ಕರಾವಳಿ

ಬಾಲಕಿಯೊಂದಿಗೆ ಅಸಭ್ಯ ವರ್ತನೆ ➤ ಆರೋಪಿ ಅಂದರ್..!

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ. 10. ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದೆನ್ನಲಾದ ಯುವಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಂಧಿತ ಯುವಕನನ್ನು ನೌಫಲ್ ಸರಳಿಕಟ್ಟೆ ಎಂದು ಗುರುತಿಸಲಾಗಿದೆ. ಈತ ಬಸ್ ನಿಲ್ದಾಣದಲ್ಲಿ ಮನೆಗೆಲಸ ಮಾಡುತ್ತಿದ್ದ ಗದಗ ಮೂಲದ ಮಹಿಳೆಯ ಜೊತೆಗಿದ್ದ ಬಾಲಕಿಗೆ ಆಮಿಷವೊಡ್ಡಿ ಬಸ್ ನಿಲ್ದಾಣದ ವಾಶ್ ರೂಂ ಗೆ ಕರೆದೊಯ್ದಿದ್ದಾನೆ ಎನ್ನಲಾಗಿದೆ. ಈ ಕುರಿತು ಮಹಿಳೆಯು ಆರೋಪಿಯನ್ನು ವಿಚಾರಿಸಿದಾಗ ಆರೋಪಿಯು ಮಹಿಳೆಗೆ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಿಲಾಗಿದೆ. ಇದೇವೇಳೆ […]

ಬಾಲಕಿಯೊಂದಿಗೆ ಅಸಭ್ಯ ವರ್ತನೆ ➤ ಆರೋಪಿ ಅಂದರ್..! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮರ್ಧಾಳ: ಮೂರು ತಿಂಗಳ ಹಿಂದೆ ಮನೆ ಕಳ್ಳತನ ಪ್ರಕರಣ ➤ ಓರ್ವ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಮೂರು ತಿಂಗಳ ಹಿಂದೆ ಠಾಣಾ ವ್ಯಾಪ್ತಿಯ ಬಂಟ್ರ ಗ್ರಾಮದ ಪಾಲೆತ್ತಡ್ಕ ಎಂಬಲ್ಲಿ ಮನೆಗೆ ನುಗ್ಗಿ ನಗದು ಕಳವುಗೈದಿರುವ ಆರೋಪಿಯನ್ನು ಕಡಬ ಪೋಲೀಸರು ಸೋಮವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮರ್ದಾಳ ನಿವಾಸಿ ಹಕೀಂ (23) ಎಂದು ಗುರುತಿಸಲಾಗಿದೆ. ಹಕೀಂಗೆ ಕಳ್ಳತನಕ್ಕೆ ಸಹಕರಿಸಿದ ಇನ್ನೋರ್ವ ಆರೋಪಿ ಹಮೀದ್(25) ನನ್ನು ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನ ಪೋಲೀಸರು ಬಂಧಿಸಿದ್ದು, ಅವರನ್ನು ಕಡಬ ಪೋಲಿಸರು ಇನ್ನಷ್ಟೇ ವಶಕ್ಕೆ ಪಡೆಯಬೇಕಿದೆ. ಫೆಬ್ರವರಿ 22 ರಂದು ರಾತ್ರಿ ಪಾಲೆತ್ತಡ್ಕ ನಿವಾಸಿ

ಮರ್ಧಾಳ: ಮೂರು ತಿಂಗಳ ಹಿಂದೆ ಮನೆ ಕಳ್ಳತನ ಪ್ರಕರಣ ➤ ಓರ್ವ ಆರೋಪಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.07. ನವವಿವಾಹಿತೆಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಜೆ ಸುಳ್ಯದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸುಳ್ಯದ ಗಾಂಧಿನಗರ ನಿವಾಸಿ ಆಮಿನಾ ಎಂಬವರ ಪುತ್ರಿ ಆಯಿಷಾ ಎಂದು ಗುರುತಿಸಲಾಗಿದೆ. ಗಾಂಧಿನಗರದ ಕೆರೆಮೂಲೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಆಯಿಷಾ ಮನೆಯ ಫ್ಯಾನ್ ಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರು ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಆಯಿಷಾರವರಿಗೆ ಎಂಟು ತಿಂಗಳ ಹಿಂದೆಯಷ್ಟೇ ಕಾಸರಗೋಡು ಮೂಲದ

ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ರಾಜ್ಯದ ಪ್ರಪ್ರಥಮ ತೇಲುವ ಸೇತುವೆ ಉಡುಪಿಯಲ್ಲಿ ಆರಂಭ ➤ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಸಮುದ್ರ ಮಧ್ಯದ ಸೇತುವೆ

(ನ್ಯೂಸ್ ಕಡಬ) newskadaba.com ಉಡುಪಿ, ಮೇ.06. ರಾಜ್ಯದ ಮೊದಲ ತೇಲುವ ಸೇತುವೆಯು ಶುಕ್ರವಾರದಂದು ಉಡುಪಿಯ ಮಲ್ಪೆ ಬೀಚ್‌ನಲ್ಲಿ ಲೋಕಾರ್ಪಣೆಗೊಂಡಿತು. ಉಡುಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ಸೇತುವೆ ಆಕರ್ಷಣೆಯಾಗಲಿದ್ದು, ಸ್ಥಳೀಯ ಮೂವರು ಉದ್ಯಮಿಗಳು ಸೇರಿ 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಸೇತುವೆಯು 100 ಮೀಟರ್ ಉದ್ದ ಹಾಗೂ 3.5 ಮೀಟರ್ ಅಗಲವಿದೆ. ಪ್ರವಾಸಿಗರು ತಲಾ 100 ರೂ. ಪಾವತಿಸಿ 15 ನಿಮಿಷಗಳ ಕಾಲ ಸೇತುವೆಯ ಮೇಲೆ ನಡೆಯಬಹುದಾಗಿದೆ. ಲೈಫ್ ಜಾಕೆಟ್ ಕಡ್ಡಾಯಗೊಳಿಸಲಾಗಿದ್ದು, ಪ್ರವಾಸಿಗರ ಸುರಕ್ಷತೆಗಾಗಿ ಸೇತುವೆಯ

ರಾಜ್ಯದ ಪ್ರಪ್ರಥಮ ತೇಲುವ ಸೇತುವೆ ಉಡುಪಿಯಲ್ಲಿ ಆರಂಭ ➤ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಸಮುದ್ರ ಮಧ್ಯದ ಸೇತುವೆ Read More »

ಕರಾವಳಿ

ಕಾರು ಚಲಾಯಿಸುತ್ತಿದ್ದ ವೇಳೆ ರಕ್ತದೊತ್ತಡ ಹೆಚ್ಚಾಗಿ ಮರಕ್ಕೆ ಢಿಕ್ಕಿ ➤ ಕಡಬ ಕಾಲೇಜಿನ ಉಪನ್ಯಾಸಕರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಮೇ.07. ಕಾರನ್ನು ಚಲಾಯಿಸುತ್ತಿದ್ದ ವೇಳೆ ರಕ್ತದೊತ್ತಡ ಹೆಚ್ಚಾದ ಪರಿಣಾಮ ನಿಯಂತ್ರಣ ಕಳೆದ ಕಾರು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಘಟನೆ ಕಡಬ – ಪಂಜ ರಸ್ತೆಯ ಮೆಸ್ಕಾಂ ಸಮೀಪ ಶುಕ್ರವಾರ ಸಂಜೆ ನಡೆದಿದೆ. ಕಡಬ ಸ.ಪ.ಪೂ.ಕಾಲೇಜಿನ ಉಪನ್ಯಾಸಕ ವಾಸುದೇವ ಕೋಲ್ಪೆಯವರು ತನ್ನ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮೆಸ್ಕಾಂ ಸಮೀಪ ರಕ್ತದೊತ್ತಡ ಹೆಚ್ಚಾದ ಪರಿಣಾಮ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಉಪನ್ಯಾಸಕ ವಾಸುದೇವರವರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.

ಕಾರು ಚಲಾಯಿಸುತ್ತಿದ್ದ ವೇಳೆ ರಕ್ತದೊತ್ತಡ ಹೆಚ್ಚಾಗಿ ಮರಕ್ಕೆ ಢಿಕ್ಕಿ ➤ ಕಡಬ ಕಾಲೇಜಿನ ಉಪನ್ಯಾಸಕರಿಗೆ ಗಾಯ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಾಣಿ: ನಿಯಂತ್ರಣ ತಪ್ಪಿ ಅಂಗಡಿಗಳಿಗೆ ನುಗ್ಗಿದ ಟೋಯಿಂಗ್ ಲಾರಿ ➤ ಚಾಲಕ ಗಂಭೀರ, ತಪ್ಪಿದ ದುರಂತ

(ನ್ಯೂಸ್ ಕಡಬ) newskadaba.com ವಿಟ್ಲ, ಮೇ.06. ಟೋಯಿಂಗ್ ಲಾರಿಯೊಂದು ಬಸ್ ತಂಗುದಾಣ, ಅಂಗಡಿಗಳಿಗೆ ಡಿಕ್ಕಿ ಹೊಡೆದು ಬಳಿಕ ಹೋಟೆಲ್ ಗೆ ನುಗ್ಗಿದ ಪರಿಣಾಮ ಚಾಲಕ ಗಂಭೀರ ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ. ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಕೊಡಾಜೆ ಜಂಕ್ಷನ್ ನಲ್ಲಿ ನಂದಿನಿ ಹಾಲಿನ ಅಂಗಡಿ, ಬೇಕರಿ, ಬಸ್ ತಂಗುದಾಣ, ಮೊಬೈಲ್ ಅಂಗಡಿಗೆ ಢಿಕ್ಕಿ ಹೊಡೆದು ಆ ಬಳಿಕ ಹೋಟೆಲ್ ಗೆ ನುಗ್ಗಿದೆ. ಘಟನೆಯಲ್ಲಿ

ಮಾಣಿ: ನಿಯಂತ್ರಣ ತಪ್ಪಿ ಅಂಗಡಿಗಳಿಗೆ ನುಗ್ಗಿದ ಟೋಯಿಂಗ್ ಲಾರಿ ➤ ಚಾಲಕ ಗಂಭೀರ, ತಪ್ಪಿದ ದುರಂತ Read More »

ಕರಾವಳಿ, ಕ್ರೈಮ್ ನ್ಯೂಸ್

ಅಕ್ರಮ ಕಸಾಯಿಖಾನೆಗೆ ಕಡಬ ಪೊಲೀಸರಿಂದ ದಾಳಿ ➤ ತಲೆ‌ಕಡಿದ ದನ, ಜಾನುವಾರುಗಳು ವಶಕ್ಕೆ, ಆರೋಪಿಗಳು ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ಮೇ.01. ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿರುವ ಕಡಬ ಪೊಲೀಸರು ತಲೆ ಕಡಿದ ದನ ಹಾಗೂ ಮಾಂಸಕ್ಕಾಗಿ ತಂದಿದ್ದ ಜಾನುವಾರುಗಳನ್ನು ವಶಪಡಿಸಿಕೊಂಡ ಘಟನೆ ಭಾನುವಾರದಂದು ಕಡಬದಲ್ಲಿ ನಡೆದಿದೆ. ಕಡಬ ಕಳಾರ ಸಮೀಪದ ತಿಮರಡ್ಡ ಎಂಬಲ್ಲಿ ಜಾನುವಾರುಗಳನ್ನು ಮಾಂಸ ಮಾಡಲಾಗುತ್ತಿದೆ ಎಂಬ ದೂರಿ‌ನ ಮೇರೆಗೆ ದಾಳಿ ನಡೆಸಿರುವ ಕಡಬ ಎಸ್ಐ ಆಂಜನೇಯ ರೆಡ್ಡಿ, ಎಎಸ್ಐ ಸುರೇಶ್ ಹಾಗೂ ಸಿಬ್ಬಂದಿಗಳು ಕೊಲ್ಲಲ್ಪಟ್ಟ ಒಂದು ದನ ಹಾಗೂ ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಫಾರೂಕ್ ಹಾಗೂ ಇನ್ನಿತರರು ಸ್ಥಳದಿಂದ

ಅಕ್ರಮ ಕಸಾಯಿಖಾನೆಗೆ ಕಡಬ ಪೊಲೀಸರಿಂದ ದಾಳಿ ➤ ತಲೆ‌ಕಡಿದ ದನ, ಜಾನುವಾರುಗಳು ವಶಕ್ಕೆ, ಆರೋಪಿಗಳು ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ವ್ಯಕ್ತಿ ನಾಪತ್ತೆ ➤ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಣೆ

(ನ್ಯೂಸ್ ಕಡಬ) newskadaba.com ಕಡಬ, ಎ.28. ಠಾಣಾ ವ್ಯಾಪ್ತಿಯ ಬಿಳಿನೆಲೆ ಗ್ರಾಮದ ವ್ಯಕ್ತಿಯೋರ್ವರು ಎಪ್ರಿಲ್ 21 ರಿಂದ ನಾಪತ್ತೆಯಾಗಿದ್ದು, ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸಲಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಬಿಳಿನೆಲೆ ಗ್ರಾಮದ ಮೆದಪೆರ್ಲ ನಿವಾಸಿ ಕುಮಾರ್ ಎಂಬವರ ಪುತ್ರ ಜಯನ್ ಎಂದು ಗುರುತಿಸಲಾಗಿದೆ. ಸದ್ರಿ ವ್ಯಕ್ತಿಯು ಎಪ್ರಿಲ್ 21 ರಿಂದ ಕಾಣೆಯಾಗಿದ್ದು, ಎಲ್ಲಾದರೂ ಕಂಡುಬಂದಲ್ಲಿ 9480805364, 8431723529, 9632656419 ಸಂಖ್ಯೆಗಳಿಗೆ ಕರೆಮಾಡಿ ತಿಳಿಸುವಂತೆ ಮತ್ತು ಈ ವ್ಯಕ್ತಿಯನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಠಾಣೆಯ ಪ್ರಕಟಣೆ ತಿಳಿಸಿದೆ.

ಕಡಬ: ವ್ಯಕ್ತಿ ನಾಪತ್ತೆ ➤ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಣೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಅಂಗಡಿಯ ಶಟರ್ ಮುರಿದು ಒಳ ನುಗ್ಗಿದ ಕಳ್ಳರು ➤ ನಾಲ್ಕು ಲಕ್ಷ ನಗದು ಕಳ್ಳತನ

(ನ್ಯೂಸ್ ಕಡಬ) newskadaba.com ಕಡಬ, ಎ.28. ಅಂಗಡಿಯೊಂದರ ಶಟರ್ ಮುರಿದು ಒಳನುಗ್ಗಿರುವ ಕಳ್ಳರು ನಾಲ್ಕೂವರೆ ಲಕ್ಷ ನಗದನ್ನು ದೋಚಿರುವ ಘಟನೆ ಕಡಬ ಸಮೀಪದ ಕಳಾರದಿಂದ ವರದಿಯಾಗಿದೆ. ಕಳಾರ ನಿವಾಸಿ ಇಸ್ಮಾಯಿಲ್ ಎಂಬವರಿಗೆ ಸೇರಿದ ಅಂಗಡಿಯ ಶಟರ್ ಮುರಿದು ಒಳನುಗ್ಗಿರುವ ಕಳ್ಳರು ಅಂಗಡಿಯಲ್ಲಿಟ್ಟಿದ್ದ ನಾಲ್ಕೂವರೆ ಲಕ್ಷ ನಗದನ್ನು ಎಗರಿಸಿರುವುದಾಗಿ ಇಸ್ಮಾಯಿಲ್ ಅವರು ಕಡಬ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಕಡಬ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಡಬ: ಅಂಗಡಿಯ ಶಟರ್ ಮುರಿದು ಒಳ ನುಗ್ಗಿದ ಕಳ್ಳರು ➤ ನಾಲ್ಕು ಲಕ್ಷ ನಗದು ಕಳ್ಳತನ Read More »

ಕರಾವಳಿ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ದಕ್ಷಿಣ ಕನ್ನಡಕ್ಕೆ ಆಗಮನ ➤ ಕರಾವಳಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.27. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು (ಎ.27) ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೂಡುಬಿದಿರೆ ತಾಲೂಕು ಆಡಳಿತ ಸೌಧ ಉದ್ಘಾಟನೆ, ಮೂಡುಬಿದಿರೆ ತಾಲೂಕು ಪತ್ರಕರ್ತರ ಸಂಘದ ನೂತನ ಪತ್ರಕರ್ತರ ಭವನ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಸಿಎಂ ಬೊಮ್ಮಾಯಿ ಮೂಡುಬಿದಿರೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ – ಮಂಗಳೂರು ಉತ್ತರ ಉಪವಿಭಾಗದ ನಿರ್ದೇಶನದಂತೆ ಮೂಡುಬಿದಿರೆಯಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರದಲ್ಲಿ ಬದಲಾವಣೆ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ದಕ್ಷಿಣ ಕನ್ನಡಕ್ಕೆ ಆಗಮನ ➤ ಕರಾವಳಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ Read More »

ಕರಾವಳಿ, ಕರ್ನಾಟಕ
Scroll to Top