ಕರಾವಳಿ

ಬೈಕ್ ಮತ್ತು ಮಾರುತಿ ಓಮ್ನಿ ಕಾರಿನ ನಡುವೆ ಅಪಘಾತ ➤ ಓರ್ವನಿಗೆ ಗಾಯ                      

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 21. ಬೈಕ್ ಮತ್ತು ಮಾರುತಿ ಓಮ್ನಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ನೆಹರುನಗರ ಎಂಬಲ್ಲಿ ನಡೆದಿದೆ. ಗಾಯಾಳುವನ್ನು ಅನಂತಾಡಿ ನಿವಾಸಿ ಪುಷ್ಪರಾಜ್ ಗೌಡ ಎಂದು ಗುರುತಿಸಲಾಗಿದೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.    

ಬೈಕ್ ಮತ್ತು ಮಾರುತಿ ಓಮ್ನಿ ಕಾರಿನ ನಡುವೆ ಅಪಘಾತ ➤ ಓರ್ವನಿಗೆ ಗಾಯ                       Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಅಕ್ರಮ ತಳ್ಳುಗಾಡಿ ತೆರವು ಹಿನ್ನೆಲೆ – ಗ್ರಾ.ಪಂ. ಪಿಡಿಓಗೆ ಜೀವ ಬೆದರಿಕೆ  ➤ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಾಣಿಯೂರು, ಡಿ. 21. ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಯಿಮಣ ಗ್ರಾಮದ ಅಂಕಜಾಲು ಎಂಬಲ್ಲಿ ಅಕ್ರಮ ತಳ್ಳುಗಾಡಿಯನ್ನು ತೆರವು ಮಾಡಿರುವುದಕ್ಕೆ ಪುತ್ತೂರು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಮತ್ತು ಗ್ರಾ.ಪಂ ಪ್ರಭಾರ ಆಭಿವೃದ್ಧಿ ಅಧಿಕಾರಿ ನಾರಾಯಣ ಕೆ ಅವರಿಗೆ ವಾಟ್ಸಪ್ ಕರೆ ಮೂಲಕ ಜೀವ ಬೆದರಿಕೆಯೊಡ್ಡಿರುವ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಮತ್ತು ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ. ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಯಿಮಣ

ಪುತ್ತೂರು: ಅಕ್ರಮ ತಳ್ಳುಗಾಡಿ ತೆರವು ಹಿನ್ನೆಲೆ – ಗ್ರಾ.ಪಂ. ಪಿಡಿಓಗೆ ಜೀವ ಬೆದರಿಕೆ  ➤ ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿ ದುರುಪಯೋಗ ➤ ಸೂಕ್ತ ಕ್ರಮದ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 21. ಜಿಲ್ಲೆಯ ಲಿಂಗತ್ವ ಅಲ್ಪಸಂಖ್ಯಾತರಿಗೆ ಜಿಲ್ಲಾಧಿಕಾರಿಯವರಿಂದ ವಿತರಿಸಿರುವ ಗುರುತಿನ ಚೀಟಿಯನ್ನು ಸಮುದಾಯದ ಕೆಲವು ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ದುರುಪಯೋಗ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಈ ಹಿನ್ನಲೆ ಸಮಾಜದ ಹಿತದೃಷ್ಟಿಯಿಂದ ಆ ಗುರುತಿನ ಚೀಟಿಯನ್ನು ದುರುಪಯೋಗ ಮಾಡದಂತೆ ಹಾಗೂ ಮುಂದಿನ ದಿನಗಳಲ್ಲಿ ದುರುಪಯೋಗ ಮಾಡುವುದು ಕಂಡು ಬಂದಲ್ಲಿ ಗುರುತು ಚೀಟಿಯನ್ನು ರದ್ದುಪಡಿಸಲಾಗುವುದು. ಮಂಗಳೂರು ತಾಲೂಕಿನ ಸುತ್ತಮುತ್ತಲು ಮತ್ತು ವಿಶೇಷವಾಗಿ ಮಹಿಳೆಯರು ಲಿಂಗತ್ವ ಅಲ್ಪಸಂಖ್ಯಾತರಂತೆ ವರ್ತಿಸಿ ಜನರಿಂದ ಹಣ ಹಾಗೂ ಇತರೆ

ಮಂಗಳೂರು: ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿ ದುರುಪಯೋಗ ➤ ಸೂಕ್ತ ಕ್ರಮದ ಎಚ್ಚರಿಕೆ Read More »

ಕರಾವಳಿ, ಕರ್ನಾಟಕ

ಪುತ್ತೂರು: ಕಾಂಕ್ರೀಟ್ ಮಿಶ್ರಣದ ಲಾರಿ ಪಲ್ಟಿ ➤ ಕಾರ್ಮಿಕರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 21. ರಸ್ತೆ ಬದಿ ಕುಸಿದ ಪರಿಣಾಮ ರಸ್ತೆ ಅಭಿವೃದ್ದಿ ಕಾಮಗಾರಿಗೆಂದು ಬಂದಿದ್ದ ಕಾಂಕ್ರೀಟ್ ಮಿಕ್ಸಿಂಗ್ ಮಿಲ್ಲರ್ ಲಾರಿಯು ಪಲ್ಟಿಯಾದ ಘಟನೆ ಚೆಲ್ಯಡ್ಯ ಎಂಬಲ್ಲಿ ನಡೆದಿದೆ. ಕಾಂಕ್ರೀಟ್ ಮಿಕ್ಸಿಂಗ್ ತುಂಬಿಸಿಕೊಂಡು ಪುತ್ತೂರು ಕಡೆಯಿಂದ ಬಂದ ಲಾರಿಯು ರಸ್ತೆ ಬದಿ ನಿಲ್ಲಿಸಿ ತಡೆಗೋಡೆಗೆ ಕಾಂಕ್ರೀಟ್ ತುಂಬಿಸುವ ಸಂದರ್ಭ ರಸ್ತೆ ಬದಿ ಕುಸಿದು ಲಾರಿಯು ಸುಮಾರು ಇಪ್ಪತ್ತು ಅಡಿ ಆಳಕ್ಕೆ ಪಲ್ಟಿಯಾಗಿದೆನ್ನಲಾಗಿದೆ. ಕೆಳಭಾಗದಲ್ಲಿದ್ದ ಕಾರ್ಮಿಕರು ಓಡಿಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಪುತ್ತೂರು: ಕಾಂಕ್ರೀಟ್ ಮಿಶ್ರಣದ ಲಾರಿ ಪಲ್ಟಿ ➤ ಕಾರ್ಮಿಕರು ಅಪಾಯದಿಂದ ಪಾರು Read More »

ಕರಾವಳಿ

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹೊಸ ಅಥಿತಿಗಳ ಕಲರವ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 21. ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಗುಜರಾತ್ ನ ಗ್ರೀನ್ ಮೃಗಾಲಯದಿಂದ ಮಧ್ಯ ಮತ್ತು ದಕ್ಷಿಣ ಅಮೇರಿಕ, ಬ್ರೆಜಿಲ್, ಅರ್ಜೆಂಟೀನ, ಆಪ್ರೀಕಾ ಖಂಡಗಳಲ್ಲಿ ಕಾಣಸಿಗುವ ವಿವಿಧ ಪ್ರಾಣಿಗಳನ್ನು ತರಲಾಗಿದೆ.   ಸಣ್ಣ ಜಾತಿಯ ಅಳಿಲು, ಕಪಿ, ಮಾರ್ಮೋಸೆಟ್, ಕೆಂಪು ಕೈಯ ಟೆಮಾರನ, ಮಾರ ಮಾರ, ಬೃಹತ್ ಗಾತ್ರದ ನೀಲಿ ಬಂಗಾರದ ಮಕಾವು, ಗಾಲಾ ಕೋಕಟು, ಹಸಿರು ಟೊರೆಕೊ ಮತ್ತು ವಿವಿಧ ಜಾತಿಯ ಪರದೇಶದ ಪಕ್ಷಿಗಳನ್ನು ತರಿಸಲಾಗಿದೆ. ಹೊಸದಾಗಿ ಬಂದ ಅತಿಧಿಗಳ

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹೊಸ ಅಥಿತಿಗಳ ಕಲರವ Read More »

ಕರಾವಳಿ, ಕರ್ನಾಟಕ

ಜನವರಿಯಲ್ಲಿ ಕರಾವಳಿ ಉತ್ಸವ ➤ ಡಾ.ಕುಮಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 21. ಮುಂಬರುವ 2023ರ ಜನವರಿ ಮಾಹೆಯಲ್ಲಿ ಕರಾವಳಿ ಉತ್ಸವ ಹಮ್ಮಿಕೊಳ್ಳುವ ಬಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಈ ಕುರಿತು ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ, ಕರಾವಳಿ ಉತ್ಸವದ ದಿನಾಂಕವನ್ನು ನಿಗದಿ ಪಡಿಸಲಾಗುವುದು, ಕರಾವಳಿ ಉತ್ಸವದ ಪೂರ್ವಭಾವಿ ಸಿದ್ಧತೆಗೆ ವಿವಿಧ ಸಮಿತಿಗಳು, ಉಪ ಸಮಿತಿಗಳನ್ನು ರಚಿಸಿ, ತಮ್ಮ ಹಂತದಲ್ಲಿ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ದಪಡಿಸಿ ಜಿಲ್ಲಾಡಳಿತಕ್ಕೆ

ಜನವರಿಯಲ್ಲಿ ಕರಾವಳಿ ಉತ್ಸವ ➤ ಡಾ.ಕುಮಾರ್ Read More »

ಕರಾವಳಿ, ಕರ್ನಾಟಕ

ಮಂಗಳೂರು: ಅಯ್ಯಪ್ಪಸ್ವಾಮಿ ವೃತಧಾರಿ ಬಾಲಕನ ಮೇಲೆ ಹಲ್ಲೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 21. ಅಯ್ಯಪ್ಪ ವೃತಧಾರಿ ವಿದ್ಯಾರ್ಥಿಯೋರ್ವನಿಗೆ ಅದೇ ಶಾಲೆಯ ನಾಲ್ವರು ಹಿರಿಯ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ಮಂಗಳವಾರದಂದು ನಗರದ ಶಾಲೆಯ ಬಳಿ ನಡೆದಿದೆ. ನಗರದ ಶಾಲೆಯೊಂದರ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ನಡುವೆ ಈ ಹಿಂದೆ ಹಲವು ಬಾರಿ ಗಲಾಟೆ ನಡೆದಿದ್ದು, ಶಿಕ್ಷಕರು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದರೆ ಮಂಗಳವಾರದಂದು ಮತ್ತೆ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದು 9ನೇ ತರಗತಿ ವಿದ್ಯಾರ್ಥಿಗಳು 8ನೇ ತರಗತಿಯ ಅಯ್ಯಪ್ಪಸ್ವಾಮಿ ವ್ರತಧಾರಿ

ಮಂಗಳೂರು: ಅಯ್ಯಪ್ಪಸ್ವಾಮಿ ವೃತಧಾರಿ ಬಾಲಕನ ಮೇಲೆ ಹಲ್ಲೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ನಟಿ ಉರ್ಫಿ ಜಾವೇದ್ ಬಂಧನ..?

(ನ್ಯೂಸ್ ಕಡಬ) newskadaba.com ಮುಂಬೈ, ಡಿ. 21. ಸದಾ ಕನಿಷ್ಠ ಬಟ್ಟೆ ತೊಟ್ಟು ಸಖತ್​ ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಉರ್ಫಿ ಜಾವೇದ್ ಅವರನ್ನು ದುಬೈನಲ್ಲಿ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ. ಇತ್ತೀಚೆಗೆ ದುಬೈಗೆ ಭೇಟಿ ನೀಡಿರುವ ಈಕೆ, ಅಲ್ಲಿಯೂ ಅರೆಬರೆ ಮೈಮಾಟ ಪ್ರದರ್ಶಿಸುತ್ತಾ ವಿಡಿಯೋ ಶೂಟ್ ಮಾಡುತ್ತಿದ್ದು, ದುಬೈನಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲತೆಗೆ ಆಸ್ಪದವಿಲ್ಲದ ಕಾರಣ ಅರೆಬೆತ್ತಲೆ ದೇಶ ಪ್ರದರ್ಶನ ಮಾಡಿರುವುದು ಆಕೆಯ ಬಂಧನಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ. ಫ್ಯಾಶನ್​ ಇನ್ಫ್ಲುಯೆನ್ಸರ್​ ಉರ್ಫಿ ಅವರನ್ನು ಮಂಗಳವಾರದಂದು

ನಟಿ ಉರ್ಫಿ ಜಾವೇದ್ ಬಂಧನ..? Read More »

ಕರಾವಳಿ

ವಿಟ್ಲ: ಅಪರಿಚಿತ ಮೃತದೇಹ ಪತ್ತೆ ➤ ಆತ್ಮಹತ್ಯೆ ಶಂಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 21. ಗುಡ್ಡದಲ್ಲಿ ಕೊಳೆತ ಅಪರಿಚಿತ ಮೃತದೇಹವೊಂದು ಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ನೆಲ್ಲಿಗುಡ್ಡೆ ಜರಿಮೂಲೆ ಸಮೀಪ ವರದಿಯಾಗಿದೆ. ಎಂದಿನಂತೆ ಸೊಪ್ಪು ತರಲು ಗುಡ್ಡಕ್ಕೆ ತೆರಳಿದ ಸ್ಥಳೀಯರಿಗೆ ಮೊದಲು ಮೊಬೈಲ್ ಹಾಗೂ ಟ್ರಾವೆಲ್ ಬ್ಯಾಗ್ ಕಾಣಿಸಿದ್ದು, ಅಕ್ಕಪಕ್ಕ ಪರಿಶೀಲನೆ ನಡೆಸಿದಾಗ ಪಕ್ಕದಲ್ಲಿ ಮರದಲ್ಲಿ ಬಳ್ಳಿಯೊಂದು ನೇತಾಡುತ್ತಿದ್ದು, ಅಪರಿಚಿತ ಮೃತದೇಹ ನೆಲದಲ್ಲಿ ಬಿದ್ದುಕೊಂಡಿತ್ತು ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ವಿಟ್ಲ: ಅಪರಿಚಿತ ಮೃತದೇಹ ಪತ್ತೆ ➤ ಆತ್ಮಹತ್ಯೆ ಶಂಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ : ಓಮ್ನಿ-ದ್ವಿಚಕ್ರ ವಾಹನ ಢಿಕ್ಕಿ ➤ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 21. ಓಮ್ನಿ ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ವ್ಯಕ್ತಿಯೋರ್ವ ಗಾಯಗೊಂಡ ಘಟನೆ ಉಪ್ಪಿನಂಗಡಿ ಬಳಿ ನಡೆದಿದೆ. ಗಾಯಾಳುವನ್ನು ಕೊಯಿಲ ನಿವಾಸಿ ನಝೀರ್ ಎಂಬವರ ಪುತ್ರ ಉಬ್ಬಿ ಎಂದು ಗುರುತಿಸಲಾಗಿದೆ. ಈತ ಉಪ್ಪಿನಂಗಡಿಯಿಂದ ಕೆಮ್ಮಾರದ ಕಡೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಉಪ್ಪಿನಂಗಡಿ : ಓಮ್ನಿ-ದ್ವಿಚಕ್ರ ವಾಹನ ಢಿಕ್ಕಿ ➤ ಸವಾರನಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top