬ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಗೆ ಅವಮಾನ ➤ ನ್ಯಾಯಧೀಶರ ವಿರುದ್ದ ಸ್ವಯಂ ದೂರು ದಾಖಲಿಸುವಂತೆ ಭೀಮ್ ಆರ್ಮಿ ಆಗ್ರಹ Read More »

ಕರಾವಳಿ, ಕರ್ನಾಟಕ

ದನದ ಕಾಲನ್ನು ಕತ್ತರಿಸಿ ರಾಕ್ಷಸೀಕೃತ್ಯ ಮರೆದ ದುಷ್ಕರ್ಮಿಗಳು..! ➤ ಸೂಕ್ತ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 29. ಸಾಕು ಹಸುವೊಂದರ ಕಾಲನ್ನು ಕಡಿದು ದುಷ್ಕರ್ಮಿಗಳು ವಿಕೃತಿ ಮೆರೆದ ಘಟನೆ ಅಡ್ಯನಡ್ಕದಲ್ಲಿ ನಡೆದಿದೆ. ಅಡ್ಯನಡ್ಕ ಸಮೀಪದ ಕೆದುಮೂಲೆ ನಿವಾಸಿಯೋರ್ವರು ಸಾಕುತ್ತಿದ್ದ ದನದ ಕಾಲನ್ನು ಯಾರೋ ದುಷ್ಕರ್ಮಿಗಳು ಕ್ರೂರವಾಗಿ ಕತ್ತರಿಸುವ ಮೂಲಕ ರಾಕ್ಷಸೀ ಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ.  

ದನದ ಕಾಲನ್ನು ಕತ್ತರಿಸಿ ರಾಕ್ಷಸೀಕೃತ್ಯ ಮರೆದ ದುಷ್ಕರ್ಮಿಗಳು..! ➤ ಸೂಕ್ತ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top