ಕರಾವಳಿ

ಕೋವಿಡ್ ನಿರ್ಬಂಧದ ಕುರಿತು ಮಹತ್ವದ ಸಭೆ  ➤ ಹೊಸ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆ- ಸಿಎಂ ಬೊಮ್ಮಯಿ              

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 26. ಚೀನಾದಲ್ಲಿ ವಿನಾಶಕ್ಕೆ ಕಾರಣವಾಗಿರುವ ಓಮಿಕ್ರಾನ್ ರೂಪಾಂತರಿ ವೈರಸ್ ಭಾರತದಲ್ಲಿಯೂ ಪತ್ತೆಯಾಗಿದ್ದು, ಹೊಸ ವರ್ಷಾಚರಣೆಗೆ ಮುಂಚಿತವಾಗಿ ರಾಜ್ಯ ಸರ್ಕಾರ ಕೋವಿಡ್ ಮಾರ್ಗಸೂಚಿಗಳನ್ನು ರೂಪಿಸಲು ಮುಂದಾಗಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೆಳಗಾವಿಯಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್, ಕಂದಾಯ ಸಚಿವ ಆರ್ ಅಶೋಕ್ ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.  ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಈಗಾಗಲೇ ರಾಜ್ಯ ಸರ್ಕಾರವು ತೆರೆದ ಸ್ಥಳಗಳಲ್ಲಿ […]

ಕೋವಿಡ್ ನಿರ್ಬಂಧದ ಕುರಿತು ಮಹತ್ವದ ಸಭೆ  ➤ ಹೊಸ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆ- ಸಿಎಂ ಬೊಮ್ಮಯಿ               Read More »

ಕರಾವಳಿ

ಟೆಂಟ್ ಹಾಕಿ ಮಲಗಿದ್ದವರ ಮೇಲೆ ಕಾಡಾನೆ ದಾಳಿ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಮೂಡಿಗೆರೆ, ಡಿ. 26. ಪಶು ಆಸ್ಪತ್ರೆ ಸಮೀಪ ಟೆಂಟ್ ಹಾಕಿಕೊಂಡು ಮಲಗಿದ್ದ ಜನರ ಮೇಲೆ ಏಕಾಏಕಿ ಕಾಡಾನೆ ದಾಳಿ ಮಾಡಿದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಹಗರೇ ಮೂಲದ ನಾಗವಲ್ಲಿ ಹಾಗೂ ಗಂಡುಗುಸೆ ಎಂಬವರು ಚಿಂದಿ ಆರಿಸಲು ಬಂದು, ಬಣಕಲ್ ಪಶು ಆಸ್ಪತ್ರೆಯ ಸಮೀಪ ಟೆಂಟ್ ಹಾಕಿಕೊಂಡು ಮಲಗಿದ್ದರು. ಈ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ನಾಗವಲ್ಲಿ ಎಂಬವರಿಗೆ ಸೊಂಟ ಹಾಗೂ ಎದೆ ಭಾಗಕ್ಕೆ, ಗಂಡುಗುಸೆ

ಟೆಂಟ್ ಹಾಕಿ ಮಲಗಿದ್ದವರ ಮೇಲೆ ಕಾಡಾನೆ ದಾಳಿ ➤ ಇಬ್ಬರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಪಾದಾಚಾರಿ ಮಹಿಳೆಗೆ ಬೈಕ್ ಢಿಕ್ಕಿ- ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 25. ಪಾದಾಚಾರಿ ಮಹಿಳೆಯೋರ್ವರಿಗೆ ಬೈಕ್ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ರವಿವಾರ ಸಂಜೆ ಬಿ.ಸಿ.ರೋಡು- ಪುಂಜಾಲಕಟ್ಟೆ ಹೆದ್ದಾರಿಯ ನಾವೂರು ಗ್ರಾಮದ ಫರ್ಲಾದಲ್ಲಿ ಭಾನುವಾರದಂದು ನಡೆದಿದೆ.   ಮೃತ ಮಹಿಳೆಯನ್ನು ನಾವೂರು ಗ್ರಾಮದ ಸೂರ ಕ್ವಾಟ್ರಸ್‌ ನಿವಾಸಿ ಉಮಾವತಿ(58) ಎಂದು ಗುರುತಿಸಲಾಗಿದೆ. ಇವರು ರವಿವಾರ ಸಂಜೆ ಮನೆಗೆ ತೆರಳುವುದಕ್ಕೆ ರಸ್ತೆ ದಾಟುತ್ತಿದ್ದ ವೇಳೆ ಬೈಕ್‌ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ

ಬಂಟ್ವಾಳ: ಪಾದಾಚಾರಿ ಮಹಿಳೆಗೆ ಬೈಕ್ ಢಿಕ್ಕಿ- ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ದ್ವಿಚಕ್ರ ವಾಹನ ಹಾಗೂ ಗೂಡ್ಸ್ ವಾಹನದ ನಡುವೆ ಢಿಕ್ಕಿ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 25. ಸ್ಕೂಟರ್ ಹಾಗೂ ‌ಗೂಡ್ಸ್ ವಾಹನ ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಕಾಶಿಬೆಟ್ಟು ಪ್ರಸನ್ನ ಕಾಲೇಜು ಬಳಿ ಭಾನುವಾರದಂದು ನಡೆದಿದೆ. ಮೃತಪಟ್ಟವರನ್ನು ಚಾರ್ಮಾಡಿ ನಿವಾಸಿ ಪುರುಷೋತ್ತಮ‌ ಪೂಜಾರಿ(20) ಎಂದು ಗುರುತಿಸಲಾಗಿದೆ. ಉಜಿರೆಯಿಂದ ಬೆಳ್ತಂಗಡಿ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ವಿರುದ್ದ ದಿಕ್ಕಿನಿಂದ ಬಂದ ಗೂಡ್ಸ್ ವಾಹನ ಢಿಕ್ಕಿಯಾಗಿದೆ. ಈ ವೇಳೆ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಯುವಕನನ್ನು ತಕ್ಷಣವೇ ಬೆಳ್ತಂಗಡಿಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ

ಬೆಳ್ತಂಗಡಿ: ದ್ವಿಚಕ್ರ ವಾಹನ ಹಾಗೂ ಗೂಡ್ಸ್ ವಾಹನದ ನಡುವೆ ಢಿಕ್ಕಿ ➤ ಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಕಾರು ಹಾಗೂ ಬೈಕ್ ನಡುವೆ ಅಪಘಾತ ➤ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 25. ಕಾರು ಹಾಗೂ ಬೈಕ್ ‌ನಡುವ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ನಡೆದಿದೆ. ಗಾಯಗೊಂಡ ಬೈಕ್ ಸವಾರನನ್ನು ಮಂಗಳೂರಿನ ‌ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ಬಂಟ್ವಾಳ: ಕಾರು ಹಾಗೂ ಬೈಕ್ ನಡುವೆ ಅಪಘಾತ ➤ ಸವಾರ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಳ್ಳಾಲ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ➤ ಆರೋಪಿ ಪರಾರಿ

(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ. 25. ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಕೊಣಾಜೆ ಪೊಲೀಸರು 25,000 ರೂ. ಬೆಲೆಬಾಳುವ 100 ಕೆ.ಜಿ ದನದ ಮಾಂಸವನ್ನು ವಶಕ್ಕೆ ಪಡೆದಿರುವ ಘಟನೆ ಪಾವೂರು ಗ್ರಾಮದ ಮಲಾರ್ ಎಂಬಲ್ಲಿ ನಡೆದಿದೆ. ಮಲಾರ್ ಬದ್ರಿಯಾನಗರ ನಿವಾಸಿ ಜಾಫರ್ ಸಾದಿಕ್ ಎಂಬಾತ ತನ್ನ ಮನೆಯಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ನಡೆಸಲು ಯತ್ನಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸರು ದಾಳಿ ನಡೆಸಿ, ಸುಮಾರು 25,000/- ರೂಪಾಯಿ ಅಂದಾಜು ಮೌಲ್ಯದ 100 ಕೆ.ಜಿ

ಉಳ್ಳಾಲ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ➤ ಆರೋಪಿ ಪರಾರಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಡಿಕೇರಿ, ಕೇರಳ ಪ್ರವಾಸ ಹೋಗುವವರಿಗೆ ಮಂಗಳೂರು ಕೆಎಸ್ಸಾರ್ಟಿಸಿಯಿಂದ ಭರ್ಜರಿ ಸಿಹಿಸುದ್ದಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 25. ಇನ್ನೇನು 2022ರ ಕಾಲಘಟ್ಟ ಮುಗಿಯುವ ಹಂತದಲ್ಲಿದ್ದು, ಯುವಜನತೆ 2023ರ ಹೊಸವರ್ಷದ ಗುಂಗಿನಲ್ಲಿದ್ದಾರೆ. ಅದರಲ್ಲೂ ಡಿಸೆಂಬರ್‌ ತಿಂಗಳಿನಲ್ಲಿ ಶಾಲಾ, ಕಾಲೇಜುಗಳು, ಖಾಸಗಿ ಕಂಪನಿಗಳಿಗೆ ಸಾಲು-ಸಾಲು ರಜೆಗಳಿರುವುದರಿಂದ, ಕುಟುಂಬದ ಜೊತೆ ಪ್ರೇಕ್ಷಣಿಯ ಸ್ಥಳಗಳು, ದೇವಸ್ಥಾನಗಳಿಗೆ ತೆರಳುವವವರೇ ಹೆಚ್ಚು. ಆದ್ದರಿಂದ ಮಂಗಳೂರು ಕೆಎಸ್ಆರ್ಟಿಸಿ ವಿಭಾಗದಿಂದ ಕೇರಳ ಪ್ರವಾಸ ಪ್ಯಾಕೇಜ್‌ ಹಾಗೂ ಮಡಿಕೇರಿ ಪ್ರವಾಸ ಪ್ಯಾಕೇಜ್‌ ಕಾರ್ಯಾಚರಣೆ ಡಿಸೆಂಬರ್‌ 31ರವರೆಗೆ ನಡೆಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.   ಟೂರ್‌ ಪ್ಯಾಕೇಜ್‌ ವಿವರ:- ಮಂಗಳೂರು ಬಸ್‌

ಮಡಿಕೇರಿ, ಕೇರಳ ಪ್ರವಾಸ ಹೋಗುವವರಿಗೆ ಮಂಗಳೂರು ಕೆಎಸ್ಸಾರ್ಟಿಸಿಯಿಂದ ಭರ್ಜರಿ ಸಿಹಿಸುದ್ದಿ Read More »

ಕರಾವಳಿ, ಕರ್ನಾಟಕ

ಉಪ್ಪಿನಂಗಡಿ: ಮನೆ ಬೆಂಕಿಗಾಹುತಿ ➤ ಅಪಾರ ಹಾನಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 25. ಮನೆಯ ಮೇಲಂತಸ್ತು ಬೆಂಕಿಗಾಹುತಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಕಡವಿನ ಬಾಗಿಲು ಎಂಬಲ್ಲಿ ನಡೆದಿದೆ. ಇಲ್ಲಿನ ಬಿ.ಕೆ. ಇಸ್ಮಾಯಿಲ್ ಎಂಬವರಿಗೆ ಸೇರಿದ ಮನೆಯ ಮೇಲಂತಸ್ತು ಬೆಂಕಿಗಾಹುತಿಯಾಗಿದ್ದು, ಪರಿಣಾ. ಬೆಲೆಬಾಳುವ ಸೋಫಾಸೆಟ್, ಟಿಫಾಯಿ, ಬಟ್ಟೆ ಬರೆ, ಕಿಟಕಿ ಹಾಗೂ ಬಾಗಿಲು ಸುಟ್ಟು ಹೋಗಿವೆ. ಅಲ್ಲದೇ, ಮನೆಯ ಒಂದು ಬದಿಯ ಗೋಡೆ ಕೂಡಾ ಬಿರುಕು ಬಿಟ್ಟಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣವೆನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ, ಬೆಂಕಿ

ಉಪ್ಪಿನಂಗಡಿ: ಮನೆ ಬೆಂಕಿಗಾಹುತಿ ➤ ಅಪಾರ ಹಾನಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಕುದುರೆಗೆ ಬಸ್ ಢಿಕ್ಕಿ ➤ ಕುದುರೆ ಹಾಗೂ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 25. ಕುದುರೆಯೊಂದಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕುದುರೆ ಹಾಗೂ ಕುದುರೆ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಪದುಮಲೆ ಎಂಬಲ್ಲಿ ಭಾನುವಾರದಂದು ಬೆಳಗ್ಗೆ ನಡೆದಿದೆ.   ಗಾಯಗೊಂಡವರನ್ನು ಕುದುರೆ ಸವಾರಿ ನಡೆಸುತ್ತಿದ್ದ ಸಚಿನ್ ಪೆಲಪ್ಪಾರ್ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಕುದುರೆ ಕೂಡಾ ಗಂಭೀರ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದೆ ಎಂದು ತಿಳಿದುಬಂದಿದೆ.

ಉಪ್ಪಿನಂಗಡಿ: ಕುದುರೆಗೆ ಬಸ್ ಢಿಕ್ಕಿ ➤ ಕುದುರೆ ಹಾಗೂ ಸವಾರ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಜಲೀಲ್ ಕೊಲೆ ಹಿನ್ನೆಲೆ ➤ 4 ಠಾಣಾ ವ್ಯಾಪ್ತಿಯಲ್ಲಿ144 ಸೆಕ್ಷನ್ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 25. ಸುರತ್ಕಲ್ ನಲ್ಲಿ ಜಲೀಲ್ ಕೊಲೆ ಬೆನ್ನಲ್ಲೇ ಪಣಂಬೂರು, ಬಜ್ಪೆ, ಕಾವೂರು, ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಕಮಿಷನರ್ ಆದೇಶಿಸಿದ್ದಾರೆ. ಡಿ.25 ರ ಬೆಳಗ್ಗೆ 6 ಗಂಟೆಯಿಂದ ಡಿ.27 ರ ಬೆಳಗ್ಗೆ 6 ಗಂಟೆಯವರೆಗೆ ಅನ್ವಯವಾಗುವಂತೆ ಈ ಆದೇಶ ಹೊರಡಿಸಲಾಗಿದೆ. ಈ ನಿಷೇಧಾಜ್ಞೆ ಕ್ರಿಸ್ ಮಸ್ ಆಚರಣೆ, ತುರ್ತು ಸೇವೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಸುರತ್ಕಲ್, ಬಜಪೆ ಕಾವೂರು,

ಮಂಗಳೂರು: ಜಲೀಲ್ ಕೊಲೆ ಹಿನ್ನೆಲೆ ➤ 4 ಠಾಣಾ ವ್ಯಾಪ್ತಿಯಲ್ಲಿ144 ಸೆಕ್ಷನ್ ಜಾರಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top