ಕರಾವಳಿ

ಭಟ್ಕಳ : ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಕುಂದಾಪುಕ್ಕೆ ವರ್ಗಾವಣೆ

(ನ್ಯೂಸ್  ಕಡಬ) newskadaba.com ಭಟ್ಕಳ, ಡಿ.30.  ಭಟ್ಕಳದ ಡಿವೈಸ್ಪಿ ಕೆ.ಯು. ಬೆಳ್ಳಿಯಪ್ಪ ಅವರನ್ನು ಕುಂದಾಪುರಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಕಳೆದ ಒಂದು ವರ್ಷಾಗಳ ಕಾಲ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಪೊಲೀಸ್ ವಲಯದಲ್ಲಿ ಎಲ್ಲರ ಪ್ರೀತಿ,ವಿಶ್ವಾಸವನ್ನು ಸಂಪಾದಿಸಿಕೊಂಡಿದ್ದರು. ಇದೀಗ ಭಟ್ಕಳ ಡಿವೈಎಸ್ಪಿಯಾಗಿ ವರ್ಗಾವಣೆ ಗೊಂಡಿರುವ ಶ್ರೀಕಾಂತ್ ರವರು ಒಂದೆರಡು ದಿನಗಳಲ್ಲಿ ಆಧಿಕಾರ ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಭಟ್ಕಳ : ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಕುಂದಾಪುಕ್ಕೆ ವರ್ಗಾವಣೆ Read More »

ಕರಾವಳಿ

ವಿಟ್ಲ: ಆಟೋರಿಕ್ಷಾ ಹಾಗೂ ಕಾರು ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 30. ರಿಕ್ಷಾ ಮತ್ತು ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಪ್ರಯಾಣಿಕರು ಗಾಯಗೊಂಡ ಘಟನೆ ಕೊಡಾಜೆ ಎಂಬಲ್ಲಿ ನಡೆದಿದೆ. ಮಾಣಿಯಿಂದ ಅನಂತಾಡಿಗೆ ತೆರಳುತ್ತಿದ್ದ ಅಟೋರಿಕ್ಷಾ ಹಾಗೂ ಪುತ್ತೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಆಲ್ಟೋ ಕಾರು ನಡುವೆ ಢಿಕ್ಕಿ ಸಂಭವಿಸಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ: ಆಟೋರಿಕ್ಷಾ ಹಾಗೂ ಕಾರು ನಡುವೆ ಢಿಕ್ಕಿ Read More »

ಕರಾವಳಿ, ಕರ್ನಾಟಕ

ವಿಟ್ಲ: ಮರಕ್ಕೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 30. ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ವರದಿಯಾಗಿದೆ. ಮೃತರನ್ನು ವಂಸತ ರೈ (52) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಡುತ್ತಿದ್ದ ಇವರ ಮೃತದೇಹವು ಇಂದು ಬೆಳಗ್ಗೆ ಸಮೀಪದ ರಬ್ಬರ್ ತೋಟದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಬಂದಿಲ್ಲ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ.

ವಿಟ್ಲ: ಮರಕ್ಕೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಬೀದಿನಾಯಿಗಳ ಅನ್ನಕ್ಕೆ ಸೀಮೆಎಣ್ಣೆ ಸುರಿದ ಮಹಿಳೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 30.  ಮಹಿಳೆಯೊಬ್ಬರು ಬೀದಿನಾಯಿಗಳಿಗೆ ಹಾಕಲೆಂದು ತಯಾರಿಸಿದ್ದ ಅನ್ನಕ್ಕೆ ಪಕ್ಕದ ಮನೆಯ ಮಹಿಳೆ ಸೀಮೆಎಣ್ಣೆ ಸುರಿದ ದುರದೃಷ್ಟಕರ ಘಟನೆ ಮಂಗಳೂರಿನಲ್ಲಿ ನಡೆದಿದೆ.   ಮಂಗಳೂರಿನ ಬಳ್ಳಾಲ್‌ ಭಾಗ್ ನಿವಾಸಿ ರಜನಿ ಶೆಟ್ಟಿಯವರು ಸುಮಾರು 800 ಬೀದಿನಾಯಿಗಳಿಗೆ 60 ಕೆಜಿ ಅಕ್ಕಿಯಿಂದ ಅನ್ನ ತಯಾರಿಸಿಟ್ಟಿದ್ದರು. ಇದಕ್ಕೆ ಪಕ್ಕದ ಮನೆಯ ಮಹಿಳೆ ಸೀಮೆಎಣ್ಣೆ ಸುರಿದಿದ್ದು, ಇದರಿಂದ ಬೇಸರವಾಗಿದೆ ಎಂದು ರಜನಿ ಶೆಟ್ಟಿ ತಿಳಿಸಿರುವುದಾಗಿ ವರದಿಯಾಗಿದೆ. ಬೀದಿನಾಯಿಗಳಿಗೆ ಉಣ ಬಡಿಸುವುದನ್ನು ತಮ್ಮ ಕಾಯಕವಾಗಿ ಮಾಡಿಕೊಂಡಿರುವ ರಜನಿ

ಮಂಗಳೂರು: ಬೀದಿನಾಯಿಗಳ ಅನ್ನಕ್ಕೆ ಸೀಮೆಎಣ್ಣೆ ಸುರಿದ ಮಹಿಳೆ..! Read More »

ಕರಾವಳಿ

ಮಾಣಿ; ವಾಹನಗಳ ನಡುವೆ ಸರಣಿ ಅಪಘಾತ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಾಣಿ, ಡಿ. 30. ಮೂರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಮೂವರು ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಾಣಿಯ ಪಳಿಕೆ ಎಂಬಲ್ಲಿ ನಡೆದಿದೆ. ಮಾಣಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕಾರು, ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಬಳಿಕ ಅದರ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು  ದುರ್ಘಟನೆ ಸಂಭವಿಸಿದೆನ್ನಲಾಗಿದೆ.

ಮಾಣಿ; ವಾಹನಗಳ ನಡುವೆ ಸರಣಿ ಅಪಘಾತ ➤ ಮೂವರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಕಾರಿನ ಸಹಪ್ರಯಾಣಿಕ ಹೆಲ್ಮೆಟ್ ಧರಿಸಿಲ್ಲವೆಂದು ದಂಡ…!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 30. ಕಾರಿನಲ್ಲಿ ಸಹಪ್ರಯಾಣಿಕ ಹೆಲ್ಮೆಟ್‌ ಧರಿಸಿಲ್ಲವೆಂದು ಪೊಲೀಸರು ದಂಡ ವಿಧಿಸಿರುವ ವಿಲಕ್ಷಣ ಘಟನೆ ಮಂಗಳೂರಿನಲ್ಲಿ ನಡೆದಿದೆ.   ಕಳೆದ ನವೆಂಬರ್‌ 29ರಂದು ಮಂಗಳಾದೇವಿಯಲ್ಲಿ ಟ್ರಾಫಿಕ್‌ ಉಲ್ಲಂಘಿಸಿದಕ್ಕಾಗಿ ಈ ನೋಟಿಸ್‌ ಜಾರಿಯಾಗಿದ್ದು, ಡಿ. 22ರಂದು ಚಾಲಕನ ಕೈಸೇರಿದೆ. ಇದರಲ್ಲಿ “ಕಾರು’ ಎಂದು ನಮೂದಿಸಲಾಗಿದ್ದು, ಉಲ್ಲಂಘನೆ ರೀತಿ ಕಾಲಂನಲ್ಲಿ “ಸಹಸವಾರ ಹೆಲ್ಮೆಟ್‌ ಧರಿಸಿಲ್ಲ’ ಎಂದಿದೆ. ನೋಟಿಸ್‌ನಲ್ಲಿ ಉಲ್ಲಂಘನೆ ನಡೆದ ಸ್ಥಳದ ಚಿತ್ರವಿದೆ. ಅದರಲ್ಲಿ ದ್ವಿಚಕ್ರ ವಾಹನವೊಂದರಲ್ಲಿ ಸಹ ಸವಾರ ಹೆಲ್ಮೆಟ್‌ ಇಲ್ಲದೆ ಸಂಚರಿಸುತ್ತಿರುವುದು

ಮಂಗಳೂರು: ಕಾರಿನ ಸಹಪ್ರಯಾಣಿಕ ಹೆಲ್ಮೆಟ್ ಧರಿಸಿಲ್ಲವೆಂದು ದಂಡ…! Read More »

ಕರಾವಳಿ, ಕರ್ನಾಟಕ

ಗಣರಾಜ್ಯೋತ್ಸವ ಪ್ರಯುಕ್ತ ಶೇ.50 ರಿಯಾಯಿತಿ ದರದಲ್ಲಿ ಪುಸ್ತಕ ಲಭ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 30. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಎಲ್ಲಾ (ಡಾ. ಬಿ.ಆರ್. ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು ಸಂಪುಟ 1 ರಿಂದ ಸಂಪುಟ 22 ಸೆಟ್ ಹೊರತು ಪಡಿಸಿ) ಪ್ರಕಟಣೆಗಳನ್ನು ಗಣರಾಜ್ಯೋತ್ಸವ ಪ್ರಯುಕ್ತ 2023ರ ಜನವರಿ 1ರಿಂದ 31ರ ವರೆಗೆ ಶೇಕಡ 50% ರಿಯಾಯಿತಿಯ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಆನ್‍ಲೈನ್ ವೆಬ್‍ಸೈಟ್ www.kuvempubhashabharati.org ಮೂಲಕವೂ ಶೇಕಡ 50% ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಖರೀದಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ

ಗಣರಾಜ್ಯೋತ್ಸವ ಪ್ರಯುಕ್ತ ಶೇ.50 ರಿಯಾಯಿತಿ ದರದಲ್ಲಿ ಪುಸ್ತಕ ಲಭ್ಯ Read More »

ಕರಾವಳಿ
dc ravikumar

ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು 5ರೊಳಗೆ ವೇತನ ಪಾವತಿಸಲು ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 30. ಪೌರ ಕಾರ್ಮಿಕರಿಗೆ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಕಡ್ಡಾಯವಾಗಿ ವೇತನ ಪಾವತಿಸಬೇಕು, ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಜಿಲ್ಲಾ ಖಜಾನೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಫಾಯಿ ಕರ್ಮಚಾರಿ/ಮ್ಯಾನ್ಯು ವಲ್ ಸ್ಕ್ಯಾವೆಂಜರ್‍ ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಖಜಾನೆಯ ಉಪ ನಿರ್ದೇಶಕರು ಈ ಸಂಬಂಧ ಕೂಡಲೇ ಸೂಕ್ತ

ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು 5ರೊಳಗೆ ವೇತನ ಪಾವತಿಸಲು ಜಿಲ್ಲಾಧಿಕಾರಿ ಸೂಚನೆ Read More »

ಕರಾವಳಿ, ಕರ್ನಾಟಕ

ಸುಬ್ರಹ್ಮಣ್ಯ: ಗರ್ಭಧರಿಸಿದ ಅಪ್ರಾಪ್ತ ಬಾಲಕಿ ➤ ಆಟೋ ಚಾಲಕನ ಬಂಧನ

(ನ್ಯೂಸ್  ಕಡಬ) newskadaba.com ಸುಬ್ರಹ್ಮಣ್ಯ, ಡಿ. 30. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆ ಗರ್ಭವತಿಯಾಗಲು ಕಾರಣನಾಗಿದ್ದಾನೆಂಬ ಆರೋಪದಡಿಯಲ್ಲಿ ಆಟೋ ಚಾಲಕನೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಬಂಧಿತನನ್ನು ಯೇನೆಕಲ್ಲಿನ ಆಟೋ ಚಾಲಕ ಜೀವನ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾದ ಹಿನ್ನೆಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಸುಬ್ರಹ್ಮಣ್ಯ: ಗರ್ಭಧರಿಸಿದ ಅಪ್ರಾಪ್ತ ಬಾಲಕಿ ➤ ಆಟೋ ಚಾಲಕನ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್
dc ravikumar

ಫಲಾನುಭವಿಗಳಿಂದ ಸಾರಿಗೆ ಸೌಲಭ್ಯ ಪಡೆದರೆ ಕ್ರಮ ➤ ಜಿಲ್ಲಾಧಿಕಾರಿ ರವಿಕುಮಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 30. ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಸರ್ಕಾರದಿಂದ ಸೌಲಭ್ಯ ಕಲ್ಪಿಸಿಕೊಡುವ ಸಂದರ್ಭದಲ್ಲಿ ಜಿಲ್ಲೆ, ಉಪ ವಿಭಾಗ, ತಾಲೂಕು ಅಥವಾ ಗ್ರಾಮ ಮಟ್ಟದಲ್ಲಿ ಸ್ಥಳ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳ ವಾಹನಗಳನ್ನು ಮಾತ್ರ ಬಳಸಬೇಕು, ಅದನ್ನು ಹೊರತುಪಡಿಸಿ ಫಲಾನುಭವಿಗಳಿಂದಲೇ ವಾಹನ ಸೌಲಭ್ಯವನ್ನು ಪಡೆಯಬಾರದು, ಅದಕ್ಕೆ ಅವಕಾಶವಿಲ್ಲ, ಮಾತ್ರವಲ್ಲ ಅದನ್ನು ಸಹಿಸಲು ಆಗದು. ಈ ರೀತಿ ಆದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್

ಫಲಾನುಭವಿಗಳಿಂದ ಸಾರಿಗೆ ಸೌಲಭ್ಯ ಪಡೆದರೆ ಕ್ರಮ ➤ ಜಿಲ್ಲಾಧಿಕಾರಿ ರವಿಕುಮಾರ್ Read More »

ಕರಾವಳಿ
Scroll to Top