ಕರಾವಳಿ

crime, arrest, suspected

ಬೆಳ್ತಂಗಡಿ: ದಲಿತ ಯುವಕನ ಕೊಲೆ ಪ್ರಕರಣ..!  ➤ ನಾಲ್ವರು ಅರೆಸ್ಟ್

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಜ.15. ದಲಿತ ಯುವಕ ಶ್ರೀಧರ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಶಿಬಾಜೆಯ ತಿಮ್ಮಪ್ಪ, ಲಕ್ಷ್ಮಣ, ಆನಂದ ಗೌಡ, ಹಾಗೂ ಮಹೇಶ್ ಪೂಜಾರಿ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಶಿಬಾಜೆ ಗ್ರಾಮದ ಸಾರಾ ಫಾರ್ಮ್ ನಲ್ಲಿ ಕೆಲಸ ಮಾಡುತ್ತಿದ್ದ ಮೂಡಿಗೆರೆಯ ಶ್ರೀಧರ ಎಂಬವರ ಮೃತದೇಹ ಕಳೆದ ಕೆಲಸ ಮಾಡುವ ತೋಟದ ಮೂಲೆಯಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದಿತ್ತು. ಇದೊಂದು ಕೊಲೆ‌ ಎಂದು ದೂರು ದಾಖಲಾಗಿತ್ತು […]

ಬೆಳ್ತಂಗಡಿ: ದಲಿತ ಯುವಕನ ಕೊಲೆ ಪ್ರಕರಣ..!  ➤ ನಾಲ್ವರು ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರಿನ ಯುವ ವಕೀಲ ತ್ವಾಹ ಖಲೀಲ್ ನ್ಯಾಯಾಧೀಶರಾಗಿ ಆಯ್ಕೆ..!

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.15. ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಯುವ ವಕೀಲ ತ್ವಾಹ ಖಲೀಲ್ ಕೆ.ಎ. ಅವರು ಉತ್ತೀರ್ಣರಾಗಿದ್ದು ನ್ಯಾಯಾದೀಶರಾಗಿ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ. ತ್ವಾಹ ಖಲೀಲ್ ಪುತ್ತೂರಿನವರಾಗಿದ್ದು ಬೆಂಗಳೂರಿನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 40 ಮಂದಿ ಆಯ್ಕೆಯಾದ ನ್ಯಾಯಾದೀಶರ ಪಟ್ಟಿಯನ್ನು ಹೈಕೋರ್ಟ್ ಬಿಡುಗಡೆ ಮಾಡಿದ್ದು, ನ್ಯಾಯವಾದಿ ರಾಹುಲ್ ಶೆಟ್ಟಿಗಾರ್ ಪ್ರಥಮ ಸ್ಥಾನ ಪಡೆದಿದ್ದಾರೆ.    

ಪುತ್ತೂರಿನ ಯುವ ವಕೀಲ ತ್ವಾಹ ಖಲೀಲ್ ನ್ಯಾಯಾಧೀಶರಾಗಿ ಆಯ್ಕೆ..! Read More »

ಕರಾವಳಿ, ಕರ್ನಾಟಕ

ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ !  ➤ ಅಪರಾಧಿಗೆ ಜೈಲು ಶಿಕ್ಷೆ…

(ನ್ಯೂಸ್ ಕಡಬ)newskadaba.com ಮಂಗಳೂರು, ಜ.15. ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೊ) ಹಾಗೂ ಎಫ್.ಟಿ.ಎಸ್.ಸಿ 1 ನ್ಯಾಯಾಲಯ ಐದು ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮಂಗಳೂರು ಬಿಜೈ ಕಾಪಿಕಾಡು ನಿವಾಸಿ ಶೇಖರ ಆಲಿಯಾಸ್ ಜೆ.ಡಿ.ಚಂದ್ರ ಶೇಖರ್ ಶಿಕ್ಷೆಗೊಳಗಾದವನು ಎಂದು ತಿಳಿದುಬಂದಿದೆ. ಈತ 2022 ರ ಜೂ.21ರಂದು ಬೆಳಗ್ಗೆ ಹ್ಯಾಟ್ ಹಿಲ್ ಜಡ್ಜಸ್ ಕ್ವಾಟ್ರರ್ಸ್ ಪಾರ್ಕಿಂಗ್ ಸ್ಥಳದಲ್ಲಿ ಪೈಂಟಿಂಗ್ ಮಾಡುತ್ತಿದ್ದಾಗ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ

ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ !  ➤ ಅಪರಾಧಿಗೆ ಜೈಲು ಶಿಕ್ಷೆ… Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಡ್ರಗ್ಸ್ ದಂಧೆ ಪ್ರಕರಣ, 3 ದಿನದಲ್ಲಿ 19 ಮಂದಿ ಅರೆಸ್ಟ್‌ ➤ಬಂಧಿತರ ಸಂಖ್ಯೆ 19 ಕ್ಕೆ ಏರಿಕೆ..!

(ನ್ಯೂಸ್ ಕಡಬ) newskadaba.com  ಮಂಗಳೂರು, ಜ.14. ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಪೊಲೀಸರ ಡ್ರಗ್ಸ್‌, ಗಾಂಜಾ ಬೇಟೆ ಮುಂದುವರಿದಿದ್ದು 3 ದಿನದಲ್ಲಿಒಟ್ಟು 19 ಮಂದಿಯನ್ನು ಬಂಧಿಸಲಾಗಿದೆ. ಈ ಮೂಲಕ ನಗರದಾದ್ಯಂತ ಹರಡಿಸುವ ಬೃಹತ್‌ ಡ್ರಗ್ಸ್‌ ಜಾಲವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಗಾಂಜಾ ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ನಗರದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಕಳ ಬಜಗೋಳಿ ನಿವಾಸಿ ಸುಕೇತ್‌ ಕಾವಾ ಅಲಿಯಾಸ್‌ ಚುಕ್ಕಿ (33), ಪುಲ್ಕೇರಿಯ ಸುನಿಲ್‌ (32) ಹಾಗೂ ತಮಿಳುನಾಡು ಕೊಯಮತ್ತೂರಿನ ಅರವಿಂದ

ಮಂಗಳೂರು: ಡ್ರಗ್ಸ್ ದಂಧೆ ಪ್ರಕರಣ, 3 ದಿನದಲ್ಲಿ 19 ಮಂದಿ ಅರೆಸ್ಟ್‌ ➤ಬಂಧಿತರ ಸಂಖ್ಯೆ 19 ಕ್ಕೆ ಏರಿಕೆ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ರಾಮಕುಂಜ: ವಿದ್ಯಾರ್ಥಿಗಳು ದೇಶದ ಗೌರವ ಹೆಚ್ಚಿಸುವ ಕೆಲಸ ಮಾಡಿ  ➤ ಚಕ್ರವರ್ತಿ ಸೂಲಿಬೆಲೆ ಕಿವಿಮಾತು..!

(ನ್ಯೂಸ್ ಕಡಬ) newskadaba.com  ಮಂಗಳೂರು, ಜ.14. ಬಾವಿಯೊಳಗಿನ ಕಪ್ಪೆಯಂತೆ ಇರುವ ಬದಲು ವಿದ್ಯಾರ್ಥಿಗಳು ತಮ್ಮ ಮನಸ್ಸು, ಚಿಂತನೆಯನ್ನು ವಿಸ್ತಾರ ಮಾಡಿಕೊಳ್ಳಿ. ಇವತ್ತಿನ ಭಾರತಕ್ಕೆ ಜಗತ್ತನ್ನು ಗೆಲ್ಲುವಂತಹ ತರುಣ ಶಕ್ತಿ ಬೇಕಿದೆ. ಆದ್ದರಿಂದ ಸ್ವಾಮಿ ವಿವೇಕಾನಂದ, ಆಜಾದ್, ಸುಭಾಶ್ ಚಂದ್ರ ಬೋಸ್, ಝಾನ್ಸಿರಾಣಿ ಲಕ್ಷ್ಮೀಬಾಯಿಯಂತ ದಿಟ್ಟ ಹೋರಾಟಗಾರರನ್ನೂ ಆದರ್ಶವಾಗಿಟ್ಟುಕೊಂಡು ಬದುಕು ರೂಪಿಸಿಕೊಳ್ಳಿ. ಇದರೊಂದಿಗೆ ದೇಶದ ಗೌರವ ಹೆಚ್ಚಿಸುವ ಕೆಲಸ ಮಾಡಿ ಅಂತಾ ಚಿಂತಕ ಹಾಗೂ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು. ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಆಶ್ರಯದಲ್ಲಿ ಶ್ರೀ

ರಾಮಕುಂಜ: ವಿದ್ಯಾರ್ಥಿಗಳು ದೇಶದ ಗೌರವ ಹೆಚ್ಚಿಸುವ ಕೆಲಸ ಮಾಡಿ  ➤ ಚಕ್ರವರ್ತಿ ಸೂಲಿಬೆಲೆ ಕಿವಿಮಾತು..! Read More »

ಕರಾವಳಿ, ಕರ್ನಾಟಕ
Theft, crime, Robbery

ನೆಲ್ಯಾಡಿ: ಚಿನ್ನಾಭರಣ ಸಹಿತ ನಗದು ಕಳವು..! ➤  ಆರೋಪಿಗಳು ಪರಾರಿ

(ನ್ಯೂಸ್ ಕಡಬ) newskadaba.com  ನೆಲ್ಯಾಡಿ, ಜ.14. ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರು  ಚಿನ್ನಾಭರಣ ಸಹಿತ ನಗದು ದೋಚಿ ಪರಾರಿಯಾದ ಘಟನೆ ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ವರದಿಯಾಗಿದೆ. ನೆಲ್ಯಾಡಿಯ   ಗೋಳಿತ್ತೊಟ್ಟು ಗ್ರಾಮದ  ನಿವಾಸಿ ಸ್ಕರಿಯ ಎಂಬವರ ಮನೆಯಿಂದ ನಗದು ಹಾಗೂ ಚಿನ್ನಾಭರಣ ಕಳವುಗೊಂಡಿದೆ ಎನ್ನಲಾಗಿದೆ. ಸ್ಕರಿಯ ಅವರು  ಚಿಕಿತ್ಸೆಗಾಗಿ ಉಜಿರೆ ಆಸ್ಪತ್ರೆಗೆ ದಾಖಲಾಗಿದ್ದು, ಅಳಿಯ  ಕೂಡ  ಉಜಿರೆ ಆಸ್ಪತ್ರೆಗೆ ತೆರಳಿದ್ದರು.  ಮಗಳು ಮತ್ತು ಮಕ್ಕಳು ಆರ್ಲದಲ್ಲಿನ ಮನೆಗೆ ತೆರಳಿದ್ದರು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಕಳ್ಳರು ಮನೆಯ ಮುಂಭಾಗದ ಬಾಗಿಲು ಚಿಲಕ ಮುರಿದು ಒಳ ಪ್ರವೇಶಿಸಿ

ನೆಲ್ಯಾಡಿ: ಚಿನ್ನಾಭರಣ ಸಹಿತ ನಗದು ಕಳವು..! ➤  ಆರೋಪಿಗಳು ಪರಾರಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
crime, arrest, suspected

ಉಳ್ಳಾಲ: ದರೋಡೆಗೆ ಹೊಂಚು ಹಾಕುತ್ತಿದ್ದ ಖದೀಮರು ಅರೆಸ್ಟ್…!

(ನ್ಯೂಸ್ ಕಡಬ) newskadaba.com  ಉಳ್ಳಾಲ, ಜ.14. ಕತ್ತಲಲ್ಲಿ ಅಂಗಡಿಗಳ ಬಳಿ ರಾಡಿನ ಜೊತೆಗೆ ಕುಳಿತಿದ್ದ ಇಬ್ಬರನ್ನು ಗಸ್ತು ತಿರುಗುತ್ತಿದ್ದ ಉಳ್ಳಾಲ ಪೊಲೀಸರು ಬಂಧಿಸಿದ್ದು, ಇಬ್ಬರು ಅಂಗಡಿ, ಎಟಿಎಂ, ಮನೆಗಳನ್ನು ದರೋಡೆ ನಡೆಸುವ ಹುನ್ನಾರ ಇಟ್ಟುಕೊಂಡು ಕುಳಿತಿರುವ ಸಂಶಯದಿಂದ ಪ್ರಕರಣ ದಾಖಲಿಸಲಾಗಿದೆ. ಮುಕ್ಕಚ್ಚೇರಿಯ ರಾಯಿಸ್ ಖಾನ್ (23) ಕುಂಪಲ ಯತೀಂ ಖಾನದ ಮಹಮ್ಮದ್ ಮುಜಾಂಬಿಲ್ (28) ಬಂಧಿತರು ಎಂದು ಗುರುತಿಸಲಾಗಿದೆ. ಜಂಕ್ಷನ್ನಿನ ಬಳಿಯ ಅಂಗಡಿಗಳ ಬಾಗಿಲು ಬಳಿ ಕತ್ತಲಲ್ಲಿ ಕುಳಿತಿದ್ದರು. ಗಸ್ತು ತಿರುಗುತ್ತಿದ್ದ ಉಳ್ಳಾಲ ಪೊಲೀಸರು ಅವರನ್ನು ಹಿಡಿದಾಗ

ಉಳ್ಳಾಲ: ದರೋಡೆಗೆ ಹೊಂಚು ಹಾಕುತ್ತಿದ್ದ ಖದೀಮರು ಅರೆಸ್ಟ್…! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

 ಉಪ್ಪಿನಂಗಡಿ: ಟ್ಯಾಂಕರ್ ಚಲಾಯಿಸುವಾಗಲೇ ಹೃದಯಾಘಾತದಿಂದ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com   ಉಪ್ಪಿನಂಗಡಿ, ಜ.14. ಟ್ಯಾಂಕರ್ ಚಲಾಯಿಸುವಾಗಲೇ ಹೃದಯಾಘಾತಕ್ಕೀಡಾಗಿ ಚಾಲಕ ಕಿಶೋರ್ ಕುಮಾರ್ (53) ಎಂಬವರು ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ವರದಿಯಾಗಿದೆ. ಮೂಲತಃ ಮಂಗಳೂರಿನ ಕಾವೂರು ನಿವಾಸಿಯಾಗಿದ್ದ ಕಿಶೋರ್ ಕುಮಾರ್ ಬೆಂಗಳೂರಿನಿಂದ ಮಂಗಳೂರಿನತ್ತ ಟ್ಯಾಂಕರ್ ಚಲಾಯಿಸುತ್ತಿದ್ದಾಗ ಉಪ್ಪಿನಂಗಡಿ ಸಮೀಪಿಸುತ್ತಿದ್ದಂತೆಯೇ ಹೃದಯಾಘಾತಕ್ಕೆ ಒಳಗಾಗಿರುವುದಾಗಿ ತಿಳಿದುಬಂದಿದೆ. ಕೂಡಲೇ ಟ್ಯಾಂಕರ್ ನಲ್ಲಿದ್ದ ಸಹ ಚಾಲಕ ಟ್ಯಾಂಕರ್‌ನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದರಾದರೂ ಆಸ್ಪತ್ರೆಯಲ್ಲಿ ಅವರು ಮೃತ ಪಟ್ಟಿದ್ದಾರೆಂದು ಘೋಷಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿ ನಿಶಾಂತ್ ಶೆಟ್ಟಿ ನೀಡಿದ ದೂರಿನ

 ಉಪ್ಪಿನಂಗಡಿ: ಟ್ಯಾಂಕರ್ ಚಲಾಯಿಸುವಾಗಲೇ ಹೃದಯಾಘಾತದಿಂದ ಚಾಲಕ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ರಾಜಾರೋಷವಾಗಿ ನಡೆಸುತ್ತಿರುವ ಜೂಜುಕೇಂದ್ರಗಳು ಮುಚ್ಚುವಂತೆ ಹೋರಾಟ…!!                   

(ನ್ಯೂಸ್ ಕಡಬ) newskadaba.com  ಮಂಗಳೂರು, ಜ.14.  ನಗರದಾದ್ಯಂತ ರಾಜಾರೋಷವಾಗಿ ನಡೆಸುತ್ತಿರುವ ಸ್ಕಿಲ್ ಗೇಮ್, ವಿಡಿಯೋ ಗೇಮ್, ಇಸ್ಪೀಟ್ ಕ್ಲಬ್ ಸೇರಿ ಇನ್ನಿತರ ಜೂಜು ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಬೇಕೆಂದು ಒತ್ತಾಯಿಸಿ ಡಿವೈಎಫ್ಐ ಇದೀಗ ಹೋರಾಟ ಆರಂಭಿಸಿದೆ. 2 ದಿನಗಳ ಹಿಂದೆ ಇಂತಹ ಜೂಜುಕೇಂದ್ರಗಳ ಮುಂದೆ ಸಾಂಕೇತಿಕ ಮುತ್ತಿಗೆ ಹಾಕುವ ಮೂಲಕ ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಗಮನಕ್ಕೆ ತಂದರೂ ಜೂಜುಕೇಂದ್ರಗಳ ವಿರುದ್ದ ಕ್ರಮಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲಗೊಂಡಿದೆ. ಈಗ ಮತ್ತೆ ಜೂಜುಕೇಂದ್ರಗಳು ಎಂದಿನಂತೆ ಪ್ರಾರಂಭಗೊಂಡ ಹಿನ್ನಲೆಯಲ್ಲಿ ಜೂಜುಕೇಂದ್ರಗಳು ಶಾಶ್ವತವಾಗಿ ಮುಚ್ಚುವವರೆಗೆ ಹಲವು ಹಂತದ ಹೋರಾಟ ಸಂಘಟಿಸಲು ಡಿವೈಎಫ್ಐ  ದ.ಕ  ಜಿಲ್ಲಾ ಸಮಿತಿಯು ತೀರ್ಮಾನಿಸಿದೆ. ಕಾನೂನುಬಾಹಿರ ಚಟುವಟಿಕೆಯಾಗಿದ್ದು ನಗರದ ದುಡಿದು ತಿನ್ನುವ ಬೀದಿಬದಿ ವ್ಯಾಪಾರಿಗಳನ್ನು, ದಿನಕೂಲಿ ನೌಕರರನ್ನು, ರಿಕ್ಷಾ ಚಾಲಕ ಇನ್ನಿತರ ಸಣ್ಣ ಆದಾಯಕ್ಕೆ ದುಡಿಯುವ ಜನಸಾಮಾನ್ಯರನ್ನು ಮತ್ತು ವಿದ್ಯಾರ್ಥಿಗಳನ್ನು ಬಲಿಪಡೆಯುತ್ತಿದೆ.   *➤ ಡಿವೈಎಫ್ಐ ತೀರ್ಮಾನ*

ಮಂಗಳೂರು: ರಾಜಾರೋಷವಾಗಿ ನಡೆಸುತ್ತಿರುವ ಜೂಜುಕೇಂದ್ರಗಳು ಮುಚ್ಚುವಂತೆ ಹೋರಾಟ…!!                    Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುರತ್ಕಲ್: ಗುಡ್ಡ ಕುಸಿತ…!!   ➤  ಓರ್ವ ಮೃತ್ಯು, ಇನ್ನೋರ್ವನಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಸುರತ್ಕಲ್, ಜ.14. ಕೆಲಸ ಮಾಡುವಾಗ ಗುಡ್ಡ ಕುಸಿತ ಉಂಟಾಗಿ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸುರತ್ಕಲ್ ನಲ್ಲಿ ವರದಿಯಾಗಿದೆ. ಮೃತರನ್ನು ಓಬಲೇಶ್ವರ ಎಂದು ಗುರುತಿಸಲಾಗಿದೆ.  ಈತ ರೈಲ್ವೇ ಸೇತುವೆಯ ಬಳಿ ಕೆಲಸ ಮಾಡುತ್ತಿದ್ದಾಗ ಗುಡ್ಡ ಕುಸಿದು ಮಣ್ಣು ಮೈಮೇಲೆ ಬಿದ್ದಿದೆ. ಘಟನೆಯಲ್ಲಿ ಗೋವಿಂದಪ್ಪ, ತಿಮ್ಮಪ್ಪ, ಈರಣ್ಣ, ಸಂಜೀವ ಹಾಗೂ ಆತನ ಪತ್ನಿ ತೃಪ್ತಿ ಅವರ ಮೇಲೂ ಮಣ್ಣು ಬಿದ್ದು ಗಾಯಗಳಾಗಿವೆ ಎನ್ನಲಾಗಿದೆ. ಗೋವಿಂದಪ್ಪ ಅವರಿಗೆ ಗಂಭೀರ ಗಾಯಗಳಾಗಿದೆ ಎಂದು ವರದಿ

ಸುರತ್ಕಲ್: ಗುಡ್ಡ ಕುಸಿತ…!!   ➤  ಓರ್ವ ಮೃತ್ಯು, ಇನ್ನೋರ್ವನಿಗೆ ಗಂಭೀರ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top