ಕರಾವಳಿ

ಸುಳ್ಯ: ಅಪರಿಚಿತ ತಂಡದಿಂದ ಗುಂಡಿನ ದಾಳಿ ➤ ಅಪಾಯದಿಂದ ಪಾರಾದ ವ್ಯಕ್ತಿ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ.06. ಸ್ಕಾರ್ಪಿಯೋ ಕಾರಿನಲ್ಲಿ ಬಂದ ನಾಲ್ಕು ಜನ ಅಪರಿಚಿತರ ತಂಡವು ಯುವಕನೋರ್ವನ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಭಾನುವಾರ ತಡರಾತ್ರಿ ಸುಳ್ಯದಲ್ಲಿ ನಡೆದಿದೆ. ಗುಂಡಿನ ದಾಳಿಯಿಂದ ಯುವಕ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಕಾರಿಗೆ ಹಾನಿ ಸಂಭವಿಸಿದೆ. ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸುಳ್ಯ ನಗರದ ಜ್ಯೋತಿ ಸರ್ಕಲ್‌ ಹತ್ತಿರ ಘಟನೆ ನಡೆದಿದ್ದು ಸುಳ್ಯ ಜಯನಗರದ ಮಹಮ್ಮದ್‌ ಸಾಯಿ(39) ಎಂಬವರ ಮೇಲೆ ಸ್ಕಾರ್ಪಿಯೋದಲ್ಲಿ ಬಂದ ಅಪರಿಚಿತರು ದಾಳಿ ಮಾಡಿದ್ದಾರೆ. ಮಹಮ್ಮದ್ ಸಾಯಿ ತನ್ನ ಮನೆಗೆ […]

ಸುಳ್ಯ: ಅಪರಿಚಿತ ತಂಡದಿಂದ ಗುಂಡಿನ ದಾಳಿ ➤ ಅಪಾಯದಿಂದ ಪಾರಾದ ವ್ಯಕ್ತಿ ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ಗಾಂಜಾ ಸಾಗಾಟ ➤ ಆರೋಪಿಗಳಿಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ. 05. ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿ ಗಾಂಜಾ ಮತ್ತು ವಾಹನಗಳನ್ನು ವಶಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ತೌಸೀಫ್ ಹಾಗೂ ರಫೀಕ್ ಎಂದು ಗುರುತಿಸಲಾಗಿದೆ. ಮಾನ್ಯ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೆಜ್ ಮಂಗಳೂರು ಇವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆ ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಕುರಿತು ಖಚಿತ ಮಾಹಿತಿಯ

ಬೆಳ್ತಂಗಡಿ: ಗಾಂಜಾ ಸಾಗಾಟ ➤ ಆರೋಪಿಗಳಿಬ್ಬರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಚರಣ್ ರಾಜ್ ಹತ್ಯೆ ಪ್ರಕರಣ ➤ ಆರೋಪಿಯ ಗುರುತು ಪತ್ತೆ..?!

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ. 05. ಕಳೆದೆರಡು ವರ್ಷಗಳ ಹಿಂದೆ ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಪ್ರಮುಖ ಆರೋಪಿ ಚರಣ್ ರಾಜ್ ಅವರ ಹತ್ಯೆಗೈದಿರುವುದು ಕಾರ್ತಿಕ್ ಮೇರ್ಲ ಸ್ನೇಹಿತ ಕಿಶೋರ್ ಪೂಜಾರಿ ಹಾಗೂ ತಂಡದ ಕೃತ್ಯ ಎಂದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚರಣ್ ರಾಜ್ ಅವರು ತನ್ನ ಮಾವ ಕಿಟ್ಟಣ್ಣ ರೈ ಅವರ ಮೆಡಿಕಲ್ ಶಾಪ್ ನ ಶುಭಾರಂಭದ ಹಿನ್ನೆಲೆ ಪೆರ್ಲಂಪಾಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳ ತಂಡ ತಲವಾರಿನಿಂದ ದಾಳಿ ನಡೆಸಿ

ಚರಣ್ ರಾಜ್ ಹತ್ಯೆ ಪ್ರಕರಣ ➤ ಆರೋಪಿಯ ಗುರುತು ಪತ್ತೆ..?! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಯುವಜನರ ಮಾರ್ಗದರ್ಶನಕ್ಕೆ ಯುವ ನೀತಿ-2021 ಅಗತ್ಯ ➤ ಜಿಲ್ಲಾಧಿಕಾರಿ ಡಾ. ರಾಜೇಂದ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 04. ಯುವಜನತೆ ದೇಶದ ಆಸ್ತಿ, ಆ ಶಕ್ತಿಗೆ ಸೂಕ್ತ ಸಮಯದಲ್ಲಿ ಅಗತ್ಯ ಮಾರ್ಗದರ್ಶನ ದೊರೆಯಬೇಕು, ಅದಕ್ಕಾಗಿ ಕರ್ನಾಟಕ ಯುವ ನೀತಿ-2021ರ ಜಾರಿ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಅಭಿಪ್ರಾಯಪಟ್ಟರು. ಅವರು ಜೂ.4ರ ಶನಿವಾರ ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (ಮೈಸೂರು) ಮತ್ತು ಯುನಿಸೆಫ್ ಹೈದ್ರಾಬಾದ್ ಮತ್ತು ಯುನಿಸೆಫ್ ಮಕ್ಕಳ

ಯುವಜನರ ಮಾರ್ಗದರ್ಶನಕ್ಕೆ ಯುವ ನೀತಿ-2021 ಅಗತ್ಯ ➤ ಜಿಲ್ಲಾಧಿಕಾರಿ ಡಾ. ರಾಜೇಂದ್ರ Read More »

ಕರಾವಳಿ, ಕರ್ನಾಟಕ

ಪುತ್ತೂರು: ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ಮರ್ಡರ್..!!!

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 04. ಕಳೆದ ಎರಡು ವರ್ಷಗಳ ಹಿಂದೆ ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಪ್ರಮುಖ ಆರೋಪಿ ಆರೋಪಿ ಆರ್ಯಾಪು ನಿವಾಸಿ ಚರಣ್ ರಾಜ್ ನನ್ನು ಪೆರ್ಲಂಪಾಡಿ ಸಮೀಪ ಹತ್ಯೆ ಮಾಡಲಾದ ಘಟನೆ ವರದಿಯಾಗಿದೆ. 2018ರ ಸೆ. 03ರಂದು ರಾತ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂದರ್ಭ ಹಿಂಜಾವೇ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮೇರ್ಲ ಅವರನ್ನು ಹತ್ಯೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿ ಚರಣ್ ರಾಜ್, ಕಿರಣ್ ರೈ ಹಾಗೂ ಪ್ರೀತೇಶ್

ಪುತ್ತೂರು: ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ಮರ್ಡರ್..!!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿ ಮರಕ್ಕೆ ಢಿಕ್ಕಿ ➤ ತಂದೆ, ಮಗಳ ದುರಂತ ಅಂತ್ಯ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 04. ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿಯಾಗಿ ಅಪ್ಪ ಮಗಳು ದಾರುಣವಾಗಿ ಮೃತಪಟ್ಟ ಘಟನೆ ಗಂಜಿಮಠ ಸಮೀಪದ ಸೂರಲ್ಪಾಡಿ ಎಂಬಲ್ಲಿ ಸಂಭವಿಸಿದೆ. ಮೃತ ದುರ್ದೈವಿಗಳನ್ನು ಶಿವಮೊಗ್ಗ ಜಿಲ್ಲೆಯ ರಾಣೆಬೆನ್ನೂರಿನ ಪುಂಡಲೀಕಪ್ಪ ಹಾಗೂ ಪುತ್ರಿ ಅಶ್ವಿನಿ ಎಂದು ಗುರುತಿಸಲಾಗಿದೆ. ಪುಂಡಲೀಕಪ್ಪ ಅವರಿಗೆ ತೀರಾ ಅನಾರೋಗ್ಯ ಇದ್ದುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಾರಿನಲ್ಲಿ ಮಂಗಳೂರಿಗೆ ಕುಟುಂಬ ಸಮೇತರಾಗಿ ಬರುತ್ತಿದ್ದ ವೇಳೆ ಜೂ. 3ರ ನಸುಕಿನ ಜಾವ ರಾ.ಹೆ

ಮಂಗಳೂರು: ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿ ಮರಕ್ಕೆ ಢಿಕ್ಕಿ ➤ ತಂದೆ, ಮಗಳ ದುರಂತ ಅಂತ್ಯ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ನಕಲಿ ನೋಟು ಪತ್ತೆ..!

(ನ್ಯೂಸ್ ಕಡಬ) newskadaba.com ಕಡಬ,ಜೂ. 04. ತಾಲೂಕಿನ ಕೋಡಿಂಬಾಳ ಗ್ರಾಮದ ಆಟೋ ಚಾಲಕ ರಾಜೇಶ್ ಎಂಬವರಿಗೆ ವ್ಯಕ್ತಿಯೋರ್ವರು ಬಾಡಿಗೆ ರೂಪದಲ್ಲಿ ನಕಲಿ ನೋಟನ್ನು ನೀಡಿರುವ ಘಟನೆ ಶುಕ್ರವಾರದಂದು ವರದಿಯಾಗಿದೆ. ರಾಜೇಶ್ ಅವರು ಇಂದು ಬೆಳಗ್ಗೆ ಹಣ ಲೆಕ್ಕ ಮಾಡುತ್ತಿದ್ದ ಸಂದರ್ಭ ನೂರು ರೂಪಾಯಿ ನೋಟಿನಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಜೊತೆಗೆ ನೋಟು ಮುದ್ರಿತವಾಗಿರುವ ಕಾಗದದ ಬಗ್ಗೆ ಕೂಡಾ ಪರಿಶೀಲನೆ ನಡೆಸಿದಾಗ ಅದು ಜೆರಾಕ್ಸ್ ನೋಟು ಎಂದು ತಿಳಿದುಬಂದಿದೆ. ತಕ್ಷಣವೇ ಬಾಡಿಗೆ ನೀಡಿದ ವ್ಯಕ್ತಿಯ ಜೊತೆ ವಿಚಾರಿಸಿದಾಗ ತನಗೆ ಕೋಡಿಂಬಾಳದ

ಕಡಬ: ನಕಲಿ ನೋಟು ಪತ್ತೆ..! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತೆಂಗಿನ ಸಿಪ್ಪೆಯಲ್ಲಿದ್ದ ಹಾವು ಕಚ್ಚಿ ಮಹಿಳೆ ಮೃತ್ಯು..!!

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 04. ಹಾವು ಕಚ್ಚಿದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುಕ್ಕಾಜೆ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕುಕ್ಕಾಜೆ ನಿವಾಸಿ ಕೆ.ಗಿರಿಯಪ್ಪ ಪೂಜಾರಿ ಎಂಬವರ ಪತ್ನಿ ವಾರಿಜ ಎಂದು ಗುರುತಿಸಲಾಗಿದೆ. ಇವರು ತನ್ನ ಮನೆಯ ಹಿಂಬದಿಯಲ್ಲಿದ್ದ ಶೆಡ್ ನಲ್ಲಿ ತೆಂಗಿನ ಸಿಪ್ಪೆ ತುಂಬಿಸಿಟ್ಟಿದ್ದ ಗೋಣಿಚೀಲಕ್ಕೆ ಕೈಹಾಕಿದ್ದರು. ಈ ಸಂದರ್ಭ ವಾರಿಜರವರು ಎಡಕೈಯ ಹೆಬ್ಬೆರಳಿನ ಹತ್ತಿರ ಯಾವುದೋ ಹಾವು ಕಚ್ಚಿದೆ ಎಂದು ಜೋರಾಗಿ ಕಿರುಚಾಡಿದ್ದು ತಕ್ಷಣ ಅವರ

ತೆಂಗಿನ ಸಿಪ್ಪೆಯಲ್ಲಿದ್ದ ಹಾವು ಕಚ್ಚಿ ಮಹಿಳೆ ಮೃತ್ಯು..!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ಳಾರೆ: ರೆಡ್ ಮಿ ಮೊಬೈಲ್ ಸ್ಫೋಟ ➤ ಅದೃಷ್ಟವಶಾತ್ ಪಾರಾದ ಯುವತಿ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ. 03. ಇಲ್ಲಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳ ಮೊಬೈಲ್ ಸ್ಫೋಟಗೊಂಡು ಯುವತಿ ಅದೃಷ್ಟವಶಾತ್ ಪಾರಾದ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ. ಇಲ್ಲಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯು ಎರಡು ವರ್ಷದ ಹಿಂದೆ ಆನ್ ಲೈನ್ ನಲ್ಲಿ ರೆಡ್ ಮಿ ನೋಟ್ 8 ಮೊಬೈಲ್ ಖರೀದಿಸಿದ್ದರು. ಎರಡು ದಿನಗಳ ಹಿಂದೆ ಮೊಬೈಲ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅದನ್ನು ಮೊಬೈಲ್ ಶಾಪ್ ಒಂದರಲ್ಲಿ ರಿಪೇರಿ ಮಾಡಿಸಿಕೊಂಡಿದ್ದರು. ಗುರುವಾರದಂದು ಮಧ್ಯಾಹ್ನ ಯುವತಿಯು ಹೋಟೆಲ್ ಗೆ ಊಟಕ್ಕೆಂದು

ಬೆಳ್ಳಾರೆ: ರೆಡ್ ಮಿ ಮೊಬೈಲ್ ಸ್ಫೋಟ ➤ ಅದೃಷ್ಟವಶಾತ್ ಪಾರಾದ ಯುವತಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಹಿಂದೂ ವ್ಯಕ್ತಿಯ ಮನೆಯಲ್ಲಿ ಮುಸ್ಲಿಂ ಮಹಿಳೆ..!!

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 03. ಕೊಡಿಪ್ಪಾಡಿ ಸಮೀಪವಿರುವ ಹಿಂದೂ ವ್ಯಕ್ತಿಗೆ ಸೇರಿದ ಮನೆಯೊಂದರಲ್ಲಿ ಮುಸ್ಲಿಂ ಮಹಿಳೆಯಿರುವ ಮಾಹಿತಿ ಹರಿದಾಡುತ್ತಿದ್ದಂತೆ ಘಟನಾ ಸ್ಥಳದಲ್ಲಿ ಎರಡೂ ಕೋಮಿನವರು ಜಮಾಯಿಸಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಆದರೆ ಪೊಲೀಸ್ ಇಲಾಖೆ ಅಂತಹ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆಟೋ ಚಾಲಕರೋರ್ವರು ಮನೆಯ ಎದುರಿನಿಂದ ಬೀಗ ಹಾಕಿ ಹಿಂಬಾಗಿಲ ಮೂಲಕ ಮನೆಯಲ್ಲಿ ಮುಸ್ಲಿಂ ಮಹಿಳೆಯನ್ನು ಇರಿಸಿಕೊಂಡಿದ್ದಾರೆಂದು ಸುದ್ದಿ ಹರಿದಾಡುತ್ತು. ಮನೆಯ ಮುಂದೆ ನೂರಾರು ಜನ ಜಮಾಯಿಸಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕಾಗಮಿಸಿ

ಪುತ್ತೂರು: ಹಿಂದೂ ವ್ಯಕ್ತಿಯ ಮನೆಯಲ್ಲಿ ಮುಸ್ಲಿಂ ಮಹಿಳೆ..!! Read More »

ಕರಾವಳಿ, ಕರ್ನಾಟಕ
Scroll to Top