ಕರಾವಳಿ

ದ.ಕ ಮತ್ತು ಉಡುಪಿ ಜಿಲ್ಲೆಯ ವಿವಿಧ ವೈದ್ಯಾಧಿಕಾರಿಗಳ ವರ್ಗಾವಣೆ ➤ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ.ಅಶೋಕ್ ರೈ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 23. ದ.ಕ ಮತ್ತು ಉಡುಪಿ ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ವೈದ್ಯಾಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಬೆಳ್ತಂಗಡಿ ತಾಲೂಕಿನ ಆಳದಂಗಡಿ ಪ್ರಾ.ಆ.ಕೇಂದ್ರದ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಯಾಗಿದ್ದ ಡಾ. ಚೈತ್ರ ಎ.ಸಿ. ಅವರನ್ನು ಮಂಗಳೂರು ತಾಲೂಕಿನ ಕೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ. ಬೈಂದೂರು ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಶಸ್ತ್ರಚಿಕಿತ್ಸಾ ತಜ್ಞ ಡಾ. ಮಹೇಂದ್ರ ಕುಮಾರ್ ಶೆಟ್ಟಿ […]

ದ.ಕ ಮತ್ತು ಉಡುಪಿ ಜಿಲ್ಲೆಯ ವಿವಿಧ ವೈದ್ಯಾಧಿಕಾರಿಗಳ ವರ್ಗಾವಣೆ ➤ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ.ಅಶೋಕ್ ರೈ ನೇಮಕ Read More »

ಕರಾವಳಿ, ಕರ್ನಾಟಕ

ಕಡಬ: ಖಾಸಗಿ ಶಾಲಾ ವಿದ್ಯಾರ್ಥಿಗಳಲ್ಲಿ ಸಾಂಕ್ರಾಮಿಕ ರೋಗ ಪತ್ತೆ ಹಿನ್ನೆಲೆ ➤ ಒಂದು ವಾರ ಶಾಲೆ ರಜೆ

(ನ್ಯೂಸ್ ಕಡಬ) newskadaba.com ಕಡಬ, ಜೂ. 22. ಇಲ್ಲಿನ ಖಾಸಗಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಚಿಕನ್ ಪಾಕ್ಸ್ ರೋಗ ಹರಡಿರುವುದರಿಂದ ಜಿಲ್ಲಾ ಮಟ್ಟದ ಆರೋಗ್ಯಾಧಿಕಾರಿಗಳು ಭೇಟಿ ನೀಡಿದ್ದು, ಈಗಾಗಲೇ ಶಾಲೆಗೆ ಒಂದು ವಾರಗಳ ಕಾಲ ರಜೆ ನೀಡಲಾಗಿದೆ. ಇತ್ತೀಚೆಗೆ ಕೆಲ ದಿನಗಳ ಹಿಂದೆ ಕೆಲವು ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿದ್ದ ಈ ರೋಗವು ಇದೀಗ 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹರಡಿದೆ ಎಂದು ತಿಳಿದು ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್.ಬಿ, ಕಡಬ ಖಾಸಗಿ ವಿದ್ಯಾಸಂಸ್ಥೆಯ ಸುಮಾರು 40 ರಷ್ಟು

ಕಡಬ: ಖಾಸಗಿ ಶಾಲಾ ವಿದ್ಯಾರ್ಥಿಗಳಲ್ಲಿ ಸಾಂಕ್ರಾಮಿಕ ರೋಗ ಪತ್ತೆ ಹಿನ್ನೆಲೆ ➤ ಒಂದು ವಾರ ಶಾಲೆ ರಜೆ Read More »

ಕರಾವಳಿ, ಕರ್ನಾಟಕ

ನವಜಾತ ಶಿಶುವಿನ ಮೃತದೇಹ ತೋಡಿನಲ್ಲಿ ಪತ್ತೆ..!!

(ನ್ಯೂಸ್ ಕಡಬ) newskadaba.com ಕಾರ್ಕಳ, ಜೂ. 22. ಕಾರ್ಕಳ ಕಸಬಾ ಗ್ರಾಮದ ಪೆರ್ವಾಜೆ ಎಂಬಲ್ಲಿ ಮನೆಯೊಂದರ ಎದುರು ಇರುವ ತೋಡಿನಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಘಟನೆ ವರದಿಯಾಗಿದೆ.   ಸ್ಥಳೀಯ ನಿವಾಸಿ ಅಬ್ದುಲ್ ಖಾದರ್ ಎಂಬವರು ಎಂದಿನಂತೆ ನಿನ್ನೆ ಸಂಜೆ ಮನೆಯಿಂದ ಕಾರ್ಕಳ ಪೇಟೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಮನೆಯ ಎದುರುಗಡೆ ಇರುವ ತೋಡಿನಲ್ಲಿ ನವಜಾತ ಶಿಶುವಿನ ಮೃತದೇಹವೊಂದು ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವಜಾತ ಶಿಶುವಿನ ಮೃತದೇಹ ತೋಡಿನಲ್ಲಿ ಪತ್ತೆ..!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಆತ್ಮಹತ್ಯೆಗೈಯ್ಯಲು ಮಂಗಳೂರಿನಿಂದ ಉಡುಪಿಗೆ ತೆರಳಿದ ವ್ಯಕ್ತಿ..!? ➤ ಸಮಾಸೇವಕರಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಉಡುಪಿ, ಜೂ. 22. ಉಡುಪಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಮಂಗಳೂರು ಮೂಲದ ವ್ಯಕ್ತಿಯೊರ್ವರು ಸಾರ್ವಜನಿಕರ ಸಮಯಪ್ರಜ್ಞೆಯಿಂದ ಬದುಕುಳಿದಿರುವ ಘಟನೆ ಬುಧವಾರದಂದು ನಡೆದಿದೆ. ಹೋಟೆಲಿನಲ್ಲಿ ಬಾಣಸಿಗರಾಗಿ ಕೆಲಸದಲ್ಲಿದ್ದ ಮಂಗಳೂರಿನ ವ್ಯಕ್ತಿ, ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಉಡುಪಿಯ ಖಾಸಗಿ ವಸತಿಗೃಹಗಳಲ್ಲಿ ಸ್ಥಳ ಹುಡುಕುತ್ತಿದ್ದರು ಎನ್ನಲಾಗಿದೆ. ಈ ಕುರಿತು ವಿಷಯ ತಿಳಿದ ಉಡುಪಿಯ ಸಮಾಜಸೇವಕರು ವ್ಯಕ್ತಿಯನ್ನು ರಕ್ಷಿಸಿ, ಮನವೊಲಿಸಿ ಸಂಬಂಧಿಕರಿಗೆ ಹಸ್ತಾಂತರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೈಯ್ಯಲು ಮಂಗಳೂರಿನಿಂದ ಉಡುಪಿಗೆ ತೆರಳಿದ ವ್ಯಕ್ತಿ..!? ➤ ಸಮಾಸೇವಕರಿಂದ ರಕ್ಷಣೆ Read More »

ಕರಾವಳಿ, ಕರ್ನಾಟಕ

ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಉರುಳಿದ ಬಸ್ ➤ ಪ್ರಯಾಣಿಕರಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 21. ಕೇರಳ ರಸ್ತೆ ಸಾರಿಗೆಯ ಮಲಬಾರ್ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ಉರುಳಿದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನ ಮಾವಿನಕಟ್ಟೆ ಎಂಬಲ್ಲಿ ಮಂಗಳವಾರದಂದು ಮಧ್ಯಾಹ್ನ ಸಂಭವಿಸಿದೆ. ಕಾಸರಗೋಡಿನಿಂದ ಸುಳ್ಯಕ್ಕೆ ಬರುತ್ತಿದ್ದ ಬಸ್ಸು ಮಾವಿನಕಟ್ಟೆ ಬಳಿ ತಲುಪುದಿದ್ದಂತೆಯೇ ಮತ್ತೊಂದು ವಾಹನಕ್ಕೆ ಸೈಡ್ ಕೊಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ಉರುಳಿದೆ. ಪರಿಣಾಮ ಚಾಲಕ ಸೇರಿದಂತೆ ಕೆಲವು ಪ್ರಯಾಣಿಕರಿಗೆ ಗಾಯವಾಗಿದ್ದು, ಅವರನ್ನು ಸುಳ್ಯ ಸರಕಾರಿ

ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಉರುಳಿದ ಬಸ್ ➤ ಪ್ರಯಾಣಿಕರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕರುವಿನ ವಿಚಾರವಾಗಿ ಮಾತಿನ ಚಕಮಕಿ- ಹಲ್ಲೆ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 21. ಕರು ಮಾರಾಟದ ವಿಚಾರದಲ್ಲಿ ಹಲ್ಲೆ ನಡೆದು ಮೂವರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ನಡೆದಿದೆ.   ರಿಝ್ವಾನ್ ಎಂಬವರು ಆರ್ಯಾಪು ಗ್ರಾಮದ ಅಜಿತ್ ಎಂಬವರಿಗೆ ಕರುವೊಂದನ್ನು ನೀಡಿದ್ದು, ಆದರೆ ಮೂರು ತಿಂಗಳ ಕರುವಿನ ಬದಲು ಒಂದು ತಿಂಗಳ ಕರು ನೀಡಿ, ಹೆಚ್ಚಿಗೆ ಹಣವನ್ನು ಪಡೆದು ವಂಚಿಸಲಾಗಿದೆ ಎಂದು ಹೇಳಿ ಕರುವನ್ನು ವಾಪಸ್ ಕೊಂಡುಹೋಗುವಂತೆ ಅಜಿತ್ ಅವರು ರಿಜ್ವಾನ್ ಅವರಿಗೆ ತಿಳಿಸಿದ್ದರು. ಈ ವಿಚಾರವಾಗಿ ಸೋಮವಾರದಂದು ಕಲ್ಲರ್ಪೆಯಲ್ಲಿ

ಕರುವಿನ ವಿಚಾರವಾಗಿ ಮಾತಿನ ಚಕಮಕಿ- ಹಲ್ಲೆ ➤ ಮೂವರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ರೈಲ್ವೇ ನೌಕರರಿಗೆ ನಕಲಿ ಸರ್ಟಿಫಿಕೇಟ್ ನೀಡಿದ್ದ ಆರೋಪಿಯ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ..!!

(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ. 21. ರೈಲ್ವೇ ನೌಕರರಿಗೆ ನಕಲಿ ವೈದ್ಯಕೀಯ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದ ಪ್ರಕರಣದಲ್ಲಿ ಸಿಬಿಐ ನಿಂದ ಬಂಧಿತನಾಗಿರುವ ರೈಲ್ವೇ ಇಲಾಖೆಯ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್‌ ವಿಜಯನ್‌ ವಿ.ಎ ಅವರ ಮೃತದೇಹವು ತೊಕ್ಕೊಟ್ಟು ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ. ಮಂಗಳೂರಿನಲ್ಲಿ ರೈಲ್ವೇ ಸಿಬ್ಬಂದಿಗಳಿಗೆ ನಕಲಿ ಫಿಟ್ನೆಸ್ ಸರ್ಟಿಫಿಕೇಟ್ ನೀಡುತ್ತಿದ್ದ ಜಾಲವೊಂದನ್ನು ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಪತ್ತೆಮಾಡಿತ್ತು. ಈ ಪ್ರಕರಣದಲ್ಲಿ ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಹಾಗೂ ಆತ್ಮಹತ್ಯೆ ನಡೆಸಿದ ಫಾರ್ಮಸಿಸ್ಟ್‌ ವಿಜಯನ್‌ ಸೇರಿದಂತೆ ಇನ್ನೋರ್ವನನ್ನು

ಮಂಗಳೂರು: ರೈಲ್ವೇ ನೌಕರರಿಗೆ ನಕಲಿ ಸರ್ಟಿಫಿಕೇಟ್ ನೀಡಿದ್ದ ಆರೋಪಿಯ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ..!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಳುಹಿಯ್ಯತ್ ನೀಡಲು ಉತ್ಸಾಹ ತೋರಿರಿ- ಅದು ನಿಮಗೆ ಸಿರಾತ್ ಸೇತುವೆಯಲ್ಲಿ ವಾಹನವಾಗಿ ನೆರವಾಗುತ್ತದೆ ➤ ಅಬ್ದುಲ್ ರಝಾಕ್ ಮದನಿ ಮಂಜನಾಡಿ

(ನ್ಯೂಸ್ ಕಡಬ) newskadaba.com ಮಾಣಿ, ಜೂ. 21. ಹಜ್ಜ್ ಕರ್ಮ ನಿರ್ವಹಿಸಲು ಬೇಕಾಗುವ ಸಂಪತ್ತು ತನ್ನ ಬಳಿ ಇದ್ದು ಹಜ್ ನಿರ್ವಹಿಸದೇ ಮರಣ ಹೊಂದುವವನು ದೌರ್ಭಾಗ್ಯವಂತನಾಗಿರುವನು. ಇದು ಚಿಂತಿಸಬೇಕಾದ ವಿಷಯವಾಗಿದೆ. ಅದೇ ರೀತಿ ಉಳುಹಿಯ್ಯತ್ ನೀಡಲು ಉತ್ಸಾಹ ತೋರಿರಿ ಅದು ನಿಮ್ಮ ಜೀವನದಲ್ಲಿ ಬರ್ಕತ್ ನೀಡುವುದರೊಂದಿಗೆ ನಾಳೆ ಪರಲೋಕದಲ್ಲಿ ಸಿರಾತ್ ಸೇತುವೆ ದಾಟಲು ವಾಹನವಾಗಿ ನೆರವಾಗುತ್ತದೆ ಎಂಬ ಹದೀಸನ್ನು ಮರೆಯದಿರಿ ಎಂದು ಅಬ್ದುಲ್ ರಝಾಕ್ ಮದನಿ ಅಲ್ ಕಾಮಿಲ್ ಸಖಾಫಿ ಮಂಜನಾಡಿ ಹೇಳಿದರು. ಅವರು ಸುನ್ನೀ ಯುವಜನ

ಉಳುಹಿಯ್ಯತ್ ನೀಡಲು ಉತ್ಸಾಹ ತೋರಿರಿ- ಅದು ನಿಮಗೆ ಸಿರಾತ್ ಸೇತುವೆಯಲ್ಲಿ ವಾಹನವಾಗಿ ನೆರವಾಗುತ್ತದೆ ➤ ಅಬ್ದುಲ್ ರಝಾಕ್ ಮದನಿ ಮಂಜನಾಡಿ Read More »

ಕರಾವಳಿ, ಕರ್ನಾಟಕ

ಪತಿಯನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಪತ್ನಿ ಪರಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 21. ಪತಿಯನ್ನು ಬಸ್‌ ನಿಲ್ದಾಣದಲ್ಲಿ ಬಿಟ್ಟು ಪತ್ನಿ ಪರಾರಿಯಾದ ಕುರಿರು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಲ್ಪಾ ಎಂಬಾಕೆ ತನ್ನ ಪತಿಯೊಂದಿಗೆ ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದಿಂದ ಪಿಲಿಕುಳ ನಿಸರ್ಗಧಾಮಕ್ಕೆ ಹೋಗುವುದಕ್ಕಾಗಿ ಮಂಗಳೂರಿನ ಸರ್ವೀಸ್‌ ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಆದರೆ ಬಸ್‌ ಹತ್ತುವ ಮೊದಲು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಶಿಲ್ಪಾ ಹಿಂದಿರುಗಿ ಬರದೇ ಇದ್ದುದನ್ನು ಗಮನಿಸಿದ ಪತಿ ಕೂಡಲೇ ಶಿಲ್ಪಾ ಮೊಬೈಲ್‌ಗೆ ಕರೆ ಮಾಡಿದ್ದು

ಪತಿಯನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಪತ್ನಿ ಪರಾರಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಜೀಪು ಪಲ್ಟಿ- ಯುವತಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 20. ಚಲಿಸುತ್ತಿದ್ದ ಜೀಪೊಂದು ಸ್ಕಿಡ್ ಆದ ಪರಿಣಾಮ ಯುವತಿ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಮುಂಡ್ಕೂರು ಸಂಕಲಕರಿಯಲ್ಲಿ ನಡೆದಿದೆ. ಬೆಳ್ಮಣ್- ಸಂಕಲಕರಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ರಸ್ತೆಯಲ್ಲಿ ಭಾಸ್ಕರ ಎಂಬವರು ತನ್ನ ಜೀಪು ಚಲಾಯಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ತಿರುವಿನಲ್ಲಿ ಜೀಪ್ ಪಲ್ಟಿ ಆಗಿದೆ. ಈ ಸಂದರ್ಭ ಜೀಪ್ ನಲ್ಲಿ ಚಾಲಕ ಸಹಿತ ಐದು ಜನರಿದ್ದು ಯುವತಿಯೋರ್ವಳು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ

ಜೀಪು ಪಲ್ಟಿ- ಯುವತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top