ಕರಾವಳಿ

ಉಪ್ಪಿನಂಗಡಿ ಗೃಹ ರಕ್ಷಕ ಹುದ್ದೆ ➤ಅರ್ಹರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com. ಉಪ್ಪಿನಂಗಡಿ,ಡಿ.28.  ಗೃಹ ರಕ್ಷಕರ ಘಟಕದಲ್ಲಿ ಖಾಲಿ ಇರುವ ಪುರುಷರ ಸ್ವಯ ಸೇವಾ ಗೃಹರಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಉಪ್ಪಿನಂಗಡಿ ಸಮೀಪದ  ಆಸುಪಾಸಿನ ಹುಡುಗರು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿದಾರರು 19 ವರ್ಷ ಮೇಲ್ಪಟ್ಟವರಾಗಿರಬೇಕಾಗಿದ್ದು, ಎಸೆಸ್ಸೆಲ್ಸಿ ಪಾಸಾಗಿರಬೇಕು. 168 ಸೆಂ.ಮೀ. ಎತ್ತರ ಹಾಗೂ ಕನಿಷ್ಠ 50 ಕೆ.ಜಿ ತೂಕವನ್ನು ಹೊಂದಿರಬೇಕು. ಯಾವುದೇ ಅಂಗ ವೈಪಲ್ಯ ಇರಬಾರದು. ಸ್ವಯಂ ಆಸಕ್ತಿ ಇರುವವರಿಗೆ ಆದ್ಯತೆ ಇದ್ದು, ಉದ್ಯೋಗದಲ್ಲಿರುವವರಿಗೆ ಬಿಡುವಿನ ವೇಳೆಯಲ್ಲಿ ಕೆಲಸ ಮಾಡಲು ಅವಕಾಶವಿದೆ. ಸರಕಾರ ನಿಗದಿ ಪಡಿಸಿದ […]

ಉಪ್ಪಿನಂಗಡಿ ಗೃಹ ರಕ್ಷಕ ಹುದ್ದೆ ➤ಅರ್ಹರಿಂದ ಅರ್ಜಿ ಆಹ್ವಾನ Read More »

ಉದ್ಯೋಗ, ಕರಾವಳಿ

➤ ಡಿ.29 ಪುತ್ತೂರು – ಕಡಬ ವಿದ್ಯುತ್ ನಿಲುಗಡೆ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 28. ಪುತ್ತೂರು ವಿದ್ಯುತ್ ಉಪಕೇಂದ್ರದಲ್ಲಿ 110ಕೆವಿ ಮತ್ತು 33ಕೆ.ವಿ ಲೈನ್ ಬೇ, ಪರಿವರ್ತಕ ಮತ್ತು 11ಕೆವಿ ಫೀಡರುಗಳ ಪಾಲನಾ ಕಾರ್ಯ ಹಮ್ಮಿಕೊಂಡಿರುವ ಹಿನ್ನೆಲೆ ಡಿ. 29ರಂದು (ಗುರುವಾರ) ಪೂರ್ವಾಹ್ನ 10ರಿಂದ ಸಾಯಂಕಾಲ 5ಗಂಟೆಯವರೆಗೆ 33ಕೆ.ವಿ ಪುತ್ತೂರು-ಕಡಬ-ಸುಬ್ರಹ್ಮಣ್ಯ ಹಾಗೂ 33 ಕೆ.ವಿ ಪುತ್ತೂರು ನೆಲ್ಯಾಡಿ ವಿದ್ಯುತ್ ಮಾರ್ಗಗಳ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 110/33/11ಕೆವಿ ಪುತ್ತೂರು ಹಾಗೂ 33/11ಕೆವಿ ಕಡಬ, ನೆಲ್ಯಾಡಿ, ಸವಣೂರು, ಬಿಂದು ಮತ್ತು ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ

➤ ಡಿ.29 ಪುತ್ತೂರು – ಕಡಬ ವಿದ್ಯುತ್ ನಿಲುಗಡೆ Read More »

ಕರಾವಳಿ

ಪೆರ್ನೆ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ➤ ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com. ಪುತ್ತೂರು,  ಡಿ. 28  ಉಪ್ಪಿನಂಗಡಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಮಗುಚಿ ಬಿದ್ದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿ.28 ರಂದು ನಡೆದಿದೆ. ಬಿ.ಸಿ. ರೋಡ್ ನಿಂದ ಹಾಸನ ಕಡೆ ತೆರಳುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದ ಪರಿಣಾಮ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ. ಹತ್ತಿರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆರ್ನೆ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ➤ ಚಾಲಕ ಅಪಾಯದಿಂದ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ಕೃಷಿ ಜಾಗಕ್ಕೆ ಪ್ರವೇಶಿಸಿ ಹಲ್ಲೆ ಆರೋಪ ➤ ಮಹಿಳೆ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 28. ಕೃಷಿ ಜಾಗಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಗಾಯಗೊಂಡವರನ್ನು ಆಶಾಎಂದು ಗುರುತಿಸಲಾಗಿದೆ. ಅರುಣ್ ಕುಮಾರ್ ರೈ ಮತ್ತು ಕೆಲಸಗಾರರಾದ ವಿನಯ್ ಮತ್ತು ಸುಂದರರವರು ಅಕ್ರಮವಾಗಿ ತಂತಿ ಬೀಲಿ ಹಾಕುತ್ತಿದ್ದು, ಈ ಕುರಿತು ಪ್ರಶ್ನಿಸಿದಾಗ ನನಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂಧಿಸಿ ಮಾನಭಂಗಕ್ಕೆ ಯತ್ನಿಸಿದ್ದಾರಲ್ಲದೆ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಬಗ್ಗೆ

ಪುತ್ತೂರು: ಕೃಷಿ ಜಾಗಕ್ಕೆ ಪ್ರವೇಶಿಸಿ ಹಲ್ಲೆ ಆರೋಪ ➤ ಮಹಿಳೆ ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಾವಿಗೆ ಇಳಿದ ಮಾನಸಿಕ ಅಸ್ವಸ್ಥೆ ಮಹಿಳೆ ➤ ಅಗ್ನಿಶಾಮಕ ದಳದಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 28. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕೆಯ್ಯೂರು ಗ್ರಾಮದ ಮಾಡಾವು ಕಟ್ಟೆ ಬಳಿಯ ನಿವಾಸಿ ಡೇನಿಯಲ್ ಡಿಸೋಜ ಎಂಬವರ ಪತ್ನಿ ವಿನುತ ವೆಗಸ್ ಎಂಬವರು ತಮ್ಮ ಮನೆಯ ಎದುರುಗಡೆ ಇರುವ ಬಾವಿಗೆ ಇಳಿದ ಪ್ರಸಂಗ ನಡೆದಿದೆ.   ವಿಷಯ ತಿಳಿದ ಮಹಿಳೆಯ ಮನೆಯವರು ಪುತ್ತೂರು ಅಗ್ನಿಶಾಮಕ ದಳದವರಿಗೆ ನೀಡಿದ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಮಹಿಳೆಯನ್ನು ಬಾವಿಯಿಂದ ಮೇಲೆಕ್ಕೆತ್ತಿ, ಹೆಚ್ಚಿನ ಚಿಕಿತ್ಸೆಗೆ ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಪುತ್ತೂರು

ಬಾವಿಗೆ ಇಳಿದ ಮಾನಸಿಕ ಅಸ್ವಸ್ಥೆ ಮಹಿಳೆ ➤ ಅಗ್ನಿಶಾಮಕ ದಳದಿಂದ ರಕ್ಷಣೆ Read More »

ಕರಾವಳಿ, ಕ್ರೈಮ್ ನ್ಯೂಸ್

ದ.ಕ ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪತ್ತೆ…!! ➤ ವಿದೇಶದಿಂದ ಬಂದ ವ್ಯಕ್ತಿಗೆ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 28. ಸೌದಿ ಅರೇಬಿಯದಿಂದ ಆಗಮಿಸಿದ ಮಂಗಳೂರು ಮೂಲದ ವ್ಯಕ್ತಿಗೆ ಕೋವಿಡ್‌ ದೃಢಪಟ್ಟಿದ್ದು, ಈ ಮೂಲಕ ದ.ಕ ಜಿಲ್ಲೆಯಲ್ಲಿ ಮೊದಲ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಂಗಳೂರಿನ ವ್ಯಕ್ತಿಯನ್ನು ಅಲ್ಲಿ ಕೋವಿಡ್‌ ತಪಾಸಣೆಗೆ ಒಳಪಡಿಸಿದಾಗ ಕೋವಿಡ್‌ ದೃಢಪಟ್ಟಿತ್ತು. ಅವರ ಗಂಟಲ ದ್ರವ ಮಾದರಿಯನ್ನು ಜಿನೋಮಿಕ್‌ ಸೀಕ್ವೆನ್ಸಿಂಗ್‌ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಯಾವುದೇ ಗುಣಲಕ್ಷಣ ಹೊಂದಿರದ ಕಾರಣ ಅವರನ್ನು ಮಂಗಳೂರಿನ ಅವರ ಮನೆಯಲ್ಲಿ ಗೃಹ ನಿಗಾವಣೆಯಲ್ಲಿರಿಸಲಾಗಿದೆ ಎಂದು ಮೂಲಗಳು

ದ.ಕ ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪತ್ತೆ…!! ➤ ವಿದೇಶದಿಂದ ಬಂದ ವ್ಯಕ್ತಿಗೆ ಕೋವಿಡ್ ದೃಢ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಸಾರಿಗೆ ಬಸ್ ಹಾಗೂ ಮಿನಿಬಸ್ ನಡುವೆ ಮುಖಾಮುಖಿ ಢಿಕ್ಕಿ ➤ 12 ವಿದ್ಯಾರ್ಥಿಗಳಿಗೆ ಗಾಯ

(ನ್ಯೂಸ್ ಕಡಬ) newskadaba.com ಬೇಲೂರು, ಡಿ. 28. ಪ್ರವಾಸಕ್ಕೆಂದು ತೆರಳಿದ್ದ ಸಾರಿಗೆ ಬಸ್ ಗೆ ಹಾಗೂ ಮಿನಿ ಬಸ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಹನ್ನೆರಡು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಬೇಲೂರು ತಾಲೂಕಿನ ಸೂಲದೇವನಹಳ್ಳಿಯಲ್ಲಿ ನಡೆದಿದೆ. ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಬೇಲೂರು ತಾಲೂಕಿನ ಸೂಲದೇವನಹಳ್ಳಿ ಬಳಿಯಿಂದ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಹೊರಟ್ಟಿದ್ದರು. ಈ ವೇಳೆ ಎದುರಿನಿಂದ ಬಂದ ಮಿನಿ ಬಸ್ ವಿದ್ಯಾರ್ಥಿಗಳಿದ್ದ ಬಸ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆ

ಸಾರಿಗೆ ಬಸ್ ಹಾಗೂ ಮಿನಿಬಸ್ ನಡುವೆ ಮುಖಾಮುಖಿ ಢಿಕ್ಕಿ ➤ 12 ವಿದ್ಯಾರ್ಥಿಗಳಿಗೆ ಗಾಯ Read More »

ಕರಾವಳಿ

ವಿಟ್ಲ: ರಿಕ್ಷಾದಲ್ಲಿ ಅಕ್ರಮ ದನದ ಮಾಂಸ ಸಾಗಾಟ ➤ ಪೊಲೀಸ್ ದಾಳಿ ವೇಳೆ ಆರೋಪಿ ಪರಾರಿ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 28. ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಘಟನೆ ಇಲ್ಲಿನ ಮೇಗಿನಪೇಟೆಯಲ್ಲಿ ಬುಧವಾರದಂದು ನಡೆದಿದೆ. ಆಟೋ ರಿಕ್ಷಾದಲ್ಲಿ 25 ಕೆ.ಜಿ ಯಷ್ಟು ದನದ ಮಾಂಸ ಸಾಗಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ವಿಟ್ಲ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್.ಇ. ನಾಗರಾಜ್ ಆದೇಶದ ಮೇರೆಗೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಸಂದೇಶ್ ಶೆಟ್ಟಿ ದಾಳಿ ನಡೆಸಿದ್ದು, ಈ ವೇಳೆ ರಿಕ್ಷಾ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ವಿಟ್ಲ: ರಿಕ್ಷಾದಲ್ಲಿ ಅಕ್ರಮ ದನದ ಮಾಂಸ ಸಾಗಾಟ ➤ ಪೊಲೀಸ್ ದಾಳಿ ವೇಳೆ ಆರೋಪಿ ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯವೆಸಗಿದ ಮಾವ ➤ 15 ವರ್ಷ ಜೈಲು ಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 28. ಅಪ್ರಾಪ್ತ ವಯಸ್ಸಿನ ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ಜಿಲ್ಲಾ ಮತ್ತು ಸೆಷನ್ಸ್ ಎಫ್.ಟಿ.ಎಸ್.ಸಿ-|| ನ್ಯಾಯಾಲಯವು 15 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಐವತ್ತು ಸಾವಿರ ರೂ. ದಂಡ ವಿಧಿಸಿದೆ. ಸಂತ್ರಸ್ತ ವಿದ್ಯಾರ್ಥಿನಿಯು 2019ರ ಆ.09 ರಂದು ಶಾಲೆಯಿಂದ ಮರಳಿ ಸ್ನೇಹಿತರ ಜೊತೆಗೆ ಮನೆಗೆ ಹೋಗುತ್ತಿದ್ದ ವೇಳೆ ಆಕೆಯನ್ನು ಹಿಂಬಾಲಿಸಿದ ಮಾವ, ಸ್ನೇಹಿತೆಯನ್ನು ನಿಂದಿಸಿ ಕಳುಹಿಸಿದ್ದ. ನಂತರ ಸಂತ್ರಸ್ತೆಯನ್ನು ಬಲವಂತವಾಗಿ ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದು

ಮಂಗಳೂರು: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯವೆಸಗಿದ ಮಾವ ➤ 15 ವರ್ಷ ಜೈಲು ಶಿಕ್ಷೆ ಪ್ರಕಟ Read More »

ಕರಾವಳಿ, ಕ್ರೈಮ್ ನ್ಯೂಸ್

ಕೊರೋನಾ ಭೀತಿ ➤ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್ ಸಿದ್ದ..!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 28. ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಕೊರೋನಾ ರೂಪಾಂತರಿ ತಳಿಯ ಹಾವಳಿ ತೀವ್ರಗೊಂಡಿದ್ದ ಹಿನ್ನೆಲೆ, ಮುನ್ನೆಚ್ಚರಿಕಾ ಕ್ರಮವಾಗಿ ವಿದೇಶದಿಂದ ಆಗಮಿಸುವ ಪ್ರಯಾಣಿಕರಲ್ಲಿ ಕೋವಿಡ್ ಲಕ್ಷಣ ಕಂದುಬಂದಲ್ಲಿ ಅವರನ್ನು ಪ್ರತ್ಯೇಕಿಸುವ ನಿಟ್ಟಿನಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ 25 ಹಾಸಿಗೆಯ ಐಸೋಲೇಶನ್ ವಾರ್ಡ್ ಸಿದ್ದಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೆಚ್ಚುತ್ತಿರು ಕೊರೋನಾ ಪ್ರಕರಣವನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರ ಮಾರ್ಗಸೂಚಿ ಬಿಡುಗಡೆ ಮಾಡಿದಲ್ಲದೇ, ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿದೇಶೀ ಪ್ರಯಾಣಿಕರನ್ನು

ಕೊರೋನಾ ಭೀತಿ ➤ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್ ಸಿದ್ದ..! Read More »

ಕರಾವಳಿ
Scroll to Top