ಕರಾವಳಿ

ಬೆಳ್ತಂಗಡಿ: ಗೂಡ್ಸ್ ರಿಕ್ಷಾಕ್ಕೆ ಶಾಲಾ ಬಸ್ ಢಿಕ್ಕಿ ➤ ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 24. ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ವಾಹನದ ಚಾಲಕನೋರ್ವ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ರಝಾಕ್ (50) ಎಂದು ಗುರುತಿಸಲಾಗಿದೆ. ಗೂಡ್ಸ್ ರಿಕ್ಷಾಕ್ಕೆ ಶಾಲಾ ಮಕ್ಕಳ ಬಸ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬೆಳ್ತಂಗಡಿ: ಗೂಡ್ಸ್ ರಿಕ್ಷಾಕ್ಕೆ ಶಾಲಾ ಬಸ್ ಢಿಕ್ಕಿ ➤ ಓರ್ವ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಗ್ರಾಹಕನ ಸೋಗಿನಲ್ಲಿ ಬಂದು ಆರು ಲಕ್ಷ ರೂ. ನಗದು ದೋಚಿ ಪರಾರಿ..!

(ನ್ಯೂಸ್ ಕಡಬ) newskadaba. com ಕಾಪು, ಡಿ. 24. ಇಲ್ಲಿನ ಮುಖ್ಯರಸ್ತೆಯಲ್ಲಿರುವ ಮಹಾಲಸಾ ಟ್ರೇಡರ್ಸ್ ಹಾಲಿನ ಅಂಗಡಿಗೆ ಹಾಲು ಖರೀದಿ ನೆಪದಲ್ಲಿ ಗ್ರಾಹಕನ ಸೋಗಿನಲ್ಲಿ ಬಂದ ನಾಲ್ವರು ಮಾಲಕನಿಂದ ಆರು ಲಕ್ಷ ರೂ. ನಗದು ದೋಚಿ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.   ಅಂಗಡಿ ಮಾಲಕ ರಾತ್ರಿ ವೇಳೆ ಬೀಗ ಹಾಕಿ ಮನೆಗೆ ತೆರಳಲು ಸಿದ್ಧರಾಗಿ 4 ದಿನದ ವ್ಯವಹಾರದ ಸುಮಾರು 6 ಲಕ್ಷ ರೂ. ನಗದನ್ನು ಸ್ಕೂಟಿಯಲ್ಲಿ ಇರಿಸಿದ್ದರು. ಈ ವೇಳೆ ಗ್ರಾಹಕನ ಸೋಗಿನಲ್ಲಿ

ಗ್ರಾಹಕನ ಸೋಗಿನಲ್ಲಿ ಬಂದು ಆರು ಲಕ್ಷ ರೂ. ನಗದು ದೋಚಿ ಪರಾರಿ..! Read More »

ಕರಾವಳಿ, ಕ್ರೈಮ್ ನ್ಯೂಸ್

ದಕ್ಷಿಣ ಕೊಡಗಿನಲ್ಲಿ ವಿಪರೀತ ಆನೆ ಹಾವಳಿ  ➤ ಸಂಕಷ್ಟದಲ್ಲಿ ರೈತರು              

(ನ್ಯೂಸ್ ಕಡಬ) newskadaba.com ಮಡಿಕೇರಿ, ಡಿ. 24. ದಕ್ಷಿಣ ಕೊಡಗಿನ ಕುರ್ಚಿ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದ ತಮ್ಮ ಭತ್ತದ ಗದ್ದೆಯನ್ನು ರಕ್ಷಿಸಲು ರೈತ ಮತ್ತು ಅವರ ಪತ್ನಿ ರಾತ್ರಿಯಿಡೀ ನಿದ್ದೆಯಿಲ್ಲದೆ ಕಾದು ಕುಳಿತ ಘಟನೆ ನಡೆದಿದೆ. ಆದರೂ, 37 ಗೋಣಿ ಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ ಭತ್ತದ ಇಳುವರಿಯ ಮೇಲೆ ಕಾಡಾನೆಗಳು ದಾಳಿ ನಡೆಸಿವೆ. ವಿ ಚೆಂಗಪ್ಪ ಮತ್ತು ಬೀನಾ ಚೆಂಗಪ್ಪ ದಂಪತಿ ಜೀವನೋಪಾಯಕ್ಕೆ ಬೇಸಾಯವನ್ನು ಅವಲಂಬಿಸಿದ್ದು, ಸುಮಾರು ಐದು ಎಕರೆ ಜಮೀನನ್ನು ಹೊಂದಿದ್ದಾರೆ. ಇದರಲ್ಲಿ ಮೂರು ಎಕರೆ ಭತ್ತವನ್ನು

ದಕ್ಷಿಣ ಕೊಡಗಿನಲ್ಲಿ ವಿಪರೀತ ಆನೆ ಹಾವಳಿ  ➤ ಸಂಕಷ್ಟದಲ್ಲಿ ರೈತರು               Read More »

ಕರಾವಳಿ, ಕರ್ನಾಟಕ

ಜನವರಿಯಿಂದಲೇ  ಟಫ್​​ ರೂಲ್ಸ್  ಮಾಸ್ಕ್ ​ ಕಡ್ಡಾಯ    ➤ ಆರೋಗ್ಯ ಸಚಿವ ಡಾ.ಕೆ.ಸುಧಾಕರ್                             

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ.23. ಜನವರಿಯಿಂದಲೇ ಬೆಂಗಳೂರಲ್ಲಿ ಟಫ್​​ ರೂಲ್ಸ್​ ಜಾರಿಯಾಗಲಿದ್ದು, ಸರ್ಕಾರ  ಮಾಸ್ಕ್​​​​​ ಕಡ್ಡಾಯ ಮಾಡಲು ಸಜ್ಜಾಗಿದೆ. ಈಗ ಒಳಾಂಗಣದಲ್ಲಿ ಮಾಸ್ಕ್​ ಕಡ್ಡಾಯ ಮಾಡಿದೆ. ದಂಡ ಸಹಿತ ಮಾಸ್ಕ್​​ ಕಡ್ಡಾಯಕ್ಕೂ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಆರೋಗ್ಯ ಸಚಿವ ಡಾ.ಸುಧಾಕರ್​​ ಮಾತನಾಡಿ  ಮೊದಲ ಹಂತದಲ್ಲಿ ಕಠಿಣ ಕ್ರಮಗಳ ಜಾರಿಯಾಗಲಿದೆ. ಸೋಷಿಯಲ್​​ ಡಿಸ್ಟೆನ್ಸ್​ ಸೇರಿದಂತೆ ಹಲವು ಕ್ರಮ ಸಾಧ್ಯತೆ, ಮಾಲ್​​​​ಗಳು, ಬಿಗ್​ ಬಜಾರ್​ಗಳಿಗೆ ಪ್ರತ್ಯೇಕ ರೂಲ್ಸ್​ ಹಾಗೂ ಪಬ್​​​, ಬಾರ್​​​, ರೆಸ್ಟೋರೆಂಟ್​ಗಳಲ್ಲಿ ಮತ್ತಷ್ಟು ಕಠಿಣ ರೂಲ್ಸ್​ ಜಾರಿಯಾಗಲಿದೆ.

ಜನವರಿಯಿಂದಲೇ  ಟಫ್​​ ರೂಲ್ಸ್  ಮಾಸ್ಕ್ ​ ಕಡ್ಡಾಯ    ➤ ಆರೋಗ್ಯ ಸಚಿವ ಡಾ.ಕೆ.ಸುಧಾಕರ್                              Read More »

ಕರಾವಳಿ

ಜಗತ್ತಿನಾದ್ಯಂತ ಕೊರೋನಾ ಮಹಾಮಾರಿ ಮತ್ತೆ ಆರ್ಭಟ

(ನ್ಯೂಸ್ ಕಡಬ) newskadaba.com  ನವದೆಹಲಿ, ಡಿ.23  ಜಗತ್ತಿನಾದ್ಯಂತ ಕೊರೋನಾ ಮಹಾಮಾರಿ ಮತ್ತೆ ಆರ್ಭಟ ಮುಂದುವರೆಸುತ್ತಿರುವಂತೆಯೇ ಇತ್ತ ಕೇಂದ್ರ ಸರ್ಕಾರ ಭಾರತ್ ಬಯೋಟೆಕ್ ನ ಮೂಗಿನ ಮೂಲಕ ನೀಡುವ ಕೊರೊನಾ ಲಸಿಕೆಗೆ ಔಷಧ ನಿಯಂತ್ರಣ ಪ್ರಾಧಿಕಾರ ಈಗಾಗಲೇ ಅನುಮೋದನೆ ನೀಡಿದ್ದು, 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಆಗಿ ಇದನ್ನು ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ನಾಸಲ್ ಲಸಿಕೆಗೆ ದರ ನಿಗದಿಪಡಿಸುವ ಕಾರ್ಯ ನಡೆಯುತ್ತಿದ್ದು, ಬಳಿಕ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇಂದು ಸಂಜೆ ವೇಳೆಗೆ ಈ ನಾಸಲ್

ಜಗತ್ತಿನಾದ್ಯಂತ ಕೊರೋನಾ ಮಹಾಮಾರಿ ಮತ್ತೆ ಆರ್ಭಟ Read More »

ಕರಾವಳಿ

ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್  BF.7 ಅಬ್ಬರದ ನಡುವೆಯೇ ದೇಶಾದ್ಯಂತ 163 ಹೊಸ ಕೋವಿಡ್-19 ಸೋಂಕು ಪತ್ತೆ   

(ನ್ಯೂಸ್ ಕಡಬ) newskadaba.com  ಚೀನಾ, ಅಮೆರಿಕ ಮತ್ತು ಬ್ರಿಟನ್ ನಲ್ಲಿ ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್  BF.7 ಅಬ್ಬರದ ನಡುವೆಯೇ ದೇಶಾದ್ಯಂತ 163 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 163 ಹೊಸ ಕೊರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ 4.46 ಕೋಟಿ (4,46,76,678) ದಾಖಲಾಗಿದ್ದು, 24 ಗಂಟೆಗಳ ಅವಧಿಯಲ್ಲಿ ಒಂಬತ್ತು ಸೋಂಕಿತರು ಮೃತಪಟ್ಟಿದ್ದಾರೆ. ಆ ಮೂಲಕ ಮಹಾಮಾರಿಗೆ ಬಲಿಯಾದವರ

ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್  BF.7 ಅಬ್ಬರದ ನಡುವೆಯೇ ದೇಶಾದ್ಯಂತ 163 ಹೊಸ ಕೋವಿಡ್-19 ಸೋಂಕು ಪತ್ತೆ    Read More »

ಕರಾವಳಿ

ದಕ್ಷಿಣ ಕನ್ನಡ  : ಲೋನ್​ಗೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ಗೋಲ್ ಮಾಲ್ ಆರೋಪ    ➤  ಸಹಕಾರಿ ಸಂಘದ ಸಿಬ್ಬಂದಿಗೆ ಗೂಸಾ ನೀಡಿದ ಗ್ರಾಹಕರು                               

(ನ್ಯೂಸ್ ಕಡಬ) newskadaba.com  ದಕ್ಷಿಣ ಕನ್ನಡ, ಡಿ.23.  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಮೂಡುರು ವ್ಯವಸಾಯ ಸಹಕಾರಿ ಸಂಘದಲ್ಲಿ ಲಕ್ಷಾಂತರ ರೂ. ಗೋಲ್ ಮಾಲ್ ಆರೋಪ ಕೇಳಿಬಂದಿದೆ. ಸಹಕಾರಿ ಸಂಘದ ಕಚೇರಿಯಲ್ಲಿ ಸಿಬ್ಬಂದಿ ಮತ್ತು ಗ್ರಾಹಕರ ಮಧ್ಯೆ ಹೈಡ್ರಾಮ ನಡೆದಿದೆ ಎಂದು ತಿಳಿದುಬಂದಿದೆ. ಗ್ರಾಹಕರ ಹೆಸರಿನಲ್ಲಿ ಸಂಘದ ಕೆಲ ಪದಾಧಿಕಾರಿಗಳು ಸಾಲ ಪಡೆದ ಆರೋಪ ಮಾಡಲಾಗಿದೆ. ಲೋನ್​ಗೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ಗೋಲ್ ಮಾಲ್ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಬ್ಯಾಂಕ್​ಗೆ ಬಂದು ಸಿಬ್ಬಂದಿಯನ್ನು

ದಕ್ಷಿಣ ಕನ್ನಡ  : ಲೋನ್​ಗೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ಗೋಲ್ ಮಾಲ್ ಆರೋಪ    ➤  ಸಹಕಾರಿ ಸಂಘದ ಸಿಬ್ಬಂದಿಗೆ ಗೂಸಾ ನೀಡಿದ ಗ್ರಾಹಕರು                                Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು : ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿ ಮೇಲೆ ಹಲ್ಲೆ

(ನ್ಯೂಸ್ ಕಡಬ) newskadaba.com  ಮಂಗಳೂರು, ಡಿ.23.  ಅಯ್ಯಪ್ಪ ಮಾಲಾಧಾರಿ  ವಿದ್ಯಾರ್ಥಿ ಮೇಲೆ ನಾಲ್ವರು ಅನ್ಯಕೋಮಿನ ವಿದ್ಯಾರ್ಥಿಗಳಿಂದ ಹಲ್ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ. ಗಾಯಾಳು ವಿದ್ಯಾರ್ಥಿಯನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.  ಮಂಗಳೂರು  ನಗರದ  ಕಪಿತಾನಿಯೋ ಶಾಲೆಯ ವಿದ್ಯಾರ್ಥಿಗೆ ಹಲ್ಲೆ ಆರೋಪ ಮಾಡಲಾಗಿದೆ. ಅದೇ ಶಾಲೆಯ ನಾಲ್ವರು ಹಿರಿಯ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ನಡುವೆ ಈ ಹಿಂದೆ ಹಲವು ಬಾರಿ ಗಲಾಟೆ ನಡೆದಿತ್ತು. ಗಲಾಟೆ ನಡೆಸಿದ ವಿದ್ಯಾರ್ಥಿಗಳಿಗೆ ಶಿಕ್ಷಕರು

ಮಂಗಳೂರು : ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿ ಮೇಲೆ ಹಲ್ಲೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಟೊಮೆಟೊ, ಈರುಳ್ಳಿ ಸ್ಥಿರ ; ಬೀನ್ಸ್ ಏರಿಕೆ

(ನ್ಯೂಸ್ ಕಡಬ) newskadaba.com  ಉಡುಪಿ , ಡಿ 23 :  ಮಾರುಕಟ್ಟೆಯಲ್ಲಿ ಈ ವಾರ ಟೊಮೆಟೊ ಹಾಗೂ ಈರುಳ್ಳಿ ದರ ಸ್ಥಿರತೆ ಕಾಯ್ದಕೊಂಡಿದೆ. ಕಳೆದ ವಾರ ಟೊಮೆಟೊ ಕೆ.ಜಿಗೆ ರೂ.30 ದರ ಇತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರಸ್ತುತ ರೂ.25 ರಿಂದ ರೂ.30ಕ್ಕೆ ಮಾರಾಟವಾಗುತ್ತಿವೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ 20 ಇದೆ. ಕಳೆದವಾರ ಕೆ.ಜಿಗೆ 40 ಬೆಲೆ ಇದ್ದ ಈರುಳ್ಳಿ ಕೂಡ 30 ರಿಂದ 40 ಕ್ಕೆ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ. ಬೀನ್ಸ್ ದರ ಗಗನಮುಖಿ :

ಟೊಮೆಟೊ, ಈರುಳ್ಳಿ ಸ್ಥಿರ ; ಬೀನ್ಸ್ ಏರಿಕೆ Read More »

ಕರಾವಳಿ, ಕರ್ನಾಟಕ

ಉಡುಪಿ : ಚಲಿಸುತ್ತಿದ್ದ ಸ್ಕೂಟಿಯಲ್ಲಿ ಬೆಂಕಿ ಅವಘಢ     ➤  ಚಾಲಕ ಅಪಾಯದಿಂದ ಪಾರು                

(ನ್ಯೂಸ್ ಕಡಬ) newskadaba.com  ಉಡುಪಿ, ಡಿ.23. ಚಲಿಸುತ್ತಿದ್ದ  ಸ್ಕೂಟಿಯೊಂದು  ಅಚಾನಕ್  ಆಗಿ  ಬಂದ್ ಬಿದ್ದಿದ್ದು, ಏನಾಯ್ತು ಎಂದು ಚಾಲಕ ಇಳಿದು ನೋಡುವಾಗಲೇ ಸ್ಕೂಟಿಗೆ ಬೆಂಕಿ ಹತ್ತಿಕೊಂಡ ಘಟನೆ ಉಡುಪಿಯಲ್ಲಿ ಸಂಭವಿಸಿದೆ. ಕ್ಷಣಾರ್ಧದಲ್ಲೇ ಜೋರಾಗಿ ಹೊತ್ತಿ ಉರಿದ ಬೆಂಕಿ ಸ್ಕೂಟಿಯನ್ನು ಆಹುತಿ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.  ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆಯಲ್ಲಿರುವ  ಸೇತುವೆ ಬಳಿ ನಡೆದಿದ್ದು, ಕಾರ್ಕಳ ಮೂಲದವರಿಗೆ ಸೇರಿದ ಸ್ಕೂಟಿ ಇದಾಗಿದೆ ಎಂದು ತಿಳಿದುಬಂದಿದೆ. ಬ್ಯಾಟರಿ  ಶಾರ್ಟ್ ಸರ್ಕ್ಯೂಟ್​ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಉಡುಪಿ : ಚಲಿಸುತ್ತಿದ್ದ ಸ್ಕೂಟಿಯಲ್ಲಿ ಬೆಂಕಿ ಅವಘಢ     ➤  ಚಾಲಕ ಅಪಾಯದಿಂದ ಪಾರು                 Read More »

ಕರಾವಳಿ, ಕರ್ನಾಟಕ
Scroll to Top