ಕರಾವಳಿ

ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಮಗುಚಿಬಿದ್ದ ಲಾರಿ ➤ ಸವಾರ ದುರ್ಮರಣ

(ನ್ಯೂಸ್ ಕಡಬ) newskadaba.com ಪಡುಬಿದ್ರಿ, ಜು. 05. ಲಾರಿಯೊಂದು ದ್ವಿಚಕ್ರ ವಾಹನದ ಮೇಲೆ ಮಗುಚಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪಡುಬಿದ್ರೆ ಜಂಕ್ಷನ್‌ ನಲ್ಲಿ ಇಂದು ನಡೆದಿದೆ. ಮೃತ ದ್ವಿಚಕ್ರ ವಾಹನ ಸವಾರನನ್ನು ಸಂಶುದ್ದೀನ್‌ ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನದ ಮೇಲೆ ಮಗುಚಿಬಿದ್ದಿದ್ದು, ಪರಿಣಾಮ ಸವಾರ ಸಂಶುದ್ದೀನ್‌ ಅವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಮಗುಚಿಬಿದ್ದ ಲಾರಿ ➤ ಸವಾರ ದುರ್ಮರಣ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ವಿಟ್ಲ: ಗುಡ್ಡ ಕುಸಿತ ➤ ಕರ್ನಾಟಕ- ಕೇರಳ ಸಂಚಾರ ಬಂದ್…!!

(ನ್ಯೂಸ್ ಕಡಬ) newskadaba.com ವಿಟ್ಲ, ಜು. 05. ಜಿಲ್ಲೆಯಾದ್ಯಂತ ವಿಪರೀತ ಮಳೆ ಸುರಿಯುತ್ತಿದ್ದು, ಕಲ್ಲಡ್ಕ, ಕಾಂಞಂಗಾಡ್ ಅಂತರಾಜ್ಯ ಹೆದ್ದಾರಿಯ ಸಾರಡ್ಕ ಬಳಿ ಗುಡ್ಡ ಕುಸಿದುಬಿದ್ದಿದ್ದು, ಕರ್ನಾಟಕ ಕೇರಳ ಸಂಚಾರ ಬಂದ್ ಆಗಿದೆ. ಗುಡ್ಡ ಕುಸಿದಿದ್ದರಿಂದ ಪೆರ್ಲ, ಬದಿಯಡ್ಕ, ಕಾಸರಗೋಡು ಸಂಚಾರಕ್ಕೆ ಅಡ್ಡಿಯಾಗಿದೆ. ಅಲ್ಲದೇ ರಸ್ತೆ ಮಧ್ಯದಲ್ಲಿ ದೊಡ್ಡ ರಂಧ್ರ ನಿರ್ಮಾಣವಾಗಿದ್ದು, ರಸ್ತೆಯ ನೀರು ಅದರೊಳಗೆ ಇಳಿಯುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ವಿಟ್ಲ: ಗುಡ್ಡ ಕುಸಿತ ➤ ಕರ್ನಾಟಕ- ಕೇರಳ ಸಂಚಾರ ಬಂದ್…!! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಂಪಾಜೆ ಭೂಕಂಪನ ಪ್ರದೇಶಕ್ಕೆ ಕೇಂದ್ರ ತಂಡದಿಂದ ಭೇಟಿ- ಪರಿಶೀಲನೆ

(ನ್ಯೂಸ್ ಕಡಬ) newskadaba.com ಸಂಪಾಜೆ, ಜು. 05. ಕೇಂದ್ರ ಸರಕಾರದ ಭೂಕಂಪನ ಇಲಾಖೆಯ ಮುಖ್ಯಸ್ಥರಾದ ಅಝಾದ್ ಅಹಮದ್ ಭಟ್, ಸೆಂಥಿಲ್, ಮಂಗಳೂರು ವಿಭಾಗದ ಭೂಗರ್ಭ ಇಲಾಖೆಯ ಮಹದೇವ್, ತಹಶೀಲ್ದಾರ್ ಅನಿತಾಲಕ್ಷ್ಮಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಮ್. ಶಹೀದ್ ತೆಕ್ಕಿಲ್, ಪಂಚಾಯತ್ ಸದಸ್ಯ ಎಸ್. ಕೆ. ಹನೀಫ್ ಸಂಪಾಜೆ, ಕಂದಾಯ ನಿರೀಕ್ಷಕರಾದ ಕೊರಗಪ್ಪ ಹೆಗ್ಡೆ, ಗ್ರಾಮ ಕರಣಿಕರಾದ ರಫೀಕ್ ಮುಲ್ಲಾ, ಕಾಂಗ್ರೆಸ್

ಸಂಪಾಜೆ ಭೂಕಂಪನ ಪ್ರದೇಶಕ್ಕೆ ಕೇಂದ್ರ ತಂಡದಿಂದ ಭೇಟಿ- ಪರಿಶೀಲನೆ Read More »

ಕರಾವಳಿ, ಕರ್ನಾಟಕ

ಬೆಳ್ತಂಗಡಿ: ಗಂಡನನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿದ ಪತ್ನಿ..!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು. 05. ಪತ್ನಿಯೋರ್ವಳು ಮಲಗಿದ್ದ ಗಂಡನನ್ನು ಕತ್ತಿಯಿಂದ ಕಡಿದು ಕೊಂದ ಘಟನೆ ನಾವೂರು ಗ್ರಾಮದ ಅಬ್ಬನಕೆರೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಕೊಲೆಯಾದವರನ್ನು ಪೊಟ್ಟಸ್ ಬೇಬಿ (55) ಎಂದು ಗುರುತಿಸಲಾಗಿದೆ. ಈತನ ಪತ್ನಿ ನಲ್ಲಮ್ಮ(50) ಎಂಬಾಕೆ ಕೊಲೆ ಮಾಡಿದ್ದಾರೆ‌. ದಂಪತಿಗೆ ಒಬ್ಬ ಪುತ್ರಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದು ಓರ್ವ ಮಗ ಉಪ್ಪಿನಂಗಡಿಯಲ್ಲಿ ಸ್ವಂತ ಉದ್ಯೋಗ ಮಾಡುತ್ತಿದ್ದು, ಇನ್ನೋರ್ವ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಮಗಳನ್ನು ಮದುವೆ ಮಾಡಿಕೊಡಲಾಗಿದೆ. ಈ ಕುರಿತು ಹೆಚ್ಚಿನ‌ ಮಾಹಿತಿ

ಬೆಳ್ತಂಗಡಿ: ಗಂಡನನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿದ ಪತ್ನಿ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಿಸಿರೋಡು: ಕ್ಷುಲ್ಲಕ ವಿಚಾರಕ್ಕೆ ಚೂರಿ ಇರಿದು ಯುವಕನ ಕೊಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 05. ಕ್ಷುಲ್ಲಕ ವಿಚಾರಕ್ಕೆ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದು   ಕೊಲೆಗೀಡಾದವರನ್ನು ಬಿಸಿರೋಡ್ ಶಾಂತಿ ಅಂಗಡಿ ನಿವಾಸಿ ಆಸಿಫ್ ಎಂದು ಗುರುತಿಸಲಾಗಿದೆ. ಬಿಸಿರೋಡಿನ‌ ಬಸ್ ಡಿಪೋ ಬಳಿ ಬೈಕ್ ಹಾರ್ನ್ ವಿಷಯವಾಗಿ ಇತ್ತಂಡಗಳ ನಡುವೆ ವಾಗ್ವಾದ ನಡೆದು, ಬಳಿಕ‌ ಜಗಳ ತಾರಕಕ್ಕೇರಿ, ಆಸಿಫ್ ಎಂಬಾತನನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ. ತಕ್ಷಣವೇ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಕುರಿತು ಬಿಸಿ ರೋಡ್ ಪೊಲೀಸ್

ಬಿಸಿರೋಡು: ಕ್ಷುಲ್ಲಕ ವಿಚಾರಕ್ಕೆ ಚೂರಿ ಇರಿದು ಯುವಕನ ಕೊಲೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನಿಯಂತ್ರಣ ತಪ್ಪಿ ಮನೆಯ ಮೇಲೆ ಉರುಳಿದ ಕಂಟೇನರ್ ಲಾರಿ..!!!!

(ನ್ಯೂಸ್ ಕಡಬ) newskadaba.com ಉಡುಪಿ, ಜು. 04. ರದ್ದಿ ಪೇಪರ್ ತುಂಬಿಕೊಂಡು ಹೊರಟಿದ್ದ ಕಂಟೇನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಘಟನೆ ಮಣಿಪಾಲ್ ಕೆಳಪರ್ಕಳದಲ್ಲಿ ನಡೆದಿದೆ. ಪರ್ಕಳದಿಂದ ಗೋವಾ ಕಡೆಗೆ ತೆರಳುತ್ತಿದ್ದ ಕಂಟೇನರ್ ಲಾರಿಯು ಇಳಿಜಾರು ಪ್ರದೇಶದಲ್ಲಿರುವ ಕಾಂಕ್ರೀಟ್ ರಸ್ತೆ ಮಗಿದು ಡಾಮರು ರಸ್ತೆಗೆ ತಿರುಗುವಾಗ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಮನೆಯ ಮೇಲೆ ಮಗುಚಿ ಬಿದ್ದಿದೆ. ಮನೆಯಲ್ಲಿ ಯಾರೂ ವಾಸವಿಲ್ಲದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ನಿಯಂತ್ರಣ ತಪ್ಪಿ ಮನೆಯ ಮೇಲೆ ಉರುಳಿದ ಕಂಟೇನರ್ ಲಾರಿ..!!!! Read More »

ಕರಾವಳಿ, ಕರ್ನಾಟಕ

ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು. 04. ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಘಟ್ಟ ಪ್ರದೇಶದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ದ.ಕ ಜಿಲ್ಲೆಯ ಕುಕ್ಕೇ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆಯಾಗಿದೆ. ಶಿರಾಡಿ ಘಾಟ್ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಕುಮಾರಧಾರ, ನೇತ್ರಾವತಿ, ಪಯಸ್ವಿನಿ, ಗುಂಡ್ಯ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ Read More »

ಕರಾವಳಿ, ಕರ್ನಾಟಕ

ಗೂನಡ್ಕ: ಪ್ರಾಕೃತಿಕ ವಿಕೋಪದ ಹಿನ್ನೆಲೆ ➤ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ನುರಿತ ಕಾರ್ಮಿಕರನ್ನೊಳಗೊಂಡ ಕಾಂಗ್ರೆಸ್ ಕಾರ್ಯಕರ್ತರಿಂದ ತುರ್ತು ಸಭೆ

(ನ್ಯೂಸ್ ಕಡಬ) newskadaba.com ಗೂನಡ್ಕ, ಜು. 04. ಭೂಕಂಪನ ಹಾಗೂ ಭಾರೀ ಮಳೆಯ ಹಿನ್ನೆಲೆ ಗೂನಡ್ಕ ಭಾಗದ ಜನರಿಗೆ ಸಮಸ್ಯೆಯಾದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪಂದಿಸುವ ಸಲುವಾಗಿ ಸಂಪಾಜೆಯ ದರ್ಖಾಸ್ತು ವಾರ್ಡ್ ನ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕರವರ ನೇತೃತ್ವದಲ್ಲಿ ನುರಿತ ಕಾರ್ಮಿಕರನ್ನೊಳಗೊಂಡ ಕಾರ್ಯಕರ್ತರ ತುರ್ತು ಸಭೆಯು ಗೂನಡ್ಕದ ಅವರ ಕಚೇರಿಯಲ್ಲಿ ಜರುಗಿತು. ಸಭೆಯಲ್ಲಿ ಪ್ರಮುಖರಾದ ಜಿ.ಜಿ.ನವೀನ್ ಕುಮಾರ್, ರವಿಚಂದ್ರ ಮುನ್ನ, ಸಫ್ವಾನ್ ಪೆಲ್ತಡ್ಕ, ಪ್ರವೀಣ್ ಕುಮಾರ್, ಸಲೀಂ, ಹೇಮನಾಥ್, ಶಿಹಾಬುದ್ದೀನ್, ಜಯಚಂದ್ರ, ಅವಿನಾಶ್, ಹರ್ಷಿತ್

ಗೂನಡ್ಕ: ಪ್ರಾಕೃತಿಕ ವಿಕೋಪದ ಹಿನ್ನೆಲೆ ➤ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ನುರಿತ ಕಾರ್ಮಿಕರನ್ನೊಳಗೊಂಡ ಕಾಂಗ್ರೆಸ್ ಕಾರ್ಯಕರ್ತರಿಂದ ತುರ್ತು ಸಭೆ Read More »

ಕರಾವಳಿ, ಕರ್ನಾಟಕ

ಕಡಬ: ಬೈಕ್ – ಕಾರು ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಕಡಬ, ಜು. 04. ಬೈಕ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಗಾಯಗೊಂಡ ಘಟನೆ ಕಡಬದಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಉಪ್ಪಿನಂಗಡಿ ಕಡೆಯಿಂದ ಕಡಬಕ್ಕೆ ಬರುತ್ತಿದ್ದ ಆಲ್ಟೋ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದ  ಬೈಕ್ ಹೊಡೆದಿದೆ. ಪರಿಣಾಮ ಬೈಕ್ ಸವಾರ ದೇರಾಜೆ ನಿವಾಸಿಗೆ ಗಾಯವಾಗಿದ್ದು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಕಡಬ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಡಬ: ಬೈಕ್ – ಕಾರು ನಡುವೆ ಢಿಕ್ಕಿ Read More »

ಕರಾವಳಿ, ಕರ್ನಾಟಕ

ಮಾಣಿ: ಮುಂದುವರಿದ ಸರಣಿ ಕಳ್ಳತನ ➤ ವರ್ತಕರ ಆಕ್ರೋಶ

(ನ್ಯೂಸ್ ಕಡಬ) newskadaba.com ಮಾಣಿ, ಜು. 04. ಇಲ್ಲಿನ ಪೇಟೆಯ ತರಕಾರಿ ಅಂಗಡಿ ಹಾಗೂ ಬೇಕರಿ ಅಂಗಡಿಗಳಿಗೆ ಶನಿವಾರದಂದು ರಾತ್ರಿ ನುಗ್ಗಿದ ಕಳ್ಳರು ಚಿಲ್ಲರೆ ಹಣವನ್ನು ಕದ್ದೊಯ್ದಿದ್ದು, ಮರುದಿನ ಮತ್ತೆ ರಾತ್ರಿ ಮಾಣಿ ಪೆಟ್ರೋಲ್ ಬಂಕ್ ಹತ್ತಿರ ಇರುವ ಟಯರ್ ಅಂಗಡಿ ಹಾಗೂ ಹಳೀರದಲ್ಲಿರುವ ಮತ್ತೊಂದು ಟಯರ್ ಅಂಗಡಿಗೆ ನುಗ್ಗಿ ಟೈರುಗಳನ್ನು ಕದ್ದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಆಕ್ರೋಶಗೊಂಡ ವರ್ತಕರು, ರಾತ್ರಿ ವೇಳೆ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿ ನೆಮ್ಮದಿಯಿಂದ ಮಲಗುವಂತಿಲ್ಲ,

ಮಾಣಿ: ಮುಂದುವರಿದ ಸರಣಿ ಕಳ್ಳತನ ➤ ವರ್ತಕರ ಆಕ್ರೋಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top