ಕರಾವಳಿ

ಮರ್ಧಾಳ: ನೂತನ ವಿದ್ಯುತ್ ಪರಿವರ್ತಕ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಮರ್ಧಾಳ, ಮಾ. 10. ಇಲ್ಲಿನ ಬೆಥನಿ ಜೀವನ್ ಜ್ಯೋತಿ ಶಾಲೆಯ ಬಳಿ ಹೊಸದಾಗಿ ನಿರ್ಮಿಸಲಾಗಿರುವ ವಿದ್ಯುತ್ ಪರಿವರ್ತಕವನ್ನು ಮೆಸ್ಕಾಂ ಕಡಬ ಶಾಖಾ ಪವರ್‌ಮ್ಯಾನ್ ಉದಯಕುಮಾರ್‌ರವರು ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ಇಲ್ಲಿನ ವಿದ್ಯುತ್ ಸಮಸ್ಯೆಯನ್ನು ಮನಗಂಡು ಕಡಬ ಮೆಸ್ಕಾಂ ಎಇಇ ಸಜಿಕುಮಾರ್ ಹಾಗೂ ಎಇ ಸತ್ಯನಾರಾಯಣರವರು ಇಲ್ಲಿಗೆ ನೂತನ ಟಿಸಿಯನ್ನು ಮಂಜೂರು ಮಾಡಿದ್ದರು. ಇದರ ಕಾಮಗಾರಿಯನ್ನು ಗುತ್ತಿಗೆದಾರ ಕೃಷ್ಣ ಇಲೆಕ್ಟ್ರಿಕಲ್ಸ್‌ನ ಅಭಿಲಾಷ್‌ರವರು ಮಾಡಿದರು. ಈ ಸಂದರ್ಭ ಮೆಸ್ಕಾಂನ ಪವರ್‌ಮ್ಯಾನ್ ಯಲ್ಲಪ್ಪ, ಗ್ರಾ.ಪಂ. […]

ಮರ್ಧಾಳ: ನೂತನ ವಿದ್ಯುತ್ ಪರಿವರ್ತಕ ಉದ್ಘಾಟನೆ Read More »

ಕರಾವಳಿ

ರೆಂಜಿಲಾಡಿ ಆನೆ ದಾಳಿ ವಿಚಾರದಲ್ಲಿ ಕುಟ್ರುಪಾಡಿ ಪಂಚಾಯತ್ ಆಡಳಿತ ಮಂಡಳಿಯ ವಿರುದ್ದ ಹೇಳಿಕೆ – ಆರೋಪ       ➤ ಐತ್ತೂರು ಗ್ರಾ.ಪಂ‌.ಅಭಿವೃದ್ಧಿ ಅಧಿಕಾರಿ ಸುಜಾತ  ವಿರುದ್ದ ಖಂಡನಾ ನಿರ್ಣಯ   

(ನ್ಯೂಸ್ ಕಡಬ)newskadaba.com  ಕಡಬ, ಮಾ.10. ಕುಟ್ರುಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ಗೌಡ ಕೆರೆಕೋಡಿ ಇವರ ಅಧ್ಯಕ್ಷತೆಯಲ್ಲಿ  ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು. ಸಭೆಯ ಪ್ರಾರಂಭದಲ್ಲಿ ಸದಸ್ಯರು  ಮಾತನಾಡಿ ಐತ್ತೂರು ಗ್ರಾಮ ಪಂಚಾಯತ್ ಪಿ.ಡಿ.ಒ ಸುಜಾತರವರು  ಇತ್ತೀಚೆಗೆ ರೆಂಜಿಲಾಡಿ ಗ್ರಾಮದಲ್ಲಿ ನಡೆದ ಆನೆ ದಾಳಿ ಸಂದರ್ಭದಲ್ಲಿ ಕುಟ್ರುಪಾಡಿ ಪಂಚಾಯತಿಯ ಅಧ್ಯಕ್ಷರು, ಪಿ ಡಿ. ಒ, ಸದಸ್ಯರು ಯಾರು ಕೂಡ ಆಗಮಿಸಿರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಪಿಡಿಒರವರು ಬಾಲಿಶವಾಗಿ 

ರೆಂಜಿಲಾಡಿ ಆನೆ ದಾಳಿ ವಿಚಾರದಲ್ಲಿ ಕುಟ್ರುಪಾಡಿ ಪಂಚಾಯತ್ ಆಡಳಿತ ಮಂಡಳಿಯ ವಿರುದ್ದ ಹೇಳಿಕೆ – ಆರೋಪ       ➤ ಐತ್ತೂರು ಗ್ರಾ.ಪಂ‌.ಅಭಿವೃದ್ಧಿ ಅಧಿಕಾರಿ ಸುಜಾತ  ವಿರುದ್ದ ಖಂಡನಾ ನಿರ್ಣಯ    Read More »

ಕರಾವಳಿ

ಸುಳ್ಯ: ಬೈಕ್ ಸ್ಕಿಡ್- ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 10. ಬೈಕ್ ಸ್ಕಿಡ್ ಆಗಿ ಬಿದ್ದು ಸವಾರನೋರ್ವ ಗಾಯಗೊಂಡ ಘಟನೆ ಅಲೆಟ್ಟಿ ಎಂಬಲ್ಲಿ ನಡೆದಿದೆ. ಗಾಯಗೊಂಡ ಸವಾರನನ್ನು ಅಲೆಟ್ಟಿ ನಿವಾಸಿ ಮಹಾಬಲ ಎಂದು ಗುರುತಿಸಲಾಗಿದೆ. ಇವರು ತನ್ನ ಬೈಕ್ ನಲ್ಲಿ ಸುಳ್ಯ ಕಡೆಗೆ ಬರುತ್ತಿದ್ದ ವೇಳೆ ನಾಯಿ ಅಡ್ಡ ಬಂದಿದ್ದು, ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ‌. ತಕ್ಷಣವೇ ಸ್ಥಳೀಯರ ಸಹಕಾರದಿಂದ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ.

ಸುಳ್ಯ: ಬೈಕ್ ಸ್ಕಿಡ್- ಸವಾರನಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಕುಂದಾಪುರ : ಆಪರೇಷನ್ ಚೀತಾ ಕಾರ್ಯಾಚರಣೆ ಯಶಸ್ವಿ ➤ 7ನೇ ಚಿರತೆ ಸೆರೆ

(ನ್ಯೂಸ್ ಕಡಬ)newskadaba.com ಕುಂದಾಪುರ, ಮಾ.10. ಮನೆಯ ಸಾಕು ನಾಯಿಯ ಮೇಲೆ ಚಿರತೆಯೊಂದು ದಾಳಿ ನಡೆಸಲು ಯತ್ನಿಸಿದ ಘಟನೆ ಸಂಭವಿಸಿದ ಹಿನ್ನೆಲೆಯಲ್ಲಿ ನಡೆಸಲಾದ ಆಪರೇಷನ್ ಚೀತಾ ಇಂದು ಮಾರ್ಚ್ 10ರಂದು ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ. ಆ ಮೂಲಕ ಏಳನೇ ಚಿರತೆಯ ಬಂಧನವಾಗಿದ್ದು, ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಹಾಗೂ ಜನವಸತಿಯಿರುವ ಪ್ರದೇಶದ ಸನಿಹದಲ್ಲೇ ಇರುವ ತೋಪಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚಿರತೆ ಕಾಟ ನಿರಂತರವಾಗಿದ್ದು, ಭಾನುವಾರ

ಕುಂದಾಪುರ : ಆಪರೇಷನ್ ಚೀತಾ ಕಾರ್ಯಾಚರಣೆ ಯಶಸ್ವಿ ➤ 7ನೇ ಚಿರತೆ ಸೆರೆ Read More »

ಕರಾವಳಿ, ಕರ್ನಾಟಕ

ಸುಳ್ಯ: ನೇಣುಬಿಗಿದು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 10. ಯುವಕನೋರ್ವ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮರಪಡ್ನೂರು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಅಮರಪಡ್ನೂರು ಗ್ರಾಮದ ಕುಳ್ಳಾಜೆ ನಿವಾಸಿ ಪ್ರಶಾಂತ್ ಎಂದು ಗುರುತಿಸಲಾಗಿದೆ. ಈತ ಮನೆಯ ಪಕ್ಕದ ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಮನೆಯವರ ಗಮನಕ್ಕೆ ಬಂದ ತಕ್ಷಣವೇ ಹಗ್ಗ ತುಂಡರಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಸುಳ್ಯ: ನೇಣುಬಿಗಿದು ಯುವಕ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ಳಾರೆ ಠಾಣಾ ಕ್ರೈಂ ಎಸ್ಐ ಆಗಿ ಶಿವಪ್ರಸಾದ್ ಎಸ್.ಆರ್ ಕರ್ತವ್ಯಕ್ಕೆ ಹಾಜರು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮಾ. 10. ಬೆಳ್ಳಾರೆ ಠಾಣಾ ಕ್ರೈಂ ಎಸ್ಐ ಆಗಿ ಮುರುಡೇಶ್ವರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಕುಮಾರ್ ಎಸ್.ಆರ್ ನಿಯೋಜನೆಗೊಂಡಿದ್ದಾರೆ. ಯಲ್ಲಾಪುರ ಹಾಗೂ ಮುರುಡೇಶ್ವರ ಠಾಣೆಯಲ್ಲಿ ಸಲ್ಲಿಸಿರುವ ಇವರು ಮೂಲತಃ ದಾವಣಗೆರೆಯವರು. ಬೆಳ್ಳಾರೆ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಬೆಳ್ಳಾರೆ ಠಾಣಾ ಕ್ರೈಂ ಎಸ್ಐ ಆಗಿ ಶಿವಪ್ರಸಾದ್ ಎಸ್.ಆರ್ ಕರ್ತವ್ಯಕ್ಕೆ ಹಾಜರು Read More »

ಕರಾವಳಿ

ಸುಳ್ಯ: ರಸ್ತೆಯ ವಿಚಾರದಲ್ಲಿ ವಿವಾದ- ಪೊಲೀಸ್ ಎಂಟ್ರಿ ➤ ತನಿಖೆಯ ವೇಳೆ ಸಾಗುವಾನಿ ಮರದ ದಿಮ್ಮಿ ಪತ್ತೆ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 10. ರಸ್ತೆ ವಿವಾದಕ್ಕೆ ಸಂಬಂಧಿಸಿ ಸ್ಥಳ ಪರಿಶೀಲನೆಗೆಂದು ಬಂದ ಪೊಲೀಸರಿಗೆ ಮನೆಯ ಆವರಣದಲ್ಲಿ ಸಾಗುವಾನಿ ಮರದ ದಿಮ್ಮಿ ಹಾಗೂ ಬೀಟಿ ಮರದ ದಿಮ್ಮಿ ಗಮನಕ್ಕೆ ಬಂದಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ ಘಟನೆ ನಡೆದಿದೆ. ಮೊಯಿದಿನ್ ಎಂಬವರ ಮನೆಯ ಜಾಗದ ಬಳಿಯಿರುವ ದೇವಸ್ಥಾನಕ್ಕೆ ಸಂಬಂಧಿಸಿದ ಮಾರಿಕಳ ಕಾರ್ಯಕ್ರಮ ನಡೆಸುವ ಸ್ಥಳಕ್ಕೆ ತೆರಳುವ ರಸ್ತೆಯನ್ನು ಮೊಯಿದಿನ್ ರವರು ಬೇಲಿ ಹಾಕಿ ಬಂದ್ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಿಸಿ ಸ್ಥಳೀಯ ದೇವಸ್ಥಾನದ ಮುಖಂಡರು

ಸುಳ್ಯ: ರಸ್ತೆಯ ವಿಚಾರದಲ್ಲಿ ವಿವಾದ- ಪೊಲೀಸ್ ಎಂಟ್ರಿ ➤ ತನಿಖೆಯ ವೇಳೆ ಸಾಗುವಾನಿ ಮರದ ದಿಮ್ಮಿ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

24 ಗಂಟೆಯೊಳಗೆ ಕರಾವಳಿಯ ಕೆಲವಡೆ ಬಿಸಿಗಾಳಿ ಬೀಸುವ ಸಾಧ್ಯತೆ ➤ ಹವಾಮಾನ ಇಲಾಖೆ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 10. ಕರಾವಳಿ ಜಿಲ್ಲೆಗಳಾದ ದ.ಕ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಪ್ರದೇಶಗಳಲ್ಲಿ  24 ಗಂಟೆ ಅವಧಿಯಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದೆರಡು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಹೆಚ್ಚಿದ್ದು, ಇದರ ಬೆನ್ನಲ್ಲೇ ಇದೀಗ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೇ ಮಾ. 13 ಮತ್ತು 14ರಂದು ಉತ್ತರ ಕನ್ನಡ, ಉಡುಪಿ ಮತ್ತು ಒಳನಾಡು ಪ್ರದೇಶಗಳಾದ ಚಿಕ್ಕಮಗಳೂರು ಹಾಗೂ ಕೊಡಗು

24 ಗಂಟೆಯೊಳಗೆ ಕರಾವಳಿಯ ಕೆಲವಡೆ ಬಿಸಿಗಾಳಿ ಬೀಸುವ ಸಾಧ್ಯತೆ ➤ ಹವಾಮಾನ ಇಲಾಖೆ ಎಚ್ಚರಿಕೆ Read More »

ಕರಾವಳಿ, ಕರ್ನಾಟಕ

ಮಾ. 12ರಂದು SDPI ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ರಕ್ತದಾನ ಶಿಬಿರ

(ನ್ಯೂಸ್ ಕಡಬ)newskadaba.com  ಸುಳ್ಯ, ಮಾ.10. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರ,ರೂರಲ್ ಬ್ಲಾಕ್ ಮತ್ತು ನಗರ ಸಮಿತಿ ವತಿಯಿಂದ ರಕ್ತದಾನ ಮಾಸಾಚರಣೆಯ ಪ್ರಯುಕ್ತ ಮಾರ್ಚ್ 12 ರಂದು ರಕ್ತಕೊಟ್ಟು ಬಾಂದವ್ಯ ಕಟ್ಟು ಎಂಬ ಧ್ಯೇಯ ವಾಕ್ಯದೊಂದಿಗೆ ರೋಟರಿ ಕ್ಯಾಂಪ್ಕೋ ರಕ್ತ ನಿಧಿ ಪುತ್ತೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಲಿದೆ. ಅಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ಸುಳ್ಯದ ಗಾಂಧಿನಗರ ಸಮೀಪದ ಸುಪ್ರೀಂ ಗುರುಂಪು ಎಂಬಲ್ಲಿ ರಕ್ತದಾನ ಶಿಬಿರ ನಡೆಯಲಿದೆ

ಮಾ. 12ರಂದು SDPI ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ರಕ್ತದಾನ ಶಿಬಿರ Read More »

ಕರಾವಳಿ
crime, arrest, suspected

ಬಂಟ್ವಾಳ: 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 10. ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ 3 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಂತರ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತ ಆರೋಪಿಯನ್ನು ಹಾಸನದ ಬಿಕ್ಕೋಡು ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ. ಈತನ ವಿರುದ್ದ ಬಂಟ್ವಾಳ ಗ್ರಾಮಂತರ ಪೊಲೀಸ್ ಠಾಣಾ ಅ.ಕ್ರ : 85/2019 U/s 354(A),448,506, IPC ಮಾನ್ಯ ACJ & JMFC Bantwal c c no1020/2020 ರಡಿ ಪ್ರಕರಣ ದಾಖಲಾಗಿತ್ತು. ಮಾ. 08ರಂದು ಈತನ

ಬಂಟ್ವಾಳ: 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top