ಪುತ್ತೂರು: ಯುವತಿಯರಿಗೆ ಕಿರುಕುಳ ಆರೋಪ ➤ ದೂರು ದಾಖಲು
(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 24. ಕಲ್ಲೇಗ ಶೇವಿರೆ ಸಮೀಪ ಯುವತಿಯರಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ ನೊಂದ ಯುವತಿಯೋರ್ವಳು ಪುತ್ತೂರು ಮಹಿಳಾ ಪೊಲೀಸರಿಗೆ ದೂರು ನೀಡಿದ ಘಟನೆ ವರದಿಯಾಗಿದೆ. ಯುವತಿಯರು ಕೆಲಸ ಬಿಟ್ಟು ಮನೆಗೆ ಹೋಗುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಬಂದ ಯುವಕರ ತಂಡವೊಂದು ಯುವತಿಯರನ್ನು ಅಡ್ಡಗಟ್ಟಿ ಚುಡಾಯಿಸಿ, ಕಿರುಕುಳ ನೀಡಿರುವುದಾಗಿ ಯುವತಿಯರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಮಹಿಳಾ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಪುತ್ತೂರು: ಯುವತಿಯರಿಗೆ ಕಿರುಕುಳ ಆರೋಪ ➤ ದೂರು ದಾಖಲು Read More »
ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್





