ಕರಾವಳಿ

ಕುಟ್ರುಪ್ಪಾಡಿ ಗ್ರಾ.ಪಂ ಉಪಚುನಾವಣೆ   ➤ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುದೇಶ್ ಜಯಭೇರಿ

(ನ್ಯೂಸ್ ಕಡಬ)newskadaba.com ಪುತ್ತೂರು, ಫೆ.28. ಕಡಬ ತಾಲೂಕಿನ ಕುಟ್ರುಪಾಡಿ ಗ್ರಾ.ಪಂ ನ ಬಲ್ಯ ವಾರ್ಡ್ 1ರಲ್ಲಿ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುದೇಶ್ ರವರು 221 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದು, ಒಟ್ಟು 1055 ಮತಗಳು 750 ಮತಗಳು ಚಲಾವಣೆಯಾಗಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುದೇಶರವರು 400 ಮತಗಳನ್ನು ಪಡೆದು 179 ಮತಗಳನ್ನು ತನ್ನ ಸಮೀಪದ ಪ್ರತಿಸ್ಪರ್ದಿ ಕರುಣಾಕರ ವಿರುದ್ಧ 221 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ ಎನ್ನಲಾಗಿದೆ.  

ಕುಟ್ರುಪ್ಪಾಡಿ ಗ್ರಾ.ಪಂ ಉಪಚುನಾವಣೆ   ➤ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುದೇಶ್ ಜಯಭೇರಿ Read More »

ಕರಾವಳಿ

ಕಡಬ: ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ

(ನ್ಯೂಸ್ ಕಡಬ) newskadaba.com ಕಡಬ, ಫೆ. 28. ಕಳೆದ ಕೆಲವು ದಿನಗಳ ಹಿಂದೆ ಆನೆ ದಾಳಿಯಿಂದ ರೆಂಜಿಲಾಡಿ ಗ್ರಾಮದ ಇಬ್ಬರು ಮೃತಪಟ್ಟ ಬಳಿಕ ಕಾಡಾನೆಗಳ ಸೆರೆಹಿಡಿಯುವ ಕಾರ್ಯಾಚರಣೆಯು ಭರದಿಂದ ಸಾಗಿದ್ದಲ್ಲದೇ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಆದರೆ, ಇದೀಗ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು ಸಾಕು ಆನೆಗಳನ್ನು ವಾಪಾಸು ಕೊಂಡೊಯ್ಯಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಸುಬ್ರಹ್ಮಣ್ಯ ವಿಭಾಗದ ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರು ಆನೆ ಇರುವ ಬಗ್ಗೆ ಗ್ರಾಮಸ್ಥರಿಂದ ಯಾವುದೇ ದೂರುಗಳು ಬರುತ್ತಿಲ್ಲ, ಇಲಾಖಾ ಸಿಬ್ಬಂದಿಗಳು ರಾತ್ರಿ ಹಗಲು

ಕಡಬ: ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ Read More »

ಕರಾವಳಿ, ಕರ್ನಾಟಕ

ಮಂಗಳೂರು: ಮಾರ್ಚ್ 2 ರಂದು ಕುಂದು ಕೊರತೆ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 28. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಬಗ್ಗೆ ಚರ್ಚಿಸಲು ಸಂಘ ಸಂಸ್ಥೆಯ ಪದಾಧಿಕಾರಿಗಳ ಸಭೆ ಮಾರ್ಚ್ 02ರ ಗುರುವಾರದಂದು ಮಧ್ಯಾಹ್ನ 3 ಗಂಟೆಗೆ ಕೊಣಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉಳ್ಳಾಲ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು: ಮಾರ್ಚ್ 2 ರಂದು ಕುಂದು ಕೊರತೆ ಸಭೆ Read More »

ಕರಾವಳಿ

ಇಂದು ಸಾಮಾನ್ಯ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 28. ಇಲ್ಲಿನ ಮಹಾನಗರ ಪಾಲಿಕೆಯ ಪರಿಷತ್ತಿನ ಸಾಮಾನ್ಯ ಸಭೆ ಫೆ. 28ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಹಾನಗರ ಪಾಲಿಕೆಯ ಪರಿಷತ್ತಿನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಸಾಮಾನ್ಯ ಸಭೆ Read More »

ಕರಾವಳಿ

ಉಡುಪಿ: ಅವಧಿ ಮೀರಿ ಡಿಜೆ ಸೌಂಡ್   ➤ ಮೆಹಂದಿ ಕಾರ್ಯಕ್ರಮದ ಮನೆಗೆ ಪೊಲೀಸ್ ದಾಳಿ

(ನ್ಯೂಸ್ ಕಡಬ)newskadaba.com ಉಡುಪಿ, ಫೆ. 28. ಮೆಹಂದಿ ಕಾರ್ಯಕ್ರಮದಲ್ಲಿ ಅವಧಿ ಮೀರಿ ಅತೀ ಕರ್ಕಶವಾದ ಡಿ.ಜೆ ಸೌಂಡ್‌ ಹಾಕಿದ್ದ ಮನೆಗೆ ಪೊಲೀಸರು ದಾಳಿ ಮಾಡಿದ ಘಟನೆ ಕುಂಜಿಬೆಟ್ಟು ಪರಿಸರದಲ್ಲಿ ನಡೆದಿದೆ. ಕುಂಜಿಬೆಟ್ಟು ಪರಿಸರದಲ್ಲಿ ಫೆ. 26ರಂದು ತಡರಾತ್ರಿ 1.30ರ ಸುಮಾರಿಗೆ ಮೆಹಂದಿ ಕಾರ್ಯಕ್ರಮದಲ್ಲಿ ಅತೀ ಕರ್ಕಶವಾದ ಡಿಜೆ ಸೌಂಡ್‌ ಹಾಕಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂಬ ಸಾರ್ವಜನಿಕ ದೂರಿನ ಮೇರೆಗೆ ರೌಂಡ್ಸ್‌ ಕರ್ತವ್ಯದಲ್ಲಿದ್ದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ 76 ಬಡಗಬೆಟ್ಟು ಗ್ರಾಮದ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದ

ಉಡುಪಿ: ಅವಧಿ ಮೀರಿ ಡಿಜೆ ಸೌಂಡ್   ➤ ಮೆಹಂದಿ ಕಾರ್ಯಕ್ರಮದ ಮನೆಗೆ ಪೊಲೀಸ್ ದಾಳಿ Read More »

ಕರಾವಳಿ

ಸುರತ್ಕಲ್: ಗಾಂಜಾ ಅಮಲಿನಲ್ಲಿ ರಿಕ್ಷಾ ಚಾಲಕನಿಗೆ ಹಲ್ಲೆ ➤ ಮೂವರ ಬಂಧನ

(ನ್ಯೂಸ್ ಕಡಬ)newskadaba.com ಸುರತ್ಕಲ್, ಫೆ.28. ಗಾಂಜಾ ಅಮಲಿ ನಲ್ಲಿ ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿ, ರಿಕ್ಷಾಕ್ಕೆ ಹಾನಿ ಮಾಡಿದ ಘಟನೆಗೆ ಸಂಬಂಧಿಸಿದಂತೆ ಒಟ್ಟು ಮೂವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಪಣಂಬೂರು ಮೋಗವೀರ ಮಹಾಸಭಾ ವ್ಯಾಪ್ತಿಯ ಸಮುದ್ರ ತೀರದಲ್ಲಿ ಘಟ‌ನೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆದಿತ್ಯವಾರ ಪ್ರತೀಕ್ ಎಂಬಾತನನ್ನು ಬಂಧಿಸಲಾಗಿತ್ತು. ನಿನ್ನೆ ಅಮಲ್ ಅಜಯನ್ ಮತ್ತು ನಿಶಾಂತ್ ಗೆ ಬಂಧಿಸಲಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಸುನಿಲ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನಲಾಗಿದೆ.

ಸುರತ್ಕಲ್: ಗಾಂಜಾ ಅಮಲಿನಲ್ಲಿ ರಿಕ್ಷಾ ಚಾಲಕನಿಗೆ ಹಲ್ಲೆ ➤ ಮೂವರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

Mostbet Online Casino, Mostbet, Mosbet, Mostbet Bd, Mostbet Online Casino In Bangladesh Mostbet Online Betting, Mostbet Bookmaker Line, Mostbet Bookmaker Bonuses, 34

Mostbet Online Casino, Mostbet, Mosbet, Mostbet Bd, Mostbet Online Casino In Bangladesh Mostbet Online Betting, Mostbet Bookmaker Line, Mostbet Bookmaker Bonuses, 341 Download Mostbet App Regarding Android In Bangladesh Content Apostas No Totalizador Aproveitando Os Bônus At The Promoções Especiais Processo Sobre Verificação De Conta Reveladas As Principais Ofertas De Uma Mostbet Acompanhantes E Festas

Mostbet Online Casino, Mostbet, Mosbet, Mostbet Bd, Mostbet Online Casino In Bangladesh Mostbet Online Betting, Mostbet Bookmaker Line, Mostbet Bookmaker Bonuses, 34 Read More »

ಕರಾವಳಿ

➤ ವಾಲಿಬಾಲ್ ಆಡುವಾಗ ಕುಸಿದು ಬಿದ್ದು ಯುವಕ ಮೃತ್ಯು.!

(ನ್ಯೂಸ್ ಕಡಬ) newskadaba.com. ಕಾರ್ಕಳ.  ಫೆ.27.  ವಾಲಿಬಾಲ್ ಆಟವಾಡುವಾಗ ಕುಸಿದು ಬಿದ್ದು,ಯುವಕ ಮೃತಪಟ್ಟ ಘಟನೆ ಕುಕ್ಕುಂದೂರು ಗ್ರಾಮದ ದುರ್ಗಾ ಅನುದಾನಿತ ಶಾಲೆಯ ಬಳಿ ನಡೆದಿದೆ. ಸಂತೋಷ (34) ಮೃತ ದುರ್ದೈವಿ. ಸಂತೋಷ್ ನಿನ್ನೆ ಸಂಜೆ ವಾಲಿಬಾಲ್‌ ಆಡುತ್ತಿರುವಾಗ ಮೈದಾನದಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಕಾರ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ವೇಳೆ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

➤ ವಾಲಿಬಾಲ್ ಆಡುವಾಗ ಕುಸಿದು ಬಿದ್ದು ಯುವಕ ಮೃತ್ಯು.! Read More »

ಕರಾವಳಿ, ಕ್ರೈಮ್ ನ್ಯೂಸ್

➤ ಪಿಕಪ್, ಆಟೋ ಮುಖಾಮುಖಿ ಢಿಕ್ಕಿ ➤ ಮಹಿಳೆ ಗಂಭೀರ!

(ನ್ಯೂಸ್ ಕಡಬ) newskadaba.com.ಕುಂದಾಪುರ. ಫೆ.27. ಪಿಕಪ್ ವಾಹನ ಆಟೋ ರಿಕ್ಷಾಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡ  ಘಟನೆ ಹೆಮ್ಮಾಡಿ ಸಮೀಪದ ಮೂವತ್ತುಮುಡಿ ಸೇತುವೆ ಬಳಿ ನಡೆದಿದೆ. ಅಪಘಾತದ ವೇಳೆ ಆಟೋ ರಿಕ್ಷಾ ಡಿವೈಡರ್ ಏರಿದ್ದು, ಪಿಕಪ್ ವಾಹನ ರಸ್ತೆಯಿಂದ ಕೆಳಗಿಳಿದು ಹೊಳೆಗೆ ಜಾರಿದೆ. ಆಟೋದಲ್ಲಿ ನಾಲ್ವರಿದ್ದು, ಮಹಿಳೆಗೆ ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದು ಬಂದಿದೆ. ಇನ್ನು ಪಿಕಪ್ ವಾಹನದಲ್ಲಿ ಇಬ್ಬರು ಇದ್ದು, ಚಾಲಕನಿಗೆ  ಸಣ್ಣ ಪುಟ್ಟಗಾಯವಾಗಿದೆ. ಈ ಕುರಿತು ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

➤ ಪಿಕಪ್, ಆಟೋ ಮುಖಾಮುಖಿ ಢಿಕ್ಕಿ ➤ ಮಹಿಳೆ ಗಂಭೀರ! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿಟ್ಲ ವ್ಯಕ್ತಿಯ ಅನುಮಾನಸ್ಪದ ಸಾವು ➤ದೂರು ದಾಖಲು

(ನ್ಯೂಸ್ ಕಡಬ) newskadaba.com. ವಿಟ್ಲ.  ಫೆ.27. ನಿದ್ರಿಸುತ್ತಿದ್ದ ವ್ಯಕ್ತಿ ಬೆಳಗ್ಗೆ ಏಳದಿರುವುದನ್ನು ಗಮನಿಸಿ ಆಸ್ಪತ್ರೆಗೆ ಕರೆ ತಂದ ಸಂದರ್ಭ  ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅನುಮಾನಸ್ಪದ ಸಾವಿನ ಕುರಿತು ದೂರು ದಾಖಲಾದ ಹಿನ್ನಲೆಯಲ್ಲಿ ವಿಟ್ಲ ಪೊಲೀಸರು ವಿಶೇಷ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಇಡ್ಕಿದು ಕುಮೇರು ನಿವಾಸಿ ಅರವಿಂದ ಭಾಸ್ಕರ (39) ಮೃತ ವ್ಯಕ್ತಿ. ಇಡ್ಕಿದು ಗ್ರಾಮದ ಅರ್ಕೆಚ್ಚಾರು ಕುಮೇರು ಎಂಬಲ್ಲಿ ವಾಸದ ಮನೆಯ ಕೋಣೆಯಲ್ಲಿ ಮಲಗಿದ್ದಲ್ಲಿಯೇ ಇದ್ದುದನ್ನು ಗಮನಿಸಿದ ಪತ್ನಿಆಶಾ, ಪತ್ನಿಯ ತಂದೆ ಹಾಗೂ ಕೆಲವು ವ್ಯಕ್ತಿಗಳು ಸೇರಿಕೊಂಡು

ವಿಟ್ಲ ವ್ಯಕ್ತಿಯ ಅನುಮಾನಸ್ಪದ ಸಾವು ➤ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top