ಕರಾವಳಿ

ಸವಣೂರು: ಹುಚ್ಚುನಾಯಿ ಕಡಿತ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಸವಣೂರು, ಜು. 22. ಹುಚ್ಚು ನಾಯಿ ಕಡಿತಕ್ಕೊಳಗಾಗಿ ಇಬ್ಬರು ಗಾಯಗೊಂಡ ಘಟನೆ ಸವಣೂರು ಸಮೀಪದ ಶಾಂತಿನಗರದಲ್ಲಿ ನಡೆದಿದೆ. ಶಾಂತಿನಗರದ ಸಮೀರ್ ಹಾಗೂ ಹಸೈನ್ ಎಂಬವರಿಗೆ ಹುಚ್ಚು ನಾಯಿ ಕಚ್ಚಿದ್ದು, ಸ್ಥಳೀಯವಾಗಿ ಎರಡು ಆಡುಗಳಿಗೆ ಹಾಗೂ ಬೆಕ್ಕುಗಳಿಗೆ ಇದೇ ಹುಚ್ಚು ನಾಯಿ ಕಡಿದಿರುವುದಾಗಿ ತಿಳಿದು ಬಂದಿದೆ. ನಾಯಿಯು ಮಗುವಿನ ಮೇಲೆ ದಾಳಿ ಮಾಡಿದ್ದು, ಮಗುವನ್ನು ರಕ್ಷಿಸುವ ಸಂದರ್ಭ ಓರ್ವನಿಗೆ ನಾಯಿ ಕಚ್ಚಿರುವುದಾಗಿ ತಿಳಿದು ಬಂದಿದೆ. ಹುಚ್ಚು ನಾಯಿ ರಂಪಾಟದಿಂದ ಸ್ಥಳೀಯರು ಭಯಭೀತಗೊಂಡಿದ್ದು ಮನೆಯಿಂದ ಹೊರಬರಲೂ […]

ಸವಣೂರು: ಹುಚ್ಚುನಾಯಿ ಕಡಿತ ➤ ಇಬ್ಬರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಳ್ಳಾಲದ ಅನ್ಯಕೋಮಿನ ಜೋಡಿ ಬೈಂದೂರು ಲಾಡ್ಜ್ ನಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಬೈಂದೂರು, ಜು. 22. ಅನ್ಯಕೋಮಿನ ಜೋಡಿಯೊಂದು ಉಪ್ಪುಂದ ನಂದನವನ ವಸತಿ ಗೃಹಕ್ಕೆ ತೆರಳಿದ ಮಾಹಿತಿ ತಿಳಿದ ಹಿಂದೂ ಸಂಘಟನಾ ಕಾರ್ಯಕರ್ತರು ಬೈಂದೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.   ಉಳ್ಳಾಲದ ನಿವಾಸಿ ಅಮೀರ್ (45) ಎಂಬಾತ 28 ವರ್ಷದ ಯುವತಿಯೊಂದಿಗೆ ಬೈಂದೂರು ಲಾಡ್ಜ್ ಗೆ ತೆರಳಿದ್ದಾರೆ ಎಂದೆನ್ನಲಾಗಿದೆ. ಅಮೀರ್ ಗುಜರಿ ವ್ಯಾಪಾರಿಯಾಗಿದ್ದು, ಯುವತಿಯು ಆತನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಳು ಎನ್ನಲಾಗಿದೆ. ಇದೀಗ ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಉಳ್ಳಾಲದ ಅನ್ಯಕೋಮಿನ ಜೋಡಿ ಬೈಂದೂರು ಲಾಡ್ಜ್ ನಲ್ಲಿ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪುತ್ತೂರು: ಅಂತರಾಜ್ಯ ಸರಗಳ್ಳರ ಬಂಧನ ➤ 2 ದ್ವಿಚಕ್ರ ವಾಹನ ಹಾಗೂ ಚಿನ್ನಾಭರಣ ವಶಕ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 22. ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂ.7ರಂದು ನಿಡ್ಪಳ್ಳಿ ಗ್ರಾಮದ ಚೂರಿಪದವು ನಿವಾಸಿ ರತ್ನಾ ಎಂಬವರ ಕುತ್ತಿಗೆಯಿಂದ ಕೋನಡ್ಕ ಎಂಬಲ್ಲಿ ಚಿನ್ನದ ಕರಿಮಣಿ ಸರ ಎಳೆದು ಬೈಕ್‌ನಲ್ಲಿ ಪರಾರಿಯಾಗಿದ್ದ ಕಳ್ಳರಿಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.   ಬಂಧಿತ ಆರೋಪಿಗಳನ್ನು ಕಾಸರಗೋಡು ಕುಂಬ್ಳೆ ಬಂಬ್ರಾಣ ಲಕ್ಷಂ ವೀಡು ಕಾಲೋನಿ ದಿ.ಬಡುವ ಕುಂಞಿ ಅವರ ಪುತ್ರ ಫಝಲ್ ಎ ಯಾನೆ ಫೈಜಲ್ ಯಾನೆ ಪಗ್ಗು (37ವ) ಮತ್ತು ಕಾಸರಗೋಡು ಸೀತಾಂಗೋಳಿ ರಾಜೀವ

ಪುತ್ತೂರು: ಅಂತರಾಜ್ಯ ಸರಗಳ್ಳರ ಬಂಧನ ➤ 2 ದ್ವಿಚಕ್ರ ವಾಹನ ಹಾಗೂ ಚಿನ್ನಾಭರಣ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಖ್ಯಾತ ಸ್ವಾಮೀಜಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ➤ ಘಟನೆಯ ಸುತ್ತ ಅನುಮಾನಗಳ ಹುತ್ತ….!!!

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 22. ಸ್ವಾಮೀಜಿಯೋರ್ವರು ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಬಜಪೆಯ ತಲಕಲ ಸ್ವಾಮಿ ಎಂದು ಗುರುತಿಸಲಾಗಿದೆ. ಇವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಅವರ ಸಾವಿನ ಬಗ್ಗೆ ಹಲವಾರು ಅನುಮಾನಗಳಿದ್ದು, ಈ ಕುರಿತು ಶಿಷ್ಯ ವೃಂದವನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಮಂಗಳೂರು: ಖ್ಯಾತ ಸ್ವಾಮೀಜಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ➤ ಘಟನೆಯ ಸುತ್ತ ಅನುಮಾನಗಳ ಹುತ್ತ….!!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ವಿಟ್ಲ: ಅಕ್ರಮ ಗೋಸಾಗಾಟ ಪತ್ತೆ

(ನ್ಯೂಸ್ ಕಡಬ) newskadaba.com ವಿಟ್ಲ, ಜು. 22. ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಹಿಡಿದು ವಿಟ್ಲ ಪೊಲೀಸರಿಗೆ ಒಪ್ಪಿಸಿದ ಘಟನೆ ಪದವು ಕೋಡಂದೂರು ರಸ್ತೆಯಲ್ಲಿ ನಡೆದಿದೆ. ಆಲ್ಟೋ ಕಾರಿನಲ್ಲಿ ಹಿಂಸಾತ್ಮಕವಾಗಿ ಎರಡು ಗೋವುಗಳನ್ನು ಕೂಡಿ ಹಾಕಿ ಸಾಗಾಟ ಮಾಡಲಾಗುತ್ತಿತ್ತು ಎಂದೆನ್ನಲಾಗಿದೆ. ವಾಹನದಲ್ಲಿದ್ದವರು ಪರಾರಿಯಾಗಿದ್ದು, ಸ್ಥಳಕ್ಕೆ ಆಗಮಿಸಿದ‌ ವಿಟ್ಲ ಠಾಣಾ ಪೊಲೀಸರು ಆಲ್ಟೋ ಕಾರು ಹಾಗೂ ಜಾನುವಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಿಟ್ಲ: ಅಕ್ರಮ ಗೋಸಾಗಾಟ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಿಳಿನೆಲೆ: ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಜು. 22. ಕಬ್ಬಿಣದ ಪಕ್ಕಾಸು ಪೈಪ್‌ಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಳಿನೆಲೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ವಾಡ್ಯಪ್ಪ ಗೌಡ ಎಂಬವರ ಮಗ ಮೋಹನ್ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಇವರು, ಪ್ರತಿದಿನ ಕೆಲಸಕ್ಕೆ ಹೋಗಿ ಮನೆಗೆ ಬರುತ್ತಿದ್ದರು. ಜುಲೈ 19ರಂದು ಮುಂಜಾನೆ ಕಾಣದೆ ಇದ್ದಾಗ ಮನೆಯವರು ಹುಡುಕಾಟ ನಡೆಸಿದಾಗ ಮನೆಯ ಪಕ್ಕದಲ್ಲಿರುವ ಕೊಟ್ಟಿಗೆಯಲ್ಲಿ ಕಬ್ಬಿಣದ ಪಕ್ಕಾಸು ಪೈಪ್‌ಗೆ ನೇಣು ಬಿಗಿದುಕೊಂಡಿರುವುದು

ಬಿಳಿನೆಲೆ: ಯುವಕ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೆಳ್ಳಾರೆ: ತಂಡದಿಂದ ಗಾಯಗೊಂಡಿದ್ದ ಯುವಕ ಮೃತ್ಯು ➤ ಬೆಳ್ಳಾರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಬೆಳ್ಳಾರೆ, ಜು.21. ಬೆಳ್ಳಾರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕಳಂಜದಲ್ಲಿ ತಂಡದಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಸೂದ್‌ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ. ಗಂಭೀರ ಗಾಯಗೊಂಡಿದ್ದ ಮಸೂದ್‌ ಅವರನ್ನು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  

ಬೆಳ್ಳಾರೆ: ತಂಡದಿಂದ ಗಾಯಗೊಂಡಿದ್ದ ಯುವಕ ಮೃತ್ಯು ➤ ಬೆಳ್ಳಾರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: 30 ಅಡಿ ಆಳಕ್ಕೆ ಉರುಳಿಬಿದ್ದ ಕಾರು ➤ ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 20. ನಿದ್ದೆಯ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ 30 ಅಡಿ ಆಳದ ಹೊಂಡಕ್ಕೆ ಉರುಳಿ ಬಿದ್ದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಕುಶಾಂತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ವೃತ್ತಿಯಲ್ಲಿ ಜನರೇಟರ್ ಮೆಕ್ಯಾನಿಕ್ ಕೆಲಸಗಾರನಾಗಿದ್ದ ಇವರು, ಉಡುಪಿಯಲ್ಲಿ ಜನರೇಟರ್ ರಿಪೇರಿ ಮುಗಿಸಿ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಬಂಟ್ವಾಳ: 30 ಅಡಿ ಆಳಕ್ಕೆ ಉರುಳಿಬಿದ್ದ ಕಾರು ➤ ಚಾಲಕ ಅಪಾಯದಿಂದ ಪಾರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪುತ್ತೂರು: ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಮಿನಿ ಟೆಂಪೋ..!! ➤ ಓರ್ವನಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 20. ನಿಯಂತ್ರಣ ತಪ್ಪಿದ ಮಿನಿ ಟೆಂಪೋವೊಂದು ಮರಕ್ಕೆ ಡಿಕ್ಕಿ ಹೊಡೆದ ಘಟನೆ ಅಮ್ಚಿನಡ್ಕ ಮಸೀದಿಯ ಮುಂಭಾಗದಲ್ಲಿ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಮಿನಿ ಟೆಂಪೋ, ಬ್ರೇಕ್ ವೈಫಲ್ಯಗೊಂಡ ಹಿನ್ನೆಲೆ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದು, ಬಳಿಕ ವ್ಯಕ್ತಿಯೋರ್ವನಿಗೂ ಡಿಕ್ಕಿಯಾಗಿದೆ. ಆತನನ್ನು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿ ತಿಳಿದುಬಂದಿದೆ.

ಪುತ್ತೂರು: ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಮಿನಿ ಟೆಂಪೋ..!! ➤ ಓರ್ವನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಂಬಳದ ಓಟಗಾರ ಶ್ರೀನಿವಾಸ್ ಗೌಡ ಸಹಿತ ಮೂವರ ವಿರುದ್ದ ಕ್ರಿಮಿನಲ್ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 20. ಕಂಬಳದ ಹುಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ್ ಗೌಡ, ಗುಣಪಾಲ ಕಡಂಬ ಮತ್ತು ರತ್ನಾಕರ ಎಂಬವರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸದಸ್ಯ, ಕೋಣಗಳ ಯಜಮಾನ ಲೋಕೇಶ್ ಶೆಟ್ಟಿ ಎಂಬವರು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಹುಸೇನ್ ಬೋಲ್ಟ್ ದಾಖಲೆ ಮುರಿದ ಹೆಸರಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹವಾಗಿದ್ದು, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ ಎಂದು ಲೋಕೇಶ್ ಶೆಟ್ಟಿ

ಕಂಬಳದ ಓಟಗಾರ ಶ್ರೀನಿವಾಸ್ ಗೌಡ ಸಹಿತ ಮೂವರ ವಿರುದ್ದ ಕ್ರಿಮಿನಲ್ ದೂರು ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top